LIVE NOW
Published : Jan 12, 2026, 06:04 AM ISTUpdated : Jan 12, 2026, 10:39 PM IST

India Latest News Live: ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ ಆಯ್ಕೆ ಮಾಡಿದ ಜಿತೇಶ್ ಶರ್ಮಾ! ಕೊಹ್ಲಿ-ಗೇಲ್‌-ರೈನಾಗಿಲ್ಲ ಸ್ಥಾನ

ಸಾರಾಂಶ

ಗುಜರಾತ್‌ನಲ್ಲಿರುವ ಐತಿಹಾಸಿಕ ಸೋಮನಾಥ ದೇಗುಲದ ಮೇಲೆ ನಡೆದ ಮೊದಲ ದಾಳಿಗೆ 1000 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ‘ಸೋಮನಾಥ ಸ್ವಾಭಿಮಾನ ಪರ್ವ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಇದಕ್ಕೂ ಮೊದಲು ನಡೆದ ಶೌರ್ಯ ಯಾತ್ರೆಯಲ್ಲೂ ಭಾಗಿಯಾಗಿದ್ದ ಅವರು, ಶಿವನ ಆಯುಧ ‘ಡಮರು’ ನುಡಿಸಿ ಗಮನ ಸೆಳೆದರು.

Jitesh Sharma and Virat Kohli

10:39 PM (IST) Jan 12

ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ ಆಯ್ಕೆ ಮಾಡಿದ ಜಿತೇಶ್ ಶರ್ಮಾ! ಕೊಹ್ಲಿ-ಗೇಲ್‌-ರೈನಾಗಿಲ್ಲ ಸ್ಥಾನ

ಬೆಂಗಳೂರು: ಟೀಂ ಇಂಡಿಯಾ ವಿಕೆಟ್‌ ಕೀಪರ್ ಹಾಗೂ ಆರ್‌ಸಿಬಿ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿರುವ ಜಿತೇಶ್ ಶರ್ಮಾ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಆದರೆ ಐಪಿಎಲ್‌ ದಿಗ್ಗಜರಾದ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಹಾಗೂ ಸುರೇಶ್ ರೈನಾ ಅವರನ್ನು ಕೈಬಿಟ್ಟಿದ್ದಾರೆ.

 

Read Full Story

10:02 PM (IST) Jan 12

ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ 8 ಗಂಟೆ ಆತನ ಜೊತೆಗಿದ್ದೆ , ಅನುಭವ ಬಿಚ್ಚಿಟ್ಟ ನಟಿ ಪಾರ್ವತಿ

ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ 8 ಗಂಟೆ ಆತನ ಜೊತೆಗಿದ್ದೆ , ಅನಾಮಿಕನ ಜೊತೆ ಪರಿಚಯ, ಕಾಫಿ , ಮೂವಿ ಸೇರಿದಂತೆ ಮೊದಲ ಆ್ಯಪ್ ಡೇಟಿಂಗ್ ಅನುಭವವನ್ನು ಮಿಲನ ನಟಿ ಪಾರ್ವತಿ ಬಿಚ್ಚಿಟ್ಟಿದ್ದಾರೆ.

Read Full Story

09:28 PM (IST) Jan 12

ಪೌರೋಹಿತ್ಯ ಮಾಡಿಕೊಂಡು ಹೆಂಡ್ತಿ ಕನಸಿಗೆ ಜೀವ ತುಂಬಿದ ಗಂಡನಿಗೆ ಡಿವೋರ್ಸ್ ಭಾಗ್ಯ ನೀಡಿದ ಸಬ್‌ ಇನ್ಸ್‌ಪೆಕ್ಟರ್‌

ಗಂಡಂದಿರು ತಮ್ಮ ಪತ್ನಿಯ ಕನಸಿಗೆ ಬೆನ್ನೆಲುಬಾಗಿ ನಿಂತು ಅವರನ್ನು ಓದಿಸುತ್ತಾರೆ. ಅನೇಕರು ಉದ್ಯೋಗವನ್ನು ಗಿಟ್ಟಿಸಿ ಗಂಡನ ಜೊತೆ ಸಂಸಾರ ಸರಿದೂಗಿಸುವುದಕ್ಕೆ ನೆರವಾಗುತ್ತಾರೆ. ಆದರೆ ಕನಸೆಲ್ಲಾ ಈಡೇರಿದ ಮೇಲೆ ತನಗೆ ಏಣಿಯಂತೆ ನಿಂತ ಪತಿಯನ್ನೇ ದೂರ ತಳ್ಳಿದ್ರೆ ವಿಧಿ ಮೆಚ್ಚಿತೇ…

