ಭಾಗ್ಯಲಕ್ಷ್ಮೀ ಸೀರಿಯಲ್: ಭಾಗ್ಯ ಉಟ್ಟಿದ್ದು ಸೀರೆ ಆದ್ರೂ ಪ್ರೇಕ್ಷಕರು ಉರಿದುಕೊಳ್ಳುತ್ತಿರುವುದೇಕೆ?

By Bhavani Bhat  |  First Published Oct 17, 2024, 12:30 PM IST

 ಭಾಗ್ಯಲಕ್ಷ್ಮೀ ಸೀರಿಯಲ್ ಬಗ್ಗೆ ವೀಕ್ಷಕರು ಕೆಂಡ ಕಾರುತ್ತಿದ್ದಾರೆ. ಅಷ್ಟಕ್ಕೂ ಭಾಗ್ಯ ಸೀರೇನೇ ಉಟ್ರೂ ಇಷ್ಟ್ಯಾಕೆ ಉರ್ಕೊಳ್ತಿದ್ದಾರೆ ಅನ್ನೋದು ಪ್ರಶ್ನೆ


ಭಾಗ್ಯಲಕ್ಷ್ಮೀ ಸೀರಿಯಲ್‌ ಪದೇ ಪದೇ ಬೈಯಿಸಿಕೊಳ್ತಿರೋದು ಎರಡು ಕಾರಣಕ್ಕೆ ಮೊದಲನೆಯದು ಚ್ಯುಯಿಂಗ್ ಗಮ್‌ನಂತೆ ಕಥೆಯನ್ನು ಎಳೀತಾ ಹೋಗ್ತಿರೋದಕ್ಕೆ, ಎರಡನೆಯ ರೀಸನ್ನು ಹೆಣ್ಣನ್ನು ಗಂಡಿಗೆ ಬೇಕಾದ ಹಾಗೆ ಬದಲಾಗೋ ಗೊಂಬೆ ಥರ ನೋಡೋದಕ್ಕೆ. ಇದೀಗ ಸೀರಿಯಲ್‌ನಲ್ಲಿ ಬಿಟ್ಟಿರೋ ಹೊಸ ಪ್ರೋಮೋದಲ್ಲಿ ಇದೇ ಕಾರಣಕ್ಕೆ ವೀಕ್ಷಕರು ಸೀರಿಯಲ್ ಟೀಮನ್ನು ತಾರಾಮಾರ ತರಾಟೆಗೆ ತಗೊಳ್ತಿದ್ದಾರೆ. ಈ ಹಿಂದೆ ಕುಸುಮಾಳನ್ನು ಮಾದರಿ ಅತ್ತೆ ಅಂತ ಹಾಡಿ ಹೊಗಳ್ತಿದ್ದವರೆಲ್ಲ ಈಗ ಅವಳಿಗೆ ಛೀಮಾರಿ ಹಾಕ್ತಿದ್ದಾರೆ. ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಮಗನಿಗಾಗಿ ತನ್ನ ಸೊಸೆಯನ್ನು ಬೊಂಬೆ ಥರ ಟ್ರೀಟ್ ಮಾಡೋ ಅತ್ತೆ ಈಗೀಗ ವೀಕ್ಷಕರ ಕಣ್ಣಲ್ಲಿ ನೆಗೆಟಿವ್ ಶೇಡ್ ಪಡ್ಕೊಳ್ತಿದ್ದಾರೆ. ಅವರೀಗ ಕುಸುಮಾ ಅತ್ತೆಗೆ ಚೆನ್ನಾಗಿ ಕ್ಲಾಸ್ ತಗೊಳ್ತಿದ್ದಾರೆ.

