ಯುಪಿಐ ಬಳಕೆದಾರರಿಗೆ ಗುಡ್​ ನ್ಯೂಸ್​: ಪ್ರತಿ ವಹಿವಾಟು ಹಾಗೂ ವ್ಯಾಲೆಟ್​ ಹಣದ ಮಿತಿ ಹೆಚ್ಚಳ

By Suchethana D  |  First Published Oct 9, 2024, 5:53 PM IST

 ಯುಪಿಐ ಬಳಕೆದಾರರಿಗೆ ಗುಡ್​ ನ್ಯೂಸ್ ಕೊಟ್ಟಿದೆ ರಿಸರ್ವ್​ ಬ್ಯಾಂಕ್​.​ ಪ್ರತಿ ವಹಿವಾಟಿನ ಜೊತೆಗೆ  ವ್ಯಾಲೆಟ್​ ಹಣದ ಮಿತಿ ಹೆಚ್ಚಳ ಮಾಡಿದೆ. ಡಿಟೇಲ್ಸ್​ ಇಲ್ಲಿದೆ... 
 


ಡಿಜಿಟಲ್​ ಪೇಮೆಂಟ್​ ವಹಿವಾಟು ಹೆಚ್ಚಳವಾಗುತ್ತಿದ್ದಂತೆಯೇ  Unified Payments Interface ಅಂದರೆ ಯುಪಿಐ ನೀತಿಯೂ ಬದಲಾಗಿದೆ.   ಯುಪಿಐ ಲೈಟ್ ಬಳಕೆದಾರರಿಗೆ ಹಣದ ಮಿತಿಯನ್ನು ಹೆಚ್ಚಳ ಮಾಡಲಾಗಿದೆ ಮಾತ್ರವಲ್ಲದೇ ವ್ಯಾಲೆಟ್​ನಲ್ಲಿ ಇರಿಸಬಹುದಾದ ಹಣದ ಮಿತಿಯಲ್ಲಿಯೂ ಏರಿಕೆ ಮಾಡಲಾಗಿದೆ. ಈ ಕುರಿತು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಪತ್ರಿಕಾಗೋಷ್ಠಿ ಮೂಲಕ ಮಾಹಿತಿ ನೀಡಿದ್ದಾರೆ. ಇಲ್ಲಿಯವರೆಗೆ ಒಂದು ಟ್ರಾನ್ಸಾಕ್ಷನ್​ಗೆ 500 ರೂಪಾಯಿ ಮಾತ್ರ ಕಳುಹಿಸಬಹುದಾಗಿತ್ತು.  ಅದನ್ನು ಈಗ  ಒಂದು ಸಾವಿರಕ್ಕೆ ಏರಿಸಲಾಗಿದೆ. ಅದೇ ರೀತಿ ಯುಪಿಐ ಲೈಟ್ ವ್ಯಾಲೆಟ್‌ನಲ್ಲೂ 5 ಸಾವಿರ ರೂಪಾಯಿಗಳನ್ನು  ಇಟ್ಟುಕೊಳ್ಳಬಹುದಾಗಿದೆ. ಇಲ್ಲಿಯವರೆಗೆ ಇದರ ಮಿತಿ 2,500 ಮಾತ್ರ ಆಗಿತ್ತು. ಪಿನ್ ಕೋಡ್ ಇಲ್ಲದೇ ಹಣ ಪಾವತಿಸಬಲ್ಲಂತಹ ಯುಪಿಐ ಲೈಟ್ ವ್ಯಾಲಟ್​ನ ಹಣದ ಮಿತಿಯನ್ನು ಎರಡು ಸಾವಿರ ರೂನಿಂದ ಐದು ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ.