Read Full Story

08:45 PM (IST) Jan 12

ಬಾರಪ್ಪ ತಾಕತ್ ಇದ್ರೆ ಮುಟ್ಟಿ ನೋಡು, ರಾಜ್ ಠಾಕ್ರೆಯ ರಸಮಲೈ ಟೀಕೆಗೆ ಕೆರಳಿದ ಅಣ್ಣಾಮಲೈ

ಬಾರಪ್ಪ ತಾಕತ್ ಇದ್ರೆ ಮುಟ್ಟಿ ನೋಡು, ರಾಜ್ ಠಾಕ್ರೆಯ ರಸಮಲೈ ವ್ಯಂಗ್ಯಕ್ಕೆ ಬಿಜೆಪಿ ನಾಯಕ ಅಣ್ಣಾಮಲೈ ತಿರುಗೇಟು ನೀಡಿದ್ದಾರೆ. ಮುಂಬೈ ಬರುತ್ತೇನೆ. ತಾಕತ್ ಇದ್ರೆ ಮುಟ್ಟಿ ನೋಡು ಎಂದು ಅಣ್ಣಾಮಲೈ ಸವಾಲು ಹಾಕಿದ್ದಾರೆ.

 

Read Full Story

08:34 PM (IST) Jan 12

ಭಿಕ್ಷೆ ಬೇಡಿ ಬಂದ ಹಣದಲ್ಲಿ 500 ನಿರ್ಗತಿಕರಿಗೆ ಕಂಬಳಿ ಖರೀದಿಸಿ ಹಂಚಿದ ಭಿಕ್ಷುಕ

ಹೇಳುವುದಕ್ಕೆ ಇವರು ಭಿಕ್ಷುಕ. ಆದರೆ ಹೃದಯ ವೈಶ್ಯಾಲ್ಯತೆಯಲ್ಲಿ ಇವರು ನಿಜವಾಗಿಯೂ ಶ್ರೀಮಂತ ಎಂಬುದನ್ನು ಈ ಭಿಕ್ಷುಕ ಸಾಬೀತುಪಡಿಸಿದ್ದಾರೆ. ಹೌದು ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಭಿಕ್ಷೆ ಬೇಡಿಯೇ ಜೀವನ ಮಾಡುತ್ತಿದ್ದ ರಾಜು ಎಂಬುವವರು ತಮ್ಮ ಕಷ್ಟದ ನಡುವೆಯೂ ಬೇರೆಯವರಿಗೆ ಭರವಸೆಯ ಬೆಳಕಾಗಿದ್ದಾರೆ.

Read Full Story

07:47 PM (IST) Jan 12

ಹದಿಹರೆಯದ ಪ್ರೇಮ ಪ್ರಕರಣ - 'ರೋಮಿಯೋ ಜ್ಯೂಲಿಯೆಟ್‌ ನಿಯಮ' ಜಾರಿಗೆ ಸುಪ್ರೀಂಕೋರ್ಟ್​ ಕೇಂದ್ರಕ್ಕೆ ಸೂಚನೆ

ಹದಿಹರೆಯದವರ ಸಮ್ಮತಿಯ ಪ್ರೇಮ ಸಂಬಂಧಗಳ ಪ್ರಕರಣಗಳಲ್ಲಿ ಪೋಕ್ಸೊ ಕಾಯ್ದೆಯ ದುರುಪಯೋಗವನ್ನು ತಡೆಯಲು 'ರೋಮಿಯೋ ಜ್ಯೂಲಿಯೆಟ್‌ ನಿಯಮ' ಜಾರಿಗೆ ತರುವ ಬಗ್ಗೆ ಚಿಂತಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. 

