ಐಶ್ವರ್ಯ ರೈ ಮೈತುಂಬಾ ಬಟ್ಟೆ ಧರಿಸ್ತಿರೋ ಹಿಂದಿದೆ ಗಂಭೀರ ಆರೋಗ್ಯ ಸಮಸ್ಯೆ? ತೂಕ ಹೆಚ್ಚಲೂ ಇದೇ ಕಾರಣ!

Published : Sep 26, 2024, 11:40 AM IST
ಐಶ್ವರ್ಯ ರೈ ಮೈತುಂಬಾ ಬಟ್ಟೆ ಧರಿಸ್ತಿರೋ ಹಿಂದಿದೆ ಗಂಭೀರ ಆರೋಗ್ಯ ಸಮಸ್ಯೆ? ತೂಕ ಹೆಚ್ಚಲೂ ಇದೇ ಕಾರಣ!

ಸಾರಾಂಶ

ಪ್ಯಾರೀಸ್​ ಫ್ಯಾಷನ್​ ವೀಕ್​ನಲ್ಲಿ ಕಾಣಿಸಿಕೊಂಡ ಬಳಿಕ ನಟಿ ಐಶ್ವರ್ಯ ರೈ ಆರೋಗ್ಯದ ಕುರಿತು ಹಲವಾರು ಚರ್ಚೆಗಳು ನಡೆಯುತ್ತಿವೆ. ಮೈತುಂಬಾ ಬಟ್ಟೆ, ಮೈತೂಕ ಹೆಚ್ಚಳಕ್ಕೆ ಇದೇ ಕಾರಣನಾ?  

ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈಗೆ ವಯಸ್ಸು 50 ದಾಟಿದರೂ ಇಂದಿಗೂ ಸೌಂದರ್ಯ ಕಾಪಾಡಿಕೊಂಡೇ ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಭಾರಿ ತೂಕದ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಸಾಮಾನ್ಯವಾಗಿ ಇಂಥ ಸ್ಟಾರ್​ ನಟಿಯರು ವಯಸ್ಸು ಎಷ್ಟೇ ಆದರೂ ಡಯೆಟ್​ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ವಯಸ್ಸಾದಂತೆಯೇ ಇನ್ನೂ ಚಿಕ್ಕವರಾಗಿ ಕಾಣಿಸಲು ಕಷ್ಟಪಟ್ಟು ವ್ಯಾಯಾಮ, ಡಯೆಟ್​, ಜಿಮ್​ ಅದೂ ಇದೂ ಎಂದೆಲ್ಲಾ ಮಾಡುತ್ತಾರೆ. ಮಲೈಕಾ ಅರೋರಾ ನೋಡಿ. ಇವರು ಐಶ್ವರ್ಯ ಅವರಿಗಿಂತ ಒಂದು ತಿಂಗಳು ಚಿಕ್ಕವರು ಅಷ್ಟೇ. ಆದರೂ ಹೇಗೆ ಸ್ಲಿಮ್​ ಆಗಿದ್ದಾರೆ. ಸದಾ ಬ್ಯೂಟಿಯ ಕಡೆಗೆ ಗಮನ ಕೊಡುವ ಐಶ್ವರ್ಯ ಮಾತ್ರ ದಿನದಿಂದ ದಿನಕ್ಕೆ ತೂಕ ಏರಿಸಿಕೊಳ್ಳುತ್ತಲೇ ಇರುವುದು ಅವರ ಅಭಿಮಾನಿಗಳ ಚಿಂತೆಗೂ ಕಾರಣವಾಗಿತ್ತು. ಅಷ್ಟೇ ಅಲ್ಲದೇ, ಐಶ್ವರ್ಯ ಇತ್ತೀಚಿನ ದಿನಗಳಲ್ಲಿ ಎಲ್ಲಿಯೇ ಹೋದರೂ ಮೈತುಂಬಾ ಬಟ್ಟೆ ಹಾಕಿಕೊಳ್ಳುತ್ತಿದ್ದಾರೆ. ಮಾಜಿ ವಿಶ್ವ ಸುಂದರಿಯೊಬ್ಬಳು, ಹೀಗೆ ಬಟ್ಟೆ ಧರಿಸಿಕೊಂಡು ಓಡಾಡುವುದರಿಂದ ಭಾರತೀಯ ಸಂಪ್ರದಾಯ ಎಂದೆಲ್ಲಾ ನೆಟ್ಟಿಗರು ಕೊಂಡಾಡುತ್ತಲೇ ಇದ್ದಾರೆ. ಆದರೆ ಇದರ ಹಿಂದಿರುವ ಉದ್ದೇಶವೇ ಬೇರೆ ಎನ್ನಲಾಗಿದೆ!

