ಚೀನಾದ ನಂತರ ಕೊರೊನಾದಿಂದ ತತ್ತರಿಸುತ್ತಿರುವ ದೇಶ ಅಂದರೆ ಇಟಲಿ. ಯುರೋಪಿನ ಮಧ್ಯಭಾಗದಲ್ಲಿರುವ ಈ ಪುಟ್ಟ ದೇಶದಲ್ಲಿ ಜನ ತತ್ತರಿಸಿಹೋಗಿದ್ದಾರೆ. ಇದುವರೆಗೆ ಅಲ್ಲಿ 3405 ಮಂದಿ ಕೊರೊನಾ ವೈರಸ್‌ನಿಂದಾಗಿ ಸತ್ತಿದ್ದಾರೆ. ಅಲ್ಲಿ ಅಷ್ಟೊಂದು ಅನಾಹುತ ಆಗಲು ಕಾರಣವಾದರೂ ಏನು?
ಚೀನಾದ ನಂತರ ಕೊರೊನಾದಿಂದ ತತ್ತರಿಸುತ್ತಿರುವ ದೇಶ ಅಂದರೆ ಇಟೆಲಿ. ಯುರೋಪಿನ ಮಧ್ಯಭಾಗದಲ್ಲಿರುವ ಈ ಪುಟ್ಟ ದೇಶದಲ್ಲಿ ಜನ ತತ್ತರಿಸಿಹೋಗಿದ್ದಾರೆ. ಇದುವರೆಗೆ ಅಲ್ಲಿ 3405 ಮಂದಿ ಕೊರೋನಾ ವೈರಸ್‌ನಿಂದಾಗಿ ಸತ್ತಿದ್ದಾರೆ. ಇದು ಚೀನಾಕ್ಕಿಂತ ಹೆಚ್ಚು. ಅಲ್ಲಿ ಸತ್ತವರು 3249 ಮಂದಿ. ಇಟೆಲಿಯಲ್ಲಿ ಸುಮಾರು 40,000 ಮಂದಿ ಕೊರೋನಾ ಪೀಡಿತರಾಗಿದ್ದಾರೆ. ಇಷ್ಟೊಂದು ಭಯಾನಕವಾದ ಮೃತ್ಯು ತಾಂಡವವನ್ನು ಇಟಲಿ ಕಂಡಿರಲೇ ಇಲ್ಲ. ನಮ್ಮ ದೇಶ ಎಂಥ ಮಹಾಮಾರಿಯನ್ನಾದರೂ ಎದುರಿಸಲು ಸಿದ್ಧವಿದೆ ಎಂದುಕೊಂಡಿದ್ದ ಅಲ್ಲಿನ ರಾಜಕೀಯ ನಾಯಕರು ಈಗ ತಲೆ ತಗ್ಗಿಸುವಂತಾಗಿದೆ. ಹಾಗಾದರೆ ಅಲ್ಲಿ ಅಷ್ಟೊಂದು ಅನಾಹುತ ಆಗಲು ಕಾರಣವಾದರೂ ಏನು?