Read Full Story

07:45 PM (IST) Jan 12

ಮಾಜಿ ಉಪ ರಾಷ್ಟ್ರಪತಿ ಜಗ್‌ದೀಪ್ ಧನ್ಕರ್ ಆರೋಗ್ಯದಲ್ಲಿ ಏರುಪೇರು, ಏಮ್ಸ್ ಆಸ್ಪತ್ರೆ ದಾಖಲು

ಮಾಜಿ ಉಪ ರಾಷ್ಟ್ರಪತಿ ಜಗ್‌ದೀಪ್ ಧನ್ಕರ್ ಆರೋಗ್ಯದಲ್ಲಿ ಏರುಪೇರು, ಎರಡು ಬಾರಿ ಪ್ರಜ್ಞೆ ತಪ್ಪಿದ ಧನ್ಕರ್ ದೆಹಲಿಯ ಏಮ್ಸ್ ಆಸ್ಪತ್ರೆ ದಾಖಲಾಗಿದ್ದಾರೆ. ವೈದ್ಯರ ತಂಡ ಧನ್ಕರ್ ಆರೋಗ್ಯದ ಮೇಲೆ ನಿಗಾವಹಿಸಿದೆ.

Read Full Story

07:06 PM (IST) Jan 12

ಮಾರಕ ಇಂಜೆಕ್ಷನ್ ನೀಡಿ 300 ಬೀದಿನಾಯಿಗಳ ಮಾರಣಹೋಮ - 9 ಜನರ ವಿರುದ್ಧ ಕೇಸ್

ಇಂಜೆಕ್ಷನ್ ನೀಡಿ 300 ಬೀದಿನಾಯಿಗಳನ್ನು ಹತ್ಯೆ ಮಾಡಿದಂತಹ ಅಮಾನವೀಯ ಘಟನೆ ತೆಲಂಗಾಣದ ಹನುಮಕೊಂಡ ಜಿಲ್ಲೆಯ ಶಯಂಪೇಟೆ ಮತ್ತು ಅರೆಪಲ್ಲಿ ಗ್ರಾಮಗಳಲ್ಲಿ ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ಗ್ರಾಮದ ಸರಪಂಚರು ಸೇರಿದಂತೆ ಒಟ್ಟು 9 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Read Full Story

06:58 PM (IST) Jan 12

ವಿರೇಂದ್ರ ಸೆಹ್ವಾಗ್ ಜೆರ್ಸಿ ನಂಬರ್‌ 3 ಸಲ ಬದಲಾಗಿದ್ದೇಕೆ? ಅತ್ತೆ-ಸೊಸೆ ಜಗಳ ನಿಲ್ಲಿಸಲು ವೀರೂ ಮಾಡಿದ್ದೇನು?

ಬೆಂಗಳೂರು: ಟೀಂ ಇಂಡಿಯಾ ಸ್ಪೋಟಕ ಆರಂಭಿಕ ಬ್ಯಾಟರ್ ವಿರೇಂದ್ರ ಸೆಹ್ವಾಗ್ ಜೆರ್ಸಿ ಒಂದಲ್ಲಾ ಎರಡಲ್ಲಾ ಬರೋಬ್ಬರಿ ಮೂರು ಸಲ ಬದಲಾಗಿದೆ. ಒಮ್ಮೆಯಂತೂ ನಂಬರ್ ಇಲ್ಲದೇ ಸೆಹ್ವಾಗ್ ಕ್ರಿಕೆಟ್ ಆಡಿದ್ದಾರೆ. ಅತ್ತೆ-ಸೊಸೆಯ ಜಗಳದ ಕಥೆಯನ್ನು ಸ್ವತಃ ಸೆಹ್ವಾಗ್ ಬಿಚ್ಚಿಟ್ಟಿದ್ದಾರೆ.

 

Read Full Story

06:16 PM (IST) Jan 12

ವಿದೇಶದಿಂದ ರಹಸ್ಯವಾಗಿ ಆಗಮಿಸಿ ಸ್ನೇಹಿತನ ಜೊತೆ ಸೇರಿ ತಾಯಿಯನ್ನೇ ಕೊಂದ ಮಗ

ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ಡಿಸೆಂಬರ್ 24ರಂದು ನಡೆದ ಮಹಿಳೆಯ ಕೊಲೆ ಪ್ರಕರಣವನ್ನು ಬೇಧಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಇಲ್ಲಿ ಕೊಲೆ ಮಾಡಿದ್ದು, ಬೇರೆ ಯಾರೋ ಹೊರಗಿನವರಲ್ಲ ಬದಲಾಗಿ ಮಹಿಳೆಯ ಸ್ವಂತ ಮಗನೇ ಎಂಬ ವಿಚಾರ ತಿಳಿದು ಇಡೀ ಗ್ರಾಮವೇ ಆಘಾತಕ್ಕೀಡಾಗಿದೆ.

