ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ಹೆಸರು ಬದಲಿಸುತ್ತಿರುವುದು ಯಾಕೆ ?

Published : Jun 16, 2022, 11:46 AM IST
ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ಹೆಸರು ಬದಲಿಸುತ್ತಿರುವುದು ಯಾಕೆ ?

ಸಾರಾಂಶ

ಕೊರೋನಾ ವೈರಸ್ (Corona virus) ಜಗತ್ತಿನಾದ್ಯಂತ ಜನರನ್ನು ಕಂಗೆಡಿಸಿದ ನಂತರ ಎಲ್ಲೆಡೆ ಮಂಕಿಪಾಕ್ಸ್ (Monkeypox) ಹಾವಳಿ ಶುರುವಾಗಿದೆ. ಈಗಾಗ್ಲೇ ಹಲವು ದೇಶಗಳಲ್ಲಿ ಮಂಕಿಪಾಕ್ಸ್ ಕಾಯಿಲೆ ವ್ಯಾಪಕವಾಗಿ ಹರಡಿಸಿದೆ. ಈ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ (WHO) ಮಂಕಿಪಾಕ್ಸ್ ಹೆಸರು ಬದಲಿಸಲು ಮುಂದಾಗಿದೆ. ಅದ್ಯಾಕೆ ?

ಜಗತ್ತಿನಾದ್ಯಂತ ಮಂಕಿಪಾಕ್ಸ್‌ ಪ್ರಕರಣಗಳು ಏರಿಕೆಯಾಗುತ್ತಿದೆ. ಕೋವಿಡ್‌ ಸಾಂಕ್ರಾಮಿಕದ (Covid-19) ನಂತರ ವಿಶ್ವದಲ್ಲಿ ವೇಗವಾಗಿ ಹಬ್ಬುತ್ತಿರುವ ಮಂಕಿಪಾಕ್ಸ್‌ ಸೋಂಕಿಗೆ (Monkeypox)ಜನರು ತತ್ತರಿಸಿ ಹೋಗಿದ್ದಾರೆ. ನೈಜೀರಿಯಾದಲ್ಲಿ  (Nigeria) ಮಂಕಿಪಾಕ್ಸ್ ಕಾಯಿಲೆಗೆ ಮೊದಲ ವ್ಯಕ್ತಿ ಸಾವನ್ನಪ್ಪಿದ್ದಾರೆ. ಆಫ್ರಿಕಾದ ಮತ್ತೊಂದು ರಾಷ್ಟ್ರವಾದ ಕಾಂಗೋದಲ್ಲಿ (Congo) ಈ ವರ್ಷ 9 ಸೋಂಕಿತರು ಸಾವಿಗೀಡಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಖಚಿತಪಡಿಸಿದೆ. ವಿವಿಧ ದೇಶಗಳಲ್ಲಿ ವೇಗವಾಗಿ ಹಬ್ಬುತ್ತಿರುವ ಸೋಂಕು ಜನರನ್ನು ಚಿಂತೆಗೀಡು ಮಾಡಿದೆ. ಈ ಮಧ್ಯೆ ವಿಜ್ಞಾನಿಗಳ ತಂಡ ಮಂಕಿಪಾಕ್ಸ್ ವೈರಸ್ ಬಗ್ಗೆ ಆತಂಕಕಾರಿ ವಿಚಾರವನ್ನು ಬಹಿರಂಗಗೊಳಿಸಿದೆ.  ಮಂಕಿಪಾಕ್ಸ್‌ ಈ ಹಿಂದೆ 2017ರಲ್ಲಿ ಕಂಡು ಬಂದಿತ್ತು. ಆದ್ರೆ ಸದ್ಯ ಜಗತ್ತಿನಾದ್ಯಂತ ಇರೋ ಸೋಂಕು (Virus) ಇದಕ್ಕಿಂತಲೂ ದುರ್ಬಲ, ಆದ್ರೆ ಅಪಾಯಕಾರಿ ಎಂಬುದನ್ನು ಬಹಿರಂಗಪಡಿಸಿದೆ.

