ದೆಹಲಿ ಮಾಲಿನ್ಯಕ್ಕೆ ಸುಪ್ರೀಂ ಕೋರ್ಟ್ ಕಳವಳ, ಆಪ್ ಸರ್ಕಾರಕ್ಕೆ ಲಾಸ್ಟ್ ವಾರ್ನಿಂಗ್!

By Suvarna NewsFirst Published Nov 7, 2023, 12:43 PM IST
Highlights

ದೆಹಲಿ ಹಾಗೂ ಪಂಜಾಬ್‌ನಲ್ಲಿರುವ ಆಪ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛಿಮಾರಿ ಹಾಕಿದೆ. ನಿಮ್ಮ ರಾಜಕೀಯ ಈ ವಿಚಾರದಲ್ಲಿ ಬೇಡ. ತಕ್ಷಣವೇ ಕಳೆಗೆ ಬೆಂಕಿ ಹಚ್ಚುವುದನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ವಾರ್ನಿಂಗ್ ನೀಡಿದೆ.

ನವದೆಹಲಿ(ನ.07) ದೆಹಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ದೆಹಲಿಯಲ್ಲಿ ಜನರು ಉಸಿರಾಟದ ಸಮಸ್ಯೆ, ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇತ್ತ ಶಾಲಾ ಕಾಲೇಜುಗಳಿಗೆ ಆನ್‌ಲೈನ್ ಕ್ಲಾಸ್ ಆರಂಭಗೊಂಡಿದೆ. ಕಚೇರಿಗಳು ವರ್ಕ್ ಫ್ರಮ್ ಹೋಮ್ ನೀಡಿದೆ. ಪರಿಸ್ಥಿತಿ ಕೈಮೀರುತ್ತಿದೆ. ಇದರ ನಡುವೆ ದೆಹಲಿ ಸರ್ಕಾರ ಕೇಂದ್ರದ ಸರ್ಕಾರ ಹಾಗೂ ಹರ್ಯಾಣ ಸರ್ಕಾರದತ್ತ ಕೈತೋರಿಸುತ್ತಿದೆ. ಇದರ ನಡುವೆ ಸುಪ್ರೀಂ ಕೋರ್ಟ್ ಆಪ್ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಜೊತೆಗೆ ವಾರ್ನಿಂಗ್ ನೀಡಿದೆ. ಪಂಜಾಬ್‌ನಲ್ಲಿ ಕಳೆಗೆ ಬೆಂಕಿ ಹಚ್ಚುವ ಪ್ರಕ್ರಿಯೆ ನಡೆಯುತ್ತಲೇ ಇದೆ. ತಕ್ಷಣವೇ ನಿಲ್ಲಿಸಿ, ಇದು ಪಂಜಾಬ್ ಸರ್ಕಾರದ ಕೆಲಸ. ಇಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ, ಅದಕ್ಕೆ ಸಮಯವೂ ಇಲ್ಲ ಎಂದು ಸುಪ್ರೀಂ ಕೋರ್ಟ್ ವಾರ್ನಿಂಗ್ ನೀಡಿದೆ.

ಈ ಬಾರಿ ನವೆಂಬರ್ ತಿಂಗಳಲ್ಲೇ ದೆಹಲಿಯಲ್ಲಿ ಮಾಲಿನ್ಯ ವಿಪರೀತವಾಗಿರುವ ಕಾರಣ ಸುಪ್ರೀಂ ಕೋರ್ಟ್ ವಿಚಾರಣೆ ಕೈಗೆತ್ತಿಕೊಂಡು ಪಂಜಾಬ್ ಸರ್ಕಾರಕ್ಕೆ ವಾರ್ನಿಂಗ್ ನೀಡಿದೆ. ಪಂಜಾಬ್‌ನಲ್ಲಿ ಎಗ್ಗಿಲ್ಲದೆ ಕಳೆಗೆ ಬೆಂಕಿ ಹಚ್ಚುವ ಕಾರ್ಯ ನಡೆಯುತ್ತಿದೆ. ಆದರೆ ಸರ್ಕಾರ ಕೈಕಟ್ಟಿ ಕುಳಿತಿದೆ. ಕಳೆಗೆ ಬೆಂಕಿ ಹಚ್ಚುವುದನ್ನು ಸಂಪೂರ್ಣವಾಗಿ ತಡೆಯುವುದು ನಿಮ್ಮ ಕೆಲಸ. ಈ  ಕೆಲಸವನ್ನು ಹೇಗೆ ಮಾಡುತ್ತೀರೋ ನಿಮಗೆ ಬಿಟ್ಟದ್ದು. ಆದರೆ ಕಳೆಗೆ ಬೆಂಕಿ ಹಚ್ಚುವುದು ನಿಲ್ಲಬೇಕು. ಈ ವಿಚಾರದಲ್ಲಿ ರಾಜಕೀಯ ಸಮರ ಸರಿಯಲ್ಲ ಎಂದು ಪಂಜಾಬ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ. ಇದೇ ವೇಳೆ ದೆಹಲಿ ಆಪ್ ಸರ್ಕಾರಕ್ಕೂ ಎಚ್ಚರಿಕೆ ನೀಡಿದೆ. 

