ಹಿಂದೆಲ್ಲಾ ಬಾವಿ, ಕೆರೆಯ ನೀರನ್ನು ಕುಡಿಯಲು, ಇತರ ಅಗತ್ಯಗಳಿಗಾಗಿ ಬಳಸುತ್ತಿದ್ದರು. ಆದ್ರೆ ಈಗ ನೀರಿನ ಮೂಲ ಯಾವುದಾಗಿದ್ರೂ ಬರೋದು ಟ್ಯಾಪ್‌ನಲ್ಲೇ. ಹೆಚ್ಚಿನವರು ಟ್ಯಾಪ್ ನೀರನ್ನು ಬಿಸಿ ಮಾಡಿ ಕುಡಿಯುತ್ತಾರೆ. ಆದ್ರೆ ಟ್ಯಾಪ್ ನೀರನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುವಂತಿಲ್ಲ ಅನ್ನೋ ವಿಚಾರ ನಿಮ್ಗೆ ಗೊತ್ತಿದ್ಯಾ ?
ನವದೆಹಲಿ: ಕುಡಿಯುವ ನೀರನ್ನು ಕುದಿಸುವುದು (Boil) ಯಾವಾಗಲೂ ಸುರಕ್ಷಿತ, ಶುದ್ಧ ಮತ್ತು ಬಳಕೆಗ ಉತ್ತಮ ಮಾರ್ಗವೆಂದು ಪರಿಗಣಿಸಲಾಗುತ್ತದೆ. ವಾಟರ್ ಫಿಲ್ಟರ್‌ಗಳ ಆಗಮನದ ಮೊದಲು, ಪ್ರತಿಯೊಬ್ಬರೂ ಕುಡಿಯಲು ಟ್ಯಾಪ್ ನೀರನ್ನು (Tap water) ಕುದಿಸುತ್ತಿದ್ದರು. ಆದರೆ ಹೀಗೆ ಕುದಿಸಿ ಉಳಿದ ನೀರಿನ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಮುಂದಿನ ಬಾರಿ ನೀವು ಅದನ್ನು ಬಳಸುವಾಗ ಅಥವಾ ಮತ್ತೆ ಕುದಿಸಿದಾಗ ಅದಕ್ಕೆ ಸ್ವಲ್ಪ ಹೆಚ್ಚು ನೀರನ್ನು ಸೇರಿಸುತ್ತೀರಾ ? ಹೀಗೆ ಮಾಡಬಾರದು ಎನ್ನುತ್ತಾರೆ ತಜ್ಞರು. ಎಲ್ಲಾ ದ್ರವಗಳಂತೆ ಟ್ಯಾಪ್ ನೀರನ್ನು ಹಲವಾರು ಬಾರಿ ಕುದಿಸುವುದರಿಂದ ಅವುಗಳು ಹೆಚ್ಚು ಕೇಂದ್ರೀಕರಿಸುತ್ತದೆ ಮತ್ತು ಅದೇ ನೀರನ್ನು ಮತ್ತೆ ಕುದಿಸುವುದರಿಂದ ಅದರಲ್ಲಿ ಕರಗಿದ ಹೆಚ್ಚಿನ ಸಂಖ್ಯೆಯ ಲವಣಗಳು ಹೆಚ್ಚಾಗುತ್ತವೆ ಎಂದು ಅಧ್ಯಯನಗಳು ಹೇಳಿವೆ.
ನೀರಿನಲ್ಲಿರುವ ವಿವಿಧ ಲವಣಗಳು ಯಾವುವು ?
ಉಪ್ಪು ನೀರಿನಲ್ಲಿ ಸೇರಿರುವ ಹಲವಾರು ಲವಣಗಳು ಮತ್ತು ರಾಸಾಯನಿಕಗಳು ನೀರಿನಲ್ಲಿರುತ್ತವೆ.
undefined
ನೈಟ್ರೇಟ್ಸ್: ಈ ಕರಗಿದ ಲವಣಗಳು ಸಾಮಾನ್ಯವಾಗಿ ಹೆಚ್ಚು ಹಾನಿಕಾರಕವಲ್ಲ ಆದರೆ ಅದೇ ಟ್ಯಾಪ್ ನೀರನ್ನು ಅತಿಯಾಗಿ ಕುದಿಸುವುದು ವಿಷಕಾರಿಯಾಗಲು ಕಾರಣವಾಗಬಹುದು. ಕ್ಯಾನ್ಸರ್, ಲ್ಯುಕೇಮಿಯಾ ಮತ್ತು ಹಾಡ್ಗ್ಕಿನ್ ಅಲ್ಲದ ಲಿಂಫೋಮಾದಂತಹ ಹಲವಾರು ಅಪಾಯಕಾರಿ ಮತ್ತು ಮಾರಣಾಂತಿಕ ಕಾಯಿಲೆಗಳಿಗೆ (Disease) ಕಾರಣವಾಗಬಹುದು.
ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ, ಪುರುಷರ ವೀರ್ಯದ ಸಂಖ್ಯೇನೆ ಕಡಿಮೆಯಾಗುತ್ತೆ!
ಆರ್ಸೆನಿಕ್: ಆರ್ಸೆನಿಕ್, ಸಣ್ಣ ಪ್ರಮಾಣದಲ್ಲಿ ಇದ್ದರೆ, ಅದು ತುಂಬಾ ಹಾನಿಕಾರಕವಲ್ಲ, ಆದಾರೆ, ಟ್ಯಾಪ್ ನೀರಿನಲ್ಲಿ ಇದರ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ. ಆರ್ಸೆನಿಕ್ ಕ್ಯಾನ್ಸರ್, ಹೃದಯಾಘಾತಕ್ಕೆ (Heartattack) ಕಾರಣವಾಗುವ ಹೃದಯ ಸಮಸ್ಯೆಗಳು ಮತ್ತು ಮಾನಸಿಕ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ನೀವು ಹೆಚ್ಚಿನ ಪ್ರಮಾಣದ ಆರ್ಸೆನಿಕ್ ಹೊಂದಿರುವ ನೀರನ್ನು ಕುಡಿಯುತ್ತಿದ್ದರೆ, ಅದು ನಿಮ್ಮ ರಕ್ತಪರಿಚಲನಾ ವ್ಯವಸ್ಥೆ ಮತ್ತು ಚರ್ಮ (Skin)ವನ್ನು ಹಾನಿಗೊಳಿಸುತ್ತದೆ.
ಫ್ಲೋರೈಡ್: ಫ್ಲೋರೈಡ್ ಟ್ಯಾಪ್ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಮತ್ತು ಆಸ್ಟಿಯೊಪೊರೋಸಿಸ್, ಮುರಿತಗಳು ಮತ್ತು ನೋವಿನಂತಹ ಮೂಳೆ (Bone) ಅಸ್ವಸ್ಥತೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಚಿಕ್ಕ ಮಕ್ಕಳಲ್ಲಿ, ಹೆಚ್ಚುವರಿ ಫ್ಲೋರೈಡ್ ಸೇವನೆಯು ಹಲ್ಲು ಮತ್ತು ಹಲ್ಲಿನ ದಂತಕವಚಕ್ಕೆ ಹಾನಿಯನ್ನುಂಟುಮಾಡುತ್ತದೆ.
ಕ್ಯಾಲ್ಸಿಯಂ: ಕ್ಯಾಲ್ಸಿಯಂ ನಮ್ಮ ಮೂಳೆಗಳಿಗೆ ಅದ್ಭುತವಾದ ಖನಿಜವಾಗಿದೆ. ಆದರೆ ಮತ್ತೆ ಕುದಿಯುವ ನೀರು ಮೂತ್ರಪಿಂಡ (Kidney) ಮತ್ತು ಪಿತ್ತಕೋಶದ ಕಲ್ಲುಗಳಿಗೆ ಕಾರಣವಾಗುವ ಕ್ಯಾಲ್ಸಿಯಂನ ಕರಗಿದ ಪ್ರಮಾಣವನ್ನು ಹೆಚ್ಚಿಸುತ್ತದೆ.
