ನಾಲಿಗೆ ತಿಕ್ಕಬೇಡಿ, ತಲೆ ಸುತ್ತಿದ್ರೆ ಬಿಪಿಯಲ್ಲ ಕಿವಿ ಚೆಕ್​ ಮಾಡ್ಸಿ, ಇಯರ್​ ಬಡ್​ ನಿಲ್ಲಿಸಿ... ಡಾ.ದೀಪಕ್​ ಸಲಹೆ ಏನು?

By Suchethana D  |  First Published Sep 24, 2024, 4:15 PM IST

ನಾಲಿಗೆ ತಿಕ್ಕುವುದು, ಕಿವಿಗೆ ಬಡ್​ ಹಾಕುವುದು, ಕಿವಿಗೆ ಅಷ್ಟು ಮಹತ್ವ ಕೊಡದೇ ಇರುವುದು, ಕಫ ಬಂದಾಗ ಉಗಿಯಲೇಬೇಕು ಎನ್ನುವುದು... ಹೀಗೆ ದಿನನಿತ್ಯ ಸಾಮಾನ್ಯವಾಗಿ  ನಾವು ಮಾಡುವ ತಪ್ಪುಗಳ ಕುರಿತು ಖ್ಯಾತ ಸರ್ಜನ್​ ಡಾ.ದೀಪಕ್ ಹೇಳಿದ್ದೇನು?
 


ದಿನವೂ ನಾವು ಅಳವಡಿಸಿಕೊಳ್ಳುತ್ತಿರುವ ಕ್ರಮದಲ್ಲಿ ಎಷ್ಟೊಂದು ತಪ್ಪುಗಳಿರುತ್ತವೆ. ಕೆಲವೊಂದು ನಮ್ಮ ಅರಿವಿಗೆ ಬಂದರೂ ಅದನ್ನು ಬಿಡಲಾಗದೇ ಆರೋಗ್ಯಕ್ಕೆ ಸಮಸ್ಯೆ ತಂದುಕೊಂಡರೆ, ಮತ್ತೆ ಹಲವು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಬೆಳಿಗ್ಗೆ ಬ್ರಷ್​ ಮಾಡುವುದರಿಂದ ಹಿಡಿದು ರಾತ್ರಿ ಮಲಗುವವರೆಗೂ ಒಂದಿಷ್ಟು ದಿನಚರಿಗಳನ್ನು ಅಳವಡಿಸಿಕೊಂಡಿರುತ್ತೇವೆ. ಆದರೆ ಇದರಲ್ಲಿ ನಾವು ಮಾಡುತ್ತಿರುವ ತಪ್ಪುಗಳು ಅದೆಷ್ಟೋ ಇವೆ. ನಮ್ಮ ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು, ದೇಹದ ಭಾಗಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು ಎನ್ನುವ ಕಾರಣದಿಂದ ಮಾಡುತ್ತಿರುವ ಕ್ರಮಗಳಲ್ಲಿ ಹಲವು ನಮ್ಮ ಅರಿವಿಗೆ ಬಾರದೇ ಸಮಸ್ಯೆ ತಂದೊಡುತ್ತಿವೆ. ಈ ಕುರಿತು ಟ್ರಸ್ಟ್​ವೆಲ್​ ಆಸ್ಪತ್ರೆಯ ಕಿವಿ, ಮೂಗು ಮತ್ತು ನಾಲಿಗೆ ತಜ್ಞ (ENT specialist) ಆಗಿರೋ ಡಾ.ದೀಪಕ್​ ಅವರು ಇದೀಗ ಕುತೂಹಲದ ಮಾಹಿತಿಯೊಂದನ್ನು ಹೇಳಿದ್ದಾರೆ. 

