ಕೋವಿಡ್ ಕಡಿಮೆಯಾಯ್ತು ನಿಜ, ಆದ್ರೂ ಮಾಸ್ಕ್‌ ಧರಿಸೋದು ಬೆಸ್ಟ್ ಅಂತಾರೆ ತಜ್ಞರು

By Vinutha PerlaFirst Published Dec 7, 2022, 4:34 PM IST
Highlights

ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಎಂಬಂತಾಗಿದೆ ಕೋವಿಡ್ ಸ್ಥಿತಿ. ಒಂದೆಡೆ ಕೊರೋನಾ ಸೋಂಕಿನ ಪ್ರಭಾವ ಕಡಿಮೆಯಾಯ್ತು ಎಂದು ಅಂದುಕೊಳ್ಳುತ್ತಿರುವಾಗಲೇ ಇನ್ನೊಂದೆಡೆ ಚೀನಾದಲ್ಲಿ ಕೋವಿಡ್ ಸೋಂಕು ಸ್ಫೋಟವಾಗುತ್ತಿದೆ. ಈ ಮಧ್ಯೆ ಹೊಸ ಹೊಸ ಸೋಂಕುಗಳು, ಹೆಚ್ಚುತ್ತಿರುವ ಮಾಲಿನ್ಯದ ಪ್ರಮಾಣದಿಂದಾಗಿ ಮಾಸ್ಕ್‌ ಧರಿಸೋದು ಕಡ್ಡಾಯ ಎಂಬ ಚರ್ಚೆಯೂ ನಡೆಯುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಮುಂಬೈ: ಸತತ ಎರಡು ವರ್ಷಗಳ ಕಾಲ ಜಗತ್ತಿನಾದ್ಯಂತ ಜನರು ಕೊರೋನಾ ಸೋಂಕಿನ (Corona virus) ತೀವ್ರತೆಗೆ ತತ್ತರಿಸಿ ಹೋಗಿದ್ದರು. ಚಿಕಿತ್ಸೆ ದೊರಕದೆ, ಚಿಕಿತ್ಸೆ (Treatment) ಫಲಕಾರಿಯಾಗದೆ ಅದೆಷ್ಟೋ ಮಂದಿ ಮೃತಪಟ್ಟರು. ಈಗ ಸ್ಪಲ್ಪ ಮಟ್ಟಿಗೆ ಭಾರತದಲ್ಲಿ ಕೋವಿಡ್ ತೀವ್ರತೆ ಕಡಿಮೆಯಾಗುತ್ತಾ ಹೋಗುತ್ತಿದೆ. ಈ ಮಧ್ಯೆ ಚೀನಾದಲ್ಲಿ ಕೋವಿಡ್‌ಗೆ ಇನ್ನೂ 20 ಲಕ್ಷ ಮಂದಿ ಬಲಿಯಾಗುವ ಆತಂಕ (Anxiety) ಎದುರಾಗಿದೆ. ಹೀಗಾಗಿ ನಿರ್ಬಂಧ ಸಡಿಲಿಕೆಯಿಂದ ಭಾರೀ ಅಪಾಯ (Danger) ಎದುರಾಗಲಿದೆ ಎಂದು ತಜ್ಞರು (Experts) ಎಚ್ಚರಿಕೆ ನೀಡಿದ್ದಾರೆ. ಚೀನಾದಲ್ಲಿರುವುದು ಅಂತಾರಾಷ್ಟ್ರೀಯ ಮಾನ್ಯತೆ ಇರದ ಲಸಿಕೆ (Vaccine). ಅದಲ್ಲದೆ ಹೆಚ್ಚಿನ ಚೀನೀಯರು ಕೋವಿಡ್‌ ಬೂಸ್ಟರ್‌ ಡೋಸ್‌ ಪಡೆದಿಲ್ಲವಾದ ಕಾರಣ ಸಾವಿನ ಪ್ರಮಾಣ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.

ಇದಲ್ಲದೆ ಹೊಸ ಹೊಸ ಸೋಂಕುಗಳು ಸಹ ವಕ್ಕರಿಸುತ್ತಿವೆ. ಮಾತ್ರವಲ್ಲ ಹೆಚ್ಚಿನ ದೇಶಗಳಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಯುಎಸ್, ಕೆನಡಾ ಮತ್ತು ಚೀನಾದಲ್ಲಿ ಮಾಸ್ಕ್‌ ಕಡ್ಡಾಯಗಳಿಸುವ ಬಗ್ಗೆ ಮತ್ತೆ ಚರ್ಚೆ ನಡೆಯುತ್ತಿದೆ.

China Covid: ಚೀನಾದಲ್ಲಿ ಕೋವಿಡ್‌ಗೆ ಇನ್ನೂ 20 ಲಕ್ಷ ಮಂದಿ ಬಲಿಯಾಗುವ ಆತಂಕ ! 

ಮತ್ತೆ ಮಾಸ್ಕ್ ಕಡ್ಡಾಯಗೊಳಿಸಲು ತಜ್ಞರು ಹೇಳ್ತಿರೋದ್ಯಾಕೆ ?
ಯುಎಸ್, ಕೆನಡಾ ಮತ್ತು ಚೀನಾದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ಮಾಲಿನ್ಯದಿಂದ ದೂರವಿರಲು ಮಾಸ್ಕ್ ಧರಿಸುವುದು ಒಳ್ಳೆಯದು ಎಂಬ ಸಲಹೆ ಕೇಳಿ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಹುಪಾಲು ಜನರು ಮಾಸ್ಕ್‌ಗೆ ಆದ್ಯತೆ ನೀಡುವುದಿಲ್ಲ. ಆದರೆ ಇದು ಕೋವಿಡ್-19, ಫ್ಲೂ ಮತ್ತು ಭಾರತೀಯ ನಗರಗಳಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ವಿರುದ್ಧ ಇ ಉತ್ತಮ ರಕ್ಷಣೆಯಾಗಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಸಾಮಾನ್ಯ ಬಟ್ಟೆಯ ಮುಖವಾಡವು ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸುತ್ತದೆ ಎಂದು ದಕ್ಷಿಣ ಮುಂಬೈನ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರು ಹೇಳಿದ್ದಾರೆ.

ಹೆಚ್ಚಿನ ದೇಶಗಳು ಸುಮಾರು ಒಂಬತ್ತು ತಿಂಗಳ ಹಿಂದೆ ಕಡ್ಡಾಯ ಮಾಸ್ಕ್‌ ನಿಯಮವನ್ನು ತೆಗೆದುಹಾಕಿವೆ.  ಆದರೆ ಚೀನಾದಲ್ಲಿ ಮತ್ತೆ ಕೋವಿಡ್ ಹೆಚ್ಚುತ್ತಿರುವ ಕಾರಣ ಏಪ್ರಿಲ್‌ನಲ್ಲಿ ಅದನ್ನು ಮತ್ತೆ ಮರುಪರಿಚಯಿಸಲಾಗಿದೆ.. ಮುಖವಾಡಗಳನ್ನು ಧರಿಸುವುದು ಜನರಲ್ಲಿ ನೈತಿಕ ನಡವಳಿಕೆಯನ್ನು ಹೊರತರುತ್ತದೆ ಎಂದು ಒತ್ತಿಹೇಳಲು ಇಲ್ಲಿ ಮುಖವಾಡಗಳ ಬಳಕೆಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಲಾಗಿದೆ. ಕೆನಡಾದಲ್ಲಿ, ಇತ್ತೀಚಿನ ತಿಂಗಳುಗಳಲ್ಲಿ ಅನೇಕ ಆರೋಗ್ಯ ಕಾರ್ಯಕರ್ತರು ಮಾಸ್ಕ್ ಕಡ್ಡಾಯ ಆದೇಶವನ್ನು ಮಾಡಲು ಒತ್ತಾಯಿಸುತ್ತಿದ್ದಾರೆ. ಯಾಕೆಂದರೆ ಇದು ಉಸಿರಾಟದ ಕಾಯಿಲೆಗಳನ್ನು ತಡೆಯಬಹುದು ಎಂಬ ಅಭಿಪ್ರಾಯವಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ನಿರ್ಬಂಧ ಜಾರಿ, ಜೊತೆಗೊಂದು ಎಚ್ಚರಿಕೆ!

