Published : Nov 18, 2025, 07:28 AM ISTUpdated : Nov 18, 2025, 11:19 PM IST

India Latest News Live: ತುರ್ತು ಸೇವೆಯಲ್ಲಿ ಹೊತ್ತಿ ಉರಿದ ಆ್ಯಂಬುಲೆನ್ಸ್, ನವಜಾಶ ಶಿಶು, ತಾಯಿ ಸೇರಿ ನಾಲ್ವರು ಸಜೀವ ದಹನ

ಸಾರಾಂಶ

ಢಾಕಾ: ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ತಮ್ಮ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಗಡೀಪಾರು ಮಾಡಬೇಕು ಎಂದು ಬಾಂಗ್ಲಾದೇಶ ಸರ್ಕಾರ ಭಾರತಕ್ಕೆ ಕೋರಿದೆ. ‘ಹಸೀನಾ ಮೇಲೆ ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪ ಹೊರಿಸಲಾಗಿದೆ, ಮತ್ತು ಎರಡನೇ ದೇಶವು ಅವರಿಗೆ ಆಶ್ರಯ ನೀಡಿದರೆ, ಅದು ಅತ್ಯಂತ ಆಕ್ಷೇಪಾರ್ಹ ಕೃತ್ಯ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳು ಮತ್ತು ನ್ಯಾಯದ ತತ್ವಗಳ ಉಲ್ಲಂಘನೆಯಾಗುತ್ತದೆ. ಈ ಶಿಕ್ಷೆಗೊಳಗಾದ ಪರಾರಿಯಾದವರಿಗೆ ಯಾವುದೇ ರೀತಿಯ ಆಶ್ರಯ ನೀಡದೆ ಬಾಂಗ್ಲಾದೇಶಕ್ಕೆ ಒಪ್ಪಿಸಬೇಕು’ ಎಂದು ಅದು ಕೋರಿದೆ.

Modasa Ambulance Fire Accident

11:19 PM (IST) Nov 18

ತುರ್ತು ಸೇವೆಯಲ್ಲಿ ಹೊತ್ತಿ ಉರಿದ ಆ್ಯಂಬುಲೆನ್ಸ್, ನವಜಾಶ ಶಿಶು, ತಾಯಿ ಸೇರಿ ನಾಲ್ವರು ಸಜೀವ ದಹನ

ತುರ್ತು ಸೇವೆಯಲ್ಲಿ ಹೊತ್ತಿ ಉರಿದ ಆ್ಯಂಬುಲೆನ್ಸ್, ನವಜಾಶ ಶಿಶು, ತಾಯಿ ಸೇರಿ ನಾಲ್ವರು ಸಜೀವ ದಹನ, ಭೀಕರ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಒಂದು ದಿನದ ಮಗುವನ್ನು ಆಸ್ಪತ್ರೆ ದಾಖಲಿಸಲು ತೆರಳುವಾಗ ಈ ಘಟನೆ ನಡೆದಿದೆ.

Read Full Story

10:47 PM (IST) Nov 18

ಎಕ್ಸ್, ಚಾಟ್‌ಜಿಪಿಟಿ ಸೇರಿ 100ಕ್ಕೂ ಹೆಚ್ಚು ವೆಬ್‌ಸೈಟ್ ಡೌನ್ ಮಾಡಿದ ಕ್ಲೌಡ್‌ಫೇರ್ ರಿಸ್ಟೋರ್

ಎಕ್ಸ್, ಚಾಟ್‌ಜಿಪಿಟಿ ಸೇರಿ 100ಕ್ಕೂ ಹೆಚ್ಚು ವೆಬ್‌ಸೈಟ್ ಡೌನ್ ಮಾಡಿದ ಕ್ಲೌಡ್‌ಫೇರ್ ರಿಸ್ಟೋರ್, ಜಗತನ್ನೇ ತಲ್ಲಣಗೊಳಿಸಿದ ಕ್ಲೌಡ್‌ಪೇರ್ ಡೌನ್ ಸದ್ಯ ಸರಿಯಾಗಿದೆ. ಹಿಡಿ ಶಾಪ ಹಾಕಿದ್ದ ಬಳಕೆದಾರರು ನಿಟ್ಟುಸಿರು ಬಿಟ್ಟಿದ್ದಾರೆ.