ರ್ಯಾಪಿಡ್​ ರಶ್ಮಿ ಷೋನಲ್ಲಿ ಅವರು ಕಿವಿ, ಮೂಗು, ನಾಲಿಗೆಯ ರಕ್ಷಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಕೆಲವೊಂದು ತಪ್ಪು ಗ್ರಹಿಕೆಗಳ ಬಗ್ಗೆ ತಿಳಿಸಿದ್ದಾರೆ. ಹಲ್ಲು ಕಿತ್ತರೆ ಕಣ್ಣು ಹೋಗುತ್ತೆ, ಮೊಸರು- ಬಾಳೆಹಣ್ಣು ತಿಂದರೆ ಶೀತ ಆಗುತ್ತದೆ... ಹೀಗೆ ಕೆಲವರಲ್ಲಿ ಇರುವ ತಪ್ಪು ಕಲ್ಪನೆಗಳ ಬಗ್ಗೆ ಮಾತನಾಡುತ್ತಲೇ ದಿನನಿತ್ಯವೂ ಬಹುತೇಕ ಮಂದಿ ಮಾಡುವ ತಪ್ಪುಗಳ ಕುರಿತು ಅವರು ಸೂಕ್ಷ್ಮವಾಗಿ ತಿಳಿಸಿದ್ದಾರೆ. ಕಣ್ಣಿನ ರಕ್ಷಣೆ ಮಾಡಿದ್ದಷ್ಟು ಜನರು ಕಿವಿಯ ಬಗ್ಗೆ ಗಮನ ಕೊಡುವುದೇ ಇಲ್ಲ ಎಂದಿರುವ ಡಾ.ದೀಪಕ್​ ಅವರು, ಕಿವಿ ಗುಯ್​ಗುಡುತ್ತಿದ್ದರೆ, 24 ಗಂಟೆಯ ಒಳಗೆ ಚೆಕಪ್​ ಮಾಡಿಸಿಕೊಳ್ಳಿ. ಇಲ್ಲದಿದ್ದರೆ ಮುಂದೆ ಇದು ದೊಡ್ಡ ಸಮಸ್ಯೆಯನ್ನು ತಂದೊಡ್ಡಬಹುದು ಎಂದಿದ್ದಾರೆ. ಕಣ್ಣಿಗೆ ಸ್ವಲ್ಪವೇ ಏನಾದ್ರೂ ಕೂಡಲೇ ಡಾಕ್ಟರ್​ ಬಳಿ ಹೋಗ್ತೀರಿ, ಆದ್ರೆ ಕಿವಿಗೆ ಏನಾದ್ರೂ ಆದ್ರೆ ತಾನಾಗೇ ಸರಿಯಾಗತ್ತೆ ಎಂದು ವಾರಗಟ್ಟಲೆ ಕಾಯುತ್ತೀರಿ. ಹೀಗೆ ಮಾಡೋದು ತಪ್ಪು. 24 ಗಂಟೆ ಒಳಗೆ ಬಂದರೆ ಕಿವಿಯನ್ನು ಕಾಪಾಡಿಕೊಳ್ಳುತ್ತೀರಿ ಎಂದು ಹೇಳಿದ್ದಾರೆ. 

Latest Videos

5 ವರ್ಷದೊಳಗೇ ಚಿಕಿತ್ಸೆ ಕೊಟ್ರೆ ಜಗತ್ತಲ್ಲಿ ಮೂಕರೇ ಇರಲ್ಲ: ಪುನೀತ್​ ರಾಜ್​ರನ್ನು​ ನೆನೆದ ಡಾ.ದೀಪಕ್​ ಹೇಳಿದ್ದೇನು?

ಹಲವರಿಗೆ ತಲೆಸುತ್ತು ಬರುತ್ತದೆ. 100ರಲ್ಲಿ 90 ಮಂದಿಗೆ ಈ ಸಮಸ್ಯೆ ಬರುವುದು ಕಿವಿಯ ತೊಂದರೆಯಿಂದ. ಆದರೆ ಇದು ಹೆಚ್ಚಿನ ಜನರಿಗೆ ಗೊತ್ತಾಗುವುದೇ ಇಲ್ಲ. ಬಿಪಿ, ಶುಗರ್​ ಚೆಕ್​ ಮಾಡಿಸ್ತಾರೆ, ತಲೆ ಸ್ಕ್ಯಾನ್​ ಮಾಡಿಸ್ತಾರೆ... ಇನ್ನು ಏನೇನೋ ಮಾಡಿಸ್ತಾರೆ. ಎಲ್ಲವೂ ನಾರ್ಮಲ್​ ಬರುತ್ತೆ, ಸಮಸ್ಯೆ ಎಲ್ಲಿ ಎಂದೇ ಗೊತ್ತಾಗುವುದಿಲ್ಲ. ಆದರೆ 100ರಲ್ಲಿ 10 ಮಂದಿಗೆ ಇದರಿಂದ ಆಗಿರಬಹುದು. ಆದರೆ 90 ಮಂದಿಗೆ ಸಮಸ್ಯೆ ಇರುವುದು ತಲೆಯಲ್ಲಿ ಅಲ್ಲ, ಬದಲಿಗೆ ಕಿವಿಯಲ್ಲಿ. ಆದ್ದರಿಂದ ಕಿವಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದಿದ್ದಾರೆ. ಇದೇ ವೇಳೆ ಕಿವಿಗೆ ಬಡ್​ ಉಪಯೋಗಿಸುವುದನ್ನು ಕೂಡಲೇ ನಿಲ್ಲಿಸಿ ಎಂದಿರುವ ವೈದ್ಯರು, ಕಿವಿಗೆ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳುವುದು ಗೊತ್ತಿದೆ. ಹೊಟ್ಟೆ, ಕರುಳು ಇದ್ದ ಹಾಗೆ ಕಿವಿ ಕೂಡ ಅದರದ್ದೇ ಆದ ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ. ಇಯರ್​ ಬಡ್​ ಮೇಲಿಂದ ಮೇಲೆ ಹಾಕುತ್ತಿದ್ದರೆ ಇದಕ್ಕೆ ಅಡಿಕ್ಟ್​ ಆಗುತ್ತೀರಿ. ಮತ್ತಷ್ಟು ಗಲೀಜನ್ನು ಕಿವಿಯ ಒಳಗೆ ನುಸುಳುವಂತೆ ಮಾಡುತ್ತೀರಿ, ಇದರಿಂದ ಕಿವಿಯ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ ಎಂದಿದ್ದಾರೆ. 

