Health Tips: ಆರೋಗ್ಯದ ಬಗ್ಗೆ ಇದೆ ಈ ಎಲ್ಲ ಸುಳ್ಳು ನಂಬಿಕೆ

By Suvarna NewsFirst Published Apr 11, 2023, 7:00 AM IST
Highlights

ಆಹಾರ, ಆರೋಗ್ಯದ ಬಗ್ಗೆ ನಾವು ಹೆಚ್ಚಿನ ಗಮನ ನೀಡ್ತೇವೆ. ಎಲ್ಲವೂ ಸತ್ಯವೆಂದು ನಂಬಿಬಿಡ್ತೇವೆ. ಆದ್ರೆ ಅದು ತಪ್ಪು. ನಮ್ಮ ಆರೋಗ್ಯ ಸರಿಯಾಗಿರಬೇಕೆಂದ್ರೆ ನಾವು ಅದ್ರ ಸತ್ಯಾಸತ್ಯತೆ ತಿಳಿದಿರಬೇಕು. 
 

ಆರೋಗ್ಯಕರ ಮನಸ್ಸು ಹಾಗೂ ಆರೋಗ್ಯಕರ ದೇಹದ ಮಧ್ಯೆ ಅವಿನಾಭಾವ ಸಂಬಂಧವಿದೆ. ಒಂದು ಕೈಕೊಟ್ಟರೂ ಏರುಪೇರಾಗೋದು ನಿಶ್ಚಿತ. ಆರೋಗ್ಯವಂತ ವ್ಯಕ್ತಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿದ್ದಾಗ ಮಾತ್ರ ರೋಗಗಳಿಂದ ಮುಕ್ತನಾಗಿರುತ್ತಾನೆ. ಈಗಿನ ಒತ್ತಡದ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳೋದು ಸವಾಲಿನ ಕೆಲಸ. ಅದ್ರಲ್ಲೂ ಕೊರೊನಾ ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಅನೇಕ ಊಹಾಪೋಹಗಳು ಜನರನ್ನು ಭಯದಲ್ಲಿ ಜೀವನ ನಡೆಸುವಂತೆ ಮಾಡಿವೆ. 

ಅನೇಕ ಜನರು ಆರೋಗ್ಯ (Health) ಕ್ಕೆ ಸಂಬಂಧಿಸಿದ ಏನೇ ಮಾಹಿತಿ ಇದ್ರೂ ನಂಬುತ್ತಾರೆ. ಅದ್ರ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವ ಪ್ರಯತ್ನ ನಡೆಸೋದಿಲ್ಲ. ಸುಳ್ಳು – ಸತ್ಯಗಳ ನಡುವೆ ಇರುವ ಅಂತರವನ್ನು ಅರಿಯೋದಿಲ್ಲ. ಆರೋಗ್ಯದ ಬಗ್ಗೆ ಅನೇಕ ವದಂತಿಗಳಿವೆ. ಇದನ್ನು ಕುರುಡಾಗಿ ನಂಬುವ ಜನರು ತಮ್ಮ ಆರೋಗ್ಯ ಹಾಳುಮಾಡಿಕೊಳ್ತಾರೆ. ನಾವಿಂದು ಜನರು ನಂಬುವ ಕೆಲ ಮಿಥ್ಯಗಳ ಬಗ್ಗೆ ನಿಮಗೆ ತಿಳಿಸ್ತೇವೆ.