ನಿಮ್ಮ ಮಗನನ್ನು ಫಸ್ಟ್ ಬದಲಾಯಿಸಿ, ಅದಬಿಟ್ಟು ಸರಿಯಾಗಿರುವ ಭಾಗ್ಯಾಳನ್ನಲ್ಲ ಅಂತ ಅವರೆಲ್ಲ ಹೇಳ್ತಿದ್ದಾರೆ. ಈ ಹಿಂದೆಯೂ ಕುಸುಮಾ ಇನ್ನೊಂದು ತಿಂಗಳಲ್ಲಿ ಸೊಸೆಯನ್ನು ನಿನಗೆ ಬೇಕಾದಂತೆ ಬದಲಿಸ್ತೀನಿ ಅಂತ ಮಗನಿಗೆ ಮಾತು ಕೊಟ್ಟಾಗಲೂ ವೀಕ್ಷಕರು ಚೆನ್ನಾಗೇ ತರಾಟೆಗೆ ತಗೊಂಡಿದ್ರು. ಆದರೆ ಸೀರಿಯಲ್ ಟೀಮ್‌ಗೆ ಯಾಕೋ ವೀಕ್ಷಕರಿಗಾಗಿ ಕಥೆ ಚೇಂಜ್ ಮಾಡೋದು ಇಷ್ಟ ಇಲ್ಲ ಅನಿಸುತ್ತೆ. ಅವರು ಅದಕ್ಕೆಲ್ಲ ಕ್ಯಾರೇ ಅನ್ನದೇ ಮುಂದುವರೀತಿದ್ದಾರೆ.

Tap to resize

Latest Videos

undefined

 ಗಂಡ ತಾಂಡವ್​ಗಾಗಿ ಬದಲಾಯ್ತು ಭಾಗ್ಯಳ ಲುಕ್​! ಸುಂದರಿಯಾಗಿ ಕಂಡ್ರೂ ನೆಟ್ಟಿಗರಿಂದ ತೀವ್ರ ಆಕ್ರೋಶ

ಸದ್ಯ ಪ್ರೋಮೋದಲ್ಲಿ ಭಾಗ್ಯಾಳ ಹೊಸ ಲುಕ್ ಕಾಣಿಸಿಕೊಂಡಿದೆ. ಅತ್ತೆ ಮಗನಿಗೆ ಮಾತುಕೊಟ್ಟಂತೆ ತನ್ನ ಸೊಸೆಯನ್ನು ಮಾಡರ್ನ್ ಹುಡುಗಿಯಾಗಿ ಬದಲಿಸುತ್ತಿದ್ದಾಳೆ. ಆದರೆ ಮೊಂಡ ತಾಂಡವ್ ವಿಚಾರದಲ್ಲಿ ಇದು ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೋ ಗೊತ್ತಿಲ್ಲ. ಇನ್ನೊಂದು ವಿಚಾರ ಅಂದರೆ ತಾಂಡವ್, ಶ್ರೇಷ್ಠ ಜೊತೆಗೆ ಪ್ರೀತಿಯಲ್ಲಿರುವ ಒಂದೇ ಒಂದು ಸೀನ್ ಕೂಡ ಬಂದಿದ್ದು ವೀಕ್ಷಕರಿಗೆ ನೆನಪಿಲ್ಲ. ಹೀಗಿರುವಾಗ ಬರೀ ಬಾಯಿ ಮಾತಲ್ಲಷ್ಟೇ ಮದುವೆ ವಿಚಾರ ಬರ್ತಿದೆ. ಮದುವೆ ಆಗೋ ಥರದ ಯಾವೊಂದು ಫೀಲ್ ಕೂಡ ಕಾಣಿಸ್ತಾ ಇಲ್ಲ. ಹೀಗಾಗಿ ತಾಂಡವ್ ಶ್ರೇಷ್ಠ ಸಂಬಂಧದ ಬಗ್ಗೆ ವೀಕ್ಷಕರಲ್ಲಿ ಅಂಥಾ ಸೀರಿಯಸ್ ನೆಸ್ ಏನೂ ಇಲ್ಲ. ಬರೀ ತಾಳಿ ಕಟ್ಟೋದಷ್ಟೇ ಮದುವೆ ಅಲ್ಲ, ಸಂಬಂಧವನ್ನು ಯಾವುದೋ ಒಂದು ಆಚರಣೆ ನಿರ್ಧರಿಸೋದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಲಾರದಷ್ಟು ಬುದ್ದುಗಳು ಅವರಾಗಿಲ್ಲ ಅನ್ನೋದು ಅವರ ಕಾಮೆಂಟ್ ಗಳಿಂದಲೇ ಗೊತ್ತಾಗ್ತಿದೆ.