  ಇದೇ ವೇಳೆ, ಬಹುತೇಕ ಮಂದಿ ಹಲ್ಲುಜ್ಜುವ ಸಮಯದಲ್ಲಿ ನಾಲಿಗೆ ತಿಕ್ಕುತ್ತಾರೆ. ಇದು ಕೂಡ ಸರಿಯಲ್ಲ ಎನ್ನುವುದು ಡಾ.ದೀಪಕ್ ಮಾತು. ನಾಲಿಗೆಗೆ ತನ್ನನ್ನು ತಾನು ಸರಿಪಡಿಸಿಕೊಳ್ಳುವ ಕ್ರಮ ಗೊತ್ತಿದೆ. ನಾಲಿಗೆಯನ್ನು ತಿಕ್ಕಿ ತಿಕ್ಕಿ ಅದಕ್ಕೆ ತೊಂದರೆ ಕೊಡುತ್ತೀರಿ. ಪಾಪ ಅದು ಸಂಜೆಯವೇಳೆಗೆ ತನ್ನನ್ನು ತಾನು ಸರಿ ಮಾಡಿಕೊಳ್ಳಲು ಬಿಳಿಯ ಕೋಟ್​ ರಚನೆ ಮಾಡುತ್ತದೆ. ಬಿಳಿಯ ಕೋಟ್​ ಬಂತು ಎಂದು ಮತ್ತೆ ಮಾರನೆಯ ದಿನ ತಿಕ್ಕುತ್ತೀರಿ. ಇದರಿಂದ ಸಮಸ್ಯೆಯನ್ನು ತಂದುಕೊಳ್ಳುತ್ತಿದ್ದೀರಿ ಎಂದಿದ್ದಾರೆ ಡಾ.ದೀಪಕ್​. ಅದೇ ವೇಳೆ  ಕೆಮ್ಮಿದಾಗ ಕಫ ಬಂದರೆ, ಅದನ್ನು ಉಗಿಯಬೇಕು ಅಂತಾರೆ. ಹಾಗೇನೂ ಇಲ್ಲ.  ಉಗಿಯೋದು ಒಂದೇ, ನುಂಗೋದು ಒಂದೇ. ನುಂಗಿದರೆ ಮೋಷನ್​ನಲ್ಲಿ ಹೋಗುತ್ತೆ ಅಷ್ಟೇ ಎಂದಿರುವ ಡಾ.ದೀಪಕ್​,  ವಾಂತಿಯಾದ್ರೆ ಅದರಲ್ಲಿ ಕಫ ಹೋಗತ್ತೆ ಅನ್ನುವುದುದ ಕೂಡ ತಪ್ಪು ಕಲ್ಪನೆ ಎಂದಿದ್ದಾರೆ.  

ಬೆನ್ನು ನೋವು, ಸುಸ್ತು, ಮೂಳೆ ಸವೆತ... ಅಬ್ಬಾ... ವಿಟಮಿನ್​ 'ಡಿ' ಕೊರತೆಯಾದ್ರೆ ಏನೇನಾಗತ್ತೆ? ಪರಿಹಾರವೇನು?

click me!