Latest Videos

Health Tips: ನಿಮ್ಮ ದೇಹದ ತೂಕ ಹೆಚ್ತಾ ಇದ್ಯಾ? ಈ ಲಕ್ಷಣಗಳ ಮೂಲಕ ತಿಳ್ಕೊಳ್ಳಿ

ಫೈಬರ್ (Fiber) ಮಲಬದ್ಧತೆಗೆ ಒಳ್ಳೆಯದು : ಮಲಬದ್ಧತೆ ಸಮಸ್ಯೆಗೆ ಫೈಬರ್ ಕೊರತೆ ಕಾರಣವೆಂದು ಬಹುತೇಕ ಜನರು ನಂಬುತ್ತಾರೆ. ಆದ್ರೆ ಫೈಬರ್ ಕೊರತೆ ಮಾತ್ರವಲ್ಲ ಮಲಬದ್ಧತೆ ಸಮಸ್ಯೆಗೆ ಕಬ್ಬಿಣದ ಕೊರತೆಯೂ ಕಾರಣವಾಗುತ್ತದೆ. ಕರಗುವ ನಾರಿನಂಶವಿರುವ ಆಹಾರವನ್ನು ಮಲಬದ್ಧತೆ ಸಮಸ್ಯೆಯಿರುವವರು ಸೇವನೆ ಮಾಡಬೇಕು. ಇದ್ರ ಜೊತೆ ದ್ರವ ಆಹಾರವನ್ನು ಕೂಡ ಅವರು ಸೇವನೆ ಮಾಡಬೇಕು ಎಂಬುದನ್ನು ಮರೆಯಬಾರದು.

ಕೊಬ್ಬು (Fat) ಆರೋಗ್ಯಕ್ಕೆ ಹಾನಿಕಾರಕ : ಕೊಬ್ಬು ಎಂದ ತಕ್ಷಣ ಅದು ಹಾನಿಕಾರಕ ಎಂದು ಜನರು ಭಾವಿಸ್ತಾರೆ. ಆದ್ರೆ ಎಲ್ಲ ರೀತಿಯ ಕೊಬ್ಬು ಆರೋಗ್ಯಕ್ಕೆ ಕೆಟ್ಟದಲ್ಲ. ಉತ್ತಮ ಕೊಬ್ಬುಗಳು ನಮ್ಮ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತವೆ. ಕಡಲೆಕಾಯಿ ಎಣ್ಣೆ, ರೈಸ್ ಬ್ರೌನ್ ಆಯಿಲ್, ವರ್ಜಿನ್ ತೆಂಗಿನ ಎಣ್ಣೆ ಸೇರಿದಂತೆ ಒಳ್ಳೆ ಕೊಬ್ಬಿರುವ ಆಹಾರವನ್ನು ಸೇವನೆ ಮಾಡಬೇಕು.

Health Tips: ಆರೋಗ್ಯಕ್ಕೂ ಆಹಾರಕ್ಕೂ ಇದೆ ನೇರ ಸಂಬಂಧ, ಇಲ್ಲಿದೆ ಚಾರ್ಟ್

ನೀರಿನ ಬದಲು ಪಾನೀಯ ಸೇವನೆ : ದೇಹಕ್ಕೆ ದ್ರವ ಪದಾರ್ಥ ಹೋಗ್ಬೇಕು, ನೀರಾದ್ರೆ ಏನು, ಪಾನೀಯವಾದ್ರೆ ಏನು ಎಂದು ಪ್ರಶ್ನೆ ಮಾಡುವವರಿದ್ದಾರೆ. ಇನ್ನು ಕೆಲವರು ನೀರಿಗಿಂತ ಪಾನೀಯವನ್ನು ಹೆಚ್ಚು ಕುಡಿಯುತ್ತಾರೆ. ಆದ್ರೆ ಈ ಪಾನೀಯಗಳು ನೀರಿನಂತೆ ಒಳ್ಳೆಯದಲ್ಲ. ಅದ್ರಲ್ಲಿರುವ ಸಕ್ಕರೆ ಪ್ರಮಾಣ ನಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ.

ತ್ವಚೆಗೆ ಒಳ್ಳೆಯದು ಟ್ಯಾನ್ : ಶೇಕಡಾ 68ರಷ್ಟು ಮಂದಿ ಟ್ಯಾನ್ ಆಗೋದು ಚರ್ಮಕ್ಕೆ ಒಳ್ಳೆಯದು ಎಂದು ಭಾವಿಸ್ತಾರೆ. ಸೂರ್ಯನ ಕಿರಣಗಳು ನೇರವಾಗಿ ಚರ್ಮಕ್ಕೆ ತಾಗಿ, ಚರ್ಮದ ಬಣ್ಣ ಬದಲಾಗೋದನ್ನು ಟ್ಯಾನ್ ಎನ್ನಲಾಗುತ್ತದೆ. ಆದ್ರೆ ಇದು ಅತಿಯಾದ್ರೆ ಅಪಾಯಕಾರಿ. ಚರ್ಮದ ಕ್ಯಾನ್ಸರ್ ಸಂಭವಿಸುವ ಸಾಧ್ಯತೆಯಿರುತ್ತದೆ. ಅಲ್ಲದೆ ಚರ್ಮ ರೋಗ ಕಾಡಬಹುದು.