Read Full Story

06:11 PM (IST) Jan 12

ಸ್ವಾತಂತ್ರ್ಯ ಬಳಿಕ ಇದೇ ಮೊದಲು, ಮಕರ ಸಂಕ್ರಾಂತಿಗೆ ಪ್ರಧಾನಿ ಮೋದಿ ಹೊಸ ಕಚೇರಿಗೆ ಶಿಫ್ಟ್

ಸ್ವಾತಂತ್ರ್ಯ ಬಳಿಕ ಇದೇ ಮೊದಲು, ದೇಶದ ಪ್ರಧಾನ ಮಂತ್ರಿಗಳ ಕಚೇರಿ ವಿಳಾಸ ಸ್ವಾತಂತ್ರ್ಯ ಬಳಿಕ ಇದುವರೆಗೂ ಬದಲಾಗಿಲ್ಲ. ಇದೀಗ ಪ್ರಧಾನಿ ಮೋದಿ ಹೊಸ ಇತಿಹಾಸ ಬರೆಯುತ್ತಿದ್ದಾರೆ. ಸೌತ್ ಬ್ಲಾಕ್‌ನಿಂದ ಮೋದಿ ಆಫೀಸ್ ಸ್ಥಳಾಂತರವಾಗುತ್ತಿರುವುದೆಲ್ಲಿಗೆ?

 

Read Full Story

06:08 PM (IST) Jan 12

ವಿಜಯ್ ಹಜಾರೆ ಟ್ರೋಫಿ - ಮುಂಬೈ ಬಗ್ಗುಬಡಿದು ಕರ್ನಾಟಕ ಸೆಮಿಫೈನಲ್‌ಗೆ ಲಗ್ಗೆ! ಮತ್ತೆ ಅಬ್ಬರಿಸಿದ ಪಡಿಕ್ಕಲ್

ವಿಜಯ್ ಹಜಾರೆ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ತಂಡ ಮುಂಬೈ ವಿರುದ್ಧ ವಿಜೆಡಿ ನಿಯಮದನ್ವಯ 55 ರನ್‌ಗಳ ಜಯ ಸಾಧಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ದೇವದತ್ ಪಡಿಕ್ಕಲ್ ಮತ್ತು ಕರುಣ್ ನಾಯರ್ ಅವರ ಅಜೇಯ ಅರ್ಧಶತಕಗಳ ನೆರವಿನಿಂದ, ಬ್ಯಾಡ್ ಲೈಟ್‌ನಿಂದ ಪಂದ್ಯ ಸ್ಥಗಿತಗೊಂಡಾಗ ಕರ್ನಾಟಕ ಸುಸ್ಥಿತಿಯಲ್ಲಿತ್ತು.

Read Full Story

05:33 PM (IST) Jan 12

ಹಿಜಾಬ್ ಧರಿಸಿ ರೀಲ್ಸ್ ಮಾಡ್ತಿರುವ ಮುಸ್ಲಿಂ ಇನ್‌ಫ್ಲುಯೆನ್ಸರ್‌ಗೆ ಜೀವ ಬೆದರಿಕೆ

ಸಾಮಾಜಿಕ ಜಾಲತಾಣದಲ್ಲಿ ಹಿಜಾಬ್ ಧರಿಸಿಯೇ ರೀಲ್ಸ್‌ ಮಾಡ್ತಿರುವ ತನಗೆ ತನ್ನದೇ ಸಮುದಾಯ ಜನರು ಜೀವ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಮುಸ್ಲಿಂ ಸಮುದಾಯದ ಮಹಿಳೆಯೂ ಆಗಿರುವ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಾಹಿದಾ ಅಕ್ಧಾರ್ ಅವರು ಆರೋಪಿಸಿದ್ದಾರೆ.