ಇಷ್ಟೇ ಅಲ್ಲದೇ,  ಯುಪಿಐ 123ಪೇ ಮೂಲಕ ನಡೆಯುವ ಪ್ರತಿ ವಹಿವಾಟು ಮಿತಿಯನ್ನು 5 ಸಾವಿರ ರೂಪಾಯಿಗಳಿಂದ 10 ಸಾವಿರ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.   ಫೀಚರ್ ಫೋನ್​ನಲ್ಲಿ ಬಳಸಲಾಗುವ ಯುಪಿಐ123ಪೇನಲ್ಲಿ ವಹಿವಾಟು ಮಿತಿಯನ್ನು ಐದು ಸಾವಿರ ರೂನಿಂದ ಹತ್ತು ಸಾವಿರ ರೂಪಾಯಿಗೆ ಹೆಚ್ಚಳ ಮಾಡಿರುವುದಾಗಿ ಶಕ್ತಿಕಾಂತ್​ ದಾಸ್​ ತಿಳಿಸಿದ್ದಾರೆ.   ಭಾರತದಲ್ಲಿ ಈಗಲೂ ಬಹಳ ಸಂಖ್ಯೆಯಲ್ಲಿ ಫೀಚರ್ ಫೋನ್ ಬಳಕೆದಾರರಿದ್ದಾರೆ. ಎನ್​ಪಿಸಿಐ ಸಂಸ್ಥೆ ಈ ಫೀಚರ್ ಫೋನ್ ಬಳಕೆದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಯುಪಿಐ123ಪೆ ಸೌಲಭ್ಯವನ್ನು ರೂಪಿಸಿದೆ. ಇಂಟರ್ನೆಟ್ ಕನೆಕ್ಷನ್ ಇಲ್ಲದೇ ಹಣದ ವಹಿವಾಟು ನಡೆಸಬಹುದು ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ.

Latest Videos

undefined

ಒಂದು ಲಕ್ಷ ಠೇವಣಿಗೆ 50 ಸಾವಿರ ರೂ. ಬಡ್ಡಿ: ಎಲ್ಲಕ್ಕಿಂತ ಬೆಸ್ಟ್‌ ಅಂಚೆ ಇಲಾಖೆಯ ಎಫ್‌ಡಿ!

ಇನ್ನು ಯುಪಿಐ ಬಳಕೆದಾರರು ಪ್ರತಿನಿತ್ಯವೂ ಏರುತ್ತಿರುವ ಕುರಿತು ಅವರು ಮಾಹಿತಿ ನೀಡಿದ್ದಾರೆ. ಭಾರತದ ಅರ್ಥ ವ್ಯವಸ್ಥೆಯಲ್ಲಿ ಹಣಕಾಸು ವಹಿವಾಟಿನ ಚಿತ್ರಣವನ್ನೇ ಬದಲಾಯಿಸಿದೆ. ವಿಕಸಿತ ಭಾರತದ ಪರಿಕಲ್ಪನೆಯಲ್ಲಿ ಇದರ ಪಾಲು ಬಹು ದೊಡ್ಡದಾಗಿದೆ.  ಡಿಜಿಟಲ್ ಪಾವತಿ ಮೂಲಕ ಎಲ್ಲರನ್ನೂ ಹಣಕಾಸು ವ್ಯವಸ್ಥೆಯೊಳಗೆ ತಂದಿರುವ ಯುಪಿಐ ನಿರಂತರ ಹೊಸ ಅನ್ವೇಷಣೆ ಮತ್ತು ಅದನ್ನು ಜಾರಿಗೊಳಿಸುವ ಮೂಲಕ ಜನರನ್ನು ಅರ್ಥ ವ್ಯವಸ್ಥೆಯಲ್ಲಿ ಮುನ್ನಡೆಸುತ್ತಿದೆ ಎಂದಿದ್ದಾರೆ.  ಇನ್ನು (UPI 123 Pe) ಯುಪಿಐ123ಪೇ ಫೀಚರ್​ನಲ್ಲಿ ಡುಯಲ್ ಟೋನ್ ಮಲ್ಟಿ ಫ್ರೀಕ್ವೆನ್ಸಿ (DTMF) ತಂತ್ರಜ್ಞಾನ ಅಳವಡಿಸಲಾಗಿದೆ. ಹಣದ ವಹಿವಾಟಿಗೆ ಇದು ಅಕೌಂಟ್ ನಂಬರ್ ಮತ್ತು ಫೋನ್ ನಂಬರ್ ಅನ್ನು ಬಳಸುತ್ತದೆ. ಐವಿಆರ್ ನಂಬರ್ ಕರೆ ಮಾಡುವುದು, ಮಿಸ್ಡ್ ಕಾಲ್ ಕೊಡುವುದು ಇತ್ಯಾದಿ ಮೂಲಕ ಹಣದ ಪಾವತಿ ಮಾಡಬಹುದು ಎಂದಿದ್ದಾರೆ. 