Read Full Story

08:10 PM (IST) Nov 18

ಚಲಿಸುತ್ತಿದ್ದ ಕಾರಿನಲ್ಲಿ ಸಭ್ಯತೆ ಮೀರಿದ ಯುವತಿ, ಇತರ ಸವಾರರಿಂದ ವಿಡಿಯೋ ರೆಕಾರ್ಡ್

ಚಲಿಸುತ್ತಿದ್ದ ಕಾರಿನಲ್ಲಿ ಸಭ್ಯತೆ ಮೀರಿದ ಯುವತಿ, ಇತರ ಸವಾರರಿಂದ ವಿಡಿಯೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಯುವತಿಯ ವರ್ತನೆ ಹಾಗೂ ಅಪಾಯಕಾರಿ ಸ್ಟಂಟ್‌ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

 

Read Full Story

07:44 PM (IST) Nov 18

ಕಂಠಪೂರ್ತಿ ಕುಡಿದು ನಿರ್ಮಾಣ ಹಂತದ ಮೇಲ್ಸೇತುವೆ ಮೇಲೆ ಕಾರು ಓಡಿಸಿದ - ಆಮೇಲೇನಾಯ್ತು ನೋಡಿ

Car stuck on Kannur flyover: ಕೇರಳದ ಕಣ್ಣೂರಿನಲ್ಲಿ, ಕಂಠಪೂರ್ತಿ ಕುಡಿದ ಚಾಲಕನೊಬ್ಬ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಮೇಲೆ ಕಾರು ಚಲಾಯಿಸಿದ್ದಾನೆ. ಪರಿಣಾಮವಾಗಿ, ಕಾರು ಎರಡು ಕಂಬಗಳ ನಡುವೆ ಸಿಲುಕಿ ತಲೆಕೆಳಗಾಗಿ ನೇತಾಡಿದ್ದು, ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. 

Read Full Story

07:25 PM (IST) Nov 18

ಹಿಂದೂ ಕುಟುಂಬಕ್ಕೆ ಟಿಎಂಸಿ ನಾಯಕನ ಬಹಿಷ್ಕಾರ - ಶವ ಎತ್ತಲೂ ಬರದ ಜನ, ಅಂತ್ಯಕ್ರಿಯೆ ನಡೆಸಿದ ಮುಸ್ಲಿಮರು!

ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ, ಟಿಎಂಸಿ ನಾಯಕರ ಆದೇಶದ ಮೇರೆಗೆ ಬಹಿಷ್ಕರಿಸಲ್ಪಟ್ಟ ಹಿಂದೂ ಕುಟುಂಬದ ಸದಸ್ಯರೊಬ್ಬರು ನಿಧನರಾದರು. ನೆರೆಹೊರೆಯವರು ಅಂತ್ಯಕ್ರಿಯೆಗೆ ಸಹಾಯ ಮಾಡಲು ನಿರಾಕರಿಸಿದಾಗ, ಮುಸ್ಲಿಂ ಸಮುದಾಯದ ಯುವಕರು ಮುಂದೆ ಬಂದು ಮೃತದೇಹವನ್ನು ಹೊತ್ತು ಅಂತ್ಯಸಂಸ್ಕಾರ ನೆರವೇರಿಸಿದರು.

Read Full Story

07:24 PM (IST) Nov 18

ಮದ್ವೆ ಫಿಕ್ಸ್ ಆದ ಭಾರತೀಯ ಸೈನಿಕನಿಗೆ 17 ವರ್ಷದ ಅಪ್ರಾಪ್ತೆ ಜೊತೆ ಪ್ರೀತಿ, ಮುಂದಾಗಿದ್ದೇ ದುರಂತ

