LIVE NOW
Published : Nov 16, 2026, 05:21 AM IST

India Latest News Live: ಎಲ್‌ನಿನೋದಿಂದ ಆರೋಗ್ಯ ತುರ್ತು ಪರಿಸ್ಥಿತಿ : ಹೆಚ್ಚು ಅಪಾಯದಲ್ಲಿ ಭಾರತ

ಸಾರಾಂಶ

ನವದೆಹಲಿ: ಎಲ್‌ ನಿನೋ ಕೇವಲ ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ್ದಲ್ಲ. ಅದು ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿಯಾಗಿದ್ದು ಸಾಂಕ್ರಾಮಿಕ ರೋಗಗಳ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.

ಇನ್ನು ಎಲ್‌ ನಿನೋದಿಂದ ಅಪಾಯ ಎದುರಿಸುವ ದೇಶಗಳ ಪಟ್ಟಿಯಲ್ಲಿ ಭಾರತವೂ ಇರುವುದು ಸದ್ಯ ಆತಂಕಕ್ಕೆ ಕಾರಣವಾಗಿದೆ. ತನ್ನ ಅತ್ಯುನ್ನತ ಮಟ್ಟದ 'ಗ್ರೇಡ್-3’ ತುರ್ತು ಪ್ರತಿಕ್ರಿಯೆಯನ್ನು ಸಕ್ರಿಯಗೊಳಿಸಿರುವ ಡಬ್ಲ್ಯುಎಚ್‌ಒ ಎಲ್‌ನಿನೋ ದೇಶದಲ್ಲಿ ಆರೋಗ್ಯ ಬಿಕ್ಕಟ್ಟನ್ನು ಸೃಷ್ಟಿಸಬಹುದು ಎಂದು ಎಚ್ಚರಿಸಿದೆ.


More Trending News