ಮಂಕಿಪಾಕ್ಸ್ (Monkeypox) ಸಹ ಎಲ್ಲೆಡೆ ಹಬ್ಬುತ್ತಾ ಹೋಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಸಮುದಾಯವಾಗಿ ಸೋಂಕು ಹರಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಕೆಲವು ದೇಶಗಳಲ್ಲಿ ಮಂಕಿಪಾಕ್ಸ್ ಸೋಂಕಿನ ಸಮುದಾಯ ಹರಡುವಿಕೆ ವರದಿಯಾಗಿದ್ದು, ಇದು ಅಪಾಯಕಾರಿಯಾಗಿದೆ. 29 ದೇಶಗಳಿಂದ 1,000ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಈ ಮಧ್ಯೆ ಮಂಕಿಪಾಕ್ಸ್ ಅನ್ನು ಆರೋಗ್ಯ ತುರ್ತುಸ್ಥಿತಿ ಎಂದು ಪರಿಗಣಿಸಬೇಕೇ ಬೇಡವೇ ಎಂಬುದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಆಲೋಚನೆ ನಡೆಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸಮಿತಿಯು ಮಂಕಿಪಾಕ್ಸ್ ಸೋಂಕಿನ ಹೆಸರನ್ನು ಬದಲಾಯಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ತಾರತಮ್ಯರಹಿತ ಹಾಗೂ ಕಳಂಕ ರಹಿತ ಹೆಸರಿಗಾಗಿ ವಿಜ್ಞಾನಿಗಳು ಕರೆ ನೀಡಿರುವ ಬೆನ್ನಲ್ಲೇ ಇಂಥದೊಂದು ಬೆಳವಣಿಗೆ ನಡೆದಿದೆ.

ಮಂಕಿಪಾಕ್ಸ್ ವೈರಸ್‌ 2017ರಲ್ಲಿ ಕಂಡು ಬಂದ ಸೋಂಕಿಗಿಂತಲೂ ದುರ್ಬಲ, ಆದರೆ ಹೆಚ್ಚು ಅಪಾಯಕಾರಿ !

ಮಂಕಿಪಾಕ್ಸ್ ವೈರಸ್ ಹೆಸರು ಬದಲಿಸಲು ತಜ್ಞರ ಸಭೆ
ಮಂಕಿಪಾಕ್ಸ್ ವೈರಸ್ ಹೆಸರು ಬದಲಾಯಿಸುವುದಕ್ಕೆ ಸಂಬಂಧಿಸಿದ ವಿಷಯದ ಮೇಲೆ ತಜ್ಞರು ಕೆಲಸ ಮಾಡುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಟೆಡ್ರೊಸ್ ಅಧಾನಾಮ್ ಗೆಬ್ರೆಯೆಸಸ್ ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ಮಂಕಿಪಾಕ್ಸ್ ವೈರಸ್‌ನ ಹೆಸರು, ಅದರ ಲಕ್ಷಣ, ಅದು ಉಂಟುಮಾಡುವ ರೋಗದ ಮೇಲೆ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ನಾವು ಸಾಧ್ಯವಾದಷ್ಟು ಬೇಗ ಹೊಸ ಹೆಸರಿನ ಕುರಿತು ಪ್ರಕಟ ಮಾಡುತ್ತೇವೆ ಎಂದು ಗೆಬ್ರೆಯೆಸಸ್ ತಿಳಿಸಿದ್ದಾರೆ. 

ಜಗತ್ತಿನಾದ್ಯಂತ 30ಕ್ಕೂ ಹೆಚ್ಚು ವಿಜ್ಞಾನಿಗಳ ತಂಡವು ಮಂಕಿಪಾಕ್ಸ್ ರೋಗದ ಹೆಸರನ್ನು ಬದಲಾಯಿಸಲು ಕರೆ ನೀಡಿದ್ದಾರೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಯು ಈ ಕುರಿತು ಸಮಾಲೋಚನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ಮಂಕಿಪಾಕ್ಸ್ ಸೋಂಕಿನಲ್ಲಿ ಎರಡು ತಳಿಗಳನ್ನು ಪತ್ತೆ ಮಾಡಿದೆ. ಮಂಕಿಪಾಕ್ಸ್ ರೋಗದಲ್ಲಿ ಒಂದು ಮದ್ಯ ಆಫ್ರಿಕನ್ ಕ್ಲಾಡ್ ಆಗಿದ್ದರೆ, ಇನ್ನೊಂದು ಪಶ್ಚಿಮ ಆಫ್ರಿಕನ್ ಕ್ಲಾಡ್ ಎಂದು ಗುರುತಿಸಲಾಗಿದೆ. ಈ ನಿಟ್ಟಿನಲ್ಲಿ ಸೋಂಕಿತರಲ್ಲಿ ಎರಡು ರೀತಿ ತಳಿಗಳು ಪತ್ತೆ ಆಗಿರುವುದನ್ನು ಗುರುತು ಮಾಡಿಕೊಳ್ಳಲಾಗಿದೆ.

