ಹಾರ್ವರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಆರೋಗ್ಯಕರ ಆಹಾರದ ಪ್ಲೇಟ್ ಸಿದ್ಧಪಡಿಸಿದ್ದಾರೆ. ಯಾವ ಪ್ರಮಾಣದಲ್ಲಿ ಯಾವ ಆಹಾರ ಸೇವನೆ ಮಾಡ್ಬೇಕೆಂದು ಅವರು ಸಲಹೆ ನೀಡಿದ್ದಾರೆ. ಉತ್ತಮ ಆರೋಗ್ಯಕ್ಕೆ ನೀವೂ ಇದನ್ನು ಫಾಲೋ ಮಾಡಿ.
ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಆರೋಗ್ಯವೊಂದು ಚೆನ್ನಾಗಿದ್ದರೆ ಏನು ಬೇಕಾದರೂ ಸಾಧಿಸಬಹುದು. ಹಣ, ಆಸ್ತಿ, ಐಶ್ವರ್ಯಕ್ಕಿಂತ ಆರೋಗ್ಯ ಎಲ್ಲರಿಗೂ ದೊರಕುವಂತಾಗಬೇಕು. ಆದರೆ ಈಗಿನ ಜೀವನಕ್ರಮ, ಆಹಾರ ಪದ್ಧತಿ ಇದ್ಯಾವುದೂ ಆರೋಗ್ಯಕ್ಕೆ ಪೂರಕವಾಗಿಲ್ಲ. ಇವುಗಳ ಹೊರತಾಗಿ ವಾತಾವರಣ ಕೂಡ ಅಷ್ಟೇ ಹದಗೆಟ್ಟಿರುವುದು ಖೇದಕರ ಸಂಗತಿ. ಮನೆಯ ಒಳಗಡೆ ಫಾಸ್ಟ್ ಫುಡ್, ಬೇಕರಿ ತಿನಿಸುಗಳು, ಕರಿದ ಪದಾರ್ಥಗಳು ಶರೀರವನ್ನು ಹಾಳುಮಾಡುತ್ತವೆ. ಮನೆಯಿಂದ ಹೊರಗೆ ಕಾಲಿಟ್ಟರೆ ಕಲುಷಿತ ವಾತಾವರಣ ವೈರಸ್ ಮುಂತಾದವು ಮನುಷ್ಯರ ಜೀವನವನ್ನು ತಮ್ಮ ಸ್ವಾಧೀನಕ್ಕೆ ತಂದುಕೊಂಡಿವೆ.
ಆರೋಗ್ಯ (Health) ಚೆನ್ನಾಗಿರಬೇಕೆಂದರೆ ಸುತ್ತಲಿನ ವಾತಾವರಣ, ನಾವು ಸೇವಿಸುವ ಆಹಾರ (Food) ಹಾಗೂ ನಮ್ಮ ಜೀವನಕ್ರಮ ಕೂಡ ಚೆನ್ನಾಗಿರಬೇಕು. ಅದನ್ನು ನಾವು ಸರಿಯಾಗ ಪಾಲಿಸಿದಾಗ ಮಾತ್ರ ಸದೃಢ, ಆರೋಗ್ಯವಂತ ಶರೀರವನ್ನು ನಾವು ಹೊಂದಲು ಸಾಧ್ಯ. ಮನೆಯಲ್ಲಿನ ನಮ್ಮ ಆಹಾರ ಕ್ರಮ, ನಿತ್ಯದ ನಮ್ಮ ಚಟುವಟಿಕೆಗಳು ನಮ್ಮನ್ನು ಹೆಚ್ಚು ಎಕ್ಟಿವ್ ಆಗಿರಿಸುತ್ತೆ. ಒಂದು ದಿನದ ನಮ್ಮ ಊಟ ಅಥವಾ ತಿಂಡಿಗಳಲ್ಲಿ ಕೊಂಚ ವ್ಯತ್ಯಾಸವಾದರೂ ನಮ್ಮ ಶರೀರ ಸಮತೋಲನ ಕಳೆದುಕೊಳ್ಳುತ್ತೆ. ಅದರಿಂದ ಆರೋಗ್ಯದಲ್ಲಿ ಏರುಪೇರಾಗುತ್ತೆ. ಆಹಾರ ಸೇವಿಸುವುದರಲ್ಲಿ ಕೂಡ ಕ್ರಮವಿದೆ. ನಮಗೆ ಇಷ್ಟವಾದ ತಿಂಡಿ ಎಂದಾಕ್ಷಣ ನಾವು ಮಿತಿಮೀರಿ ಅದನ್ನು ತಿನ್ನುತ್ತೇವೆ. ಇದರಿಂದ ದೇಹದಲ್ಲಿ ಅನೇಕ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇನ್ನು ನಮಗೆ ಇಷ್ಟವಾಗದ ಕೆಲವು ಆಹಾರ ಪದಾರ್ಥಗಳನ್ನು ನಾವು ಸೇವಿಸುವುದೇ ಇಲ್ಲ. ಹೀಗೆ ಮಾಡುವುದರಿಂದ ಆ ಆಹಾರದಲ್ಲಿರುವ ಪೋಷಕಾಂಶ (Nutrient) ಗಳ ಕೊರತೆ ನಮ್ಮನ್ನು ಕಾಡುತ್ತದೆ. ಆದ್ದರಿಂದ ಸಮತೋಲನ ಆಹಾರ ಶರೀರಕ್ಕೆ ಅತ್ಯಗತ್ಯವಾಗಿದೆ. ಇದನ್ನು ಮನಗಂಡ ಹಾರ್ವರ್ಡ್ ಯುನಿವರ್ಸಿಟಿ (University) ಯವರು ಆಹಾರದ ಪ್ಲೇಟ್ ಹೇಗಿರಬೇಕು ಎಂಬುದಕ್ಕೆ ಒಂದು ಚಾರ್ಟ್ ತಯಾರಿಸಿದ್ದಾರೆ. ಅವರ ಈ ಆಹಾರದ ಪಟ್ಟಿಯಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳೋಣ.
undefined
HEALTHY SITTING : ದಿನದಲ್ಲಿ15 ನಿಮಿಷ ನೆಲದ ಮೇಲ್ ಕುಳಿತರೆ ಆಗೋ ಲಾಭ ಒಂದೆರಡಲ್ಲ!
ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪೌಷ್ಟಿಕಾಂಶ ತಜ್ಞರು ಆರೋಗ್ಯಕರ ಪ್ಲೇಟ್ ಹೇಗಿರಬೇಕೆಂದು ಮಾರ್ಗದರ್ಶನ ಮಾಡಿದ್ದಾರೆ. ಅದರಿಂದ ನೀವು ಕೂಡ ಆರೋಗ್ಯಕರ ಪ್ಲೇಟ್ ತಯಾರಿಸಬಹುದು.
• ಈ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ನಾವು ಸೇವಿಸುವ ಆಹಾರದಲ್ಲಿ ಅರ್ಧದಷ್ಟು ಆರೋಗ್ಯಕರ ಹಣ್ಣು ಮತ್ತು ತರಕಾರಿಗಳಿಂದ ತುಂಬಿರಬೇಕು ಎಂದು ಹೇಳುತ್ತಾರೆ. ತರಕಾರಿಗಳ ಪೈಕಿ ಆಲೂಗಡ್ಡೆಯನ್ನು ತೆಗೆದಿಡಬೇಕು ಏಕೆಂದರೆ ಅದು ರಕ್ತದಲ್ಲಿನ ಗ್ಲೂಕೋಸ್ ಮೇಲೆ ನಕಾರಾತ್ಮಕ ಪ್ರಭಾವವನ್ನು ಬೀರುತ್ತೆ ಎಂಬುದು ತಜ್ಞರ ಅಭಿಪ್ರಾಯ.
