ಸರಿಯಾದ ಪಠ್ಯಪುಸ್ತಕವಿಲ್ಲ, ಟ್ಯೂಶನ್ ಪಡೆದಿಲ್ಲ, 700ಕ್ಕೆ 691 ಅಂಕ ಪಡೆದು ಕೀರ್ತಿ ತಂದ ವಿದ್ಯಾರ್ಥಿನಿ!

Published : May 04, 2024, 09:15 PM IST
ಸರಿಯಾದ ಪಠ್ಯಪುಸ್ತಕವಿಲ್ಲ, ಟ್ಯೂಶನ್ ಪಡೆದಿಲ್ಲ, 700ಕ್ಕೆ 691 ಅಂಕ ಪಡೆದು ಕೀರ್ತಿ ತಂದ ವಿದ್ಯಾರ್ಥಿನಿ!

ಸಾರಾಂಶ

ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ, ಇಂಗ್ಲೀಷ್ ಪಠ್ಯ ಪುಸ್ತಕವಿಲ್ಲದ ಕಾರಣ ಬಂಗಾಳಿ ಭಾಷೆಯಿಂದ ತಾನೇ ಭಾಷಾಂತರಿಸಿಕೊಂಡು ಒದಬೇಕಾದ ಅನಿವಾರ್ಯತೆ, ಖಾಸಗಿ ಟ್ಯೂಶನ್ ಪಡೆದಿಲ್ಲ. ಆದರೆ ಛಲಬಿಡದ ವಿದ್ಯಾರ್ಥಿನಿ, ಸ್ವಂತ ಪರಿಶ್ರಮದ ಮೂಲಕ ಇದೀಗ ರಾಜ್ಯಕ್ಕೆ 3ನೇ ರ್‍ಯಾಂಕ್‌ ಪಡೆದುಕೊಂಡಿದ್ದಾಳೆ.  

ಕೋಲ್ಕತಾ(ಮೇ.04) ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ. ಎಲ್ಲಾ ಪಠ್ಯಪುಸ್ತಕ ಇಂಗೀಷ್‌ನಲ್ಲಿ ಇಲ್ಲ. ಬಂಗಾಳಿ ಭಾಷೆಯಲ್ಲಿರುವ ಕೆಲ ಪಠ್ಯಪುಸ್ತಕವನ್ನು ಇಂಗ್ಲೀಷ್‌ಗೆ ಭಾಷಾಂತರ ಮಾಡಿ ಓದಬೇಕಾದ ಅನಿವಾರ್ಯತೆ. ಖಾಸಗಿಯಾಗಿ ಯಾವುದೇ ಟ್ಯೂಶನ್ ಪಡೆದಿಲ್ಲ. ಸ್ವಂತ ಪರಿಶ್ರಮ, ಗೆಲ್ಲಲೇಬೇಕೆಂಬ ಛಲದಿಂದ ಪಶ್ಚಿಮ ಬಂಗಾಳದ  10ನೇ ತರಗತಿ ವಿದ್ಯಾರ್ಥಿನಿ ಪುಷ್ಪಿತಾ ಬಸುರಿ 700ರ ಪೈಕಿ 691 ಅಂಕ ಪಡೆದು ಕೀರ್ತಿ ತಂದಿದ್ದಾಳೆ. ರಾಜ್ಯಕ್ಕೆ 3ನೇ ರ್‍ಯಾಂಕ್‌ ಪಡೆದು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.

ಪಶ್ಚಿಮ ಬಂಗಾಳದಲ್ಲಿ ಸರ್ಕಾರ ನಡೆಸುವ ಮೊದಲ ಇಂಗ್ಲೀಷ್ ಮಾಧ್ಯಮ ಶಾಲೆಯ ಮೊದಲ ಬ್ಯಾಚ್ ವಿದ್ಯಾರ್ಥಿನಿ ಪುಷ್ಪಿತ ಹೊಸ ಇತಿಹಾಸ ರಚಿಸಿದ್ದಾರೆ. ಬಂಗಾಳಿ ವಿಷಯಜಲ್ಲಿ 97 ಅಂಕ, ಇಂಗ್ಲೀಷ್‌ನಲ್ಲಿ 99 ಅಂಕ, ಗಣಿತದಲ್ಲಿ 98 ಅಂಕ, ಭೌತಶಾಸ್ತ್ರ ವಿಜ್ಞಾನದಲ್ಲಿ 99 ಅಂಕ, ಲೈಫ್ ಸೈನ್ಸ್ ವಿಷಯದಲ್ಲಿ 100 ಅಂಕ, ಇತಿಹಾಸದಲ್ಲಿ 100, ಜಿಯೋಗ್ರಫಿಯಲ್ಲಿ 100 ಅಂಕ ಪಡೆದಿದ್ದಾಳೆ.