ಮದ್ವೆ ಫಿಕ್ಸ್ ಆದ ಭಾರತೀಯ ಸೈನಿಕನಿಗೆ 17 ವರ್ಷದ ಅಪ್ರಾಪ್ತೆ ಜೊತೆ ಪ್ರೀತಿ, ಮುಂದಾಗಿದ್ದೇ ದುರಂತ, ಇನ್‌ಸ್ಟಾಗ್ರಾಂ ಮೂಲಕ ಅಪ್ರಾಪ್ತೆ ಪರಿಚಯವಾಗಿದೆ. ಅಷ್ಟೇ ವೇಗದಲ್ಲಿ ಈ ಪರಿಚಯ ಪ್ರೀತಿಯಾಗಿ ಮಾರ್ಪಟ್ಟಿದೆ. ಇತ್ತ ಯೋಧನಿಗೆ ಅದಾಗಲೇ ಮದುವೆ ಫಿಕ್ಸ್ ಆಗಿತ್ತು. ಮುಂದೇನಾಯ್ತು?

Read Full Story

06:36 PM (IST) Nov 18

ವಿದೇಶೀ ನೆಲದಲ್ಲಿ ಸೀರೆಯುಟ್ಟು ಟ್ರೆಂಡ್ ಉಲ್ಟಾ ಮಾಡಿದ ಭಾರತೀಯ ನಾರಿ - ಸೆಲ್ಪಿ ಕೇಳಿದ ಫಾರಿನರ್ಸ್‌

woman wearing saree in Russia: ರಷ್ಯಾ ಪ್ರವಾಸದಲ್ಲಿದ್ದ ರಾಜಸ್ಥಾನಿ ಮಹಿಳೆಯೊಬ್ಬರು ತಮ್ಮ ಸಾಂಪ್ರದಾಯಿಕ ಸೀರೆಯಿಂದಾಗಿ ಸ್ಥಳೀಯರ ಗಮನ ಸೆಳೆದಿದ್ದಾರೆ. ವಿದೇಶಿಗರು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

Read Full Story

06:22 PM (IST) Nov 18

Ind vs SA ಗುವಾಹಟಿ ಟೆಸ್ಟ್‌ಗೂ ಮುನ್ನ ಟೀಂ ಇಂಡಿಯಾ ಮಾಸ್ಟರ್ ಪ್ಲಾನ್; ತಂಡದಲ್ಲಿ ಮಹತ್ವದ ಬದಲಾವಣೆ!

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಗುವಾಹಟಿ ಟೆಸ್ಟ್‌ಗೂ ಮುನ್ನ ನಾಯಕ ಶುಭಮನ್ ಗಿಲ್ ಫಿಟ್‌ನೆಸ್ ಬಗ್ಗೆ ಅನುಮಾನ ಮೂಡಿದೆ. ಆಟಗಾರ ನಿತೀಶ್ ಕುಮಾರ್ ರೆಡ್ಡಿ ತಂಡಕ್ಕೆ ಮರಳುತ್ತಿದ್ದಾರೆ. ಸರಣಿ ಸಮಬಲಗೊಳಿಸಲು ಭಾರತಕ್ಕೆ ಎರಡನೇ ಟೆಸ್ಟ್ ನಿರ್ಣಾಯಕವಾಗಿದೆ.

Read Full Story

05:48 PM (IST) Nov 18

IPL ಮಿನಿ ಹರಾಜಿನಲ್ಲಿ ಈ 5 ಆಟಗಾರರ ಮೇಲೆ ಹಣದ ಮಳೆ ಸುರಿಸಲು ರೆಡಿಯಾಗಿವೆ ಫ್ರಾಂಚೈಸಿಗಳು!

ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಸಿದ್ದತೆ ಜೋರಾಗಿದೆ. ಹೀಗಿರುವಾಗಲೇ ಮಿನಿ ಹರಾಜಿಗೂ ಮುನ್ನ ತಮಗೆ ಬೇಕಾದ ಆಟಗಾರರನ್ನು ಎಲ್ಲಾ 10 ಫ್ರಾಂಚೈಸಿಗಳು ರೀಟೈನ್ ಮಾಡಿಕೊಂಡಿವೆ. ಇದೆಲ್ಲದರ ನಡುವೆ ಈ ಐದು ಆಟಗಾರರ ಮೇಲೆ ಹಣದ ಮಳೆ ಸುರಿಸಲು ಫ್ರಾಂಚೈಸಿಗಳು ರೆಡಿಯಾಗಿವೆ.