ಮುಖ್ಯವಾಗಿ ಅಲ್ಲಿ ಸಂಭವಿಸಿದ್ದು ನಿರ್ಲಕ್ಷ್ಯ. ಚೀನಾದಿಂದ ಆಘಾತಕಾರಿ ಸುದ್ದಿಗಳು ಬರುತ್ತಲೇ ಇದ್ದರೂ ಇಟೆಲಿ ನಿರ್ಲಕ್ಷ್ಯ ಮಾಡಿತು. ವಿಮಾನ ಪ್ರಯಾಣಗಳ್ನು ರದ್ದು ಪಡಿಸಲಿಲ್ಲ. ವಿದೇಶದಿಂದ, ಅದರಲ್ಲೂ ಮುಖ್ಯವಾಗಿ ಚೀನಾದಿಂದ ಬಂದ ಪ್ರವಾಸಿಗರ ಮೇಲೆ ನಿಗಾ ಇಡಲಿಲ್ಲ. ಅವರನ್ನು ಮುಕ್ತವಾಗಿ ಹೋಗಲು ಬಿಟ್ಟಿತು. ಸರಕಾರ ಎಚ್ಚರಿಕೆ ಘೋಷಣೆ ಮಾಡಿತಾದರೂ, ಅದನ್ನು ಹಲವು ಪ್ರಜೆಗಳೂ ಕೇಳಿಸಿಕೊಳ್ಳಲಿಲ್ಲ. ಕೆಲವು ಸೋಂಕಿತರು ಬಹಳ ಮುಕ್ತವಾಗಿ ಎಲ್ಲೆಂದರಲ್ಲಿ ತಿರುಗಾಡಿದರು. ಪಾರ್ಟಿ ಮಾಡಿದರು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು, ಇತರರಿಗೆ ಈ ಸೋಂಕನ್ನು ಮುಕ್ತವಾಗಿ ಹಂಚಿದರು. ಇದು ಮೊದಲ ಹಾಗೂ ಎರಡನೇ ಹಂತದಲ್ಲಿ ಸೋಶಿಯಲ್ ಡಿಸ್ಟೆನ್ಸಿಂಗ್ ಅಥವಾ ಸಾಮಾಜಿಕ ಏಕಾಂತವನ್ನು ಕಟ್ಟೆಚ್ಚರದಿಂದ ಪಾಲಿಸದೆ ಹೋದದ್ದರ ಪರಿಣಾಮ.
ಎರಡನೆಯದಾಗಿ, ಇಟಲಿಯಲ್ಲಿ ವೃದ್ಧರ ಸಂಖ್ಯೆ ಹೆಚ್ಚು. ಒಟ್ಟಾರೆ ಜನಸಂಖ್ಯೆಯಲ್ಲಿ ವೃದ್ಧರ ಪಾಲೇ ಸುಮಾರು 65%. ಅದಕ್ಕೆ ಕಾರಣ ಅಲ್ಲಿನ ಸಾಮಾಜಿಕ ವ್ಯವಸ್ಥೆ. ಅಲ್ಲಿನ ಕುಟುಂಬ ವ್ಯವಸ್ಥೆ ಅಷ್ಟೊಂದು ಭದ್ರವಾಗಿಲ್ಲ. ಒಂದೇ ಮಗು ಪಾಲಿಸಿಯನ್ನು ವ್ರತದಂತೆ ಪಾಲಿಸಿಕೊಂಡು ಬಂದಿದ್ದಾರೆ. ಹೀಗಾಗಿ ಯುವಜನತೆಯ ಸಂಖ್ಯೆ ಕಡಿಮೆಯಾಗಿದೆ. ಆದರೆ ವೈದ್ಯಕೀಯ ಸೇವೆ ಚೆನ್ನಾಗಿದ್ದುದರಿಂದ, ವೃದ್ಧರ ಸಾವುಗಳು ಗಣನೀಯವಾಗಿ ಕಡಿಮೆಯಾಗಿ ವೃದ್ಧರ ಸಂಖ್ಯೆ ಹೆಚ್ಚಿತು. ಈಗ ಕೊರೊನಾ ಸೋಂಕು ಅಡರಿಕೊಂಡಿರುವುದೂ ವೃದ್ಧರನ್ನೇ. ಅವರೇ ರೋಗಕ್ಕೆ ಹೆಚ್ಚಾಗಿ ಬಲಿಯಾದವರು. ವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ. ಕೊರೋನಾ ಎಲ್ಲರಿಗೂ ಬರಬಹುದು. ಆದರೆ ಅದು ತೀವ್ರ ದುಷ್ಪರಿಣಾಮ ಬೀರುವುದು ವೃದ್ಧರ ಮೇಲೆ. ವಯಸ್ಸಾದವರಲ್ಲಿ ನ್ಯುಮೋನಿಯಾ ಹಾಗೂ ಉಸಿರಾಟದ ತೊಂದರೆಗಳೂ ಕಾಣಿಸಿಕೊಂಡರೆ ಪರಿಹರಿಸುವುದು ಬಹಳ ಕಷ್ಟ.
ಬದಲಿಸಲಾಗದ ಮನುಷ್ಯನ ಗುಣವನ್ನೇ ಬದಲಾಯಿಸಿದ ಕೊರೋನಾ!
undefined
ಮೂರನೆಯದಾಗಿ, ಅಲ್ಲಿನ ವೈದ್ಯಕೀಯ- ಆರೋಗ್ಯ ವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಇದ್ದಕ್ಕಿದ್ದಂತೆ ಅಲ್ಲಿ ಸೋಂಕಿತರ ಸಂಖ್ಯೆ ಉಲ್ಬಣಾವಸ್ಥೆ ತಲುಪಿತು. ನೂರು ಮಂದಿಗೆ ಸೇವೆ ನೀಡಬಹುದಾದ ಆಸ್ಪತ್ರೆಗೆ ಒಂದೇ ಸಲ ಐನೂರು ಜನ ಬಂದರೆ ವೈದ್ಯರು ಯಾರನ್ನೆಂದು ನೋಡಬಹುದು? ಹತ್ತು ತೀವ್ರ ನಿಗಾ ಘಟಕ ಇರುವಲ್ಲಿ ನೂರು ಮಂದಿ ತೀವ್ರ ಸೋಂಕಿತರು ಬಂದರೆ ಯಾರನ್ನು ಐಸಿಯುನಲ್ಲಿ ಇಡಲು ಸಾಧ್ಯ? ಒಬ್ಬರನ್ನು ಉಳಿಸಿದರೂ ಉಳಿದ ಒಂಬತ್ತು ಮಂದಿಯನ್ನು ಕಳೆದುಕೊಳ್ಳುವುದು ಶತಸ್ಸಿದ್ದ. ಇದಕ್ಕಾಗಿ ತಾತ್ಕಾಲಿಕ ತುರ್ತು ವ್ಯವಸ್ಥೆಗಳನ್ನು ಮಾಡಿಕೊಳ್ಳುವುದಕ್ಕೂ, ಅಂತಾರಾಷ್ಟ್ರೀಯ ನೆರವು ಪಡೆಯುವುದಕ್ಕೂ ಆಸ್ಪದ ನೀಡಲಿಲ್ಲ ಕೊರೊನಾ. ಹುಡುಕು ಹುಡುಕಿ ವೃದ್ಧರನ್ನೇ ಬಡಿದು ಬಡಿದು ಹಾಕಿತು. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ವೃದ್ಧರು ಹುಳಗಳಂತೆ ಸತ್ತರು. ಇವರನ್ನು ಉಳಿಸಿಕೊಳ್ಳಲಾಗದ ವೃದ್ಧರು, ದಾದಿಯರು ಅಸಹಾಯಕರಾಗಿ ಬಿಕ್ಕಿ ಬಿಕ್ಕಿ ಅತ್ತರು. ಎಲ್ಲ ಕೈಮೀರಿ ಹೋಗಿತ್ತು.
ಕೊರೋನಾ ಭಯ ಬೇಡ: ಯಾವುದಕ್ಕೂ ಈ ವಸ್ತುಗಳ ಸ್ಟಾಕ್ ಇರಲಿ
ನಮ್ಮಲ್ಲಿ ಹಾಗಾಗದಂತೆ ಏನು ಮಾಡಬೇಕು? ಇದೇನೂ ಸುಲಭವಲ್ಲ ಆದರೆ ತಡೆಯಬಹುದು. ಇದು ಸೋಂಕು ಪ್ರವೇಶಿಸಿದ ಎರಡನೇ ಹಂತ. ಇದು ಮೂರನೇ ಹಂತಕ್ಕೆ ಹೋಗದಂತೆ ಈಗ ನೋಡಿಕೊಳ್ಳಬೇಕು. ಸೋಂಕಿತರು ಅಥವಾ ಜ್ವರ ನೆಗಡಿ ಇರುವವವರು ಹೊರಗೆ ಹೋಗದೆ ಪ್ರತ್ಯೇಕತೆ ಕಾಪಾಡಿಕೊಳ್ಳೂವುದು, ವಿದೇಶಗಳಿಂದ ಬಂದವರು ಸ್ವಯಂ ನಿಗಾ ಕಾಪಾಡಿಕೊಳ್ಳುವುದು ಇದಕ್ಕೆ ಉಪಾಯ.