ಲೋಕಸಭಾ ಚುನಾವಣೆಯ ನೆಪದಲ್ಲಿ ಮಕ್ಕಳನ್ನು ಮರೆತ ಸರ್ಕಾರ!

ನನಗೆ ಓದಿನಲ್ಲಿ ಆಸಕ್ತಿ. ಯಾವುದೇ ಟ್ಯೂಶನ್ ತೆಗೆದುಕೊಂಡಿಲ್ಲ. ನನ್ನ ಪೋಷಕರು, ಶಾಲೆಯಲ್ಲಿ ಶಿಕ್ಷಕರು ನೆರವು ನೀಡಿದ್ದಾರೆ. ತಾಯಿಯ ಸಹೋದ್ಯೋಗಿಗಳು ಅಗತ್ಯ ಬಿದ್ದಾಗ ಮಾರ್ಗದರ್ಶನ ಮಾಡಿದ್ದಾರೆ. ನಾನು ಬೇರೆ ಬೇರೆ ಪುಸ್ತಕಗಳಿಂದ ನೋಟ್ಸ್ ಬರೆದುಕೊಂಡು ಅಭ್ಯಾಸ ಮಾಡಿದ್ದೇನೆ. ನನಗೆ ಟ್ಯೂಶನ್ ಪಡೆಯಬೇಕಾದ ಅವಶ್ಯಕತೆ ಎದುರಾಗಿಲ್ಲ. ಕಾರಣ ನಾನು ಯಾವುದೇ ತರಗತಿ ತಪ್ಪಿಸಿಲ್ಲ. ಶಿಕ್ಷಕರು ಹೇಳುವ ಪಾಠಗಳನ್ನು ಅರ್ಥಿ ಮಾಡಿಕೊಂಡು ನೋಟ್ಸ್ ಮಾಡುತ್ತಿದ್ದೆ. ಇದು ಹೆಚ್ಚು ಸಹಕಾರಿಯಾಗಿದೆ ಎಂದು ಪುಷ್ಪಿತಾ ಹೇಳಿದ್ದಾರೆ. 

ಇಂಗ್ಲೀಷ್ ಮಾಧ್ಯಮ ಶಾಲೆ. ಆದರೆ ಎಲ್ಲಾ ಪಠ್ಯಗಳು ಇಂಗ್ಲೀಷ್‌ನಲ್ಲಿ ಲಭ್ಯವಿರಲಿಲ್ಲ. ಹೀಗಾಗಿ ಬಂಗಾಳಿ ಭಾಷೆಯಲ್ಲಿ ನೀಡಿರುವ ಪುಸ್ತಕಗಳನ್ನೇ ಭಾಷಾಂತರ ಮಾಡಿಕೊಂಡು ಓದಿದ್ದೇನೆ. ಮಗಳ ಸಾಧನೆ ಕುರಿತು ಪೋಷಕರ ಸಂತಸ ಇಮ್ಮಡಿಗೊಂಡಿದೆ. ಪುಷ್ಪಿತ ಛಲಬಿಡದೆ ಓದಿದ್ದಾಳೆ. ಪ್ರತಿ ದಿನ ವಿದ್ಯಾಭ್ಯಾಸಕ್ಕಾಗಿ ಪರಿಶ್ರಮ ಪಟ್ಟಿದ್ದಾಳೆ. ನೋಟ್ಸ್ ಮಾಡಿಕೊಂಡು ಓದಿದ್ದಾಳೆ. ಶಿಕ್ಷಕರು ಉತ್ತಮ ಸಹಕಾರ ನೀಡಿದ್ದಾರೆ ಎಂದು ಪುಷ್ಪಿತಾ ತಾಯಿ ಹೇಳಿದ್ದಾರೆ.

ದೆಹಲಿಯಲ್ಲಿ 150 ಶಾಲೆಗಳಿಗೆ ಬಾಂಬ್ ಬೆದರಿಕೆ! ಉಗ್ರರ ಕೃತ್ಯ?

ನಾವು ಮಧ್ಯಮ ವರ್ಗದ ಕುಟುಂಬ. ಮಗಳು ಓದಿನ ಆಸಕ್ತಿ ನೋಡಿ ಹೆಮ್ಮೆಯಾಗುತ್ತದೆ. ಆಕೆಯನ್ನು ಖಾಸಗಿ ಕೋಚಿಂಗ್ ಕೇಂದ್ರಕ್ಕೆ ಕಳುಹಿಸುವಷ್ಟು ಆರ್ಥಿಕವಾಗಿ ನಾವು ಶಕ್ತರಲ್ಲ. ಆದರೆ ಮಗಳು ಸ್ವಂತ ಪ್ರಯತ್ನದಿಂದ ರಾಜ್ಯಕ್ಕೆ ಹೆಮ್ಮೆ ತಂದಿದ್ದಾಳೆ ಎಂದು ಪುಷ್ಪಿತಾ ತಂದೆ ಹೇಳಿದ್ದಾರೆ.
 

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