Mental Health : ನಿಮ್ಮ ಮನಸ್ಸಿಗೆ ಈ ಸಂದರ್ಭದಲ್ಲಿ ಬೇಕು ವಿಶ್ರಾಂತಿ
• ನಾವು ತೆಗೆದುಕೊಳ್ಳುವ ಆಹಾರದಲ್ಲಿ ನಾಲ್ಕನೇ ಒಂದು ಭಾಗದಷ್ಟು ಧಾನ್ಯಗಳು ಇರಬೇಕು. ಗೋಧಿ, ಬಾರ್ಲಿ, ರಾಗಿ, ಜೋಳದಂತಹ ಧಾನ್ಯಗಳು ದೇಹದ ಇನ್ಸುಲಿನ್ ಮೇಲೆ ಕಡಿಮೆ ಪರಿಣಾಮ ಬೀರುತ್ತೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
• ಹಾರ್ವರ್ಡ್ ವಿಶ್ವವಿದ್ಯಾಲಯ ಆರೋಗ್ಯಕರ ಆಹಾರದಲ್ಲಿ ಸಸ್ಯಜನ್ಯ ಎಣ್ಣೆಗಳನ್ನು (Vegetable Oil) ಸೇರಿಸಲು ಸೂಚಿಸಿದೆ. ಸಸ್ಯಜನ್ಯ ಎಣ್ಣೆಗಳಾದ ಆಲಿವ್ (Olive Oil), ಸೂರ್ಯಕಾಂತಿ (Sun Flower), ಕಡಲೆಕಾಯಿ (Groundnut), ಸಾಸಿವೆ ಇತ್ಯಾದಿ ಎಣ್ಣೆಗಳನ್ನು ಬಳಕೆ ಮಾಡಲು ಸೂಚಿಸಿದೆ. ಇಂತಹ ಸಸ್ಯಜನ್ಯ ಎಣ್ಣೆಗಳು ಅನಾರೋಗ್ಯಕ್ಕೆ ದಾರಿಯಾಗುವ ಟ್ರಾನ್ಸ್ ಫ್ಯಾಟ್ ಗಳನ್ನು ಹೊಂದಿರುವುದಿಲ್ಲ. • ಸಿಹಿ ಖಾದ್ಯಗಳಿಂದ ದೂರವಿರಬೇಕು ಎನ್ನುವುದು ಹಾರ್ವರ್ಡ್ ವಿಜ್ಞಾನಿಗಳ ಕಿವಿಮಾತಾಗಿದೆ. ಸಿಹಿಯನ್ನು ಕಡಿಮೆಗೊಳಿಸುವುದರ ಜೊತೆಗೆ ದಿನಕ್ಕೆ ಎರಡು ಅಥವಾ ಮೂರು ಬಾರಿ ಹಾಲು ಅಥವಾ ಹಾಲಿನಿಂದ ಮಾಡಿದ ಉತ್ಪನ್ನಗಳನ್ನು ಸೇವಿಸಬೇಕು.
ಕೆಲವರು ಹೊಟೆಲ್‌ಗಳಲ್ಲಿ ಅಥವಾ ಮನೆಯಲ್ಲಿ ಕರಿದ ಪದಾರ್ಥಗಳನ್ನೋ (Fried Food) ಅಥವಾ ರೊಟ್ಟಿ (Roti) ಮುಂತಾದವುಗಳನ್ನೋ ತಿನ್ನುತ್ತಾರೆ ಅವುಗಳ ಜೊತೆ ತರಕಾರಿ ಹಣ್ಣುಗಳನ್ನು ಸೇವನೆ ಮಾಡುವುದಿಲ್ಲ. ಹೀಗೆ ಮಾಡುವುದರಿಂದ ಆರೋಗ್ಯ ಕೆಡುವುದು ನಿಶ್ಚಿತ. ನಾವು ತಿನ್ನುವ ಆಹಾರದ ಜೊತೆ ಜೊತೆಯಲ್ಲೇ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಹಣ್ಣು ತರಕಾರಿಗಳನ್ನು ಕೂಡ ಚೆನ್ನಾಗಿ ತೊಳೆದು ತಿನ್ನಬೇಕು. ಇದರಿಂದ ಉತ್ತಮ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದಾಗಿದೆ.