ಎಲ್ಲೋ ಎದ್ದು – ಬಿದ್ದು ಆಗಿನ ಮಕ್ಕಳು ಬೆಳೆಯುತ್ತಿದ್ದರು. ಈಗ ಹಾಗಾಲ್ಲ. ಶಿಸ್ತುಬದ್ಧವಾಗಿ, ಎಲ್ಲ ಸ್ಪರ್ಧೆಯಲ್ಲಿ ಮುಂದಿರುವ ಮಕ್ಕಳಿಗೆ ಮಾತ್ರ ಪ್ರಾಶಸ್ತ್ಯ. ಇದು ಮಕ್ಕಳನ್ನು ಸಂಕಷ್ಟಕ್ಕೆ ನೂಕಿದೆ. ಅವರ ಬಾಲ್ಯ ಕಸಿದುಕೊಂಡು ಆಸ್ಪತ್ರೆ ಸೇರುವಂತೆ ಮಾಡ್ತಿದೆ.
ದೇಹದ ಯಾವುದೇ ಭಾಗಕ್ಕೆ ಗಾಯವಾದ್ರೆ, ನೋವಾದ್ರೆ ಅದನ್ನು ತಕ್ಷಣ ನಾವು ಗುರುತಿಸ್ತೇವೆ. ಮನೆಯಲ್ಲಿ ಚಿಕಿತ್ಸೆ ಸಾಧ್ಯವಿಲ್ಲ ಎಂದಾಗ ವೈದ್ಯರ ಬಳಿ ಓಡ್ತೇವೆ. ಅದೇ ಮನಸ್ಸಿಗೆ ಸಮಸ್ಯೆ ಕಾಣಿಸಿಕೊಂಡಾಗ ಅದನ್ನು ಮುಚ್ಚಿಡುವ ಪ್ರಯತ್ನ ನಡೆಸ್ತೇವೆಯೇ ಹೊರತು, ಅದಕ್ಕೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ನಡೆಸೋದಿಲ್ಲ. ಅನೇಕ ಬಾರಿ ನಮಗೆ ಖಿನ್ನತೆ, ಒತ್ತಡ ಕಾಡ್ತಿದೆ ಎನ್ನುವುದೇ ನಮ್ಮ ಅರಿವಿಗೆ ಬರೋದಿಲ್ಲ. ಇದು ಗಂಭೀರವಾಗಿ, ದೊಡ್ಡ ಸಮಸ್ಯೆಗೆ ತಿರುಗಿದಾಗ್ಲೇ ಜ್ಞಾನೋದಯವಾಗೋದು. ಬರೀ ದೊಡ್ಡವರಿಗೆ ಮಾತ್ರವಲ್ಲ ಚಿಕ್ಕ ಮಕ್ಕಳೂ ಈಗ ಒತ್ತಡಕ್ಕೆ ಒಳಗಾಗ್ತಿದ್ದಾರೆ. ಖಿನ್ನತೆ ಅವರನ್ನು ಕಾಡ್ತಿದೆ. ವಿದ್ಯಾಭ್ಯಾಸ, ಸ್ಪರ್ಧಾತ್ಮಕ ಯುಗದಲ್ಲಿನ ಸ್ಪರ್ಧೆ, ಬೆಳಿಗ್ಗೆಯಿಂದ ರಾತ್ರಿಯವರೆಗೆ ಬಿಡುವಿಲ್ಲದ ಓದು, ಸಾಮಾಜಿಕ ಜಾಲತಾಣ, ಮೊಬೈಲ್ ಅತಿಯಾದ ಬಳಕೆ ಎಲ್ಲವೂ ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಕೆಲ ಮಕ್ಕಳು ಸೊಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್ ಗೆ ಒಳಗಾಗ್ತಿದ್ದಾರೆ. ನಾವಿಂದು ಸೊಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಸೊಮ್ಯಾಟಿಕ್ (Somatic) ಸ್ಟ್ರೆಸ್ ಡಿಸಾರ್ಡರ್ ಅಂದ್ರೇನು? : ಮಕ್ಕಳ ಸ್ಕ್ರೀನ್ (Screen) ಟೈಂ ಈಗ ಹೆಚ್ಚಾಗಿದೆ. ಸ್ಕೂಲಿನಿಂದ ಬಂದ ತಕ್ಷಣ ಮಕ್ಕಳು ಮೊಬೈಲ್, ಲ್ಯಾಪ್ ಟಾಪ್ (Laptop Top) ಹಿಡಿತಾರೆ. ಇನ್ನು ಕೆಲ ಮಕ್ಕಳ ಕ್ಲಾಸ್, ಹೋಂ ವರ್ಕ್ ಸೇರಿದಂತೆ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಎಲ್ಲ ಕೆಲಸ ಮೊಬೈಲ್ ಮೂಲಕವೇ ಆಗುವ ಕಾರಣ ಸ್ಕ್ರೀನ್ ಟೈಂ ಮತ್ತಷ್ಟು ಹೆಚ್ಚಾಗುತ್ತದೆ. ಈ ಹೆಚ್ಚಾಗುವ ಸ್ಕ್ರೀನ್ ಟೈಂ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದೇ ಸೊಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್ ಗೆ ಕಾರಣವಾಗುತ್ತಿದೆ.