 

Read Full Story

05:41 PM (IST) Nov 18

ಬಿಗ್ ಬಾಸ್ ಮಾಜಿ ಸ್ಪರ್ಧಿ ಮನೆಗೆ ಬೆಂಕಿ, ಅಗ್ನಿ ಜ್ವಾಲೆ ನಿಯಂತ್ರಿಸಲು ಅಗ್ನಿಶಾಮಕ ದಳ ಹರಸಾಹಸ

ಬಿಗ್ ಬಾಸ್ ಮಾಜಿ ಸ್ಪರ್ಧಿ ಮನೆಗೆ ಬೆಂಕಿ, ಅಗ್ನಿ ಜ್ವಾಲೆ ನಿಯಂತ್ರಿಸಲು ಅಗ್ನಿಶಾಮಕ ದಳ ಹರಸಾಹಸ , ಮನೆಯಲ್ಲಿ ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಬೆಂಕಿ ದುರಂತದಲ್ಲಿನ ಹಾನಿ ಹಾಗೂ ಇತರ ಅಪ್‌ಡೇಟ್ ಇಲ್ಲಿದೆ.

Read Full Story

05:25 PM (IST) Nov 18

Public Holidays 2026 - ಮುಂದಿನ ವರ್ಷ 50 ದಿನ ಶಾಲೆ, ಆಫೀಸ್‌ ಕ್ಲೋಸ್‌, ಇಲ್ಲಿದೆ ರಜಾ ದಿನಗಳ ಪಟ್ಟಿ

Full List of Public Holidays in 2026: 2026 ರ ಅಧಿಕೃತ ರಜಾ ಕ್ಯಾಲೆಂಡರ್ 50 ದಿನಗಳ ರಜೆಯನ್ನು ನೀಡಿದೆ. ಇದರಲ್ಲಿ 31 ಸಾರ್ವಜನಿಕ ಮತ್ತು 19 ಐಚ್ಛಿಕ ರಜಾದಿನಗಳಿವೆ. ಸರ್ಕಾರಿ ನೌಕರರು ಎರಡು ಐಚ್ಛಿಕ ರಜಾದಿನಗಳಿಗೆ ಸೀಮಿತರಾಗಿದ್ದಾರೆ.

 

Read Full Story

04:36 PM (IST) Nov 18

ಹಾರ್ಟ್‌ಬ್ರೇಕ್ ಯುವಕನಿಂದ ಭರ್ಜರಿ ಆಫರ್, ಆಸಕ್ತರಿಗೆ ಉಚಿತವಾಗಿ ಸಿಯೋಲ್ ಟ್ರಿಪ್ ಟಿಕೆಟ್

ಹಾರ್ಟ್‌ಬ್ರೇಕ್ ಯುವಕನಿಂದ ಭರ್ಜರಿ ಆಫರ್, ಆಸಕ್ತರಿಗೆ ಉಚಿತವಾಗಿ ಸಿಯೋಲ್ ಟ್ರಿಪ್ ಟಿಕೆಟ್ ನೀಡುತ್ತಿದ್ದಾನೆ. ರೌಂಡ್ ಟ್ರಿಪ್ ಟಿಕೆಟ್ ಇದಾಗಿದೆ. ಇಬ್ಬರಿಗೆ ಸಿಯೋಲ್ ಪ್ರವಾಸಕ್ಕೆ ಅವಕಾಶವಿದೆ. ಕಂಡೀಷನ್ ಏನೂ ಇಲ್ಲ, ಕೇವಲ ನಿಮ್ಮ ಹೆಸರು ಮಾತ್ರ.

