Published : Mar 18, 2026, 06:51 AM ISTUpdated : Mar 18, 2026, 11:07 PM IST

India Latest News Live: ಎಲ್ಲಿಂದರಲ್ಲಿ ಬಂದು ಬಾಯಿ ಹಾಕುವ ರಾಹುಲ್​ ಗಾಂಧಿ - ಆ ಶಬ್ದ ಬಳಸಿ ಕಂಗನಾ ರಣಾವತ್ ಹೇಳಿದ್ದೇನು

ಸಾರಾಂಶ

ಲಖನೌ: ಗ್ರಾಹಕರಿಗೆ ಆರೋಗ್ಯಕರ ಮೊಟ್ಟೆಯನ್ನು ವಿತರಿಸುವ ಉದ್ದೇಶದಿಂದ, ಔಷಧಗಳ ರೀತಿಯಲ್ಲೇ ಮೊಟ್ಟೆಯ ಮೇಲೂ ಮಾರಾಟಗಾರರು ಕಡ್ಡಾಯವಾಗಿ ಎಕ್ಸ್‌ಪೈರಿ ದಿನಾಂಕವನ್ನು ನಮೂದಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ. ಇದು ಏ.1ರಿಂದಲೇ ಜಾರಿಗೆ ಬರಲಿದೆ.

 ‘ಏ.1ರಿಂದ ಮೊಟ್ಟೆಗಳ ಮೇಲೆ ಉತ್ಪಾದನಾ ದಿನಾಂಕ ಮತ್ತು ಮುಕ್ತಾಯ ದಿನಾಂಕವನ್ನು ನಮೂದಿಸುವುದು ಕಡ್ಡಾಯ. ಇದರಿಂದ ಗ್ರಾಹಕರು ಮೊಟ್ಟೆ ಎಷ್ಟು ತಾಜಾ ಇದೆ ಎಂದು ತಿಳಿಯಬಹುದು. ಮೊಟ್ಟೆಗಳ ಮೇಲೆ ಯಾವುದೇ ಲೇಬಲ್‌ ಇಲ್ಲದಿದ್ದರೆ, ಅವುಗಳನ್ನು ಬಳಕೆಗೆ ಯೋಗ್ಯವಲ್ಲ ಎಂದು ಪರಿಗಣಿಸಲಾಗುತ್ತದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

11:07 PM (IST) Mar 18

ಎಲ್ಲಿಂದರಲ್ಲಿ ಬಂದು ಬಾಯಿ ಹಾಕುವ ರಾಹುಲ್​ ಗಾಂಧಿ - ಆ ಶಬ್ದ ಬಳಸಿ ಕಂಗನಾ ರಣಾವತ್ ಹೇಳಿದ್ದೇನು

ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು 'ಟಪೋರಿ' ಎಂದು ಕರೆದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಂಸತ್ ಕಲಾಪದ ವೇಳೆ ಅವರ ವರ್ತನೆ ಮತ್ತು ಮಹಿಳೆಯರ ವಿಷಯದಲ್ಲಿ ಅವರು ನಡೆದುಕೊಳ್ಳುವ ರೀತಿ ನಾಚಿಕೆಗೇಡಿನ ಸಂಗತಿ ಎಂದಿರುವ ಕಂಗನಾ, ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿಯಿಂದ ಕಲಿಯಬೇಕು ಎಂದು ಹೇಳಿದ್ದಾರೆ.
Read Full Story

10:08 PM (IST) Mar 18

ಭಾರತದಲ್ಲಿ ನಕ್ಸಲರು,ದಂಗೆಕೋರ ಗುಂಪುಗಳಿಗೆ ತರಬೇತಿ - ಅಮೆರಿಕನ್ ಪ್ರಜೆ ಸೇರಿ 7 ವಿದೇಶಿಗರ ಬಂಧನ - NIA ಕಸ್ಟಡಿ

ಭಾರತದಲ್ಲಿ ನಕ್ಸಲರು ಮತ್ತು ದಂಗೆಕೋರ ಗುಂಪುಗಳಿಗೆ ಭಯೋತ್ಪಾದನಾ ತರಬೇತಿ ನೀಡುತ್ತಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಓರ್ವ ಅಮೆರಿಕನ್ ಪ್ರಜೆ ಸೇರಿದಂತೆ ಏಳು ವಿದೇಶಿಗರನ್ನು ಬಂಧಿಸಿದೆ. ಮ್ಯಾನ್ಮಾರ್‌ನಲ್ಲಿ ತರಬೇತಿ ಪಡೆದಿದ್ದ ಈ ಆರೋಪಿಗಳಿಗೆ ನ್ಯಾಯಾಲಯ 11 ದಿನಗಳ ಕಸ್ಟಡಿ ನೀಡಿದೆ.

Read Full Story

09:13 PM (IST) Mar 18

ಟ್ರೈನ್​, ಬಸ್​ನಲ್ಲಿ ಹೀಗೆ ನಿಲ್ಲೋ ಹುಡುಗಿಯರೇ ಎಚ್ಚರ! ಬ್ಯಾಗ್​ನಲ್ಲಿ ಕೈ ಹಾಕಿ ಈ ಆಸಾಮಿ ಏನ್​ ಮಾಡ್ದ ನೋಡಿ

ಮೆಟ್ರೋ ಟ್ರೈನ್​ನಲ್ಲಿ ಸ್ಲೀವ್​ಲೆಸ್​ ಡ್ರೆಸ್​ ಹಾಕಿಕೊಂಡು ನಿಂತಿದ್ದ ಯುವತಿಯ ಕಂಕುಳಿಂದ ಬರುತ್ತಿದ್ದ ಬೆವರಿನ ವಾಸನೆಗೆ ಬೇಸತ್ತ ಸಹ ಪ್ರಯಾಣಿಕನೊಬ್ಬ, ಬ್ಯಾಗ್​ನಲ್ಲಿ ಕೈ ಹಾಕಿ ಏನು ಮಾಡಿದ್ದಾನೆ ನೋಡಿ . ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಯುವಕನ ಕೃತ್ಯಕ್ಕೆ ನೆಟ್ಟಿಗರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