undefined
ಬೆಲ್ಲಿ ಫ್ಯಾಟ್ ಕರಗಿಸೋದು ತುಂಬಾ ಈಝಿ, ಮನೆಯಲ್ಲೇ ತಯಾರಿಸಿದ ಈ ಪಾನೀಯ ಕುಡೀರಿ ಸಾಕು
ತಜ್ಞರ ಪ್ರಕಾರ, ಮೊಬೈಲ್ ಫೋನ್ ಅಥವಾ ಡಿಜಿಟಲ್ ಸಾಧನಗಳನ್ನು ಹೆಚ್ಚು ಸಮಯ ಬಳಸುವುದರಿಂದ ಮಕ್ಕಳಲ್ಲಿ ತೀವ್ರವಾದ ದೈಹಿಕ ನೋವು ಉಂಟಾಗುತ್ತದೆ. ಈ ಸ್ಥಿತಿಯನ್ನು ದೈಹಿಕ ಒತ್ತಡ ಅಸ್ವಸ್ಥತೆ ಎಂದು ಕರೆಯಲಾಗುತ್ತದೆ. ತಲೆನೋವು, ಕಣ್ಣು ನೋವು, ಎದೆ ಮತ್ತು ಕೀಲು ನೋವು ಹೀಗೆ ದೇಹದ ಅನೇಕ ಭಾಗಗಳಲ್ಲಿ ನೋವು ಕಾಡುತ್ತದೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದನ್ನೇ ಸೊಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್ ಎಂದು ಕರೆಯಲಾಗುತ್ತದೆ.
Health and Food tips: ಹೆಚ್ಚು ಕುಕೀ ತಿನ್ನೋ ಚಟ ನಿಮ್ಮನ್ನು ಅನಾರೋಗ್ಯಕ್ಕೆ ದೂಡಬಹುದು ಜೋಪಾನ!
ಸೊಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್ ಲಕ್ಷಣಗಳು : ಸೊಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್ ಗೆ ಒಳಗಾದ ಮಗುವಿಗೆ ಮೇಲೆ ಹೇಳಿದಂತೆ ದೇಹದ ಅನೇಕ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ನಿಮ್ಮ ಮಗು ದೇಹದಲ್ಲಿ ನೋವು, ಕೀಲು ನೋವು, ತೀವ್ರ ತಲೆನೋವು, ಕಣ್ಣಿನ ನೋವು ಎಂಬ ದೂರನ್ನು ನೀಡಿದ್ರೆ ನೀವು ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಮಗು ಈ ನೋವಿನ ಜೊತೆಗೆ ಒತ್ತಡಕ್ಕೆ ಒಳಗಾಗುತ್ತದೆ. ಅದಕ್ಕೆ ನಿರ್ಜಲೀಕರಣದ ಸಮಸ್ಯೆ ಕಾಡಲು ಶುರುವಾಗುತ್ತದೆ. ಯಾವುದೇ ಕೆಲಸ ಮಾಡಲು ಮಕ್ಕಳು ಉತ್ಸಾಹ ತೋರುವುದಿಲ್ಲ. ಮನಸ್ಸಿಲ್ಲ ಇನ್ನೊಮ್ಮೆ ಮಾಡುತ್ತೇನೆ ಎಂಬ ಕಾರಣ ಹೇಳಿ ಕೆಲಸವನ್ನು ಮುಂದೂಡುತ್ತದೆ.
ಸೊಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್ ನಿಂದ ರಕ್ಷಣೆ ಹೇಗೆ? : ಈ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣ ಪಾಲಕರು ಕ್ರಮಕೈಗೊಳ್ಳಬೇಕು. ಮಕ್ಕಳಿಗೆ ಧೈರ್ಯ ಹೇಳುವುದು ಬಹಳ ಮುಖ್ಯ. ಮಕ್ಕಳ ಕೆಲಸವನ್ನು ಟೀಕಿಸದೆ ಅವರಿಗೆ ಬೆಂಬಲ ನೀಡಬೇಕು. ಮಗುವಿನ ಜೊತೆ ಮಾತನಾಡಿ, ಅದು ಯಾವ ತೊಂದರೆಯಲ್ಲಿದೆ ಎಂಬುದನ್ನು ತಿಳಿದುಕೊಂಡು, ಅದಕ್ಕೆ ಪರಿಹಾರ ನೀಡಿ. ಶಾಲೆಯಲ್ಲಿಸ ಸಮಸ್ಯೆ ಆಗ್ತಿದ್ದರೆ ಶಾಲೆಯಲ್ಲಿ ಈ ಬಗ್ಗೆ ಚರ್ಚಿಸಿ. ಪರೀಕ್ಷೆ, ಅಂಕ, ಸ್ಪರ್ಧೆಯ ಒತ್ತಡವನ್ನು ಮಗುವಿನ ಮೇಲೆ ಹಾಕಬೇಡಿ. ಯೋಗ ಹಾಗೂ ಧ್ಯಾನ ಮಗುವಿನ ಮಾನಸಿಕ ಸ್ಥಿತಿಯನ್ನು ಬಲಗೊಳಿಸುತ್ತದೆ. ಜೊತೆಗೆ ಪೌಷ್ಠಿಕ ಆಹಾರವನ್ನು ಮಗುವಿಗೆ ನೀಡಿ. ಸಮಸ್ಯೆ ವಿಪರೀತ ಎನ್ನಿಸಿದ್ರೆ ಮಾನಸಿಕ ತಜ್ಞರನ್ನು ಭೇಟಿಯಾಗಿ.