Read Full Story

04:33 PM (IST) Nov 18

ನ್ಯಾಯ ಎಲ್ಲಿದೆ.. ಪರ ತೀರ್ಪು ನೀಡಲು 15 ಲಕ್ಷ ಲಂಚಕ್ಕೆ ಬೇಡಿಕೆ - ACBಯಿಂದ ಕ್ಲಾರ್ಕ್ ಅರೆಸ್ಟ್, ಜಡ್ಜ್ ನಾಪತ್ತೆ

Mumbai judge bribery scandal: ಭೂ ವಿವಾದ ಪ್ರಕರಣವೊಂದರಲ್ಲಿ ಸರಿಯಾದ ತೀರ್ಪು ನೀಡಲು ದೂರುದಾರನ ಬಳಿ  ₹15 ಲಕ್ಷ ಲಂಚ ಪಡೆದ ಆರೋಪದ ಮೇಲೆ ನ್ಯಾಯಾಲಯದ ಕ್ಲಾರ್ಕ್‌ನನ್ನು ಎಸಿಬಿ ಬಂಧಿಸಿದೆ. ಈ ಪ್ರಕರಣದಲ್ಲಿ ನ್ಯಾಯಾಧೀಶರೇ ಪ್ರಮುಖ ಆರೋಪಿಯಾಗಿದ್ದು, ಪರಾರಿಯಾಗಿದ್ದಾರೆ.

Read Full Story

03:53 PM (IST) Nov 18

ಪ್ರವಾಸಿ ನ್ಯೂಜಿಲೆಂಡ್ ಯುವತಿಯನ್ನು ಮಂಚಕ್ಕೆ ಕರೆದ, ತಿರಸ್ಕರಿಸಿ ಮುನ್ನಡೆದಾಗ ಆಘಾತ, ವಿಡಿಯೋ

ಪ್ರವಾಸಿ ನ್ಯೂಜಿಲೆಂಡ್ ಯುವತಿಯನ್ನು ಮಂಚಕ್ಕೆ ಕರೆದ, ತಿರಸ್ಕರಿಸಿ ಮುನ್ನಡೆದಾಗ ಆಘಾತ, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕಿರುಕುಳ ನೀಡಿದವನ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

Read Full Story

03:51 PM (IST) Nov 18

WPL 2026 ಮೆಗಾ ಹರಾಜಿನ ವೇಳಾಪಟ್ಟಿ ಪ್ರಕಟ; ಯಾವಾಗ? ಎಲ್ಲಿ? ಲೈವ್ ಸ್ಟ್ರೀಮಿಂಗ್? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಬೆಂಗಳೂರು: ಬಹುನಿರೀಕ್ಷಿತ ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರದ ಸಿದ್ದತೆಗಳು ಆರಂಭವಾಗಿವೆ. ಹೀಗಿರುವಾಗಲೇ WPL ಮೆಗಾ ಹರಾಜಿಗೆ ವೇಳಾಪಟ್ಟಿ ಫಿಕ್ಸ್ ಆಗಿದ್ದು, ಇದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

 

Read Full Story

03:04 PM (IST) Nov 18

76 CRPF ಯೋಧರ ಬಲಿ ಪಡೆದಿದ್ದ ಪ್ರಮುಖ ನಕ್ಸಲ್‌ ಕಮಾಂಡರ್‌ ಆಟ ನಿಲ್ಲಿಸಿದ ಭದ್ರತಾಪಡೆ

Naxal commander Hidma killed: 76 ಸಿಆರ್‌ಪಿಎಫ್ ಯೋಧರ ಸಾವಿಗೆ ಕಾರಣವಾದ ತಲೆಗೆ 1 ಕೋಟಿ ಬಹುಮಾನ ಹೊತ್ತಿದ್ದ ನಕ್ಸಲ್ ನಾಯಕ ಹಿಡ್ಮಾನನ್ನು ಛತ್ತೀಸ್‌ಗಡ-ಆಂಧ್ರಪ್ರದೇಶ ಗಡಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ.

Read Full Story

02:09 PM (IST) Nov 18

ಕೊಹ್ಲಿಯನ್ನೇ ಹಿಂದಿಕ್ಕಿದ ಧೋನಿ ಶಿಷ್ಯ ಋತುರಾಜ್ ಗಾಯಕ್ವಾಡ್! ಅಂತಹದ್ದೇನು ಆ ದಾಖಲೆ?