Read Full Story

04:59 PM (IST) Jan 12

ಸಂಕ್ರಾತಿಗೆ ಸಂಭ್ರಮದಲ್ಲಿ ಚಿನ್ನ ಖರೀದಿಸುವ ಪ್ಲಾನ್ ಇದೆಯಾ? ದೇಶಾದ್ಯಂತ ಬಂಗಾರದ ಸಂಚಲನ

ಸಂಕ್ರಾತಿಗೆ ಸಂಭ್ರಮದಲ್ಲಿ ಚಿನ್ನ ಖರೀದಿಸುವ ಪ್ಲಾನ್ ಇದೆಯಾ? ಜನವರಿ 12ರಂದು ಚಿನ್ನದ ಬೆಲೆಯಲ್ಲಿ ಮಹತ್ವದ ಬದಲಾವಣೆಗಳಾಗಿದೆ. ಇದೀಗ ಜನಸಾಮಾನ್ಯರಿಗೂ ಚಿನ್ನ ಖರೀದಿ ಅಥವಾ ಹೂಡಿಕೆ ಮಾಡಬಹುದಾ?

Read Full Story

04:57 PM (IST) Jan 12

ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ - ಮುಂಬೈ ಮೇಲೆ ಕರ್ನಾಟಕ ಸವಾರಿ; ಗೆಲುವಿನ ಹೊಸ್ತಿಲಲ್ಲಿರುವಾಗಲೇ ಪಂದ್ಯ ತಾತ್ಕಾಲಿಕ ಸ್ಥಗಿತ!

ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಮುಂಬೈ ನೀಡಿದ 255 ರನ್‌ಗಳ ಗುರಿ ಬೆನ್ನತ್ತಿದ ಕರ್ನಾಟಕ, ದೇವದತ್ ಪಡಿಕ್ಕಲ್ ಮತ್ತು ಕರುಣ್ ನಾಯರ್ ಅವರ ಅಜೇಯ ಶತಕದ ಜೊತೆಯಾಟದ ನೆರವಿನಿಂದ ಗೆಲುವಿನತ್ತ ಸಾಗುತ್ತಿದೆ. ಬ್ಯಾಡ್ ಲೈಟ್‌ನಿಂದಾಗಿ ಪಂದ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

Read Full Story

04:31 PM (IST) Jan 12

ಸೆಕೆಂಡ್ ಸಿಮ್ ಆ್ಯಕ್ಟೀವ್ ಇಡಲು ರೀಚಾರ್ಜ್ ದುಬಾರಿಯಾಗ್ತಿದೆಯಾ? ಅತೀ ಕಡಿಮೆ ಬೆಲೆ ಆಯ್ಕೆ ಇಲ್ಲಿದೆ

ಸೆಕೆಂಡ್ ಸಿಮ್ ಆ್ಯಕ್ಟೀವ್ ಇಡಲು ರೀಚಾರ್ಜ್ ದುಬಾರಿಯಾಗ್ತಿದೆಯಾ? ಬ್ಯಾಂಕ್ ಸಂಬಂಧ, ಒಟಿಪಿ ಸೇರಿ ಇತರ ದಾಖಲೆಗಳಿಗಾಗಿ ಸಿಮ್ ಆ್ಯಕ್ಟೀವ್ ಇಡುವುದೇ ಇದೀಗ ದುಬಾರಿಯಾಗುತ್ತಿದೆ.ಇದಕ್ಕೆ ಅತೀ ಕಡಿಮೆ ಬೆಲೆಯ ಆಯ್ಕೆ ಇಲ್ಲಿದೆ.

 

Read Full Story

04:16 PM (IST) Jan 12

ಹೂವಿನ ಮಾಲೆ ವಧುವರರಿಗೆ ಕೊಡುವ ಬದಲು ತಾವೇ ಹಾಕಿದ ಬಾಲಕರು - ವೀಡಿಯೋ ಭಾರಿ ವೈರಲ್

ಭಾರತದಲ್ಲಿ ನಡೆದ ದೇಸಿ ವರ ಹಾಗೂ ವಿದೇಶಿ ವಧುವಿನ ಮದುವೆಯೊಂದರ ವಿಡಿಯೋ ವೈರಲ್ ಆಗಿದೆ. ವೆಡ್ಡಿಂಗ್ ಪ್ಲಾನರ್‌ಗಳ ಎಡವಟ್ಟಿನಿಂದ, ವಧು-ವರರು ಹಾರ ಬದಲಿಸಿಕೊಳ್ಳುವ ಬದಲು ಇಬ್ಬರು ಬಾಲಕರು ಅವರ ಕೊರಳಿಗೆ ಹಾರ ಹಾಕಿದ್ದಾರೆ. ಈ ತಮಾಷೆಯ ಘಟನೆ ಜನರನ್ನು ನಗೆಗಡಲಲ್ಲಿ ತೇಲಿಸುತ್ತಿದೆ.