ದಿನದಲ್ಲಿ 8 ಗ್ಲಾಸ್ ನೀರನ್ನು ಸೇವಿಸ್ಬೇಕು : ಪ್ರತಿ ದಿನ 8 ಗ್ಲಾಸ್ ನೀರು ಕುಡಿಯಬೇಕೆಂದು ಹೇಳಲಾಗುತ್ತದೆ. ಆದ್ರೆ ಈ 8 ಗ್ಲಾಸ್ ಎಲ್ಲರಿಗೂ ಅನ್ವಯವಾಗುವುದಿಲ್ಲ. ಕೆಲವರು ಹೆಚ್ಚು ಕೆಲಸ ಮಾಡಿ, ಹೆಚ್ಚು ದಣಿದಿರುತ್ತಾರೆ. ಅವರು ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆ ಮಾಡೇಕಾಗುತ್ತದೆ. ನೀರಿನಾಂಶ ಇರುವ ಹಣ್ಣು ಹಾಗೂ ತರಕಾರಿಯನ್ನು ಹೆಚ್ಚಾಗಿ ಸೇವನೆ ಮಾಡುವ ಜನರಿಗೆ ನೀರು ಹೆಚ್ಚಾಗಿ ಬೇಕಾಗುವುದಿಲ್ಲ.

ಸೂಪರ್‌ಫುಡ್‌ಗಳು (Super Food) ಸೂಪರ್‌ಪವರ್‌ ಹೊಂದಿವೆ :  ಸೂಪರ್ ಫುಡ್ ಗಳು ತಮ್ಮದೇ ಆದ ಪ್ರಯೋಜನಗಳನ್ನು ಹೊಂದಿವೆ, ಆದರೆ ಅವುಗಳು ಯಾವುದೇ ಮಾಂತ್ರಿಕ ಗುಣಲಕ್ಷಣಗಳನ್ನು ಹೊಂದಿಲ್ಲ. ಸೂಪರ್ ಫುಡ್ ಗಳು ಪೌಷ್ಟಿಕಾಂಶ ಭರಿತ ಆಹಾರವಾಗಿದ್ದು ಅದು ಉಳಿದವುಗಳಿಗಿಂತ ಸ್ವಲ್ಪ ಹೆಚ್ಚು ಪೌಷ್ಟಿಕಾಂಶವನ್ನು ನೀಡುತ್ತದೆ. ಹಾಗಂತ ಅದನ್ನು ಹೆಚ್ಚಾಗಿ ತಿನ್ನುವ ಅವಶ್ಯಕತೆಯಿಲ್ಲ. ನಮ್ಮ ದೇಹಕ್ಕೆ ಅಗತ್ಯವಿರುವಷ್ಟೆ ಸೇವನೆ ಮಾಡ್ಬೇಕು. 

ಬಿಸಿನೀರಿನ ಸ್ನಾನ ಹಿತಕರ : ಬಿಸಿ ನೀರಿನ ಸ್ನಾನ ಚರ್ಮಕ್ಕೆ ತುಂಬಾ ಹಾನಿಕಾರಕವಾಗುತ್ತದೆ. ದೀರ್ಘಕಾಲ ಬಿಸಿ ನೀರಿನ ಸ್ನಾನ ಮಾಡುವುದ್ರಿಂದ ಚರ್ಮದ ನೈಸರ್ಗಿಕ ತೈಲ ಕಡಿಮೆಯಾಗುತ್ತದೆ. ಇದ್ರಿಂದ ಚರ್ಮ ಒಣಗುತ್ತದೆ. ತುರಿಕೆ ಶುರುವಾಗುತ್ತದೆ.
 

click me!