ಟೀಂ ಇಂಡಿಯಾದ ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅತಿ ಹೆಚ್ಚು ಸರಾಸರಿಯೊಂದಿಗೆ ಕೊಹ್ಲಿ, ಪೂಜಾರರಂತಹ ದಿಗ್ಗಜರನ್ನು ಹಿಂದಿಕ್ಕಿ ಭಾರತದ ಪರ ಅಗ್ರಸ್ಥಾನಕ್ಕೇರಿದ್ದಾರೆ. 

Read Full Story

01:55 PM (IST) Nov 18

Indian Railways - ಆಹಾರ ಪ್ರಿಯ ಪ್ರಯಾಣಿಕರಿಗೆ ಭಾರತೀಯ ರೈಲ್ವೆಯಿಂದ ಸಿಹಿಯಾದ ಸುದ್ದಿ

ಭಾರತೀಯ ರೈಲ್ವೆಯು ತನ್ನ ಅಡುಗೆ ನೀತಿಗೆ ತಿದ್ದುಪಡಿ ತರುವ ಮೂಲಕ ದೇಶಾದ್ಯಂತ ರೈಲ್ವೆ ನಿಲ್ದಾಣಗಳಲ್ಲಿ ಪ್ರೀಮಿಯಂ ಆಹಾರ ಬ್ರಾಂಡ್‌ಗಳನ್ನು ತೆರೆಯಲು ಅನುಮತಿ ನೀಡಿದೆ. ಶೀಘ್ರದಲ್ಲೇ ಇ-ಹರಾಜು ಪ್ರಕ್ರಿಯೆಯ ಮೂಲಕ ಪ್ರಯಾಣಿಕರಿಗೆ ಲಭ್ಯವಾಗಲಿವೆ.

Read Full Story

01:41 PM (IST) Nov 18

ಹಳೇ ವಾಹನ ಓಡಿಸೋದು ಇನ್ನು ದುಬಾರಿ, ಫಿಟ್ನೆಸ್ ಸರ್ಟಿಫಿಕೇಟ್‌ ದರ 10 ಪಟ್ಟು ಏರಿಸಿದ ಕೇಂದ್ರ ಸರ್ಕಾರ!

ಕೇಂದ್ರ ಸರ್ಕಾರವು ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತಂದು, ವಾಹನಗಳ ಫಿಟ್‌ನೆಸ್ ಪರೀಕ್ಷಾ ಶುಲ್ಕವನ್ನು 10 ಪಟ್ಟು ಹೆಚ್ಚಿಸಿದೆ. 10 ವರ್ಷಕ್ಕಿಂತ ಹಳೆಯ ವಾಹನಗಳಿಗೆ ವಯಸ್ಸಿನ ಆಧಾರದ ಮೇಲೆ ಹೊಸ ಶುಲ್ಕ ರಚನೆಯನ್ನು ಪರಿಚಯಿಸಲಾಗಿದೆ.

Read Full Story

01:34 PM (IST) Nov 18

ಸೌದಿ ಅರೇಬಿಯಾ ಬಸ್ ದುರಂತ - ಭಾರತಕ್ಕೆ ಬರಲ್ಲ 45 ಮೆಕ್ಕಾ ಯಾತ್ರಿಗಳ ಶವ - ಪರಿಹಾರವನ್ನು ನೀಡಲ್ಲ ಸೌದಿ ಸರ್ಕಾರ

Umrah pilgrims tragedy : ಸೌದಿ ಅರೇಬಿಯಾದಲ್ಲಿ ನಡೆದ ಬಸ್ ದುರಂತದಲ್ಲಿ 45 ಭಾರತೀಯ ಉಮ್ರಾ ಯಾತ್ರಿಗಳು ಮೃತಪಟ್ಟಿದ್ದಾರೆ. ನಿಯಮದ ಪ್ರಕಾರ ಅವರ ಶವಗಳನ್ನು ಭಾರತಕ್ಕೆ ತರಲಾಗುತ್ತಿಲ್ಲ. ಹೀಗಾಗಿ ಅಲ್ಲಿಯೇ ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಲಾಗಿದೆ.