Read Full Story

03:52 PM (IST) Jan 12

ಭಾರತೀಯರಿಗೆ ಫ್ರೀ ವೀಸಾ ಟ್ಸಾನ್ಸಿಟ್ ಸೌಲಭ್ಯ ಘೋಷಿಸಿದ ಜರ್ಮನಿ, ಇದರು ಲಾಭವೇನು?

ಭಾರತೀಯರಿಗೆ ಫ್ರೀ ವೀಸಾ ಟ್ಸಾನ್ಸಿಟ್ ಸೌಲಭ್ಯ ಘೋಷಿಸಿದ ಜರ್ಮನಿ, ಭಾರತ ಪ್ರವಾಸದಲ್ಲಿರುವ ಜರ್ಮನಿ ಫೆಡರಲ್ ಚಾನ್ಸಿಲರ್ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಈ ಪೈಕಿ ಭಾರತೀಯರಿಗೆ ವೀಸಾ ಫ್ರೀ ಟ್ರಾನ್ಸಿಟ್ ಸೌಲಭ್ಯ ಕೂಡ ಒಂದು.

Read Full Story

03:29 PM (IST) Jan 12

ಏಕದಿನ ಸರಣಿಯಿಂದ ವಾಷಿಂಗ್ಟನ್ ಸುಂದರ್ ಔಟ್; ಡೆಲ್ಲಿ ಮೂಲದ ಆಟಗಾರನಿಗೆ ಬಿಸಿಸಿಐ ಸರ್ಪ್ರೈಸ್ ಕಾಲ್!

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಗಾಯಗೊಂಡ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಡೆಲ್ಲಿ ಮೂಲದ ಯುವ ಬ್ಯಾಟರ್ ಆಯುಷ್ ಬದೋನಿಗೆ ಭಾರತ ತಂಡದಲ್ಲಿ ಇದೇ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ.  

Read Full Story

01:56 PM (IST) Jan 12

ಹೆರಿಗೆ ವೇಳೆ ಹೆಂಡ್ತಿ ಜೊತೆಗಿರಲು ಬಂದ ಯೋಧ ಅಪಘಾತದಲ್ಲಿ ಸಾವು - ಸ್ಟ್ರೆಚರ್‌ನಲ್ಲಿ ಬಂದು ಅಂತಿಮ ದರ್ಶನ ಪಡೆದ ಪತ್ನಿ

ತುಂಬು ಗರ್ಭಿಣಿಯ ಆರೈಕೆ ಹಾಗೂ ಡೆಲಿವರಿ ಸಮಯದಲ್ಲಿ ಆಕೆಗೆ ಭಾವನಾತ್ಮಕ ಬೆಂಬಲವಾಗಿ ಇರಲು ರಜೆ ಮೇಲೆ ಬಂದಿದ್ದ ಯೋಧ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ನಡೆದಿದೆ. ತಮ್ಮ ಮಗು ಜನಿಸುವುದಕ್ಕೆ ಕೆಲವೇ ಕ್ಷಣಗಳಿರುವಾಗ ಅವರು ಸಾವನ್ನಪ್ಪಿದ್ದಾರೆ.

Read Full Story

01:48 PM (IST) Jan 12

ಟಿ20 ವಿಶ್ವಕಪ್ ಟೂರ್ನಿಗೂ ಮೊದಲೇ ಭಾರತಕ್ಕೆ ಬಲವಾದ ಹೊಡೆತ; ಸ್ಟಾರ್ ಆಲ್ರೌಂಡರ್‌ ಟೀಂ ಇಂಡಿಯಾದಿಂದ ಔಟ್!

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ಗಾಯಗೊಂಡಿರುವ ಟೀಂ ಇಂಡಿಯಾದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್, ಸರಣಿಯಿಂದ ಹೊರಬಿದ್ದಿದ್ದಾರೆ. ಪಕ್ಕೆಲುಬಿನ ಸ್ನಾಯುಸೆಳೆತಕ್ಕೆ ಒಳಗಾಗಿರುವ ಅವರ ಗಾಯದ ತೀವ್ರತೆ ಹೆಚ್ಚಾಗಿದ್ದಲ್ಲಿ, ಮುಂಬರುವ ಟಿ20 ವಿಶ್ವಕಪ್‌ಗೂ ಅಲಭ್ಯರಾಗುವ ಸಾಧ್ಯತೆಯಿದೆ.
Read Full Story

12:56 PM (IST) Jan 12

ಪುಟ್ಟ ಮಕ್ಕಳಂತೆ ವೆಡ್ಡಿಂಗ್ ಕೇಕ್ ರುಚಿ ನೋಡಿದ ವರ - ಆಕ್ಷೇಪಿಸಿದ ವಧು - ಆಮೇಲಾಗಿದ್ದು ದುರಂತ - ವೀಡಿಯೋ

ಟರ್ಕಿಯಲ್ಲಿ ನಡೆದ ಮದುವೆಯೊಂದರಲ್ಲಿ, ವರನು ಮದುವೆ ಕೇಕ್‌ನ ರುಚಿ ನೋಡಿದ್ದಕ್ಕೆ ವಧು ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಇದರಿಂದ ಕೋಪಗೊಂಡ ವರ, ಕೇಕ್ ಅನ್ನು ಎತ್ತಿ ಎಸೆದಿದ್ದು, ಈ ಘಟನೆಯಿಂದ ಆಘಾತಗೊಂಡ ವಧು ಮದುವೆಯಿಂದ ಹೊರನಡೆದಿದ್ದಾಳೆ. ಈ ನಾಟಕೀಯ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

12:34 PM (IST) Jan 12

ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಬಾತ್‌ರೂಮ್‌ನಲ್ಲೇ ಹಾಕಿ ಕೋಚ್ ಅತ್ಯಾ*ಚಾರ; ಆರೋಪಿ ಜೈಲಿಗಟ್ಟಿದ ಪೊಲೀಸರು

ಹರ್ಯಾಣದ ರೇವಾರಿಯಲ್ಲಿ, ಜೂನಿಯರ್ ಹಾಕಿ ಮಹಿಳಾ ತಂಡದ ಕೋಚ್ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾ*ಚಾರ ಎಸಗಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ನಾಲ್ಕು ತಿಂಗಳ ಹಿಂದೆ ನಡೆದ ಈ ಕೃತ್ಯದಿಂದ ಬಾಲಕಿ ಗರ್ಭಿಣಿಯಾಗಿ, ನಂತರ ಗರ್ಭಪಾತವಾಗಿತ್ತು. ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

Read Full Story

11:51 AM (IST) Jan 12

ಟಿ20 ವಿಶ್ವಕಪ್‌ - ಬಾಂಗ್ಲಾದ ಪಂದ್ಯಕ್ಕೆ ಆತಿಥ್ಯ ವಹಿಸಲು ಮುಂದೆ ಬಂದ ಪಾಕಿಸ್ತಾನ! ಆದ್ರೆ ಇದು ಸಾಧ್ಯನಾ?

ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಾಡಲು ಭಾರತ ಬರಲು ಬಾಂಗ್ಲಾದೇಶ ಹಿಂದೇಟು ಹಾಕುತ್ತಿರುವ ಬೆನ್ನಲ್ಲೇ ನೆರೆಯ ಪಾಕಿಸ್ತಾನ ಎಂಟ್ರಿಕೊಟ್ಟಿದ್ದು, ಬಾಂಗ್ಲಾದೇಶದ ಟಿ20 ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸಲು ನಾವು ಎಂದು ಮುಂದೆ ಬಂದಿದೆ. ಈ ಕುರಿತಾದ ಅಪ್‌ಡೇಟ್ಸ್‌ ಇಲ್ಲಿದೆ.

 

Read Full Story

10:30 AM (IST) Jan 12

ಅಂತಿರಾಷ್ಟ್ರೀಯ ಹೊಸ ವಿಶ್ವದಾಖಲೆ ಬರೆದ ರೋಹಿತ್ ಶರ್ಮಾ; ಈ ದಾಖಲೆ ಮುರಿಯಲು ಕೊಹ್ಲಿ, ಬಟ್ಲರ್ ಸಾಧ್ಯವಿಲ್ಲ!

ವಡೋದರಾ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಶುಭಾರಂಭ ಮಾಡಿದೆ. ಇದೇ ಪಂದ್ಯದಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹೊಸ ಮೈಲಿಗಲ್ಲಿನ ಮೂಲಕ ಮತ್ತೊಂದು ವಿಶ್ವದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಈ ದಾಖಲೆ ಬ್ರೇಕ್ ಆಗೋದು ಸದ್ಯಕ್ಕಂತೂ ಅನುಮಾನ.

