India@75: ಐತಿಹಾಸಿಕ ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಸಾಮೂಹಿಕ ಯೋಗ

By Girish Goudar  |  First Published Jun 21, 2022, 1:29 PM IST

*  ಐತಿಹಾಸಿಕ ಹಾಗೂ ಪಾರಂಪರಿಕ ಸ್ಥಳಗಳಲ್ಲಿ ಮಾರ್ಧನಿಸಿದ ಯೋಗ
*  ಮಾನವೀಯತೆಗಾಗಿ ಯೋಗ ಎಂಬ ಘೋಷವಾಕ್ಯದಡಿ ನಡೆದ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ
*  ಪ್ರತಿಯೊಬ್ಬರು ದೈಹಿಕ ಹಾಗೂ ಮಾನಸಿಕ ಆರೋಗ್ಯ ಹೆಚ್ಚಿಸಿಕೊಳ್ಳಬೇಕು 


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಜೂ.21):  ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಚಿತ್ರದುರ್ಗ ನಗರದ ಐತಿಹಾಸಿಕ ಕಲ್ಲಿನ ಕೋಟೆ ಹಾಗೂ ಚಂದ್ರವಳ್ಳಿಯಲ್ಲಿ ಸಾಮೂಹಿಕ ಯೋಗ ಮಾಡುವುದರ ಮೂಲಕ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.

Latest Videos

undefined

ಮಾನವೀಯತೆಗಾಗಿ ಯೋಗ ಎಂಬ ಘೋಷವಾಕ್ಯದಡಿ ನಡೆದ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯು ಚಿತ್ರದುರ್ಗದ ಐತಿಹಾಸಿಕ ಕಲ್ಲಿನ ಕೋಟೆ ಹಾಗೂ ಚಂದ್ರವಳ್ಳಿಯಲ್ಲಿ ಎರಡು ಕಡೆ ಸಾಮೂಹಿಕ ಯೋಗ ಆಚರಿಸಲಾಯಿತು. ಯೋಗ ದಿನಾಚರಣೆ ಅಂಗವಾಗಿ ಮುಂಜಾನೆ 5 ಗಂಟೆಯಿಂದಲೇ ಕೋಟೆ ಹಾಗೂ ಚಂದ್ರವಳ್ಳಿಯತ್ತ ಯೋಗಾಭ್ಯಾಸಿಗಳು ನಡೆದು ಬಂದರು. ವಿದ್ಯಾರ್ಥಿಗಳು, ಯುವ ಜನರು, ಮಹಿಳೆಯರು, ವೃದ್ಧರು ಸೇರಿದಂತೆ ವಿವಿಧ ವಯೋಮಾನದವರು ಯೋಗಾಭ್ಯಾಸದಲ್ಲಿ ಉತ್ಸಾಹದಲ್ಲಿ ಪಾಲ್ಗೊಂಡರು. ಚಳಿಯ ವಾತಾವರಣ, ತಂಗಾಳಿ, ಹಕ್ಕಿಯ ಚಿಲಿಪಿಲಿಯ ವಾತಾವರಣದ ನಡುವೆ ಕಲ್ಲಿನ ಕೋಟೆ ಹಾಗೂ ಚಂದ್ರವಳ್ಳಿಯ ವಿಶಾಲ ಆವರಣದಲ್ಲಿ ಯೋಗಾಭ್ಯಾಸ ನಡೆಸಿದರು.

India@75: ಸ್ವಾತಂತ್ರ್ಯ ಯೋಧರ ನೇಣಿಗೇರಿಸಿದ ಭೀಕರ ರಣಕಟ್ಟೆ

ಕೋಟೆ ಆವರಣದಲ್ಲಿ ಮಾರ್ಧನಿಸಿದ ಯೋಗ:

ಐತಿಹಾಸಿಕ ಕಲ್ಲಿನಕೋಟೆ ಆವರಣದಲ್ಲಿ ಯೋಗ ಶಿಕ್ಷಕ ಕೆಂಚವೀರಪ್ಪ ಅವರು ಆಯುಷ್ ಇಲಾಖೆ ಹೊರಡಿಸಿದ ಯೋಗ ಶಿಷ್ಟಾಚಾರದ ಅನುಸಾರ ಯೋಗ ತರಬೇತಿ ನೀಡಿದರು. ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಮಾತನಾಡಿ, ಜಗತ್ತಿಗೆ ಯೋಗ ಭಾರತ ನೀಡಿದ ಮಹತ್ವದ ಕೊಡುಗೆಯಾಗಿದೆ. ಭಾರತ ತನ್ನ ವಿದ್ಯೆ, ಕಲೆ, ಸಂಸ್ಕøತಿಯನ್ನು ವಿಶ್ವಕ್ಕೆ ಪಸರಿಸಿದೆ. ಯೋಗದ ಮೂಲಕ ಯಾವುದೇ ಉಪಕರಣ ಹಾಗೂ ಸಲಕರಣೆಗಳಿಲ್ಲದೆ ದೇಹ, ಮನಸ್ಸು ಹಾಗೂ ಬುದ್ಧಿಯನ್ನು ಸಮತೋಲನದಲ್ಲಿ ಇಡಬಹುದು. ನಮ್ಮ ಆರೋಗ್ಯಕ್ಕಾಗಿ ಯೋಗ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ಯೋಗ ಮಾಡವುದರ ಮೂಲಕ ಜಗತ್ತಿಗೆ ಯೋಗದ ಮಹತ್ವ ಸಾರಿದ್ದಾರೆ. ಪ್ರತಿಯೊಬ್ಬರು ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕು. ಯೋಗ ಕಲಿತು ಬೇರೆಯವರಿಗೂ ಕಲಿಸುವ ಸಂಕಲ್ಪ ಮಾಡಬೇಕು. ಯುವಕರ ಮನಸ್ಸು ಆಧುನಿಕತೆ ಕಡೆ ವಾಲುತ್ತಿದೆ. 