ಕಳಂಕರಹಿತ ಹೆಸರನ್ನು ಇಡಲು ನಿರ್ಧಾರ
ಮಂಕಿಪಾಕ್ಸ್ ವೈರಸ್‌ ಸಮುದಾಯ ಪ್ರಸರಣವನ್ನು ಖಚಿತಪಡಿಸುತ್ತದೆ. ಮಕ್ಕಳು ಮತ್ತು ಗರ್ಭಿಣಿಯರು ಅಪಾಯದಲ್ಲಿದ್ದಾರೆ ಎಂದು WHO ಹೇಳಿದೆ. ಜನರ ಮಧ್ಯೆ ಸುಲಭವಾಗಿ ಹರಡುತ್ತಿರುವ ಈ ಸೋಂಕು ಗರ್ಭಿಣಿಯರು, ಮಕ್ಕಳು ಮತ್ತು ದುರ್ಬಲ ವ್ಯಕ್ತಿಗಳಿಗೆ, ರೋಗ ನಿರೋಧಕ ಶಕ್ತಿ ಕಡಿಮೆಯಿರುವ ವ್ಯಕ್ತಿಗಳಿಗೆ ಬೇಗನೇ ತಗಲುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಆಫ್ರಿಕಾ ಅಥವಾ ಪಶ್ಚಿಮ ಆಫ್ರಿಕಾ ಅಥವಾ ನೈಜೀರಿಯಾಕ್ಕೆ ನಂಟು ಹೊಂದಿರುವ ಬಗ್ಗೆ ಮಾಧ್ಯಮಗಳಲ್ಲಿ ಅನೇಕ ವಿಜ್ಞಾನಿಗಳು ತಿಳಿಸುತ್ತಿದ್ದಾರೆ. ಜಾಗತಿಕ ಆರೋಗ್ಯ ಸಮುದಾಯಕ್ಕೆ ತಟಸ್ಥ, ತಾರತಮ್ಯ ಮತ್ತು ಕಳಂಕರಹಿತ ಹೆಸರನ್ನು ಇರಿಸುವುದು ಹೆಚ್ಚು ಸೂಕ್ತವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಲೈಂಗಿಕ ಸಂಪರ್ಕದ ಮೂಲಕವೂ ಹರಡುತ್ತಂತೆ ಮಂಕಿಪಾಕ್ಸ್ ವೈರಸ್ !

ಮಂಕಿಪಾಕ್ಸ್ ಪತ್ತೆ ಆಗಿರುವ ಕ್ರಮದಲ್ಲಿ 1, 2, ಮತ್ತು 3 ಕ್ರಮದಲ್ಲಿಯೇ ಹೆಸರು ಬದಲಾಯಿಸುವುದಕ್ಕೆ ವಿಜ್ಞಾನಿಗಳು ಪ್ರಸ್ತಾಪಿಸಿದ್ದಾರೆ. ಇವುಗಳಲ್ಲಿ ಪಶ್ಚಿಮ ಆಫ್ರಿಕಾ, ಮಧ್ಯ ಆಫ್ರಿಕನ್, ಮತ್ತು ಜಾಗತಿಕ ಉತ್ತರ ದೇಶಗಳಲ್ಲಿನ ಘಟನೆಗಳು ಮತ್ತು ಮನುಷ್ಯ ಮತ್ತು ಮನುಷ್ಯರಲ್ಲದ ಇತರೆ ಜೀವಿಗಳಿಂದ ಸ್ಥಳೀಯವಾಗಿ ಹರಡಿರುವ ವೈರಲ್ ಜೀನೋಮ್‌ಗಳು ಸೇರಿವೆ. ಅವರು ಕ್ಲಾಡ್ 1 ಅನ್ನು ಕಾಂಗೋ ಬೇಸಿನ್ ಕ್ಲಾಡ್‌ಗೆ ಸೇರಬೇಕೆಂದು ಪ್ರಸ್ತಾಪಿಸಿದ್ದಾರೆ. 2 ಮತ್ತು 3 ಕ್ಲಾಡ್‌ಗಳು ಹಿಂದಿನ "ವೆಸ್ಟ್ ಆಫ್ರಿಕನ್ ಕ್ಲಾಡ್" ಗೆ ಸಂಬಂಧಿಸಿವೆ.

ಇಲ್ಲಿಯವರೆಗೆ ಒಟ್ಟು 1600 ಮಂಕಿಪಾಕ್ಸ್ ಪ್ರಕರಣಗಳು ವರದಿ 
ಇಲ್ಲಿಯವರೆಗೆ ಜಗತ್ತಿನ 39 ರಾಷ್ಟ್ರಗಳಲ್ಲಿ ಒಟ್ಟು 1600 ಮಂಕಿಪಾಕ್ಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. 1500 ಶಂಕಿತ ಪ್ರಕರಣಗಳು ಕಂಡು ಬಂದಿವೆ. ಈ ಹಿನ್ನೆಲೆ ಮಂಕಿಪಾಕ್ಸ್ ಕುರಿತು ಆರೋಗ್ಯ ತುರ್ತು ಪರಿಸ್ಥಿತಿ ಎಂದು ಪರಿಗಣಿಸುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು ಆಲೋಚನೆ ನಡೆಸುತ್ತಿದೆ. ಮಂಕಿಪಾಕ್ಸ್ ಅನ್ನು ಅಂತರಾಷ್ಟ್ರೀಯ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸುವುದು, ಕೋವಿಡ್ -19 ಸಾಂಕ್ರಾಮಿಕದಂತೆಯೇ ಭಾವಿಸಲಾಗುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?