 

Read Full Story

09:58 AM (IST) Jan 12

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್; ಸಂಗಕ್ಕಾರ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ!

ವಡೋದರಾ: ಭಾರತದ ರನ್‌ ಮೆಷಿನ್‌ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಗರಿಷ್ಠ ರನ್‌ ಸ್ಕೋರರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಅವರು ಶ್ರೀಲಂಕಾದ ಕುಮಾರ ಸಂಗಕ್ಕರ ಅವರನ್ನು ಹಿಂದಿಕ್ಕಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಟಾಪ್-5 ಆಟಗಾರರಿವರು.

 

Read Full Story

09:13 AM (IST) Jan 12

ವಿಜಯ್ ಹಜಾರೆ ಟ್ರೋಫಿ - ಮುಂಬೈ ಎದುರು ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ

ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ನಾಕೌಟ್‌ ಪಂದ್ಯಗಳು ಆರಂಭಗೊಂಡಿದ್ದು, ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

Read Full Story

07:57 AM (IST) Jan 12

ಹೈದರಾಬಾದ್ ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ ಬೀದರ್ ಜಿಲ್ಲೆಯ ಅಲ್ತಾಫ್‌ ಬಂಧನ

ಹೈದರಾಬಾದ್‌ನ ಕಟ್ಟಾ ಮೈಸಮ್ಮ ದೇವಸ್ಥಾನದಲ್ಲಿ ಬೀದರ್ ಮೂಲದ ಯುವಕನೊಬ್ಬ ಮೂತ್ರ ವಿಸರ್ಜಿಸಿ ವಿಕೃತಿ ಮೆರೆದಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿದ್ದು, ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
Read Full Story

07:37 AM (IST) Jan 12

2 ದಿನ, 2000 ಬಲಿ? ಇರಾನ್‌ನಲ್ಲಿ ತುಂಬಿದ ಶವಾಗರಗಳು, ಶವವಿಡಲು ಜಾಗವೇ ಇಲ್ಲ; ಸೂಕ್ತ ವೈದ್ಯರೂ ಇಲ್ಲ

ಇರಾನ್‌ನಲ್ಲಿ ಖಮೇನಿ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ತೀವ್ರಗೊಂಡಿದ್ದು, ಸೇನಾ ಪಡೆಗಳು ಪ್ರತಿಭಟನಾಕಾರರನ್ನು ನಿರ್ದಯವಾಗಿ ಹತ್ತಿಕ್ಕುತ್ತಿವೆ. ಇದರ ಪರಿಣಾಮವಾಗಿ, ಆಸ್ಪತ್ರೆಗಳು ಗಾಯಾಳುಗಳು ಮತ್ತು ಶವಗಳಿಂದ ತುಂಬಿ ತುಳುಕುತ್ತಿದ್ದು, ಸಾವಿನ ಸಂಖ್ಯೆಯ ಬಗ್ಗೆ ಗೊಂದಲಮಯ ವರದಿಗಳು ಬರುತ್ತಿವೆ.
Read Full Story

06:30 AM (IST) Jan 12

ಭಾರತದ ರಕ್ಷಣಾ ಸಲಹೆಗಾರ ಅಜಿತ್‌ ದೋವಲ್ ಸ್ಮಾರ್ಟ್‌ಫೋನ್‌ ಬಳಸದಿರುವ ಹಿಂದಿನ ರಹಸ್ಯ

ಭಾರತದ ರಕ್ಷಣಾ ಸಲಹೆಗಾರ ಅಜಿತ್‌ ದೋವಲ್ ಅವರು ತಾವು ಸ್ಮಾರ್ಟ್‌ಫೋನ್‌ ಮತ್ತು ಇಂಟರ್ನೆಟ್‌ ಬಳಸುವುದಿಲ್ಲ ಎಂದು ಹೇಳಿದ್ದಾರೆ. ಇದರೊಂದಿಗೆ, ಅಲ್‌ ಫಲಾಹ್‌ ವಿವಿ ಜಪ್ತಿ ಸಾಧ್ಯತೆಗಳಿವೆ.

Read Full Story

More Trending News