ಬೇಸಿಗೆಯಲ್ಲಿ ನೀರಿಗಿಳಿದ್ರೆ ವಾಪಸ್ ಬರೋ ಮನಸ್ಸಾಗಲ್ಲ. ಹಾಗಾಗಿಯೇ ನೀರಿರುವ ಜಾಗ, ಸ್ವಿಮ್ಮಿಂಗ್ ಫೂಲ್ ತುಂಬಿರುತ್ತದೆ. ಹಾಯಾಗಿ ಸಮಯ ಕಳೆಯಬಲ್ಲ ಸ್ವಿಮ್ಮಿಂಗ್ ಫೂಲ್ ನಿಮ್ಮ ಆರೋಗ್ಯ ಕೆಡಿಸಬಾರದು ಅಂದ್ರೆ ಕೆಲವೊಂದನ್ನು ನೆನಪಿಟ್ಟುಕೊಳ್ಳಬೇಕು.
ಜೂನ್ ಶುರುವಾದ್ರೂ ಬಿಸಿಲ ಧಗೆ ಇನ್ನೂ ಕಡಿಮೆಯಾಗಿಲ್ಲ. ಆಗಾಗ ಮಳೆ ಬರ್ತಿರುವ ಕಾರಣ ಸ್ವಲ್ಪ ತಂಪೆನ್ನಿಸಿದ್ರೂ ಬಿಸಿಲಿನಿಂದ ರಕ್ಷಣೆ ಪಡೆಯಲು ಸ್ವಿಮ್ಮಿಂಗ್ ಫೂಲ್ ಬೆಸ್ಟ್ ಎನ್ನುವವರಿದ್ದಾರೆ. ಬೇಸಿಗೆಯಲ್ಲಿ ಸ್ವಿಮ್ಮಿಂಗ್ ಮಾಡೋರ ಸಂಖ್ಯೆ ಹೆಚ್ಚಿರುತ್ತದೆ. ಸ್ವಿಮ್ಮಿಂಗ್ ಫೂಲ್ ನಲ್ಲಿ ಸ್ವಿಮ್ ಮಾಡೋದ್ರಿಂದ ದೇಹ ತಂಪಾಗುವ ಜೊತೆಗೆ ಮನರಂಜನೆ ಸಿಗುವುದು ಮಾತ್ರವಲ್ಲದೆ ದೇಹಕ್ಕೆ ವ್ಯಾಯಾಮ ಸಿಗುತ್ತದೆ. ಸ್ವಿಮ್ಮಿಂಗನ್ನು ಅತ್ಯುತ್ತಮ ವ್ಯಾಯಾಮ ಎಂದು ಪರಿಗಣಿಸಲಾಗಿದೆ. ಆದ್ರೆ ಸ್ವಿಮ್ಮಿಂಗ್ ಫೂಲ್ ಗೆ ಇಳಿಯುವ ಮುನ್ನ ಕೆಲ ಸಂಗತಿಗಳು ನಮಗೆ ತಿಳಿದಿರಬೇಕು. ಇಲ್ಲವೆಂದ್ರೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀವೂ ಕೂಡ ಪ್ರತಿ ದಿನ ಅಥವಾ ವಾರಕ್ಕೊಂದೆರಡು ಬಾರಿ ಸ್ವಿಮ್ಮಿಂಗ್ ಫೂಲ್ ಗೆ ಹೋಗ್ತೀರಾ ಎಂದಾದ್ರೆ ಈ ವಿಷ್ಯವನ್ನು ತಪ್ಪದೆ ಪಾಲಿಸಿ.
ಸ್ವಿಮ್ಮಿಂಗ್ ಫೂಲ್ (Swimming Pool) ಗೆ ಇಳಿಯುವ ಮುನ್ನ ಇದು ತಿಳಿದಿರಲಿ :
undefined
ಚರ್ಮ (Skin) ದ ರಕ್ಷಣೆ : ಸ್ವಿಮ್ಮಿಂಗ್ ಫೂಲ್ ನೀರನ್ನು ಸ್ವಚ್ಛವಾಗಿಡುವುದು ಬಹಳ ಮುಖ್ಯ. ಹಾಗಾಗಿ ಅದಕ್ಕೆ ಕ್ಲೋರಿನ್ ಬಳಸಲಾಗುತ್ತದೆ. ಕ್ಲೋರಿನ್ (Chlorine) ಯುಕ್ತ ನೀರು ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಚರ್ಮದ ಸೋಂಕು, ಟ್ಯಾನ್ ಸೇರಿದಂತೆ ಅನೇಕ ಸಮಸ್ಯೆ ಕಾಡಬಹುದು. ಹಾಗಾಗಿ ಸ್ವಿಮ್ಮಿಂಗ್ ಫೂಲ್ ನಲ್ಲಿ ಸ್ವಿಮ್ ಮಾಡುವ ಮೊದಲು, ನಿಮ್ಮ ಚರ್ಮ ಹಾಗೂ ಕೂದಲಿನ ರಕ್ಷಣೆ ಬಗ್ಗೆ ನೀವು ಗಮನ ಹರಿಸಬೇಕು.
