ಶೀಘ್ರದಲ್ಲೇ ಬಿಜೆಪಿ ಫೈರ್‌ಬ್ರ್ಯಾಂಡ್‌ ಅಣ್ಣಾಮಲೈ ಬಯೋಪಿಕ್‌?

By Santosh NaikFirst Published May 4, 2024, 8:50 PM IST
Highlights


ಟೀಮ್‌ ಇಂಡಿಯಾ ಮಾಜಿ ನಾಯಕ ಎಂಎಸ್‌ ಧೋನಿ ಬಯೋಪಿಕ್‌ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಬಳಿಕ, ರಾಜಕೀಯ ಹಾಗೂ ಕ್ರೀಡಾ ತಾರೆಗಳ ಬಯೋಪಿಕ್‌ ಮಾಡುವ ಟ್ರೆಂಡ್‌ ಕಳೆಗಟ್ಟಿದೆ.
 

ಚೆನ್ನೈ (ಮೇ.4): ಭಾರತೀಯ ಸಿನಿಮಾ ಪ್ರೇಕ್ಷಕರಿಗೆ ಬಯೋಪಿಕ್‌ ಹೊಸದೇನಲ್ಲ. ಈಗಾಗಲೇ ಸಾಕಷ್ಟು ಮಂದಿಯ ಬಯೋಪಿಕ್‌ಗಳು ಬಂದಿವೆ. ಎಂಎಸ್‌ ಧೋನಿ, ಸೈನಾ ನೆಹ್ವಾಲ್‌, ಮೇರಿ ಕೋಮ್‌, ನರೇಂದ್ರ ಮೋದಿ ಹೀಗೆ ಹಲವಾರು ವ್ಯಕ್ತಿಗಳ ಬಯೋಪಿಕ್‌ಗಳು ಬಂದು ತೆರೆಯ ಮೇಲೆ ರಂಜಿಸಿವೆ. ಎಂಎಸ್‌ ಧೋನಿ ಬಯೋಪಿಕ್‌ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಬಳಿಕ, ರಾಜಕಾರಣಿಗಳು ರಾಜಕೀಯ ಕಾರ್ಯಕ್ರಮಗಳ ಚಿತ್ರವಾಗುವ ಟ್ರೆಂಡ್‌ ಶುರುವಾಗಿದೆ. ಶೀಘ್ರದಲ್ಲಿ ಕರ್ನಾಟಕದ ಸಿಎಂ ಸಿದ್ಧರಾಮಯ್ಯ ಅವರ ಬಯೋಪಿಕ್‌ ಕೂಡ ತೆರೆಯ ಮೇಲೆ ಬರಲಿದೆ. ಇತ್ತೀಚೆಗೆ ರಾಮ್‌ ಗೋಪಾಲ್‌ ವರ್ಮ ವೈ ರಾಜಶೇಖರ ರೆಡ್ಡಿ ಹಾಗೂ ಜಗನ್‌ ಮೋಹನ್‌ ರೆಡ್ಡಿ ಮಾಡಿದ ಪಾದಯಾತ್ರೆಗಳ ಸಂಬಂಧಪಟ್ಟ ಸಿನಿಮಾ ಮಾಡಿದ್ದರು. ಇನ್ನು ಮಾಜಿ ಪ್ರಧಾನಿ ಹಾಗೂ ಬಿಜೆಪಿಯ ಹಿರಿಯ ನಾಯಕ ಅಟಲ್‌ ಬಿಹಾರಿ ವಾಜಪೇಯಿ ಅವರ ಕುರಿತಾದ ಬಯೋಪಿಕ್‌ ಕೂಡ ಈ ವರ್ಷ ಬಿಡುಗಡೆಯಾಗಿದೆ.  ಇದೀಗ ಮತ್ತೋರ್ವ ಬಿಜೆಪಿ ನಾಯಕನ ಮೇಲೆ ಸಿನಿಮಾ ಮಾಡುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗುತ್ತಿದೆ. ಅವರು ಯಾವುದೇ ಹುದ್ದೆಯನ್ನು ಹೊಂದಿಲ್ಲ ಮತ್ತು ಅವರು ಕೇವಲ ರಾಜ್ಯ ಮುಖ್ಯಸ್ಥರಾಗಿದ್ದಾರೆ.

ರಾಜಕೀಯವನ್ನು ಫಾಲೋ ಮಾಡುವವರಿಗೆ ತಮಿಳುನಾಡು ರಾಜ್ಯ ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರನ್ನು ಪರಿಚಯಿಸುವ ಅಗತ್ಯವಿಲ್ಲ. ಮಾಜಿ ಐಪಿಎಸ್ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಬಿಜೆಪಿ ಪಕ್ಷಕ್ಕೆ ಸೇರಿದ್ದಾರೆ. ಅವರಿಗೆ ತಮಿಳುನಾಡಿನಲ್ಲಿ ಪಕ್ಷದ ದೊಡ್ಡ ಹುದ್ದೆ ನೀಡಲಾಗಿದೆ. ಈ ಹುದ್ದೆಗೆ ತಮ್ಮ ಕೈಲಾದಷ್ಟು ಅವರು ಶ್ರಮವಹಿಸುತ್ತಿದ್ದಾರೆ.

