
ಹೆರಿಗೆ ನಂತರ ಆಗುವ ಮೊದಲ ಪಿರೇಡ್ಸ್ ಬಗ್ಗೆ ಅನೇಕ ಹೊಸ ತಾಯಂದಿರು ಗೊಂದಲಕ್ಕೊಳಗಾಗಿರುತ್ತಾರೆ. ಪಿರೇಡ್ಸ್ ವಿಳಂಬವಾದಷ್ಟು ಆತಂಕ ಅವರನ್ನು ಕಾಡುತ್ತಿರುತ್ತದೆ. ಮಗು ಜನಿಸಿದ ನಂತರ ಆಗುವ ಮೊದಲ ಸಹಜ ಋತುಸ್ರಾವ ಅಥವಾ ಪಿರೇಡ್ಸ್ ತುಂಬಾ ವಿಭಿನ್ನವಾಗಿರುತ್ತದೆ. ಅನೇಕ ಮಹಿಳೆಯರು ಇದರಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಮಗು ಒಂಬತ್ತು ತಿಂಗಳ ಕಾಲ ತಾಯಿಯ ಗರ್ಭದಲ್ಲಿ ಬೆಳವಣಿಗೆ ಹೊಂದುತ್ತಿರುವಾಗ, ತಾಯಿಯ ದೇಹವು ಬಾಹ್ಯವಾಗಿ ಮಾತ್ರವಲ್ಲದೆ ಆಂತರಿಕವಾಗಿಯೂ ಅನೇಕ ಬದಲಾವಣೆಗಳಿಗೆ ಒಳಗಾಗುತ್ತದೆ. ಇದರಿಂದಾಗಿ ಹೆರಿಗೆಯ ನಂತರ ಸಾಮಾನ್ಯ ಪಿರೇಡ್ಸ್ ಆರಂಭವಾಗಲು ಕೆಲವೊಮ್ಮೆ ತುಂಬಾ ವಿಳಂಬವಾಗುತ್ತದೆ. ಕೆಲವೊಮ್ಮೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಕೆಲವು ಮಹಿಳೆಯರಿಗೆ 40 ದಿನಕ್ಕೆಲ್ಲಾ ಮತ್ತೆ ಎಂದಿನಂತೆ ಸಹಜವಾಗಿ ಪಿರೇಡ್ಸ್ ಆದರೆ ಕೆಲವರಿಗೆ ಹೆರಿಗೆಯಾಗಿ ಒಂದು ವರ್ಷವಾದರೂ ಪಿರೇಡ್ಸ್ ಆಗಿರುವುದಿಲ್ಲ, ಇದರ ಜೊತೆಗೆ ನಿಮಗೆ ಹೆರಿಗೆ ನಂತರ ಮೊದಲ ಪಿರೇಡ್ಸ್ ಆದರೆ ಅದರ ಮುಂದಿನ ತಿಂಗಳು ಕೂಡ ಪಿರೇಡ್ಸ್ ಆಗಬೇಕಾಗಿರುವುದು ತುಂಬಾ ಅಗತ್ಯ. ಒಂದು ವೇಳೆ ಆ ಸಂದರ್ಭದಲ್ಲಿ ಪಿರೇಡ್ಸ್ ಮಿಸ್ ಆಗಿದೆ ಎಂದಾದಲ್ಲಿ ನೀವು ಮತ್ತೆ ಗರ್ಭ ಧರಿಸುವ ಸಾಧ್ಯತೆಯೂ ಇರುತ್ತದೆ.
ಪಿರೇಡ್ಸ್ ನೋವಿನ ಅನುಭವ ಪಡೆಯಲು ಮಾಲ್‌ನಲ್ಲಿ ಕ್ಯೂ ನಿಂತ ಯುವಕರು
ಮೊದಲ ಪಿರೇಡ್ಸ್ ಸ್ತನ್ಯಪಾನ ಮಾಡುವುದನ್ನು ಅವಲಂಬಿಸಿರುತ್ತದೆ.
ತಾಯಿ ಮಗುವಿಗೆ ಹಾಲುಣಿಸುತ್ತಿದ್ದರೆ, ಮೊದಲ ಪಿರೇಡ್ಸ್ ಕಾಣಿಸಿಕೊಳ್ಳಲು 8 ವಾರಗಳು ಅಥವಾ ಅದಕ್ಕಿಂತಲೂ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬಹುದು. ಆದರೆ ಮಗುವಿಗೆ ಸ್ತನ್ಯಪಾನ ಮಾಡಿಸದೇ ಇದ್ದಲ್ಲಿ 6-8 ವಾರಗಳ ಒಳಗೆ ಪಿರೇಡ್ಸ್ ಆಗಬಹುದು.
ಹೆರಿಗೆಯ ನಂತರ ಮೊದಲ ಪಿರೇಡ್ಸ್ ಹೇಗಿರುತ್ತದೆ.
ಹೇಗೆ ಪ್ರತಿ ಮಹಿಳೆಯ ದೇಹ ಪ್ರಾಕೃತಿ ವಿಭಿನ್ನವಾಗಿರುತ್ತದೋ ಅದೇ ರೀತಿ ಹೆರಿಗೆಯ ನಂತರದ ಮೊದಲ ಪಿರೇಡ್ಸ್‌ನ ಅನುಭವವೂ ಒಬ್ಬೊಬ್ಬರಿಗೆ ಒಂದೊಂದು ರೀತಿಯದ್ದಾಗಿರುತ್ತದೆ. ಸಾಮಾನ್ಯವಾಗಿ ಹೊಟ್ಟೆಯ ಸುತ್ತ ತೀವ್ರವಾದ ನೋವಿರುತ್ತದೆ. ರಕ್ತಸ್ರಾವದ ಪ್ರಮಾಣವೂ ತೀವ್ರವಾಗಿರುತ್ತದೆ. ಅಲ್ಲದೇ ಈ ಪಿರೇಡ್ಸ್ ಬ್ಲಡ್‌ನಲ್ಲಿ ರಕ್ತದ ಗಟ್ಟಿಗಳು ಇರುವ ಸಾಧ್ಯತೆ ಇದೆ. ಅಲ್ಲದೇ ನಿಯಮಿತವಾಗಿ ಪಿರೇಡ್ಸ್ ಆಗದೇ ಇರುವ ಸಾಧ್ಯತೆ ಕೂಡ ಇರುತ್ತದೆ.
ಮುಟ್ಟು ಅಂಗವೈಕಲ್ಯತೆಯಲ್ಲ, ಮಹಿಳೆಯರ ಪಿರೇಡ್ಸ್ ರಜೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರೋಧ
ಹೆರಿಗೆ ಸೀ ಸೆಕ್ಷನ್ ಅಥವಾ ಸಿಸೇರಿಯನ್ ಆದರೆ ನಂತರದ ಪಿರೇಡ್ಸ್ ಹೇಗಿರುತ್ತದೆ?
ನಿಮಗೆ ಸಿಸೇರಿಯನ್ ಮೂಲಕ ಮಗು ಜನನವಾಗಿದ್ದರೆ, ಸಹಜವಾಗಿ ಹೆರಿಗೆಯಾದವರಿಗೆ ಆಗುವಂತೆ 6 ರಿಂದ 8 ವಾರಗಳಲ್ಲಿ ಪಿರೇಡ್ಸ್ ಆಗಬಹುದು. ಆದರೆ ಸಿ ಸೆಕ್ಷನ್ ಆಗಿರುವುದರಿಂದ ಬ್ಲೀಡಿಂಗ್ ಪ್ರಮಾಣವೂ ಜಾಸ್ತಿ ಇರಬಹುದು ಹಾಗೂ ನೋವಿನ ಪ್ರಮಾಣವೂ ತುಸು ಹೆಚ್ಚಿರಬಹುದು. ಏಕೆಂದರೆ ಸಿ ಸೆಕ್ಷನ್ ಅಪರೇಷನ್ ಸಮಯದಲ್ಲಿ ಗರ್ಭಾವಸ್ಥೆಯಲ್ಲಿ ಒಳಗೆ ಉಳಿದಿರುವ ಎಲ್ಲಾ ಎಂಡೊಮೆಟ್ರಿಯಲ್ ಅಂಗಾಂಶವನ್ನು ತೆಗೆದು ಹಾಕಲಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.