
ಬುಲಂದ್‌ಶಹರ್: ಪವಾಡ ಸಂಭವಿಸಬಹುದೇನೋ ಎಂಬ ನಂಬಿಕೆಯಲ್ಲಿ ಪೋಷಕರು, ಹಾವು ಕಚ್ಚಿ ಮೃತಪಟ್ಟ ತಮ್ಮ 22 ವರ್ಷದ ಮಗನ ಶವವನ್ನು ಗಂಗೆಯಲ್ಲಿ ಎರಡು ದಿನಗಳ ಕಾಲ ಮುಳುಗಿಸಿಟ್ಟ ವಿಚಿತ್ರ ಘಟನೆ ಬುಲಂದಶಹರ್‌ನಲ್ಲಿ ನಡೆದಿದೆ. ಮೋಹಿತ್ ಕುಮಾರ್ ಎಂಬ 22 ವರ್ಷದ ಯುವಕ ಬುಲೆಂದ್‌ಶಹರ್ನ ಅನುಪ್‌ಶಹರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಜೈರಾಮಪುರ ಕುದೆನಾ ಗ್ರಾಮದ ನಿವಾಸಿಯಾಗಿದ್ದು, ಏಪ್ರಿಲ್ 26 ರಂದು ಲೋಕಸಭಾ ಚುನಾವಣೆಗೆಂದು ಬಂದಿದ್ದ ಈತ ಮತ ಚಲಾಯಿಸಿದ ಬಳಿಕ ಸಂಜೆ ವೇಳೆ ಮನೆ ಸಮೀಪದ ಪಾರ್ಕೊಂದರ ಬಳಿ ಹೋಗಿ ಕುಳಿತಿದ್ದಾಗ ಆತನಿಗೆ ಹಾವು ಕಚ್ಚಿದೆ.
ಕೂಡಲೇ ಗ್ರಾಮಸ್ಥರು ವಿಷ ದೇಹದ ಬೇರೆ ಭಾಗಕ್ಕೆ ಹರಿಯದಿರಲು ಹಾವು ಕಚ್ಚಿದ ಜಾಗದ ಪಕ್ಕದಲ್ಲಿ ಬಟ್ಟೆಯಿಂದ ಗಟ್ಟಿಯಾಗಿ ಕಟ್ಟಿ,ದ್ದಾರೆ. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗಮಧ್ಯೆ ಯುವಕ ಮಾತು ನಿಲ್ಲಿಸಿದ್ದಾನೆ. ನಾವು ಆತನನ್ನು ನಗರದ ರಾಣಾ ಆಸ್ಪತ್ರೆಗೆ ಕರೆದೊಯ್ದೆವು. ಆದರೆ ಅಲ್ಲಿ ವೈದ್ಯರು ಆತನನ್ನು ಚಿಕಿತ್ಸೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದು, ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ. ಆದರೆ ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಬರುವಷ್ಟರಲ್ಲಿ ಯುವಕ ಉಸಿರು ಚೆಲ್ಲಿದ್ದಾನೆ ಎಂದು ಯುವಕನ ಸಂಬಂಧಿಕರೊಬ್ಬರು ಹೇಳಿದ್ದಾಗಿ ವರದಿಯಾಗಿದೆ.
ಇದಾದ ನಂತರ ಯುವಕನ ಸಂಬಂಧಿಕರು ಆತನನ್ನು ಹಳ್ಳಿಮದ್ದು ನೀಡುವವರ ಬಳಿ ಕರೆದೊಯ್ದಿದ್ದಾರೆ. ಅಲ್ಲೂ ಅವರು ಯುವಕ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದ್ದಾರೆ. ಜೊತೆಗೆ ಅವರು ಶವವನ್ನು ಗಂಗಾನದಿಗೆ ಹಾಕಿದರೆ ವಿಷ ಹೊರಟು ಹೋಗುತ್ತದೆ ಎಂದು ಹೇಳಿದ್ದಾರೆ. ಅದರಂತೆ ನಾವು ಶವವನ್ನು ಗಂಗಾನದಿಯಲ್ಲಿ ಇಟ್ಟಿದ್ದೇವೆ ಎಂದು ಮೃತನ ಸಂಬಂಧಿಯೊಬ್ಬರು ಹೇಳಿದ್ದಾರೆ.
ಪುರಾಣದಲ್ಲಿ ಉಲ್ಲೇಖಿತ ಶ್ರೀಕೃಷ್ಣನೊಂದಿಗೆ ನಂಟು ಹೊಂದಿರುವ ದೈತ್ಯ ಹಾವು ವಾಸುಕಿ ಇದ್ದಿದ್ದು ನಿಜ!
ಪವಾಡವಾಗಿ ಮಗ ಬದುಕಿ ಬರುವನೋ ಎಂಬ ನಂಬಿಕೆಯಲ್ಲಿ ಯುವಕ ಮೋಹಿತ್ ಶವವನ್ನು ಗಂಗಾ ನದಿಯ ತೀರದಲ್ಲಿದ್ದ ಕಬ್ಬಿಣದ ಬೇಲಿಯ ಸರಳುಗಳಿಗೆ ಕಟ್ಟಿ ಮುಳುಗಿಸಿಟ್ಟಿದ್ದಾರೆ. ಆದರೆ ಯುವಕನ ದೇಹದಲ್ಲಿ ಯಾವುದೇ ಬದಲಾವಣೆ ಕಾಣದೇ ಹೋದಾಗ ಪೋಷಕರು ಆತನ ದೇಹವನ್ನು ನೀರಿನಿಂದ ಮೇಲೇತ್ತಿ ಶವ ಸಂಸ್ಕಾರ ನಡೆಸಿದ್ದಾರೆ.
ಅಮೇಜಾನ್ ಮಳೆಕಾಡಿನಲ್ಲಿ ಪತ್ತೆಯಾದ ಕೆಲವೇ ವಾರಗಳಲ್ಲಿ ಸಾವು ಕಂಡ ವಿಶ್ವದ ದೈತ್ಯ ಹಾವು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