Read Full Story

09:06 PM (IST) Mar 18

ಯುದ್ಧದ ನಡುವೆಯೇ ಇರಾನ್‌ನಿಂದ ಮಿಲಿಯನ್‌ಗಟ್ಟಲೇ ಬ್ಯಾರೆಲ್ ತೈಲ ರಫ್ತು - ಹರ್ಮುಜ್ ದಾಟಿ ಹೊರ 90 ಹಡಗುಗಳು

ಅಮೆರಿಕಾ-ಇಸ್ರೇಲ್ ಯುದ್ಧದ ನಡುವೆಯೂ, ಪರಿಣಾಮಕಾರಿಯಾಗಿ ಮುಚ್ಚಲ್ಪಟ್ಟ ಹರ್ಮುಜ್ ಜಲಸಂಧಿಯ ಮೂಲಕ ಇರಾನ್ ಮಿಲಿಯನ್‌ಗಟ್ಟಲೇ ಬ್ಯಾರೆಲ್ ತೈಲವನ್ನು ರಫ್ತು ಮಾಡುತ್ತಿದೆ. ತೈಲ ಆರಂಭವಾದಾಗಿನಿಂದ ತೈಲ ತುಂಬಿದ 90 ಹಡಗುಗಳು ಈ ಜಲಮಾರ್ಗವನ್ನು ದಾಟಿ ಸಾಗಿವೆ.

Read Full Story

08:19 PM (IST) Mar 18

ಹತ್ತಿರ ಹತ್ತಿರ ಬಾರೆ ಎಂದು ಅಂಬಾನಿ ಹಿಡಿದ್ರೂ, ದೂರ ಸರಿದ ನೀತಾ- ಲಕ್ಷ ಲಕ್ಷ ವ್ಯೂವ್ಸ್‌ ಕಂಡ ವಿಡಿಯೋ ವೈರಲ್‌

ಕಾರ್ಯಕ್ರಮವೊಂದರಲ್ಲಿ ಮುಕೇಶ್ ಅಂಬಾನಿ ತಮ್ಮ ಪತ್ನಿ ನೀತಾ ಅಂಬಾನಿ ಅವರ ಕೈ ಹಿಡಿಯಲು ಮತ್ತು ಸೊಂಟದ ಮೇಲೆ ಕೈ ಹಾಕಲು ಪ್ರಯತ್ನಿಸಿದಾಗ, ನೀತಾ ಅವರು ತಪ್ಪಿಸಿಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Read Full Story

06:15 PM (IST) Mar 18

ಎಸ್.ಪಿ.ಬಾಲಸುಬ್ರಹ್ಮಣ್ಯಂ ಧ್ವನಿಗೆ ಮಾಟ-ಮಂತ್ರ ಮಾಡಿಸಿದ್ರಾ? ಆ ಒಂದು ಹಾಡು ನರಕ ತೋರಿಸಿತ್ತಂತೆ!

ದಿಗ್ಗಜ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಧ್ವನಿಗೆ ಯಾರಾದರೂ ಮಾಟ ಮಾಡಿಸಿದ್ದರೇ? ಅವರ ಧ್ವನಿಗೆ ಬಂದಿದ್ದ ಸಮಸ್ಯೆ ಏನು? ಮನೆಯವರು ಯಾಕೆ ಹಾಗೆ ಅನುಮಾನಪಟ್ಟರು? ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ನರಕ ತೋರಿಸಿದ ಆ ಹಾಡು ಯಾವುದು?

Read Full Story

06:11 PM (IST) Mar 18

ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟ ಮೀನಿಗೆ ಜಿರಳೆ ಔಷಧಿ ಹಿಟ್ ಸ್ಪ್ರೇ ಮಾಡಿದ ಯುವಕ

ಮಹಾರಾಷ್ಟ್ರದ ವಸೈನಲ್ಲಿ ವ್ಯಾಪಾರಿಯೊಬ್ಬ ಮಾರಾಟಕ್ಕಿಟ್ಟ ಮೀನುಗಳ ಮೇಲೆ ಜಿರಳೆ ನಾಶಕ 'ಹಿಟ್' ಸ್ಪ್ರೇ ಮಾಡುತ್ತಿರುವ ಆಘಾತಕಾರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಆಹಾರ ಸುರಕ್ಷತೆ ಮತ್ತು ಸಾರ್ವಜನಿಕರ ಆರೋಗ್ಯದ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.
Read Full Story

06:06 PM (IST) Mar 18

IPL 2026 - ಪ್ಯಾಟ್‌ ಕಮಿನ್ಸ್ ಬರುವವರೆಗೂ ಈ ಬಿಗ್ ಹಿಟ್ಟರ್‌ಗೆ ನಾಯಕತ್ವ ಪಟ್ಟ ಕಟ್ಟಿದ ಸನ್‌ರೈಸರ್ಸ್ ಹೈದರಾಬಾದ್!

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿರುವಾಗಲೇ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಇಬ್ಬರು ಸ್ಪೋಟಕ ಬ್ಯಾಟರ್‌ಗಳಿಗೆ ನಾಯಕ ಹಾಗೂ ಉಪನಾಯಕ ಪಟ್ಟ ಕಟ್ಟಿದೆ. ಈ ಕುರಿತಾದ ಮಹತ್ವದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

 

Read Full Story

05:57 PM (IST) Mar 18

Rithu Chowdary - 'ನನ್ನನ್ನು ಮೋಸ ಮಾಡಿ ಬೇರೆ ಹುಡುಗಿ ಜೊತೆ ಹೋದ' - ನಟಿ ರಿತು ಚೌಧರಿ ಭಾವುಕ

ನಟಿ ರಿತು ಚೌಧರಿ ಹಂಚಿಕೊಂಡಿರುವ ಭಾವುಕ ಇನ್‌ಸ್ಟಾಗ್ರಾಮ್ ಸ್ಟೋರಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರೀತಿ, ಬ್ರೇಕಪ್ ಮತ್ತು ವದಂತಿಗಳ ಬಗ್ಗೆ ಅವರ ಮಾತುಗಳು ಹೊಸ ಚರ್ಚೆಯನ್ನು ಹುಟ್ಟುಹಾಕಿವೆ.

Read Full Story

05:45 PM (IST) Mar 18

T20 Rankings - ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಸಂಜು ಸ್ಯಾಮ್ಸನ್ ಮುಂಬಡ್ತಿ, ಅಭಿಷೇಕ್ ಶರ್ಮಾ ನಂ.1 ಸ್ಥಾನ ಭದ್ರ!

ದುಬೈ: ಅಂತಾರಾಷ್ಟ್ರೀಯ ಟಿ20 ನೂತನ ರ್‍ಯಾಂಕಿಂಗ್‌ ಪ್ರಕಟವಾಗಿದ್ದು, ಕೆಲವೊಂದು ಮಹತ್ವದ ಬದಲಾವಣೆಗಳಾಗಿವೆ.ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಸಂಜು ಸ್ಯಾಮ್ಸನ್ ಮುಂಬಡ್ತಿ ಪಡೆದಿದ್ದಾರೆ.

Read Full Story

05:37 PM (IST) Mar 18

Suriya - ದಳಪತಿ ವಿಜಯ್ ಸಿನಿಮಾ ರಿಲೀಸ್ ತಡ - ಸೂರ್ಯ ಜೊತೆ ಕೈಜೋಡಿಸಿದ ನಿರ್ದೇಶಕ ಹೆಚ್.ವಿನೋದ್!

ಮೊದಲು 'ಜನ ನಾಯಗನ್' ಚಿತ್ರವನ್ನು ಜನವರಿ 9 ರಂದು ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ, ಸೆನ್ಸಾರ್ ಸರ್ಟಿಫಿಕೇಟ್ ಸಿಗದೇ ಇರುವುದು ಮತ್ತು ಕೋರ್ಟ್ ಕೇಸ್‌ಗಳಿಂದಾಗಿ ಸಿನಿಮಾ ಬಿಡುಗಡೆ ತಡವಾಗುತ್ತಿದೆ.

Read Full Story

05:24 PM (IST) Mar 18

ಐಪಿಎಲ್‌ಗೆ ಸಡ್ಡು ಹೊಡೆಯಲು ಹೋದ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮುಖಭಂಗ!

ಲಾಹೋರ್‌: ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಸಡ್ಡು ಹೊಡೆದು ಪಾಕಿಸ್ತಾನ ಸೂಪರ್ ಲೀಗ್ ಆಯೋಜಿಸಲು ಹೊರಟಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ಇದೀಗ ಜಾಗತಿಕ ಮಟ್ಟದಲ್ಲಿ ಮುಖಭಂಗವಾಗಿದೆ. ಅಷ್ಟಕ್ಕೂ ಏನಿದು ಘಟನೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

 

Read Full Story

04:47 PM (IST) Mar 18

ತೀವ್ರವಾದ ರಾಜಮನೆತನದ ಆಸ್ತಿ ಬಿಕ್ಕಟ್ಟು, ಅಪ್ಪನ ಆಸ್ತಿಯ ನಿರ್ವಹಣೆ ಕೇಳಿದ್ದ ಪದ್ಮಜಾ ಕುಮಾರಿಗೆ ಹಿನ್ನಡೆ!

ಉದಯಪುರದ ಮಾಜಿ ರಾಜಮನೆತನದ ಆಸ್ತಿ ವಿವಾದದಲ್ಲಿ, ದಿವಂಗತ ಅರವಿಂದ್ ಸಿಂಗ್ ಮೇವಾರ್ ಅವರ ಪುತ್ರಿ ಪದ್ಮಜಾ ಕುಮಾರಿ ಅವರ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಸಹೋದರ ಲಕ್ಷ್ಯರಾಜ್ ಸಿಂಗ್ ಮಂಡಿಸಿರುವ 'ವಿಲ್' ಪ್ರಕರಣ ಬಾಕಿ ಇರುವ ಕಾರಣ, ಆಡಳಿತಾತ್ಮಕ ಹಕ್ಕು ನೀಡಲು ನ್ಯಾಯಾಲಯ ನಿರಾಕರಿಸಿದೆ.

Read Full Story

03:27 PM (IST) Mar 18

ಟಿ20 ವಿಶ್ವಕಪ್ ಬಹಿಷ್ಕಾರ, ಬಾಂಗ್ಲಾ ಮಂಡಳಿಗೆ ಈಗ ಪಶ್ಚಾತ್ತಾಪ! ತನಿಖೆಗೆ ಸಮಿತಿ ರಚನೆ

ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಹಿಂದೆ ಸರಿದಿದ್ದನ್ನು 'ದೊಡ್ಡ ರಾಜತಾಂತ್ರಿಕ ಪ್ರಮಾದ' ಎಂದು ಕ್ರೀಡಾ ಸಚಿವರು ಕರೆದಿದ್ದಾರೆ. ಮುಸ್ತಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಕೈಬಿಟ್ಟಿದ್ದಕ್ಕೆ ಪ್ರತಿಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Read Full Story

03:23 PM (IST) Mar 18

ನಡು ಸಮುದ್ರದಲ್ಲೇ ಡೀಲ್‌, ಚೀನಾದತ್ತ ಹೊರಟಿದ್ದ ರಷ್ಯಾದ ತೈಲ ನೌಕೆ ಈಗ ಮಂಗಳೂರಿನತ್ತ ಯು-ಟರ್ನ್!

ಚೀನಾದತ್ತ ಸಾಗುತ್ತಿದ್ದ ರಷ್ಯಾದ ಕಚ್ಚಾ ತೈಲ ಹೊತ್ತ ಹಲವು ನೌಕೆಗಳು ತಮ್ಮ ಮಾರ್ಗ ಬದಲಿಸಿ ಭಾರತದತ್ತ ಧಾವಿಸುತ್ತಿವೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಬದಲಾವಣೆ ಮತ್ತು ಮಧ್ಯಪ್ರಾಚ್ಯದ ಪೂರೈಕೆ ಕೊರತೆಯನ್ನು ನೀಗಿಸಲು ಭಾರತವು ರಷ್ಯಾದಿಂದ ತನ್ನ ತೈಲ ಆಮದನ್ನು ಗಣನೀಯವಾಗಿ ಹೆಚ್ಚಿಸಿದೆ.
Read Full Story

03:03 PM (IST) Mar 18

ಆಸ್ಪತ್ರೆ ಬಿಲ್ ಕಟ್ಟುವ ಮುನ್ನ ಎಚ್ಚರ! ಐಟಮೈಸ್ಡ್ ಬಿಲ್ ಕೇಳಿದ ರೋಗಿಗೆ ಬರೋಬ್ಬರಿ 44,000 ರೂ. ಉಳಿತಾಯ!

ರೋಗಿಯೊಬ್ಬರು ಆಸ್ಪತ್ರೆಯಿಂದ 'ಐಟಮೈಸ್ಡ್ ಬಿಲ್' ಕೇಳುವ ಮೂಲಕ ತಮ್ಮ ಬಿಲ್‌ನಲ್ಲಿ 44,000 ರೂ. ಉಳಿತಾಯ ಮಾಡಿದ್ದಾರೆ. ತಾವು ಪಡೆಯದ ಚಿಕಿತ್ಸೆಗೂ ಬಿಲ್‌ನಲ್ಲಿ ಹಣ ಸೇರಿಸಿರುವುದನ್ನು ಕಂಡುಕೊಂಡ ಅವರು, ಈ ಮೂಲಕ ಆಸ್ಪತ್ರೆ ಬಿಲ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸುವುದರ ಮಹತ್ವವನ್ನು ಸಾರಿದ್ದಾರೆ.

Read Full Story

02:34 PM (IST) Mar 18

ಬಾಲಿವುಡ್​ ಸ್ಟಾರ್‌ಗೂ ತಟ್ಟಿದ LPG ಸಿಲಿಂಡರ್ ಅಭಾವ! ಹೀಗಾಗಿ ಅಕ್ಷಯ್ ಕುಮಾರ್ ಪತ್ನಿ ಮಾಡಿದ್ರು ಕಿಲಾಡಿ ಐಡಿಯಾ!

ದೇಶಾದ್ಯಂತ ಎಲ್.ಪಿ.ಜಿ ಸಿಲಿಂಡರ್ ಅಭಾವ ತಲೆದೋರಿದ್ದು, ಇದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೂ ತಟ್ಟಿದೆ. ಅನಿಲ ಕೊರತೆಯಾದರೆ ಅಡುಗೆಗೆ ತೊಂದರೆಯಾಗಬಾರದೆಂದು, ತಮ್ಮ ಪತ್ನಿ ಟ್ವಿಂಕಲ್ ಖನ್ನಾ ಈಗಾಗಲೇ ಎರಡು ಇಂಡಕ್ಷನ್ ಸ್ಟೌವ್‌ಗಳನ್ನು ತರಿಸಿಕೊಂಡಿದ್ದಾರೆ ಎಂದು ಅಕ್ಷಯ್ ಬಹಿರಂಗಪಡಿಸಿದ್ದಾರೆ.
Read Full Story

02:19 PM (IST) Mar 18

ಮಾರುತಿ ಸುಜುಕಿ ವಿರುದ್ಧ 200 ಕೋಟಿ ಕೇಸ್ - ಕೋರ್ಟ್ ಒಳಗೆ ಭ್ರೂಣ ತಂದ ವ್ಯಕ್ತಿ, ಹೈಕೋರ್ಟ್ ಗರಂ!

ಅರ್ಜಿದಾರರ ಕುಟುಂಬ ಎದುರಿಸಿದ ವೈಯಕ್ತಿಕ ನಷ್ಟ ಅಥವಾ ಸಂಕಷ್ಟದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ ನ್ಯಾಯಾಲಯ, ಭಾವನೆಗಳು ನ್ಯಾಯಾಂಗ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಒತ್ತಿಹೇಳಿದೆ.

 

Read Full Story

01:53 PM (IST) Mar 18

Back to India - 17 ವರ್ಷ ಅಮೆರಿಕ ವಾಸಕ್ಕೆ ಗುಡ್‌ಬೈ! ನೆಮ್ಮದಿಯ ಜೀವನ ಅರಸಿ ಭಾರತಕ್ಕೆ ಮರಳಿದ NRI ಕುಟುಂಬ!

17 ವರ್ಷಗಳ ಅಮೆರಿಕ ವಾಸಕ್ಕೆ ಅಂತ್ಯ ಹಾಡಿ, ಎನ್‌ಆರ್‌ಐ ಕುಟುಂಬವೊಂದು ಭಾರತಕ್ಕೆ ಮರಳುತ್ತಿದೆ. ಮಗನಿಗೆ ಉತ್ತಮ ಸಾಮಾಜಿಕ ವಾತಾವರಣ ಮತ್ತು ನೆಮ್ಮದಿಯ ಜೀವನಕ್ಕಾಗಿ ಪುಣೆಯಲ್ಲಿ ನೆಲೆಸಲು ಈ ಫ್ಯಾಮಿಲಿ ನಿರ್ಧರಿಸಿದೆ. ಇದಕ್ಕಾಗಿ 4 ಕೋಟಿ ರೂ.ವರೆಗೂ ಖರ್ಚು ಮಾಡಲು ಸಿದ್ಧವಾಗಿದೆ.
Read Full Story

01:18 PM (IST) Mar 18

ಚಾರ್ಜ್‌ಗೆ ಇಟ್ಟ ಇವಿ ಕಾರಿನಲ್ಲಿ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ - ಮನೆಗೆ ಹಬ್ಬಿ 8 ಜನ ಬಲಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ, ಚಾರ್ಜ್‌ಗೆ ಇಟ್ಟಿದ್ದ ಇಲೆಕ್ಟ್ರಿಕ್ ಕಾರಿನಲ್ಲಿ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು, ಮೂರಂತಸ್ತಿನ ಮನೆಗೆ ವ್ಯಾಪಿಸಿದೆ. ಈ ದುರಂತದಲ್ಲಿ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ, ಒಂದೇ ಕುಟುಂಬದ 8 ಮಂದಿ ಸಾವನ್ನಪ್ಪಿದ್ದಾರೆ.
Read Full Story

01:12 PM (IST) Mar 18

ಇರಾನ್‌ನೊಂದಿಗೆ ಯುದ್ಧದ ನಡುವೆಯೂ ಈ ಮುಸ್ಲಿಂ ರಾಷ್ಟ್ರ ಭಾರತದ ಸ್ನೇಹಕ್ಕಾಗಿ ಹೊಸ ಮಾರ್ಗದ ಮೂಲಕ ಲಕ್ಷಾಂತರ ಬ್ಯಾರೆಲ್ ತೈಲ ಕಳಿಸುತ್ತಿದೆ!

ಇರಾನ್-ಇಸ್ರೇಲ್ ಸಂಘರ್ಷದಿಂದ ಹಾರ್ಮುಜ್ ಜಲಸಂಧಿ ಅಸುರಕ್ಷಿತವಾಗಿರುವ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾ ಭಾರತಕ್ಕೆ ನಿರಂತರ ತೈಲ ಪೂರೈಕೆಯ ಭರವಸೆ ನೀಡಿದೆ. ಈ ನಿಟ್ಟಿನಲ್ಲಿ, ಸೌದಿಯು ತನ್ನ ಯಾನ್ಬು ಬಂದರಿನಿಂದ ಕೆಂಪು ಸಮುದ್ರದ ಮೂಲಕ ಪರ್ಯಾಯ ಮಾರ್ಗವನ್ನು ಬಳಸಿ ಭಾರತಕ್ಕೆ ಕಚ್ಚಾ ತೈಲ ಸಾಗಿಸುತ್ತಿದೆ.

Read Full Story

12:59 PM (IST) Mar 18

IPL 2026 ರಿಂಕು ಸಿಂಗ್‌ಗೆ ಶಾಕ್! ಈ ಅನುಭವಿ ಆಟಗಾರನಿಗೆ ಮತ್ತೆ ಕ್ಯಾಪ್ಟನ್ ಪಟ್ಟ ಕಟ್ಟಿದ ಕೆಕೆಆರ್!

ಐಪಿಎಲ್ 2026ರ ಸೀಸನ್‌ಗೆ ಕೋಲ್ಕತಾ ನೈಟ್ ರೈಡರ್ಸ್ ತಂಡವು ಅಜಿಂಕ್ಯ ರಹಾನೆಯನ್ನು ತಮ್ಮ ನಾಯಕನನ್ನಾಗಿ ಅಧಿಕೃತವಾಗಿ ಘೋಷಿಸಿದೆ. ರಿಂಕು ಸಿಂಗ್ ಹೆಸರು ಕೂಡ ಚರ್ಚೆಯಲ್ಲಿತ್ತು, ಆದರೆ ಮ್ಯಾನೇಜ್‌ಮೆಂಟ್ ರಹಾನೆ ಮೇಲೆಯೇ ನಂಬಿಕೆ ಇಟ್ಟಿದೆ. ಅಷ್ಟಕ್ಕೂ ಕೆಕೆಆರ್ ಪ್ಲ್ಯಾನ್ ಏನು?

Read Full Story

12:49 PM (IST) Mar 18

ಮಗನ ಕಣ್ಣೆದುರೇ ಘೋರ ಕೃತ್ಯ - ಜಗಳವಾಡಿ ಪತ್ನಿಯನ್ನು ಚಲಿಸುವ ರೈಲಿಗೆ ತಳ್ಳಿ ಕೊಂದ ಪತಿ!

13 ವರ್ಷದ ಮಗನೋಡುತ್ತಿದ್ದಂತೆಯೇ ಪತಿ ಈ ಘೋರ ಕೃತ್ಯ ಎಸಗಿದ್ದಾನೆ. ಘಟನೆ ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದ. ದಂಪತಿ ನಡುವೆ ಸದಾ ಜಗಳ ನಡೆಯುತ್ತಿತ್ತು ಎಂದು ಮೃತ ಪುಷ್ಪಾ ಗುಪ್ತಾ ಅವರ ಸಹೋದರ ಕಮಲೇಶ್ ಕುಮಾರ್ ಗುಪ್ತಾ ಪೊಲೀಸರಿಗೆ ತಿಳಿಸಿದ್ದಾರೆ.

Read Full Story

12:45 PM (IST) Mar 18

Delhi Fire - ದೆಹಲಿಯ ವಸತಿ ಕಟ್ಟಡದಲ್ಲಿ ಭೀಕರ ಅಗ್ನಿ ದುರಂತ, 6 ಮಂದಿ ಸಜೀವ ದಹನ

ದೆಹಲಿಯ ಪಾಲಂ ಪ್ರದೇಶದ ವಸತಿ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ 30 ಅಗ್ನಿಶಾಮಕ ವಾಹನಗಳು ದೌಡಾಯಿಸಿವೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ, ಅಗ್ನಿ ಶಾಮಕದಳದ ವಿಳಂಬ ಸಾವು ಹೆಚ್ಚಾಗಲು ಕಾರಣ ಎಂದು ಆರೋಪಿಸಲಾಗಿದೆ.

Read Full Story

12:40 PM (IST) Mar 18

ಬ್ಯಾಂಕಿಂಗ್‌ ಅಪ್ಲಿಕೇಶನ್‌ಗಳಿಗೆ ನಮ್ಮ ಕಾಂಟಾಕ್ಟ್‌, SMS ಪರ್ಮಿಷನ್‌ ಯಾಕೆ ಬೇಕು? ಪ್ರಶ್ನಿಸಿದ ಜೀರೋದಾ ನಿತಿನ್‌ ಕಾಮತ್‌!

ಜೆರೋಧಾ ಸಿಇಒ ನಿತಿನ್ ಕಾಮತ್, ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು ಭದ್ರತೆಯ ಹೆಸರಿನಲ್ಲಿ ಕೇಳುವ SMS, ಕಾಂಟ್ಯಾಕ್ಟ್‌ಗಳಂತಹ ಅತಿಯಾದ ಪರ್ಮಿಷನ್‌ಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಇದು ಜಾಗತಿಕ ಸೈಬರ್ ಸೆಕ್ಯುರಿಟಿ ತತ್ವಗಳಿಗೆ ವಿರುದ್ಧವಾಗಿದೆ ಎಂದಿದ್ದಾರೆ.

Read Full Story

12:09 PM (IST) Mar 18

ಆಕ್ಸಿಡೆಂಟ್‌ನಲ್ಲಿ ಮೂವರು ಹಿಂದೂ ವೈದ್ಯ ವಿದ್ಯಾರ್ಥಿಗಳ ಸಾವು, ಇದು ಕೊಲೆ ಎಂದ ಸ್ಥಳೀಯರು..

ಸ್ಕೂಟರ್‌ಗೆ ಹಿಂದಿನಿಂದ ಮತ್ತೊಂದು ವಾಹನ ಡಿಕ್ಕಿ ಹೊಡೆದಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಮೃತಪಟ್ಟ ಮೂವರೂ ಮಲಬಾರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. 

 

Read Full Story

12:08 PM (IST) Mar 18

ವಿಜಯ್‌ಗೆ ಬಿಜೆಪಿ 80 ಸೀಟ್, ಡಿಸಿಎಂ ಆಫರ್ ಬೆನ್ನಲ್ಲೇ ಅಮಿತ್ ಶಾ ಭೇಟಿಯಾದ ತ್ರಿಷಾ! ರಾಜಕೀಯದಲ್ಲಿ ಸಂಚಲನ

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ NDA ಜತೆ ಮೈತ್ರಿ ಮಾಡಿಕೊಂಡರೆ ದಳಪತಿ ವಿಜಯ್ ಅವರಿಗೆ ಬಿಜೆಪಿ 80 ಸ್ಥಾನ ಹಾಗೂ ಡಿಸಿಎಂ ಹುದ್ದೆ ನೀಡುವುದಾಗಿ ಆಫರ್ ನೀಡಿದೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ವಿಜಯ್ ಗೆಳತಿ ಹಾಗೂ ನಟಿ ಅಮಿತ್ ಶಾರನ್ನು ಭೇಟಿಯಾಗಿದ್ದಾರೆಂದು ವರದಿಯಾಗಿದೆ.

Read Full Story

11:49 AM (IST) Mar 18

12ನೇ ವಯಸ್ಸಿಗೆ ಈಕೆ 'ಬಾಸ್' - 5 ಲಕ್ಷ ಹೂಡಿಕೆ ಮಾಡಿ ಸ್ವಂತ ಅಮ್ಮನನ್ನೇ ಕೆಲಸಕ್ಕೆ ಇಟ್ಟುಕೊಂಡ ಪುಟ್ಟ ಉದ್ಯಮಿ!

ಚೀನಾದ 12 ವರ್ಷದ ಬಾಲಕಿ ಲಿ ಯುಯೆ, ತನ್ನ ಉಳಿತಾಯದ ಹಣದಿಂದ ಸ್ಟೇಷನರಿ ಅಂಗಡಿಯೊಂದನ್ನು ಖರೀದಿಸಿದ್ದಾಳೆ. ತನ್ನ ತಾಯಿಯನ್ನೇ ಸಂಬಳಕ್ಕೆ ನೇಮಿಸಿಕೊಂಡು, ವ್ಯಾಪಾರ ತಂತ್ರಗಳನ್ನು ರೂಪಿಸುತ್ತಾ, ಕೃತಕ ಬುದ್ಧಿಮತ್ತೆ ಬಳಸಿ ಲೆಕ್ಕಪತ್ರ ನಿರ್ವಹಿಸುತ್ತಾ ಯಶಸ್ವಿ ಉದ್ಯಮಿಯಾಗುತ್ತಿದ್ದಾಳೆ.
Read Full Story

11:47 AM (IST) Mar 18

ಶಾಲೆಯಲ್ಲಿ ವಿದ್ಯಾರ್ಥಿನಿಯರ 'ಟವೆಲ್ ಡ್ಯಾನ್ಸ್' ವಿಡಿಯೋ ವೈರಲ್; ಸರ್ಕಾರಕ್ಕೆ NHRC ನೋಟಿಸ್

ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರು 'ಟವೆಲ್ ಡ್ಯಾನ್ಸ್' ಮಾಡಿದ ವಿಡಿಯೋ ವೈರಲ್ ಆಗಿ ವಿವಾದ ಸೃಷ್ಟಿಸಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸಲು ಸೂಚಿಸಿದೆ.
Read Full Story

11:37 AM (IST) Mar 18

Climate Change - 2050ರ ಹೊತ್ತಿಗೆ ಲಕ್ಷಾಂತರ ಜನ ಸಾಯ್ತಾರಾ? ಹವಾಮಾನ ಬದಲಾವಣೆ ಬಗ್ಗೆ ಭಯಾನಕ ವರದಿ!

ಹೆಚ್ಚುತ್ತಿರುವ ತಾಪಮಾನದಿಂದಾಗಿ ಜನರು ದೈಹಿಕವಾಗಿ ನಿಷ್ಕ್ರಿಯರಾಗುತ್ತಿದ್ದಾರೆ. ಇದರಿಂದ 2050ರ ವೇಳೆಗೆ 7 ಲಕ್ಷದವರೆಗೆ ಅಕಾಲಿಕ ಮರಣಗಳು ಸಂಭವಿಸಬಹುದು ಎಂದು ಹೊಸ ಅಧ್ಯಯನವೊಂದು ಎಚ್ಚರಿಸಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Read Full Story

11:28 AM (IST) Mar 18

ಅಲ್ಲಿ ಹಂಗೆ, ಇಲ್ಲಿ ಹಿಂಗೆ; ರೀಲ್ಸ್ ಯುವತಿಯ ದ್ವೇಷ, ರೋಷ, ಕೋಪ ತಾಪ; ಪುರುಷರ ಆಕ್ರೋಶ

ರೈಲ್ವೆ ನಿಲ್ದಾಣದಲ್ಲಿ ಯುವತಿಯೊಬ್ಬಳು ಮಾಡಿದ ಎರಡು ರೀಲ್ಸ್ ವೈರಲ್ ಆಗಿವೆ. ಒಂದರಲ್ಲಿ ತನ್ನನ್ನು ಮುಟ್ಟಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಹಲ್ಲೆ ಮಾಡಿದರೆ, ಮತ್ತೊಂದರಲ್ಲಿ ತಾನೇ ಯುವಕನೊಬ್ಬನನ್ನು ಅನುಮತಿಯಿಲ್ಲದೆ ಮುಟ್ಟಿದ್ದಾಳೆ. ಹುಡುಗ, ಮಹಿಳೆಯನ್ನು ಟಚ್ ಮಾಡಿದ್ರೆ ಪರಿಣಾಮ ಭಯಂಕರವಾಗಿರುತ್ತದೆ.

Read Full Story

10:27 AM (IST) Mar 18

North Korea Election - ಶೇ. 99.99% ಮತದಾನ, ಕಿಮ್‌ಗೆ ಭರ್ಜರಿ ಗೆಲುವು! ಆದ್ರೆ, ಇತಿಹಾಸದಲ್ಲೇ ಮೊದಲ ಬಾರಿಗೆ ವಿರೋಧ ಮತ ಚಲಾಯಿಸಿದ ಜನ!

ಉತ್ತರ ಕೊರಿಯಾದ ಸಂಸತ್ ಚುನಾವಣೆಯಲ್ಲಿ ಕಿಮ್ ಜಾಂಗ್ ಉನ್ ಶೇ. 99.97% ಮತಗಳೊಂದಿಗೆ ಭರ್ಜರಿ ಜಯ ಸಾಧಿಸಿದ್ದಾರೆ. ಆದರೆ, 1957ರ ಬಳಿಕ ಇದೇ ಮೊದಲ ಬಾರಿಗೆ ಶೇ. 0.07%ರಷ್ಟು ಜನ ಕಿಮ್ ವಿರುದ್ಧ ಮತ ಚಲಾಯಿಸಿದ್ದು, ಇದು ದೊಡ್ಡ ಚರ್ಚೆಗೆ ಕಾರಣವಾಗಿದೆ. 

Read Full Story

10:26 AM (IST) Mar 18

ಮಧುರ ಚುಂಬನಂ ದಂತ ಭಗ್ನಂ - ಲಿಫ್ಟ್‌ನಲ್ಲಿ ಅಜ್ಜಿಗೆ ಅಜ್ಜ ಕಿಸ್ ಕೊಡುವಾಗ ನಡದೇ ಹೋಯ್ತು ಘನಘೋರ ದುರಂತ

ಲಿಫ್ಟ್‌ನಲ್ಲಿ ವೃದ್ಧ ಜೋಡಿಯೊಂದು ಪ್ರೇಮ ಸಲ್ಲಾಪದಲ್ಲಿ ತೊಡಗಿದ್ದಾಗ ಅನಿರೀಕ್ಷಿತ ಘಟನೆಯೊಂದು ನಡೆಯುತ್ತದೆ. ಈ ರೊಮ್ಯಾಂಟಿಕ್ ಕ್ಷಣ ಹಾಸ್ಯಮಯವಾಗಿ ಬದಲಾಗುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Read Full Story