Health Tips : ವ್ಯಾಯಾಮ ಮಾಡುವಾಗ ಆಕಳಿಕೆ ಬಂದ್ರೆ ಅದು ಆಲಸ್ಯವಲ್ಲ.. ಕಾರಣ ಇಲ್ಲಿದೆ
ಕ್ಲೋರಿನ್ ಬಗ್ಗೆ ಮಾಹಿತಿ ಪಡೆಯಿರಿ : ಸ್ವಿಮ್ಮಿಂಗ್ ಫೂಲ್ ನಿರ್ವಾಹಕರ ಬಳಿ ನೀವು ಎಷ್ಟು ಕ್ಲೋರಿನ್ ಬಳಸಲಾಗಿದೆ ಎನ್ನುವ ಬಗ್ಗೆ ಮಾಹಿತಿ ಪಡೆಯಿರಿ. ಕೆಲವೊಮ್ಮೆ ಈಜುಕೊಳಕ್ಕೆ ಹೆಚ್ಚಿನ ಕ್ಲೋರಿನ್ ಹಾಕಲಾಗುತ್ತದೆ. ಇದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ನೀವು ಮೊದಲು ಕ್ಲೋರಿನ್ ಮಾಹಿತಿ ಪಡೆಯಿರಿ. ತಜ್ಞರ ಪ್ರಕಾರ, ಈಜುಕೊಳದ ನೀರಿನ ಪಿಎಚ್ ಮಟ್ಟ 7 -8 ಇರಬೇಕು. ಅದಕ್ಕಿಂತ ಹೆಚ್ಚಿದೆ ಎಂದಾದ್ರೆ ನೀವು ಸ್ವಿಮ್ಮಿಂಗ್ ಫೂಲ್ ಗೆ ಇಳಿಯುವ ಪ್ರಯತ್ನ ಮಾಡ್ಬೇಡಿ.
ಏಕಾಏಕಿ ಜಂಪ್ ಮಾಡ್ಬೇಡಿ : ನೀವು ಸ್ವಿಮ್ಮಿಂಗ್ ನಲ್ಲಿ ತಜ್ಞರಾಗಿರಬಹುದು. ಆದ್ರೆ ಏಕಾ ಏಕಿ ನೀವು ಸ್ವಿಮ್ಮಿಂಗ್ ಫೂಲ್ ಗೆ ಜಂಪ್ ಮಾಡುವುದು ಒಳ್ಳೆಯದಲ್ಲ. ನಿಮ್ಮ ದೇಹದ ತಾಪಮಾನ ಹಾಗೂ ಈಜುಕೊಳದ ನೀರಿನ ತಾಪಮಾನ ಬೇರೆಯಾಗಿರುತ್ತದೆ. ನೀವು ನೀರಿನಲ್ಲಿ ಜಂಪ್ ಮಾಡಿದಾಗ ನಿಮ್ಮ ದೇಹ, ನೀರಿನ ತಾಪಮಾನಕ್ಕೆ ಹೊಂದಿಕೊಳ್ಳಲು ಕಷ್ಟವಾಗಬಹುದು. ನರಮಂಡಲಕ್ಕೆ ಹಾನಿಯುಂಟು ಮಾಡಬಹುದು. ಇದು ನಿಮ್ಮ ಆರೋಗ್ಯವನ್ನು ಹದಗೆಡಿಸಬಹುದು. ಹಾಗಾಗಿ ನೀವು ಮೊದಲು ಈಜುಕೊಳದಲ್ಲಿ ನಿಧಾನವಾಗಿ ಇಳಿಯಬೇಕು. ನಿಮ್ಮ ದೇಹದ ತಾಪಮಾನವನ್ನು ನೀರಿನ ತಾಪಮಾನಕ್ಕೆ ಹೊಂದಿಸಿಕೊಳ್ಳಬೇಕು. ಸ್ನಾನ ಮಾಡಿ, ಕಾಲು, ಕೈಗಳನ್ನು ಆಡಿಸಿ, ದೇಹ ಅದಕ್ಕೆ ಹೊಂದಿಕೊಂಡ ನಂತ್ರ ಈಜಲು ಮುಂದಾಗಬೇಕು.
ಡಯಾಬಿಟಿಸ್ ಇರೋರು ಎಳನೀರು ಕುಡಿಬೋದಾ?
ಸೋಂಕಿನ ಅಪಾಯ : ಸ್ವಿಮ್ಮಿಂಗ್ ಫೂಲ್ ಸಾರ್ವಜನಿಕವಾಗಿದ್ದಾಗ ಅನೇಕರು ಅದ್ರಲ್ಲಿ ಆಡ್ತಿರುತ್ತಾರೆ. ಅವರಲ್ಲಿ ಯಾರೊಬ್ಬರಿಗೆ ಶಿಲೀಂದ್ರದ ಸೋಂಕಿದ್ದರೂ ಅದು ನಿಮ್ಮನ್ನು ಕಾಡುವ ಸಾಧ್ಯತೆಯಿರುತ್ತದೆ. ನೀರಿನಲ್ಲಿ ಶಿಲೀಂದ್ರದ ಸೋಂಕು ಬೇಗ ಹರಡುತ್ತದೆ. ಅಂಡರ್ ಆರ್ಮ್, ತೊಡೆ, ಸ್ತನದ ಕೆಳಗೆ ಮತ್ತು ಕಾಲ್ಬೆರಳುಗಳ ನಡುವೆ ಇದು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಈಜುಕೊಳಕ್ಕೆ ಇಳಿಯುವ ಮೊದಲು ಇದ್ರ ಬಗ್ಗೆ ಗಮನ ಹರಿಸಿ. ನೀವು ಸ್ವಿಮ್ಮಿಂಗ್ ಮುಗಿಸಿದ ನಂತ್ರ ಶುದ್ಧ ನೀರಿನಲ್ಲಿ ಸ್ನಾನ ಮಾಡೋದನ್ನು ಎಂದಿಗೂ ಮರೆಯಬೇಡಿ. ತಕ್ಷಣ ಸ್ನಾನ ಮಾಡಿದಲ್ಲಿ ಸೋಂಕು ಹರಡುವ ಸಾಧ್ಯತೆ ಕಡಿಮೆ ಇರುತ್ತದೆ.