ಸದಾ ತನ್ನ ವೈಫಲ್ಯ ಮುಚ್ಚಿಡಲು ಯತ್ನಿಸುವ ಚೀನಾ ಸರ್ಕಾರವು ಕೋವಿಡ್‌ನಿಂದ ಸಾವಿಗೀಡಾದವರ ಅಧಿಕೃತ ಅಂಕಿಸಂಖ್ಯೆಯನ್ನು ಸರಿಯಾಗಿ ನೀಡುತ್ತಿಲ್ಲ. ಡಿ.4ರಿಂದ ಕೋವಿಡ್ ಸಾವಿನ ಪ್ರಕಟಣೆಯನ್ನೇ ಅದು ನಿಲ್ಲಿಸಿದೆ. ಚಿತಾಗಾರದ ಸಿಬ್ಬಂದಿಗಳು, ‘ನಮ್ಮ ಸಾಕಷ್ಟುನೌಕರರಿಗೆ ಕೋವಿಡ್ ಬಂದಿದೆ. ಹೀಗಾಗಿ ಶವ ಸುಡಲೂ ಸಿಬ್ಬಂದಿ ಕೊರತೆ ಇದೆ. ಇದ್ದ ಸಿಬ್ಬಂದಿಯೇ ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇವೆ’ಎಂದು ತಿಳಿಸಿರುವುದು ಆಘಾತಕಾರಿಯಾಗಿದೆ.
ಬೀಜಿಂಗ್: ವಿಶ್ವಕ್ಕೇ ಕೋವಿಡ್ ಅಂಟಿಸಿದ ಅಪಖ್ಯಾತಿ ಹೊತ್ತಿದ್ದ ಚೀನಾಗೆ ಈಗ ಕೊರೋನಾ ವೈರಸ್ ತಿರುಗುಬಾಣ ಆಗಿದ್ದು, ಪ್ರಕರಣಗಳ ವೃದ್ಧಿ ಮಾತ್ರವಲ್ಲ, ನಿತ್ಯ ನೂರಾರು ಸಾವುಗಳು (Death) ಸಂಭವಿಸುತ್ತಿವೆ. ಚಿತಾಗಾರಗಳಲ್ಲಿ ಶವಸಂಸ್ಕಾರಕ್ಕೆ ಕೂಡ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅನೇಕ ಕಡೆ 3 ದಿನ ಶವಗಳನ್ನು ಕ್ಯೂನಲ್ಲಿ ಇರಿಸಬೇಕಾದ ಸ್ಥಿತಿ ಇದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಸದಾ ತನ್ನ ವೈಫಲ್ಯ ಮುಚ್ಚಿಡಲು ಯತ್ನಿಸುವ ಚೀನಾ ಸರ್ಕಾರವು ಕೋವಿಡ್‌ನಿಂದ ಸಾವಿಗೀಡಾದವರ ಅಧಿಕೃತ ಅಂಕಿಸಂಖ್ಯೆಯನ್ನು ಸರಿಯಾಗಿ ನೀಡುತ್ತಿಲ್ಲ. ಡಿ.4ರಿಂದ ಕೋವಿಡ್ ಸಾವಿನ ಪ್ರಕಟಣೆಯನ್ನೇ ಅದು ನಿಲ್ಲಿಸಿದೆ. ಇದಲ್ಲದೆ ಕೋವಿಡ್ ಹಾವಳಿ 3 ವರ್ಷದಿಂದ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಕೇವಲ 5,235 ಜನರು ಮಾತ್ರ ಸೋಂಕಿಗೆ (Virus) ಬಲಿಯಾಗಿದ್ದಾರೆ ಎಂದು ಸರ್ಕಾರ ಹೇಳುತ್ತದೆ. ಆದರೆ ಬೀಜಿಂಗ್ ಹಾಗೂ ಚೀನಾದ ಇತರ ನಗರಗಳ ಬೀದಿ, ರುದ್ರಭೂಮಿಗಳಲ್ಲಿ ಸಂಚರಿಸಿದಾಗ ವಾಸ್ತವಿಕ ಚಿತ್ರಣವೇ ಬೇರೆ ಗೋಚರಿಸುತ್ತಿದೆ.
undefined
ಕೋವಿಡ್ ಕಡಿಮೆಯಾಯ್ತು ನಿಜ, ಆದ್ರೂ ಮಾಸ್ಕ್ ಧರಿಸೋದು ಬೆಸ್ಟ್ ಅಂತಾರೆ ತಜ್ಞರು
ಚಿತಾಗಾರದಲ್ಲಿ ಭಾರಿ ಪ್ರಮಾಣದ ಶವಗಳ ಸಾಲು
ಮಾಧ್ಯಮ ಪ್ರತಿನಿಧಿಗಳು ಬೀಜಿಂಗ್‌ನ ಮೈಯುನ್ ಚಿತಾಗಾರಕ್ಕೆ ಹೋದಾಗ ಅಲ್ಲಿ, ಭಾರಿ ಪ್ರಮಾಣದ ಶವಗಳ (Deadbody) ಸಾಲೇ ಕಂಡುಬಂತು. ಇದಲ್ಲದೆ, ‘ಅನೇಕ ಶವಗಳು ಇನ್ನೂ ಕಾರಿನಲ್ಲೇ ಇವೆ’ ಎಂದು ಕೆಲವರು ಹೇಳಿದರು. ಚಿತಾಗಾರದ ಸಿಬ್ಬಂದಿಗಳು, ‘ನಮ್ಮ ಸಾಕಷ್ಟುನೌಕರರಿಗೆ ಕೋವಿಡ್ ಬಂದಿದೆ. ಹೀಗಾಗಿ ಶವ ಸುಡಲೂ ಸಿಬ್ಬಂದಿ ಕೊರತೆ ಇದೆ. ಇದ್ದ ಸಿಬ್ಬಂದಿಯೇ ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇವೆ’ ಎಂದರು.
ಇನ್ನು ಹುಯೇರು ಚಿತಾಗಾರಕ್ಕೆ ಹೋದಾಗ, ‘ಇಲ್ಲಿ ಶವಸಂಸ್ಕಾರ ಆಗಬೇಕು ಎಂದರೆ 3 ದಿನ ಕಾಯಬೇಕು’ ಎಂದು ಸಿಬ್ಬಂದಿಯೊಬ್ಬ ಉತ್ತರಿಸಿದ. ಅಲ್ಲದೆ, ವಾಡಿಕೆಯ ದಿನಗಳಲ್ಲಿ ಇಲ್ಲಿ ನಿತ್ಯ 10-12 ಶವಗಳ ಸಂಸ್ಕಾರ ನಡೆಯುತ್ತಿತ್ತು. ಈಗ ನಿತ್ಯ ಸುಮಾರು 150 ಶವಗಳು ಇಲ್ಲಿ ಬರುತ್ತಿವೆ ಎಂದು ತಿಳಿಸಿದ್ದಾರೆ.
Canada Faces Tridemic: ಕೋವಿಡ್ ಬೆನ್ನಲ್ಲೇ ಕೆನಡಾದಲ್ಲಿ ಮತ್ತೊಂದು ಡೇಂಜರಸ್ ಸೋಂಕು !
‘ಎಲ್ಲ ಸಾವುಗಳೂ ಕೋವಿಡ್‌ನಿಂದಾಗಿಯೇ ಸಂಭವಿಸಿವೆ ಎನ್ನಲಾಗದು. ಆದರೂ ಬಹುಪಾಲು ಕೋವಿಡ್‌ನಿಂದಲೇ ಆಗುತ್ತಿವೆ. ಉಸಿರಾಟದ ಸಮಸ್ಯೆ ಕಾರಣ ಅನೇಕ ಸೋಂಕಿತರು ಆಸ್ಪತ್ರೆಗಳಲ್ಲಿ ನರಳುತ್ತಿದ್ದಾರೆ. ಕೊರೆವ ಚಳಿಗಾಲದಿಂದಲೂ ಸಾವಿನ ಸಂಖ್ಯೆ ಹೆಚ್ಚಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವೈದ್ಯಕೀಯ ಸಿಬ್ಬಂದಿಗಳು ಹೇಳಿದರು.
ಲಕ್ಷಣರಹಿತ ಕೇಸಿನ ವರದಿ ಇನ್ನಿಲ್ಲ:
ಜನಾಕ್ರೋಶಕ್ಕೆ ಮಣಿದು ಡಿ.7ರಿಂದ ಚೀನಾ ಶೂನ್ಯ ಕೋವಿಡ್ ನೀತಿ ಕೈಬಿಟ್ಟಿತ್ತು. ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಳ ಆಗುತ್ತಿರುವ ಕಾರಣ ಕೈಚೆಲ್ಲಿರುವ ಚೀನಾ, ‘ಇನ್ನು ಮುಂದೆ ಸೋಂಕು ಲಕ್ಷಣ ಇಲ್ಲದ ಪ್ರಕರಣಗಳನ್ನು ವರದಿ ಮಾಡುವುದಿಲ್ಲ. ಲಕ್ಷಣ ಇರುವ ರೋಗಿಗಳ ಸಂಖ್ಯೆ ಮಾತ್ರ ವರದಿ ಮಾಡಲಾಗುತ್ತದೆ. ಲಕ್ಷಣ ಇಲ್ಲದ ಕೋವಿಡ್ ಸೋಂಕಿತರು ಮನೆಯಲ್ಲೇ ಆರೈಕೆ ಪಡೆಯಬಹುದು ಎಂದು ಹೇಳಿದೆ.
ಕೊರೋನಾ ವೈರಸ್ ಮಾನವ ನಿರ್ಮಿತ, ಚೀನಾದ ವುಹಾನ್ ಲ್ಯಾಬ್‌ನಿಂದಲೇ ಸೋರಿಕೆ!
ಕೋವಿಡ್ ಭೀತಿ ಇನ್ನೂ ಮುಗಿದಿಲ್ಲ, ಡಬ್ಲ್ಯುಎಚ್‌ಒ
ವಿಶ್ವದಾದ್ಯಂತ ಹೊಸ ಕೋವಿಡ್ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆ ದಾಖಲಾಗಿದ್ದರೂ, ಸೋಂಕಿನ ಮೇಲೆ ನಿಗಾ, ಸೋಂಕಿತರ ಪತ್ತೆಗೆ ಪರೀಕ್ಷೆ (Test), ಹೊಸ ತಳಿಗಳ ಪತ್ತೆಗೆ ಸ್ವೀಕ್ಸೆನ್ಸಿಂಗ್, ಲಸಿಕಾಕರಣದಲ್ಲಿನ ನಿರ್ಲಕ್ಷ್ಯವು ಹೊಸ ಕುಲಾಂತರಿ ಉಗಮಕ್ಕೆ ವೇದಿಕೆ ಸೃಷ್ಟಿಸಬಲ್ಲದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಹೇಳಿದ್ದಾರೆ. ‘ನಾವು ಕೋವಿಡ್ ಸಾಂಕ್ರಾಮಿಕದ ಅಂತ್ಯದ ಹತ್ತಿರದಲ್ಲಿದ್ದೇವೆಯೇ ಹೊರತೂ, ಸಾಂಕ್ರಾಮಿಕ ಇನ್ನೂ ಅಂತ್ಯಗೊಂಡಿಲ್ಲ. ಹೀಗಾಗಿ ಎಚ್ಚರಿಕೆ ಅಗತ್ಯ’ ಎಂದು ಹೇಳಿದ್ದಾರೆ. ಚೀನಾ ಮತ್ತು ಬ್ರಿಟನ್‌ನ ಕೆಲ ಭಾಗಗಳಲ್ಲಿ ಮತ್ತೆ ಹೊಸ ಕೋವಿಡ್ ಪ್ರಕರಣಗಳ ಹೆಚ್ಚಳದ ಬೆನ್ನಲ್ಲೇ ಟೆಡ್ರೋಸ್ ಈ ಹೇಳಿಕೆ ನೀಡಿದ್ದಾರೆ.
‘ಕಳೆದ ವರ್ಷ ಕಾಣಿಸಿಕೊಂಡ ಒಮಿಕ್ರೋನ್‌ನ 500ಕ್ಕೂ ಹೆಚ್ಚು ಉಪತಳಿಗಳು ಇದೀಗ ವಿಶ್ವದಾದ್ಯಂತ ಪ್ರಸರಣದಲ್ಲಿವೆ. ಅವು ಅತ್ಯಂತ ತೀವ್ರವಾಗಿ ಹಬ್ಬಬಲ್ಲವು. ಹಿಂದಿನ ರೂಪಾಂತರಿಗಳಿಗೆ ಹೋಲಿಸಿದರೆ ಶ್ವಾಸಕೋಶ (Lungs) ವ್ಯವಸ್ಥೆಗೆ ಹೆಚ್ಚು ವೇಗವಾಗಿ ಹಬ್ಬಿ ಗಂಭೀರ ಹಾನಿ ಮಾಡಬಲ್ಲವು. ಇವುಗಳಲ್ಲಿನ ರೂಪಾಂತರಿಗಳು (Variant), ದೇಹದಲ್ಲಿ ಸೃಷ್ಟಿಯಾಗಿರುವ ಜೀವ ನಿರೋಧಕ ವ್ಯವಸ್ಥೆಯನ್ನೂ ಸುಲಭವಾಗಿ ದಾಟಬಲ್ಲ ಶಕ್ತಿ ಹೊಂದಿವೆ. ಹೀಗಾಗಿ ಎಚ್ಚರ ಅಗತ್ಯ’ ಎಂದು ಟೆಡ್ರೋಸ್ ಹೇಳಿದ್ದಾರೆ.