ಕೋವಿಡ್ ಹೊರತುಪಡಿಸಿ, ಇನ್ಫ್ಲುಯೆನ್ಸ ಮತ್ತು ಉಸಿರಾಟದ ಸಿನ್ಸಿಟಿಯಲ್ ವೈರಸ್ (RSV) ಇವೆ. ಇವು ಜನರಲ್ಲಿ ಕಾಯಿಲೆಗೆ ಕಾರಣವಾಗುತ್ತಿದೆ. ಯುಎಸ್‌ನಲ್ಲಿ, ನವೆಂಬರ್ ಒಂದರಲ್ಲೇ ಕೋವಿಡ್‌ನಿಂದ 9,000 ಜನರು ಸಾವನ್ನಪ್ಪಿದ ನಂತರ #MaskUp ಹಲವಾರು ದಿನಗಳ ವರೆಗೆ ಟ್ರೆಂಡಿಂಗ್‌ನಲ್ಲಿದೆ. ಮುಂಬೈನಲ್ಲಿ, ಮಾರ್ಚ್ 2020ರಿಂದ ಕೋವಿಡ್ ಅತ್ಯಂತ ಕಡಿಮೆ ಮಟ್ಟದಲ್ಲಿದೆ. ಈ ಸಮಯದಲ್ಲಿ ಭಾರತದಲ್ಲಿ ಮುಖವಾಡ (Mask)ಗಳನ್ನು ಕಡ್ಡಾಯಗೊಳಿಸಲು ಯಾವುದೇ ಕಾರಣವಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ ಮೂರು ವಾರಗಳಿಂದ ಮುಂಬೈನಲ್ಲಿ ಸರಾಸರಿ ಕೋವಿಡ್ ಪ್ರಕರಣಗಳ ಸಂಖ್ಯೆ ಒಂದೇ ಅಂಕೆಯಲ್ಲಿದೆ.

ಮಾಲಿನ್ಯದ ವಿರುದ್ಧ ರಕ್ಷಣೆಯಾಗಿ ಮಾಸ್ಕ್‌ ಬಳಕೆ
ಸಿಂಗಾಪೂರ್ ಮತ್ತು ಜಪಾನ್‌ನಂತಹ ಕೆಲವು ದೇಶಗಳಲ್ಲಿ, ಜನರು ಜ್ವರದ (Fever) ಸಮಯದಲ್ಲಿ ಮುಖವಾಡವನ್ನು ಬಳಸುತ್ತಾರೆ ಎಂದು ವೈದ್ಯರು ಹೇಳಿದರು. ಚೀನಾದಲ್ಲಿ, ವಾಯು ಮಾಲಿನ್ಯದ ವಿರುದ್ಧ ರಕ್ಷಣೆಯಾಗಿ ಮುಖವಾಡಗಳನ್ನು ನಿಯಮಿತವಾಗಿ ಬಳಸಲಾಗುತ್ತಿತ್ತು. ಹವಾನಿಯಂತ್ರಿತ ಕೆಲಸದ ಸ್ಥಳದಲ್ಲಿ ಅಥವಾ ರೈಲುಗಳು ಮತ್ತು ಬಸ್‌ಗಳಂತಹ ಜನನಿಬಿಡ ಸ್ಥಳಗಳಲ್ಲಿ ಮಾಸ್ಕ್‌ ಬಳಸುವುದು ಇನ್ನೂ ಒಳ್ಳೆಯದು ಎಂದು ಸ್ಥಳೀಯ ವೈದ್ಯರು ಹೇಳಿದ್ದಾರೆ. ಕೋವಿಡ್ ಸಂಪೂರ್ಣವಾಗಿ ಕಣ್ಮರೆಯಾಗದ ಕಾರಣ ಹಿರಿಯ ನಾಗರಿಕರು, ದುರ್ಬಲತೆ ಹೊಂದಿರುವ ಜನರು ಮಾಸ್ಕ್ ಬಳಸುವುದನ್ನು ಮುಂದುವರಿಸಬೇಕು ಎಂದು ತಿಳಿಸಿದ್ದಾರೆ.

click me!