 ಯುಪಿಐ 123ಪೇ ಹಾಗೂ ಯುಪಿಐ ಲೈಟ್​ ಕುರಿತು ಹೇಳುವುದಾದರೆ,  ಯುಪಿಐ 123ಪೇ ಅನ್ನು 2022ರಲ್ಲಿ ಪರಿಚಯಿಸಲಾಗಿದೆ. ಇದು ಫೀಚರ್‌ ಫೋನ್‌ ಬಳಕೆದಾರರಿಗಾಗಿ ಮಾಡಲಾಗಿದ್ದು, 12 ಭಾಷೆಗಳಲ್ಲಿ ಬಳಕೆದಾರರಿಗೆ ಡಿಜಿಟಲ್ ವಹಿವಾಟಿಗೆ ನೆರವಾಗುತ್ತಿದೆ. ಪ್ರಸ್ತುತ ಇದರ ಪಾವತಿ ಮಿತಿ 5 ಸಾವಿರ ರೂಪಾಯಿ ಇತ್ತು. ಅದೀಗ  10 ಸಾವಿರಕ್ಕೆ  ಏರಿಕೆಯಾಗಲಿದೆ.    ಯುಪಿಐ ಲೈಟ್‌ ಅನ್ನು ಕೂಡ ಇದೇ ವರ್ಷ ಪರಿಚಯಿಸಲಾಗಿದೆ.  ಇದು ಕಡಿಮೆ ಮೌಲ್ಯದ ವಹಿವಾಟುಗಳನ್ನು ಅತಿ ಶೀಘ್ರದಲ್ಲಿ ಮತ್ತು ತುಂಬಾ ಸುಲಭವಾಗಿ  ನೆರವೇರಿಸಲು ಸಹಕಾರಿಯಾಗಿದೆ. ಪ್ರಸ್ತುತ ಪ್ರತಿ ವಹಿವಾಟಿನಲ್ಲಿ ಹಾಲಿ ಗರಿಷ್ಠ 500 ರೂಪಾಯಿ ಪಾವತಿಸಬಹುದಿತ್ತು   ವ್ಯಾಲೆಟ್‌ನಲ್ಲಿ ಗರಿಷ್ಠ 2 ಸಾವಿರ ರೂಪಾಯಿ ಇಟ್ಟುಕೊಳ್ಳಬಹುದಿತ್ತು. ಈಗ ಅದನ್ನು ಕ್ರಮವಾಗಿ ಒಂದು ಸಾವಿರ ಮತ್ತು  5 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿ ಹೊಸ ಮಾರ್ಗಸೂಚಿಯನ್ನು ಎನ್‌ಪಿಸಿಐ ಶೀಘ್ರ ಪ್ರಕಟಿಸಲಿದ್ದು, ನಂತರ ಜಾರಿಗೆ ಬರಲಿದೆ.

ಸುಕನ್ಯಾ ಸಮೃದ್ಧಿ ಯೋಜನೆಗೆ ಹೊಸ ನಿಯಮ ಜಾರಿ: ಈ ನಿಯಮ ಪಾಲಿಸದಿದ್ದರೆ ಅಕೌಂಟ್ ಕ್ಯಾನ್ಸಲ್!
 

click me!