ಸೀಸ: ವಿಜ್ಞಾನಿಗಳ ಪ್ರಕಾರ, ಸೀಸವು ನೀರಿನ ಮೂಲದಿಂದ ಬರುವುದಿಲ್ಲ, ಆದರೆ, ಮಾಲಿನ್ಯವು (Pollution) ಮನೆಯಲ್ಲಿ ಸಂಭವಿಸುತ್ತದೆ. ಸೀಸದಿಂದ ಲೇಪಿತವಾಗಿರುವ ಹಳೆಯ ಪೈಪ್‌ಗಳು ಅಥವಾ ಶೇಖರಣಾ ತೊಟ್ಟಿಗಳ ಮೂಲಕ ನೀರನ್ನು ಕಲುಷಿತಗೊಳಿಸುತ್ತದೆ. ಸೀಸಕ್ಕೆ ಒಡ್ಡಿಕೊಳ್ಳುವುದರಿಂದ ಮಾನಸಿಕ ಸಮಸ್ಯೆಗಳು (Mental health) ಉಂಟಾಗುತ್ತವೆ.
Drinking Water: ನಿಂತು ನೀರು ಕುಡಿಯೋ ಅಭ್ಯಾಸದಿಂದ ಮೂತ್ರಪಿಂಡಕ್ಕೆ ಹಾನಿ
ಎರಡನೇ ಬಾರಿ ಕುದಿಸಿದ ನೀರನ್ನು ಬಳಸುವುದರಿಂದಾಗುವ ಸಮಸ್ಯೆಗಳು
ಟ್ಯಾಪ್ ನೀರನ್ನು ಮತ್ತೆ ಕುದಿಸುವ ನಿಜವಾದ ಆರೋಗ್ಯದ ಅಪಾಯವೆಂದರೆ ಅದು ಅತಿಯಾಗಿ ಬಿಸಿಯಾಗಬಹುದು ಮತ್ತು ಸುಡುವ ಅಪಾಯವನ್ನು ಉಂಟುಮಾಡಬಹುದು. ಸಾಮಾನ್ಯವಾಗಿ, ತಾಜಾ ನೀರಿನಲ್ಲಿ ಸಣ್ಣ ಅನಿಲ ಗುಳ್ಳೆಗಳನ್ನು ಗುರುತಿಸಬಹುದು, ಇದು ಕುದಿಯುವ ಸಮಯದಲ್ಲಿ ಉದ್ಭವಿಸುವ ಗುಳ್ಳೆಗಳಿಗೆ ನ್ಯೂಕ್ಲಿಯೇಶನ್ ಸೈಟ್ ಆಗಿ ಕಾರ್ಯನಿರ್ವಹಿಸುತ್ತದೆ. ಆದರೆ ಪುನಃ ಕುದಿಯುವ ನೀರು ನೀರಿನಲ್ಲಿ ಕರಗಿರುವ ಅನಿಲಗಳನ್ನು ಹೊರಹಾಕುತ್ತದೆ. ಮರು-ತಾಪನವು ನೀರನ್ನು ಅದರ ಸಾಮಾನ್ಯ ಕುದಿಯುವ ಬಿಂದುಕ್ಕಿಂತ ಬಿಸಿಯಾಗಿಸಬಹುದು ಮತ್ತು ತೊಂದರೆಗೊಳಗಾದಾಗ ಅದು ಸ್ಫೋಟಕವಾಗಿ ಕುದಿಯಲು ಕಾರಣವಾಗಬಹುದು.
ಕೆಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವುದರ ಹೊರತಾಗಿ, ಪುನಃ ಕುದಿಸಿದ ನೀರನ್ನು ಬಳಸುವುದರಿಂದ ಇದು ತಯಾರಿಸುವ ಆಹಾರ ಮತ್ತು ಪಾನೀಯಗಳ ರುಚಿಯನ್ನು ಸಹ ಹಾಳು ಮಾಡುತ್ತದೆ. ಕರಗಿದ ಅನಿಲಗಳು ನೀರಿನ ಆಮ್ಲೀಯತೆಯನ್ನು ಸ್ವಲ್ಪ ಹೆಚ್ಚಿಸುತ್ತವೆ. ಇದು ಸುವಾಸನೆಯ ಅಣುಗಳು ಇಲ್ಲವಾಗಲು ಕಾರಣವಾಗುತ್ತದೆ. ಆದ್ದರಿಂದ, ವೈದ್ಯರು ಕಾಫಿ ಅಥವಾ ಚಹಾವನ್ನು ತಾಜಾ ಮತ್ತು ತಣ್ಣೀರಿನಿಂದ ತಯಾರಿಸಲು ಸಲಹೆ ನೀಡುತ್ತಾರೆ.