ಮುಟ್ಟು ವೈಕಲ್ಯವಲ್ಲ; ಅದಕ್ಯಾಕೆ ಬೇಕು ಪೇಯ್ಡ್ ಲೀವ್?

By Suvarna NewsFirst Published Dec 14, 2023, 5:18 PM IST
Highlights

ಮುಟ್ಟಿನ ರಜೆ ಬೇಕೇ ಬೇಡವೇ ಎನ್ನುವ ವಿಚಾರ ಇನ್ನೂ ಚರ್ಚೆಯಲ್ಲಿರುವ ನಡುವೆಯೇ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಈ ಬಗ್ಗೆ ದೇಶದ ಗಮನ ಸೆಳೆದಿದ್ದಾರೆ. ಇದೊಂದು ಸಹಜ ಪ್ರಕ್ರಿಯೆ, ವೈಕಲ್ಯವಲ್ಲ ಎಂದು ಹೇಳಿದ್ದಾರೆ. 
 

ಮಹಿಳೆಯರಿಗೆ ಮುಟ್ಟಿನ ರಜೆ ಬೇಕೇ ಬೇಡವೇ ಎನ್ನುವುದು ಕಳೆದ ಕೆಲವು ಸಮಯದಿಂದ ಚಾಲ್ತಿಯಲ್ಲಿರುವ ವಿಚಾರ. ಕೆಲವರು ಮುಟ್ಟಿನ ರಜೆ ಅಗತ್ಯ, ಅದಕ್ಕೆಂದು ವರ್ಷಕ್ಕೆ ನಿಗದಿತ ರಜೆ ಅವಶ್ಯಕ ಎಂದು ಪ್ರತಿಪಾದಿಸಿದರೆ, ಸಮಾನತೆ ಕೇಳುವ ಈ ದಿನದಲ್ಲಿ ಮುಟ್ಟಿನ ರಜೆಯ ಬೇಡಿಕೆ ಇಡುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸುವವರಿದ್ದಾರೆ. ಹಾಗೆ ನೋಡಿದರೆ, ಮುಟ್ಟಿನ ದಿನಗಳಲ್ಲಿ ಕೆಲವು ಮಹಿಳೆಯರು ಮಾತ್ರ ಸಮಸ್ಯೆಗಳನ್ನು ಎದುರಿಸುತ್ತಾರೆ. ಆಗ ತಾನೇ ಮುಟ್ಟು ಆರಂಭವಾದ ಹುಡುಗಿಯರು ಸೇರಿದಂತೆ ಕೆಲವು ಮಹಿಳೆಯರಲ್ಲಿ ತೀವ್ರ ಹೊಟ್ಟೆನೋವು, ವಾಕರಿಕೆ, ತಲೆಸುತ್ತುವುದು ಮುಂತಾದ ಸಮಸ್ಯೆಗಳು ಗೋಚರಿಸುತ್ತವೆ. ಉಳಿದಂತೆ ಬಹಳಷ್ಟು ಮಹಿಳೆಯರು ಅದನ್ನೊಂದು ಸಾಮಾನ್ಯ ಕ್ರಿಯೆಯನ್ನಾಗಿ ಸ್ವೀಕರಿಸುತ್ತಾರೆ. ಇದೀಗ, ಕೇಂದ್ರ ಸರ್ಕಾರ ಕೂಡ ಇದೇ ನಿಲುವನ್ನು ತಾಳಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಈ ಬಗ್ಗೆ ರಾಜ್ಯಸಭೆಯಲ್ಲಿ ಸರ್ಕಾರದ ನಿಲುವನ್ನು ತಿಳಿಸಿದ್ದಾರೆ. ಮುಟ್ಟಿನ ದಿನಗಳ ಶುಚಿತ್ವ ಹಾಗೂ ರಜೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದಾರೆ. 

ಮುಟ್ಟು (Menstruation) ಎನ್ನುವುದು ಮಹಿಳೆಯರು (Women) ನೈಸರ್ಗಿಕವಾಗಿ (Natural) ಎದುರಿಸುವ ಸ್ಥಿತಿ. ಅದೊಂದು ವಿಕಲತೆಯಲ್ಲ (Handicap) ಅಥವಾ ಆರೋಗ್ಯ ಸಮಸ್ಯೆಯಲ್ಲ (Health Problem) ಎಂದು ಹೇಳಿದ್ದಾರೆ. ಮಹಿಳೆಯರ ಜೀವನ ಪಯಣದಲ್ಲಿ ಮುಟ್ಟಿಗೆ ಮಹತ್ವದ ಸ್ಥಾನವಿದೆ. ಆದರೆ, ಅದನ್ನೊಂದು ವಿಶೇಷ ಪ್ರಕ್ರಿಯೆ ಎಂದೋ, ಅಸಹಜವೆಂದೋ ಪರಿಗಣಿಸಬೇಕಾಗಿಲ್ಲ. ಅದೊಂದು ಅತ್ಯಂತ ಸಹಜ ಪ್ರಕ್ರಿಯೆ ಎನ್ನುವ ವಿಚಾರ ಅವರ ಮಾತುಗಳಿಂದ ಧ್ವನಿಸಿದೆ. 

ದೇಹದಲ್ಲಿ ಈ ವಿಟಮಿನ್ ಕೊರತೆಯಾದ್ರೆ ಸೆಕ್ಷುಯಲ್ ಲೈಫಿಗೇ ಕುತ್ತು!

ಅಸಹಜವಲ್ಲ
“ಮಹಿಳೆಯರು ಇಂದು ಆರ್ಥಿಕವಾಗಿ (Economically) ಬಹಳಷ್ಟು ಅವಕಾಶಗಳನ್ನು ಪಡೆಯುತ್ತಿದ್ದಾರೆ. ಈ ಸಮಯದಲ್ಲಿ ಇದು ನನ್ನ ಖಾಸಗಿ ವಿಚಾರವಾಗಿದೆ’ ಎಂದಿರುವ ಅವರು, “ಋತುಬಂಧ ಅಥವಾ ಮುಟ್ಟಿಗೆ ಒಳಗಾಗುವ ಮಹಿಳೆಯಾಗಿರುವ ತಾವು ಅದನ್ನೊಂದು ಅಂಗವಿಕಲತೆ ಎನ್ನುವುದಾಗಿ ಪರಿಗಣಿಸುವುದಿಲ್ಲ’ ಎಂದು ಅತ್ಯಂತ ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ. ಅದಲ್ಲದೇ ಅವರು ಹೇಳಿರುವ ಮತ್ತೊಂದು ಸಂಗತಿಯೂ ಗಮನ ಸೆಳೆಯುವಂಥದ್ದು. “ಋತುಬಂಧಕ್ಕೆ ಒಳಗಾಗದವರು (ಅರ್ಥಾತ್ ಪುರುಷರು) ಋತುಚಕ್ರವನ್ನು ನೋಡುವ ನಿರ್ದಿಷ್ಟ ದೃಷ್ಟಿಕೋನದಿಂದಾಗಿ, ಇದನ್ನೊಂದು ಸಮಸ್ಯೆ ಎಂಬಂತೆ ನಾವು ಪ್ರಸ್ತಾಪ ಮಾಡಲು ಸಾಧ್ಯವಿಲ್ಲ. ಕೆಲವು ಬಾರಿ, ಈಗಾಗಲೇ ಮಹಿಳೆಯರು ಸಮಾನ ಅವಕಾಶಗಳಿಂದ (Equal Opportunity) ವಂಚಿತರಾಗುತ್ತಿರುವಾಗ, ಮುಟ್ಟು ಸಮಸ್ಯೆ ಎನ್ನುವಂತೆ ಬಿಂಬಿಸಲು ಸಾಧ್ಯವಿಲ್ಲ’ ಎಂದು ಹೇಳಿರುವುದು ಮುಖ್ಯವೆನಿಸುತ್ತದೆ. 
1990ರ ದಶಕದಲ್ಲಿ ಬಿಹಾರ ಮಹಿಳೆಯರ ಮುಟ್ಟಿನ ರಜೆಯನ್ನು (Leave) ಜಾರಿಗೊಳಿಸಿತ್ತು. ಬಳಿಕ, ಕೇರಳ ಈ ಕ್ರಮ ಕೈಗೊಂಡಿತ್ತು. ಇದನ್ನು ಸಹ ರಾಜ್ಯಸಭೆಯಲ್ಲಿ ಉಲ್ಲೇಖಿಸಲಾಗಿದ್ದು, ಮಹಿಳೆಯರಿಗೆ ವೇತನ (Paid) ಸಹಿತದ ಮುಟ್ಟಿನ ರಜೆಯನ್ನು ಕೈಗೊಳ್ಳುವ ಬಗ್ಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸುವಂತೆ ಕೋರಲಾಗಿತ್ತು. ಕಳೆದ ವಾರವಷ್ಟೇ ಸಚಿವೆ ಸ್ಮೃತಿ ಇರಾನಿ (Smriti Irani) ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದ ಇಂಥದ್ದೇ ಪ್ರಶ್ನೆಗೆ ಉತ್ತರಿಸಿ, ಎಲ್ಲ ಕಾರ್ಯವಲಯಗಳಲ್ಲೂ ಮಹಿಳೆಯರಿಗೆ ವೇತನ ಸಹಿತ ಮುಟ್ಟಿನ ರಜೆ ನೀಡುವ ಬಗ್ಗೆ ಸರ್ಕಾರದ ಎದುರು ಯಾವುದೇ ಪ್ರಸ್ತಾವನೆ ಇಲ್ಲ ಎಂದು ತಿಳಿಸಿದ್ದರು. ಇದೀಗ, ತಮ್ಮ ಖಾಸಗಿ ದೃಷ್ಟಿಕೋನವನ್ನು ಬಹಿರಂಗಪಡಿಸಿದ್ದಾರೆ. 