Read Full Story

01:23 PM (IST) Nov 18

ಈ ಮೂವರು ಕ್ರಿಕೆಟಿಗರ ವೃತ್ತಿಜೀವನವನ್ನೇ ಹಾಳು ಮಾಡಿದ ಗಂಭೀರ್-ಅಗರ್ಕರ್ ಜೋಡಿ! ಚೆನ್ನಾಗಿ ಆಡಿದ್ರೂ ಸಿಗುತ್ತಿಲ್ಲ ಚಾನ್ಸ್

ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಜೋಡಿ, ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ತರುತ್ತಿದ್ದಾರೆ. ಆದರೆ, ಸರ್ಫರಾಜ್ ಖಾನ್, ಋತುರಾಜ್ ಗಾಯಕ್ವಾಡ್ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಪ್ರತಿಭಾವಂತ ಆಟಗಾರರನ್ನು ಕಡೆಗಣಿಸುತ್ತಿದ್ದಾರೆ ಎನ್ನುವ ಆರೋಪವಿದೆ.

Read Full Story

01:05 PM (IST) Nov 18

ಅಮೆರಿಕದಲ್ಲಿ ಕೈಮೀರಿದ ಆಹಾರದ ಬೆಲೆ, ಭಾರತದ ಚಹಾ, ಕಾಫಿ, ಮಸಾಲೆ ಪದಾರ್ಥಗಳ ತೆರಿಗೆ ಶೇ. 50ರಷ್ಟು ಕಡಿಮೆ ಮಾಡಿದ ಟ್ರಂಪ್!

ಭಾರತದ ಉತ್ಪನ್ನಗಳ ಮೇಲೆ ಶೇ. 100ರಷ್ಟು ತೆರಿಗೆ ವಿಧಿಸಿದ್ದ ಅಮೆರಿಕ, ದೇಶದಲ್ಲಿ ಆಹಾರ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಚಹಾ, ಕಾಫಿ, ಮತ್ತು ಮಸಾಲೆ ಪದಾರ್ಥಗಳ ಮೇಲಿನ ತೆರಿಗೆಯನ್ನು ಶೇ. 50ರಷ್ಟು ಕಡಿಮೆ ಮಾಡಿದ್ದಾರೆ.

Read Full Story

12:40 PM (IST) Nov 18

ಚೀನಾ ಹಿಂದಿಕ್ಕುವುದು ಅಸಾಧ್ಯವಲ್ಲ, ನಮ್ಮ ಮನಸ್ಥಿತಿ ಬದಲಾಗಬೇಕು - ನಾರಾಯಣ ಮೂರ್ತಿ

ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿಯವರು, ಯಶಸ್ಸಿಗೆ ಕಠಿಣ ಪರಿಶ್ರಮದ ಮಹತ್ವವನ್ನು ಒತ್ತಿಹೇಳುತ್ತಾರೆ. ಚೀನಾದ '996' ಕೆಲಸದ ಸಂಸ್ಕೃತಿಯನ್ನು ಉದಾಹರಣೆಯಾಗಿ ನೀಡಿ, ಭಾರತವು ಅದನ್ನು ಅಳವಡಿಸಿಕೊಂಡರೆ ಮಾತ್ರ ಚೀನಾವನ್ನು ಆರ್ಥಿಕವಾಗಿ ಮೀರಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಡುತ್ತಾರೆ.

Read Full Story

12:07 PM (IST) Nov 18

Delhi Blast - 'ಹುತಾತ್ಮರಾಗುವ ಮಾರ್ಗ ಆತ್ಮಾ*ಹುತಿ ದಾಳಿ..' ಟೆರರ್‌ ಡಾಕ್ಟರ್‌ ಉಮರ್‌ ವಿಡಿಯೋ ವೈರಲ್‌

ನವೆಂಬರ್ 10 ರಂದು ದೆಹಲಿಯ ಕೆಂಪು ಕೋಟೆ ಬಳಿ ಆತ್ಮಹ*ತ್ಯಾ ದಾಳಿ ನಡೆಸಿದ್ದ ಭಯೋತ್ಪಾದಕ ಡಾ. ಉಮರ್, ಸ್ಫೋಟಕ್ಕೂ ಮುನ್ನ ವಿಡಿಯೋವೊಂದನ್ನು ಚಿತ್ರೀಕರಿಸಿದ್ದನು. ಇದರಲ್ಲಿ ಆತ ತನ್ನ ಕೃತ್ಯವನ್ನು 'ಹುತಾತ್ಮ ಕಾರ್ಯಾಚರಣೆ' ಎಂದು ಕರೆದಿದ್ದಾನೆ.

