ಅಚ್ಚಕುಟ್ಟಾದ 32 ಹಲ್ಲಿನೊಂದಿಗೆ ಹುಟ್ಟಿದ ಹೆಣ್ಣು ಮಗು, ಈಗಿನ ಮಕ್ಕಳು ತುಂಬಾ ಫಾಸ್ಟ್!

By Chethan Kumar  |  First Published Jul 20, 2024, 4:42 PM IST

ಈಗಿನ ಮಕ್ಕಳು ತುಂಬಾ ಫಾಸ್ಟ್, ಚುರುಕು ಅನ್ನೋ ಮಾತುಗಳನ್ನು ಕೇಳುತ್ತೇವೆ. ಆದರೆ ಈ ಘಟನೆ ಬಳಿಕ ಇಷ್ಟೊಂದು ಫಾಸ್ಟ್? ಅನ್ನೋ ಅಚ್ಚರಿಗೆ ಕಾರಣವಾಗಬಹುದು.ಕಾರಣ ಈ ಹೆಣ್ಣು ