LIVE NOW
Published : Nov 17, 2026, 07:11 AM IST

India Latest News Live: ಸಿಜೆಐ ಬಗ್ಗೆ ಅನುಚಿತ ಹೇಳಿಕೆ: ವಕೀಲನನ್ನು ಹೊರಹಾಕಿದ ಪೀಠ

ಸಾರಾಂಶ

ನವದೆಹಲಿ: ಮುಖ್ಯ ನ್ಯಾ। ಸೂರ್ಯ ಕಾಂತ್ ವಿರುದ್ಧ ಆಧಾರರಹಿತ ಮತ್ತು ಅಹಿತಕರ ಹೇಳಿಕೆ ನೀಡಿದ ಆರೋಪದ ಮೇಲೆ ಸೋಮವಾರ ಸುಪ್ರೀಂ ಕೋರ್ಟ್‌ನ ಕೋರ್ಟ್‌ ಕೊಠಡಿಯಿಂದ ವಕೀಲರೊಬ್ಬರನ್ನು ಹೊರ ಹಾಕಲಾಯಿತು.

ಸಿಜೆಐ ಮತ್ತು ನ್ಯಾ। ಜಯಮಾಲ್ಯ ಬಾಗ್ಚಿ ಮತ್ತು ವಿ ಮೋಹನ ಅವರ ಮುಂದೆ ವಕೀಲರು ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಕುರಿತು ತಮ್ಮ ಸಲ್ಲಿಕೆಗಳ ಬಗ್ಗೆ ತುರ್ತು ವಿಚಾರಣೆ ಕೋರಿದರು. ಈ ವೇಳೆ ಸಿಜೆಐ ಸ್ವಲ್ಪ ಕಾಯಿರಿ ಎಂದಾಗ ‘ಇಲ್ಲ, ನಾನು ಕಾಯಲ್ಲ. ನೀವು ಆ ಕುರ್ಚಿಯಲ್ಲಿ ಕೂರಲು ಸಾಧ್ಯವಿಲ್ಲ. ನೀವು ಅರ್ಹರಲ್ಲ. ನಿಮಗೆ ಅದಕ್ಕೆ ಬೇಕಾದ ಸಮಗ್ರತೆ ಇಲ್ಲ" ಎಂದು ವಕೀಲರು ಹೇಳಿದರು. ಆಗ ಅವರನ್ನು ಹೊರಹಾಕಲಾಯಿತು.


More Trending News