Read Full Story

11:57 AM (IST) Nov 18

ಐಪಿಎಲ್ ಮಿನಿ ಹರಾಜಿಗೂ ಮುನ್ನ ಚರ್ಚೆಗೆ ಗ್ರಾಸವಾದ ಕೆಕೆಆರ್‌ನ ಆ ಒಂದು ತೀರ್ಮಾನ!

ಐಪಿಎಲ್ 2026ರ ಹರಾಜಿಗೂ ಮುನ್ನ ಶಾರುಕ್ ಖಾನ್ ಅವರ ತಂಡ ಕೆಕೆಆರ್, ಆಂಡ್ರೆ ರಸೆಲ್ ಅವರನ್ನು ಬಿಡುಗಡೆ ಮಾಡಿರುವುದು ಅಭಿಮಾನಿಗಳಿಗೆ ಶಾಕ್ ನೀಡಿದೆ. ಇದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತಾದ ಅಪ್‌ಡೇಟ್ ಇಲ್ಲಿದೆ ನೋಡಿ

Read Full Story

11:18 AM (IST) Nov 18

ಹಠಾತ್‌ ಕುಸಿದು ಬಿದ್ದು ವೇದಿಕೆಯಲ್ಲೇ ಕೊನೆಯುಸಿರೆಳೆದ 24ರ ಹರೆಯದ ಟೆಕ್ಕಿ - ಆ ಕ್ಷಣದಲ್ಲಿ ಏನಾಯ್ತು?

techie dies on stage video: ಸೂರತ್‌ನಲ್ಲಿ ನಡೆದ ಐಟಿ ಕಾರ್ಯಕ್ರಮವೊಂದರಲ್ಲಿ, 24 ವರ್ಷದ ವೆಬ್ ಡೆವಲಪರ್ ಝಿಲ್ ಥಕ್ಕರ್ ಭಾಷಣ ಮುಗಿಸಿದ ಕೂಡಲೇ ವೇದಿಕೆಯ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. 

Read Full Story

10:34 AM (IST) Nov 18

Gold Silver Price - ಮತ್ತೆ ಇಳಿಕೆಯಾದ ಬಂಗಾರದ ಬೆಲೆ; ಕಡಿಮೆಯಾಗಿದೆ ಬರೋಬ್ಬರಿ 17,400 ರೂಪಾಯಿ

ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದು, ಇಂದು 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ₹17,400 ಮತ್ತು 1 ಕೆಜಿ ಬೆಳ್ಳಿ ಬೆಲೆಯಲ್ಲಿ ₹5,000 ಇಳಿಕೆಯಾಗಿದೆ. ಈ ಲೇಖನದಲ್ಲಿ ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ನಿಖರ ದರ ಇಲ್ಲಿ ನೀಡಲಾಗಿದೆ.

Read Full Story

09:52 AM (IST) Nov 18

ಐಪಿಎಲ್ ತಂಡದ ನಾಯಕರಾಗೋದು ಅಷ್ಟು ಸುಲಭವಲ್ಲ; ರಾಹುಲ್ ಅಚ್ಚರಿಯ ಮಾತು!

ಐಪಿಎಲ್ 2026 ಸೀಸನ್‌ಗೆ ತಂಡಗಳು ಸಿದ್ಧವಾಗುತ್ತಿವೆ. ಈ ಸಮಯದಲ್ಲಿ, ಐಪಿಎಲ್‌ನಲ್ಲಿ ನಾಯಕರು ಎದುರಿಸುವ ಮಾನಸಿಕ ಮತ್ತು ದೈಹಿಕ ಒತ್ತಡದ ಬಗ್ಗೆ ಕೆಎಲ್ ರಾಹುಲ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇದು ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story

More Trending News