ಯುವ ಜನತೆಯನ್ನು ಯೋಗದ ಕಡೆ ಸೆಳೆಯಬೇಕು. ಚಿಕ್ಕಂದಿನಿಂದಲೇ ಮಕ್ಕಳಿಗೆ ಯೋಗ ತರಬೇತಿ ನೀಡಬೇಕು. ಮುಂದಿನ ವರ್ಷ ಯೋಗಾಭ್ಯಾಸ ಮಾಡುವವರ ಸಂಖ್ಯೆ ಹೆಚ್ಚಾಗಬೇಕು. ಸರ್ಕಾರದ ಆದೇಶ ಪಾಲನೆಗೆ ಯೋಗ ದಿನಾಚರಣೆ ಮಾಡದೆ ಅಭಿಯಾನದ ರೀತಿ ಮಾಡಬೇಕು ಎಂದು ಸಲಹೆ ನೀಡಿದರು. ಚಿತ್ರದುರ್ಗ ನಗರದಲ್ಲಿ 50 ಹಾಸಿಗೆ ಸಾಮರ್ಥ್ಯದ ಆಯುರ್ವೇದ ಆಸ್ಪತ್ರೆ ಮಂಜೂರಾತಿಗೆ ಪ್ರಯತ್ನ ಮಾಡಲಾಗುವುದು. ಜಿಂದಾಲ್ ಹಾಗೂ ಉಜಿರೆ ಮಾದರಿಯಲ್ಲಿ ನೈಸರ್ಗಿಕ ಚಿಕಿತ್ಸೆ ಕೇಂದ್ರ ಸ್ಥಾಪನೆ ಮಾಡಿ, ಮಧ್ಯ ಕರ್ನಾಟಕದಲ್ಲಿ ಮಾದರಿ ಎನಿಸುವಂತೆ ಕಾರ್ಯನಿವರ್ಹಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಮಾನವೀಯತೆಗಾಗಿ ಯೋಗ ಎಂಬುದು ಈ ಬಾರಿ ಯೋಗ ದಿನಾಚರಣೆ ಘೋಷ್ಯವಾಕ್ಯವಾಗಿದ್ದು, ಪ್ರತಿಯೊಬ್ಬರು ದೈಹಿಕ ಹಾಗೂ ಮಾನಸಿಕ ಆರೋಗ್ಯ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.

ಚಂದ್ರವಳ್ಳಿಯಲ್ಲಿ ಸಾಮೂಹಿಕ ಯೋಗ:

ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಚಂದ್ರವಳ್ಳಿಯಲ್ಲಿ 500ಕ್ಕೂ ಹೆಚ್ಚು ಜನರಿಂದ ಯೋಗಾಭ್ಯಾಸ ನಡೆಯಿತು. ಯೋಗ ತರಬೇತುದಾರ ರವಿ ಅಂಬೇಕರ್ ಯೋಗ ತರಬೇತಿ ನೀಡಿದರು. ಜಿಲ್ಲಾ ಆಸ್ಪತ್ರೆ ಹಿರಿಯ ವೈದ್ಯಾಧಿಕಾರಿ ಡಾ.ಸುರೇಶ್ ಮಾತನಾಡಿ, 2014ರಲ್ಲಿ ವಿಶ್ವಸಂಸ್ಥೆಯು 175 ರಾಷ್ಟ್ರಗಳನ್ನೊಳಗೊಂಡಂತೆ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸುವಂತೆ ಅನುಷ್ಠಾನಗೊಳಿಸಲಾಗಿದೆ. ಅದರಂತೆ ಪ್ರತಿ ವರ್ಷವೂ ಕೂಡ ವಿಶೇಷ ಘೋಷ ವಾಕ್ಯಗಳೊಂದಿಗೆ ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಯೋಗ ಮಾಡುವುದರಿಂದ ಆರೋಗ್ಯ ಹೆಚ್ಚು ಸಮೃದ್ಧಿಸುತ್ತದೆ. ಯೋಗವು ಸುಮಾರು 500 ವರ್ಷಗಳ ಇತಿಹಾಸ ಹೊಂದಿರುವಂತಹ ಕಲೆಯಾಗಿದೆ. ಯೋಗ ಮಾಡುವುದರಿಂದ ಆರೋಗ್ಯದಲ್ಲಿ ಹಿಡಿತವಿದ್ದು, ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ತಿಳಿಸಿದರು. 
 

click me!