ನಿಮ್ಮ ಸಂಗಾತಿ ಬೆಡ್ಡಲ್ಲಿ ಗುಡ್ ಅಲ್ಲವೆನ್ನೋದನ್ನು ಹೇಳುತ್ತೆ ಈ ಚಿಹ್ನೆಗಳು!

ಮುಟ್ಟಿನ ವಿಚಾರದಲ್ಲಿ ಸೈಲೆನ್ಸ್ (Silence)
ಅಲ್ಪ ಪ್ರಮಾಣದ ಮಹಿಳೆಯರು ಋತುಬಂಧಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಾರೆ. ಇಂತಹ ಬಹುತೇಕ ಪ್ರಕರಣಗಳನ್ನು ವೈದ್ಯಕೀಯ ಚಿಕಿತ್ಸೆ, ಉಪಚಾರದ ಮೂಲಕ ಶಮನಪಡಿಸಬಹುದು. ಅಷ್ಟಕ್ಕೂ ನಮ್ಮ ದೇಶದಲ್ಲಿ ಮುಟ್ಟು ಎನ್ನುವುದು ನಿಷೇಧಿತ ವಿಚಾರವಾಗಿದೆ. ಅದರ ಬಗ್ಗೆ ಎಲ್ಲರೂ ಮೌನ ವಹಿಸುತ್ತಾರೆ. ಹೆಚ್ಚಿನ ಚರ್ಚೆಯಾಗುವುದೇ ಇಲ್ಲ. ಪುರುಷರು, ಯುವಕರಲ್ಲೂ ಮುಟ್ಟಿನ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಇದರ ಬಗ್ಗೆಯೂ ಸಚಿವೆ (Minister) ಮಾತನಾಡಿರುವುದು ಗಮನಾರ್ಹ.

click me!