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಅಣ್ಣಾಮಲೈ ಅವರ ವರ್ಚಸ್ಸು ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ ಅನ್ನೋದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ ಈ ಹಿಂದೆ ಅಣ್ಣಾಮಲೈ ಅವರು ತಮಿಳುನಾಡು ಭೇಟಿ ವೇಳೆ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ರಾಜ್ಯ ಬಿಜೆಪಿ ನಡೆಸುವ ಪ್ರತಿ ಸಭೆಯಲ್ಲೂ ಅಣ್ಣಾಮಲೈ ಇರುತ್ತಾರೆ.

ನರೇಂದ್ರ ಮೋದಿಯವರು ಅನೇಕ ಸಂದರ್ಭಗಳಲ್ಲಿ ಅಣ್ಣಾಮಲೈ ಅವರನ್ನು ಕಠಿಣ ಪರಿಶ್ರಮಿ ಎಂದು ಹೊಗಳಿದ್ದಾರೆ. ಇದು ಬಿಜೆಪಿಯಲ್ಲಿ ಅಣ್ಣಾಮಲೈ ಅವರ ಉದಯವಾಗಿದೆ. ತಮಿಳುನಾಡು ಬಿಜೆಪಿ ಮುಖ್ಯಸ್ಥರಾದ ಬಳಿಕ, ರಾಜ್ಯದಲ್ಲಿ ಬಿಜೆಪಿಯ ವರ್ಚಸ್ಸು ಕೂಡ ಏರಿಕೆ ಕಂಡಿದೆ.  ಇತರ ಪಕ್ಷಗಳ ನಾಯಕರೂ ಬಿಜೆಪಿಗೆ ಸೇರ್ಪಡೆಗೊಂಡರು. ಅದರೊಂದಿಗೆ ಕೊಯಮತ್ತೂರಿನಿಂದ ಚುನಾವಣೆಗೆ ನಿಲ್ಲುವ ಮೂಲಕ, ಸಂಸದರಾಗುವ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಸದ್ಯದಲ್ಲೇ ಅಣ್ಣಾಮಲೈ ಬಯೋಪಿಕ್‌ ತೆರೆಯ ಮೇಲೆ ಬರಬಹುದು ಎಂದು ಸುದ್ದಿಯಾಗಿದೆ. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟ ವರದಿಗಳಿಲ್ಲ. ಮೂಲಗಳ ಪ್ರಕಾರ, ವಿಶಾಲ್‌ ಅಣ್ಣಾಮಲೈ ಅವರ ಪಾತ್ರವನ್ನಿ ನಿರ್ವಹಿಸಬಹುದು ಎನ್ನಲಾಗಿದೆ. ಇಲ್ಲಿಯವರೆಗೂ ಬಿಜೆಪಿ ಪ್ರವೇಶಿಸಲು ಸಾಧ್ಯವಾಗದ ಒಂದೇ ಒಂದು ರಾಜ್ಯವಿದ್ದರೆ ಅದು ತಮಿಳುನಾಡು. ಆದರೆ, ಪಕ್ಷದ ನಾಯಕತ್ವ ಮಾತ್ರ, ತಮಿಳುನಾಡಿನಲ್ಲಿ ಬಿಜೆಪಿ ಅಲೆ ಏಳಬೇಕೆಂದರೆ, ಅದಕ್ಕೆ ಅಣ್ಣಾಮಲೈ ಅವರೇ ಸೂಕ್ತ ಎಂದು ಭಾವಿಸಿದೆ.

10 ವರ್ಷ ಬರೀ ಮೋದಿಯವರ ಟ್ರೈಲರ್ ನೋಡಿದ್ರಿ, ಮುಂದೆ ಸಿನಿಮಾ ಬಂದೆ ಬರುತ್ತೆ: ಅಣ್ಣಾಮಲೈ

ಬಯೋಪಿಕ್‌ಗಳು ವ್ಯಕ್ತಿತ್ವಗಳನ್ನು ಹೈಲೈಟ್ ಮಾಡಲು ಮತ್ತು ಕೆಲವು ಘಟನೆಗಳನ್ನು ಹೈಲೈಟ್ ಮಾಡಲು ಸಹಾಯ ಮಾಡುತ್ತದೆ. ಅಣ್ಣಾಮಲೈ ಉತ್ತಮ ಮಾತುಗಾರ ಅನ್ನೋದರಲ್ಲಿ ಎರಡು ಮಾತಿಲ್ಲ. ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ನಿರುದ್ಯೋಗ ಹೆಚ್ಚುತ್ತಿದೆ ಎಂದು ಹೇಳಿದಾಗ, ಅಣ್ಣಾಮಲೈ ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ಮಾತ್ರವೇ ದೇಶದಲ್ಲಿ ನಿರುದ್ಯೋಗಿ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದರು.

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ; ತನಿಖೆಗೆ ಯಾರೂ ಅಡ್ಡಿಪಡಿಸಿಲ್ಲ ಸರ್ಕಾರ ಮೊದಲು ಕೆಲಸ ಮಾಡಿ ತೋರಿಸಲಿ; ಅಣ್ಣಾಮಲೈ ಚಾಟಿ

click me!