ಹೌದು. ಮೊನ್ನೆಯಷ್ಟೇ ನಟಿ,   L'Oréal ಪ್ಯಾರಿಸ್ ರಾಯಭಾರಿಯಾಗಿದ್ದರು. ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಆಫ್ ಶೋಲ್ಡರ್ ಗೌನ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಫ್ಯಾಷನ್​ ಷೋನಲ್ಲಿ ಸಾಮಾನ್ಯವಾಗಿ ಧರಿಸುವುದು ಮೈತುಂಬಾ ಬಟ್ಟೆಯಲ್ಲ ಎಂಬ ಹಿನ್ನೆಲೆಯಲ್ಲಿ, ಅವರ ಬಗ್ಗೆ ಹಲವಾರು ರೀತಿಯ ಮಾತುಗಳೂ ಕೇಳಿಬಂದಿದ್ದವು.  ಆದರೆ ಇದರ ಹಿಂದಿರುವುದು ಅವರಿಗೆ ಇರುವ ಗಂಭೀರ ಆರೋಗ್ಯ ಸಮಸ್ಯೆ ಎಂದು  ವೈರಲ್ ರೆಡ್ಡಿಟ್ ಪೋಸ್ಟ್​ನಿಂದ ತಿಳಿದುಬಂದಿದೆ. ಇದೇ ಕಾರಣಕ್ಕೆ ಐಶ್ವರ್ಯಾ ಡಯೆಟ್​ ಮಾಡುತ್ತಿಲ್ಲ. ಡಯೆಟ್​ ಮಾಡುವುದರಿಂದ ಸಮಸ್ಯೆ ಇನ್ನಷ್ಟು ಉಲ್ಭಣಗೊಳ್ಳುವ ಕಾರಣ,  ಕಟ್ಟುನಿಟ್ಟಾದ ಆಹಾರಕ್ರಮ ಅನುಸರಿಸುತ್ತಿಲ್ಲ ಎಂದು ಹೇಳಲಾಗಿದೆ. ಅರೆಬರೆ ಡ್ರೆಸ್​ ಹಾಕಿದರೆ ಅವರ ಮೈಮಾಟವೆಲ್ಲಾ ಕಾಣಿಸುವ ಹಿನ್ನೆಲೆಯಲ್ಲಿ, ಬಾಡಿ ಶೇಮಿಂಗ್​ ಅನುಭವಿಸಬೇಕಾಗುತ್ತದೆ ಎಂದು ಮೈತುಂಬಾ ಬಟ್ಟೆ ಧರಿಸುತ್ತಾರೆ ಎನ್ನುವುದು ಇವರ ವಾದ. 

ಮಕ್ಕಳನ್ನು ಹ್ಯಾಂಡ್​ಬ್ಯಾಗ್​ನಂತೆ ಬಳಸೋದೆಂಥ ಸಂಸ್ಕೃತಿ? ಐಶ್ವರ್ಯ ರೈಗೆ ಮಾಳವಿಕಾ ಅವಿನಾಶ್​ ಹೇಳಿದ್ದಿಷ್ಟು...
  
ಆದರೆ ಈ ಪೋಸ್ಟ್​ ಸಾಕಷ್ಟು ಟೀಕೆಗೆ ಗುರಿಯಾಗಿದ್ದರಿಂದ ಹಾಗೂ ಕಮೆಂಟ್ಸ್​ ಸುರಿಮಳೆಯಾಗುತ್ತಿದ್ದರಿಂದ ಅದನ್ನು ಕೂಡಲೇ ಡಿಲೀಟ್​ ಮಾಡಲಾಗಿದೆ. ಆದರೆ ಇದರಲ್ಲಿ ಐಶ್ವರ್ಯ ರೈಗೆ ಆಪ್ತರು ಎನಿಸಿಕೊಂಡಿರುವವರು ಕೂಡ ಕಮೆಂಟ್​ ಹಾಕಿರುವುದು ಗಮನ ಸೆಳೆದಿದೆ.  ಐಶ್ವರ್ಯಾ ರೈ ನನಗೆ ಹಲವು ವರ್ಷಗಳಿಂದ ಆಪ್ತರು. ಅವರು ಕೆಲವು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. 

ಅದನ್ನು ನಾನು ಇಲ್ಲಿ ಬಹಿರಂಗ ಪಡಿಸುವುದಿಲ್ಲ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಇದೇ ಕಾರಣಕ್ಕೆ  ಡಯೆಟ್ ಮಾಡುವುದಕ್ಕೆ ಆಗುವುದಿಲ್ಲ. ತೂಕ ಇಳಿಸಿಕೊಳ್ಳುವ  ಔಷಧ ಸೇವನೆ ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಕಾರಣ ವೈದ್ಯರು ಅದನ್ನು ಬಳಸದಂತೆ ಎಚ್ಚರಿಕೆ ಕೊಟ್ಟಿದ್ದಾರೆ ಎಂದೂ ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಐಶ್ವರ್ಯಾ ಅವರು ತಾವು ಧರಿಸುವ ಬಟ್ಟೆಗಳ  ಜೊತೆ ಪ್ರಯೋಗ ಮಾಡುವುದಕ್ಕೆ ಹೋಗುತ್ತಿಲ್ಲ.  ದೇಹವನ್ನು ಎಷ್ಟು ಮುಚ್ಚಿಕೊಳ್ಳಲು  ಸಾಧ್ಯವೋ ಅಷ್ಟು ಕವರ್ ಮಾಡಿಕೊಳ್ಳುತ್ತಿದ್ದಾರೆ ಎಂದು ಮತ್ತೆ ಕೆಲವರು ಬರೆದಿದ್ದಾರೆ. ಸತ್ಯ ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಇದರ ನಡುವೆಯೇ, ಕೆಲವು ತಿಂಗಳುಗಳಿಂದ ಐಶ್ವರ್ಯ ಮತ್ತು ಅಭಿಷೇಕ್​ ನಡುವಿನ ವಿಚ್ಛೇದನ ಸುದ್ದಿಗಳು ದಿನಕ್ಕೊಂದರಂತೆ ತಿರುವು ಪಡೆದುಕೊಳ್ಳುತ್ತಲೇ ಸಾಗಿದೆ. 

ಅರ್ಜೆಂಟ್​ ಬಂದ್ರೂ ಬಾತ್​ರೂಮ್​ಗೆ ಹೋಗಲು ಪರದಾಡಿದ್ರಂತೆ ಆಲಿಯಾ! ಸೀರೆ ಫಜೀತಿ ಬಗ್ಗೆ ಹೇಳಿದ್ದೇನು ಕೇಳಿ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