Food
ಎಳನೀರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಅನ್ನೋದು ನಿಮಗೆ ಗೊತ್ತಿದೆ. ಡೆಂಗ್ಯೂ, ಚಿಕೂನ್ ಗುನ್ಯಾ, ತೂಕ ಇಳಿಕೆ, ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಎಳನೀರು ಕುಡಿಯುವುದು ಒಳ್ಳೆಯದು.
ಈ ಪಾನೀಯವು ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ಪೊಟ್ಯಾಸಿಯಮ್, ಫೈಬರ್ ಮತ್ತು ಪ್ರೋಟೀನ್ ಸೇರಿದಂತೆ ಖನಿಜಗಳನ್ನು ಹೊಂದಿರುತ್ತದೆ.ತೂಕ ನಷ್ಟಕ್ಕೆ ಸಹಕಾರಿಯಾಗಿದೆ.
ದಿನದ ಯಾವುದೇ ಸಮಯದಲ್ಲಿ ತೆಂಗಿನ ನೀರನ್ನು ಸಿಪ್ ಮಾಡುವುದು ಉತ್ತಮವಾದರೂ, ಸರಿಯಾದ ಸಮಯದಲ್ಲಿ ಅದನ್ನು ಕುಡಿಯುವುದರಿಂದ ಪ್ರಯೋಜನಗಳನ್ನು ದ್ವಿಗುಣಗೊಳಿಸಬಹುದು. ಆದರೆ ಡಯಾಬಿಟಿಸ್ ಇರೋರು ಎಳನೀರು ಕುಡಿಯಬಹುದಾ?
ಮಧುಮೇಹ ಹೊಂದಿರುವ ರೋಗಿಗಳು ಕ್ಯಾಲೊರಿಗಳನ್ನು ಹೊಂದಿರದ ಅಥವಾ ಕಡಿಮೆ ಪ್ರಮಾಣದಲ್ಲಿ ಇರುವ ಅಂತಹ ಆಹಾರ ಅಥವಾ ಪಾನೀಯಗಳನ್ನು ಸೇವಿಸಬೇಕು. ಅಂಥಾ ಪಾನೀಯಗಳಲ್ಲೊಂದು ಎಳನೀರು.
ಮಧುಮೇಹ ರೋಗಿಗಳು ಎಳನೀರನ್ನು ಕುಡಿಯಬಹುದು ಮತ್ತು ಎಳನೀರಲ್ಲಿ 94 ಪ್ರತಿಶತದಷ್ಟು ಕೇವಲ ನೀರು ಇರುತ್ತದೆ. ಇದಲ್ಲದೆ, ಅದರಲ್ಲಿರುವ ಕ್ಯಾಲೊರಿಗಳ ಪ್ರಮಾಣವೂ ತುಂಬಾ ಕಡಿಮೆ.
ಎಳನೀರಿನಲ್ಲಿ ಪೊಟ್ಯಾಸಿಯಮ್, ವಿಟಮಿನ್ ಬಿ, ಎಲೆಕ್ಟ್ರೋಲಿಟ್ಸ್, ಅಮೈನೋ ಆಮ್ಲಗಳು, ಕಿಣ್ವಗಳು ಮತ್ತು ಇತರ ಪೋಷಕಾಂಶಗಳು ಸಮೃದ್ಧವಾಗಿವೆ. ಆದ್ದರಿಂದ, ಮಧುಮೇಹ ರೋಗಿಗಳಿಗೆ ಎಳನೀರು ಕುಡಿಯಲು ಸೂಚಿಸಲಾಗಿದೆ.