ಕೋವಿಡ್‌ ಶವಗಳು ನಾಯಿಗೆ ಆಹಾರ: ಶ್ವಾನಗಳ ವಿಡಿಯೋ ವೈರಲ್!

By Suvarna NewsFirst Published Jun 2, 2021, 8:37 AM IST
Highlights

* ಕೋ​ವಿ​ಡ್‌​ಗೆ ಬಲಿ​ಯಾ​ದ​ವರು ನಾಯಿಗೆ ಆಹಾ​ರ​!

* ಉತ್ತ​ರಾ​ಖಂಡದ ಉತ್ತರಕಾಶಿಯಲ್ಲಿ ದಾರುಣ ಘಟನೆ

* ಶವಗಳನನ್ನು ನಾಯಿ ಎಳೆದು ತಿನ್ನುತ್ತಿರುವ ದೃಶ್ಯ ವೈರಲ್‌

ಉತ್ತರಕಾಶಿ (ಜೂ.02)): ಉತ್ತರ ಪ್ರದೇಶ ಮತ್ತು ಬಿಹಾ​ರ​ದ ನದಿ​ಗ​ಳಲ್ಲಿ ಕೋವಿ​ಡ್‌ಗೆ ಬಲಿ​ಯಾ​ದ​ವರ ಶವ​ಗಳು ತೇಲಿ​ಬಂದ ಕೆಲ ದಿನ​ಗಳ ಬೆನ್ನ​ಲ್ಲೇ, ಇದೀಗ ಉತ್ತ​ರಾ​ಖಂಡದಲ್ಲಿ ಅದಕ್ಕಿಂತ ದಾರುಣ ಘಟನೆ ನಡೆದಿದೆ. ಉತ್ತ​ರ​ಕಾ​ಶಿಯ ಕೇ​ದಾ​ರ​ಘಾಟ್‌ ಬಳಿಯ ನದಿಯ ದಂಡೆಯ ಬಳಿ ಕೊರೋ​ನಾಕ್ಕೆ ಬಲಿ​ಯಾಗಿ​ರ​ಬ​ಹು​ದಾದ ಶವ​ಗ​ಳನ್ನು ಶ್ವಾನ​ಗಳು ಎಳೆ​ದಾಡಿ ತಿನ್ನು​ತ್ತಿ​ರುವ ಅಮಾ​ನ​ವೀಯ ​ಮತ್ತು ಮನ​ಕ​ಲ​ಕುವ ವಿಡಿ​ಯೋ​ ಸಾಮಾ​ಜಿಕ ಮಾಧ್ಯ​ಮ​ಗ​ಳಲ್ಲಿ ವೈರಲ್‌ ಆಗಿದೆ.

Uttarakhand | Residents claim that dogs are eating half-burnt COVID bodies at Kedar Ghat, Uttarkashi.

After receiving complaints from locals, we have assigned a person at Kedar Ghat for cremation of half-burnt bodies: Municipality president Ramesh Semwal pic.twitter.com/9IvC9ysC6O

— ANI (@ANI)

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಇದ​ರಲ್ಲಿ ಕೆಲವು ಶವ​ಗ​ಳು ಅರೆಬೆಂದ ಸ್ಥಿತಿ​ಯ​ಲ್ಲಿದ್ದು, ಮತ್ತೆ ಕೆಲ ಶವ​ಗಳು ನದಿಗೆ ಎಸೆ​ದಿ​ರ​ಬ​ಹು​ದಾ​ದ ಸ್ಥಿತಿ​ಯ​ಲ್ಲಿವೆ. ಇತ್ತೀ​ಚೆಗಿನ ಮಳೆ​ಯಿಂದಾಗಿ ನದಿ​ಗಳು ಉಕ್ಕಿ ಹರಿ​ದಿದ್ದರಿಂದ ಶವ​ಗಳು ನದಿಯ ದಡಕ್ಕೆ ತೇಲಿ ಬಂದಿವೆ. ಈ ಮೃತ​ದೇ​ಹ​ಗ​ಳನ್ನು ನಾಯಿ​ಗಳು ಎಳೆ​ದಾಡಿ ತಿನ್ನು​ತ್ತಿವೆ.

DISTURBING VISUALS of stray dogs digging & feeding on the dead bodies, on the banks of river Ganga, in Prayagraj.

Govt failed to protect their life, at least protect their dignity? This is what BJP & Godi Media doesn't want you to see and hence trying to deviate via smokescreens pic.twitter.com/Mc8VYb3sWE

— Gaurav Pandhi (@GauravPandhi)

Disturbing visuals of stray dogs digging up and eating bodies of COVID victims buried in shallow graves, by the Ganga in Allahabad...

Dogs eating bodies can result in virus mutations that can jump species. How will India handle a pandemic that begins spreading via animals too? pic.twitter.com/mpeB8KHu2R

— Rajiv Tyagi (@rajivtango)

At Prayagraj where too, like at Kanpur, Unnao, Varanasi and Kannauj the bodies pile up on the river banks, the local pandit warns, when the rains come there will be a new health crisis. But we cant even get the government to acknowledge the abandoned bodies across UP. My report pic.twitter.com/vZlqcO0gnI

— barkha dutt (@BDUTT)

ಈ ಬಗ್ಗೆ ಹಲವು ಬಾರಿ ದೂರು ನೀಡಿ​ದ್ದಾಗ್ಯೂ, ಪೌರಾ​ಡ​ಳಿತ ಯಾವುದೇ ಕ್ರಮ ಕೈಗೊ​ಳ್ಳು​ತ್ತಿಲ್ಲ. ಕೊರೋನಾ ಸೋಂಕಿತರ ಗೌರವಯುತ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಆಕ್ರೋಶಭರಿತ ಆಗ್ರಹ ಮಾಡಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!