ರಾಷ್ಟ್ರ ರಾಜಧಾನಿಗೆ ಮತ್ತೆ ಕಾಲಿಟ್ಟ ಸಮ - ಬೆಸ ವಾಹನ ಸಂಚಾರ ವ್ಯವಸ್ಥೆ: ಶಾಲೆಗಳಿಗೂ ರಜೆ ಘೋಷಿಸಿದ ಕೇಜ್ರಿವಾಲ್‌ ಸರ್ಕಾರ!

ಈ ವಿಚಾರದಲ್ಲಿ ವಿಳಂಬ ಸರಿಯಲ್ಲ. ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು. ಒಂದೊಂದು ನಿಮಿಷವು ಅತೀ ಮುಖ್ಯವಾಗಿದೆ ಎಂದು ಪಂಜಾಬ್ ಸರ್ಕಾರಕ್ಕೆ ಸೂಚಿಸಿದೆ. ಪಂಜಾಬ್ ಸಚಿವ ಇತ್ತೀಚೆಗೆ ಬಿಜೆಪಿ ಸರ್ಕಾರದ ವಿರುದ್ದ ಆರೋಪ ಹೊರಿಸಿದ್ದರು. ಹರ್ಯಾಣ ಹಾಗೂ ಉತ್ತರ ಪ್ರದೇಶದಲ್ಲಿ ಕಳೆಗೆ ಬೆಂಕಿ ಹಚ್ಚುವ ಪ್ರಕ್ರಿಯೆ ಹೆಚ್ಚಾಗಿರುವುದೇ ಮಾಲಿನ್ಯಕ್ಕೆ ಕಾರಣ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ, ಆಪ್ ಸರ್ಕಾರದ ರಾಜ್ಯದಲ್ಲಿ ಇತ್ತೀಚೆಗೆ 3000 ಕಳಗೆ ಬೆಂಕಿ ಹಚ್ಚಿದ ಪ್ರಕರಣ ವರದಿಯಾಗಿದೆ ಎಂದು ತಿರುಗೇಟು ನೀಡಿದ್ದರು.

ನವೆಂಬರ್ ತಿಂಗಳಿನಿಂದ ಪಂಜಾಬ್‌ನಲ್ಲಿ ಕಳೆಗೆ ಬೆಂಕಿ ಹಚ್ಚುವ ಘಟನೆಗಳು ಹೆಚ್ಚಾಗುತ್ತಿದೆ. ಕಟಾವು ಮಾಡಿದ ಬಳಿಕ ಉಳಿದಿರುವ ಕಳೆಗೆ ಬೆಂಕಿ ಹಚ್ಚಲಾಗುತ್ತದೆ. ಬೆಂಕಿ ಬಳಿಕ ಕಳೆಯ ಮಸಿ ಭೂಮಿಯಲ್ಲೇ ಉಳಿಯಲಿದೆ. ಬಳಿಕ ಪಂಜಾಬ್ ರೈತರು ಟ್ರಾಕ್ಟರ್ ಮೂಲಕ ಹೊಲ ಊಳುತ್ತಾರೆ. ಹೀಗೆ ಮಾಡಿದರೆ ಫಲವತ್ತತೆ ಹೆಚ್ಚಾಗಲಿದೆ ಅನ್ನೋದು ರೈತರ ಅಭಿಪ್ರಾಯ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪಂಜಾಬ್‌ನಲ್ಲಿ ಕಳೆಗೆ ಬೆಂಕಿ ಹಚ್ಚುವ ಪ್ರಕ್ರಿಯೆ ಹೆಚ್ಚಾಗಿದೆ. ಜೊತೆಗೆ ನಿರಂತರವಾಗಿ ನಡೆಯುತ್ತಿದೆ. ಈ ದಟ್ಟ ಹೊಗೆ ದೆಹಲಿಯಲ್ಲಿ ಆವರಿಸುತ್ತಿದೆ. ಇದರಿಂದ ದೆಹಲಿಯಲ್ಲಿನ ವಾಯು ಗುಣಮಟ್ಟ ಮತ್ತಷ್ಟ ಕ್ಷೀಣಿಸುತ್ತಿದೆ ಎಂದು ಈಗಾಗಲೇ ತಜ್ಞರು ವರದಿ ನೀಡಿದ್ದಾರೆ. ಈ ವರದಿಗಳನ್ನು ಆಧರಿಸಿ ಪ್ರತಿ ವರ್ಷ ಸುಪ್ರೀಂ ಕೋರ್ಟ್ ದೆಹಲಿ, ಪಂಜಾಬ್ ಹಾಗೂ ಹರ್ಯಾಣ ಸರ್ಕಾರಗಳಿಗೆ ಎಚ್ಚರಿಕೆ ನೀಡುತ್ತಿದೆ.

 

ದೆಹಲಿ ಮಾಲಿನ್ಯ ನಿಯಂತ್ರಣಕ್ಕೆ ಆರ್ಟಿಫೀಶಿಯಲ್ ಮಳೆ ಪ್ರಸ್ತಾವನೆ ಮುಂದಿಟ್ಟ ಐಐಟಿ ಕಾನ್ಪುರ!

click me!