10:12 AM (IST) Mar 18

Ugadi 2026 - ಶ್ರೀ ಪರಾಭವನಾಮ ಯುಗಾದಿ, ಈ ರಾಶಿಯವರಿಗೆ ಶುರುವಾಗಲಿದೆ ಗೋಲ್ಡನ್ ಟೈಮ್! ಕಂಕಣ ಭಾಗ್ಯ ಗ್ಯಾರಂಟಿ

2026ರ ಶ್ರೀ ಪರಾಭವನಾಮ ಯುಗಾದಿಯ ನಂತರ ಮೀನ ರಾಶಿಯವರಿಗೆ ಅತ್ಯಂತ ಅದೃಷ್ಟದ ಸಮಯ ಶುರುವಾಗಲಿದೆ. ನೀವು ಎದುರಿಸುತ್ತಿದ್ದ ಮಾನಸಿಕ ಚಿಂತೆ, ಆರ್ಥಿಕ ಸಂಕಷ್ಟಗಳು ದೂರವಾಗಿ, ಜೀವನದಲ್ಲಿ ಹೊಸ ಬೆಳಕು ಮೂಡಲಿದೆ.
Read Full Story

09:56 AM (IST) Mar 18

ಮದುವೆ-ಹಬ್ಬಕ್ಕೆ ತಕ್ಷಣವೇ ಮುಖದಲ್ಲಿ ಹೊಳಪು ಪಡೆಯಲು ಮನೆಯಲ್ಲಿ ಈ ಟಿಪ್ಸ್ ಫಾಲೋ ಮಾಡಿ!

ಈಗ ಮದುವೆ ಸೀಸನ್, ಜೊತೆಗೆ ಯುಗಾದಿ ಹಬ್ಬ ಬೇರೆ. ಇಂತಹ ಸಮಯದಲ್ಲಿ ಸುಂದರವಾಗಿ ಕಾಣಲು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಇಲ್ಲಿ ನೀಡಿರುವ ಕೆಲವು ನ್ಯಾಚುರಲ್ ಬ್ಯೂಟಿ ಟಿಪ್ಸ್ ನಿಮಗೆ ಸಹಾಯ ಮಾಡುತ್ತೆ.
Read Full Story

09:28 AM (IST) Mar 18

5 ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ರೇಣು 1.18 ಲಕ್ಷ ರುಪಾಯಿ ಸಂಪಾದನೆ! ನಿಧನವಾಗಿರುವ ಪತಿಯ ಫೋಟೋ ತೆಗೆದಿದ್ದೇಕೆ?

ಬಿಗ್‌ಬಾಸ್ ಖ್ಯಾತಿಯ ರೇಣು ಸುಧಿ, ತಮ್ಮ ಪತಿ ಕೊಲ್ಲಂ ಸುಧಿ ಅವರ ಫೋಟೋವನ್ನು ಇನ್‌ಸ್ಟಾಗ್ರಾಂ ಡಿಪಿಯಿಂದ ತೆಗೆದುಹಾಕಿದ್ದಕ್ಕೆ ಮತ್ತು ಪೇಯ್ಡ್ ಸಬ್‌ಸ್ಕ್ರಿಪ್ಷನ್ ಆರಂಭಿಸಿದ್ದಕ್ಕೆ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಬ್ಲೂ ಟಿಕ್‌ಗಾಗಿ ಡಿಪಿ ಬದಲಿಸಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ.

Read Full Story

08:40 AM (IST) Mar 18

19ನೇ ಸೀಸನ್ ಐಪಿಎಲ್‌ ಸಮರಕ್ಕೆ ಭರದ ಸಿದ್ಧತೆ ಶುರು! ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣು!

ಬಹುನಿರೀಕ್ಷಿತ ಐಪಿಎಲ್‌ನ 19ನೇ ಆವೃತ್ತಿಯು ಮಾ.28 ರಂದು ಬೆಂಗಳೂರಿನಲ್ಲಿ ಆರಂಭವಾಗಲಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಆಟಗಾರರು ತಮ್ಮ ತಂಡಗಳೊಂದಿಗೆ ಅಭ್ಯಾಸ ಆರಂಭಿಸಿದ್ದು, ಬಿಸಿಸಿಐ ಈ ಬಾರಿ ತಂಡಗಳಿಗೆ ಕೆಲವು ಹೊಸ ಮಾರ್ಗಸೂಚಿಗಳನ್ನು ನೀಡಿದೆ.
Read Full Story

08:39 AM (IST) Mar 18

ಕೌಟುಂಬಿಕ ಕಲಹದ ಬಳಿಕ ಸನ್ಯಾಸಿಯಾದ ಪತಿಗೆ ಬೀದಿಯಲ್ಲೇ ಥಳಿಸಿದ ಮಹಿಳೆ - ವೀಡಿಯೋ

family dispute: ಮದುವೆಯಾಗಿ ಇಬ್ಬರು ಮಕ್ಕಳಾದ ಬಳಿಕ ಸನ್ಯಾಸತ್ವ ಸ್ವೀಕರಿಸಿದ ವ್ಯಕ್ತಿಯನ್ನು, ಆತನ ಪತ್ನಿ ಮತ್ತು ಭಾವಮೈದುನ ಮಥುರಾದಲ್ಲಿ ಸಾರ್ವಜನಿಕವಾಗಿ ಥಳಿಸಿದ್ದಾರೆ. ಈ ಘಟನೆಯ ವೀಡಿಯೋ ವೈರಲ್ ಆಗಿದ್ದು, ಹಲವು ವರ್ಷಗಳ ಕೌಟುಂಬಿಕ ಕಲಹವೇ ಈ ದಾಳಿಗೆ ಕಾರಣ ಎನ್ನಲಾಗಿದೆ.

Read Full Story

More Trending News