ಇಷ್ಟಾದರೂ ಸೋಷಿಯಲ್ ಮೀಡಿಯಾದಲ್ಲಿ ಬರ್ತಿರೋ ಕಾಮೆಂಟ್ ಸೀರಿಯಲ್ ಟಿಆರ್‌ಪಿ ಮೇಲೇನೂ ಪರಿಣಾಮ ಬೀರಿದ ಹಾಗಿಲ್ಲ. ವಾರಗಳ ಕೆಳಗೆ ಕುಸುಮಕ್ಕ ಮದುವೆ ಮನೆಗೆ ಟ್ರಾಕ್ಟರ್ ನುಗ್ಗಿಸಿದಾಗ ಟಿಆರ್‌ಪಿ ಸಾಕಷ್ಟು ಮೇಲೇರಿತ್ತು. ಆಮೇಲಿಂದಲೂ ಇದರಲ್ಲಿರುವ ಡ್ರಾಮಾ ಅಂಶಗಳಿಗಾಗಿ ಜನ ಇದನ್ನು ನೋಡ್ತಾರೆ. ಭಾಗ್ಯ ಚಂದ ಕಾಣೋದು ಅವರಿಗೂ ಇಷ್ಟವೇ. ಆದರೆ ಈ ಅಪ್ರೋಚ್ ಯಾಕೋ ಇಷ್ಟವಾದ ಹಾಗಿಲ್ಲ. ಇದು ಹೆಣ್ಣಿನ ಸ್ವಾತಂತ್ರ್ಯದ ಮೇಲಾಗುತ್ತಿರುವ ದಾಳಿ ಅನ್ನೋ ಥರ ಜನ ರಿಯಾಕ್ಟ್ ಮಾಡುತ್ತಿದ್ದಾರೆ. ಇನ್ನೊಂದೆಡೆ ಭಾಗ್ಯಾಗೆ ತಾಂಡವ್ ಶ್ರೇಷ್ಠಾಳನ್ನು ಮದುವೆ ಆಗಲು ಹೊರಟ ವಿಷಯ ಇನ್ನೂ ಗೊತ್ತಿಲ್ಲ.

ಲಕ್ಷ್ಮೀ ಬಾರಮ್ಮ ಸೀರಿಯಲ್‌ಗೆ ಹೊಸ ಎಂಟ್ರಿ... ಕೀರ್ತಿನೆ‌ ಪ್ಲಾಸ್ಟಿಕ್ ಸರ್ಜರಿ ಮಾಡಿ ಬಂದಿರೋದು ಅಂತಿದ್ದಾರೆ ಜನ !

ಅವಳಿಗೆ ಎಲ್ಲಾ ಸತ್ಯ ಹೇಳಲು ಧರ್ಮರಾಜ್‌ ಹಾಗೂ ಕುಸುಮಾ ನಿರ್ಧರಿಸಿದರೂ, ಕೊನೆಗೆ ಅವಳಿಗೆ ಯಾವ ನಿಜವೂ ತಿಳಿಯಬಾರದು, ಇದರಿಂದ ಅವಳಿಗೆ ಬಹಳ ನೋವಾಗುತ್ತದೆ ಎಂದು ಕುಸುಮಾ ಮನಸ್ಸು ಬದಲಿಸುತ್ತಾಳೆ. ಭಾಗ್ಯಾಗೆ ಸುಳ್ಳು ಹೇಳಿ ಶ್ರೇಷ್ಠಾಗೆ ಕುಸುಮಾ ಊಟ ತೆಗೆದುಕೊಂಡು ಹೋಗುತ್ತಾಳೆ. ಆದರೆ ತಾಯಿಯನ್ನು ಹಿಂಬಾಲಿಸಿ ಬಂದ ತಾಂಡವ್‌ಗೆ ಸತ್ಯ ಗೊತ್ತಾಗುತ್ತೆ. ಅವನು ಹಳೇ ರಾಗವನ್ನೇ ಮತ್ತೆ ಮತ್ತೆ ಹಾಡುತ್ತಾನೆ.

 

click me!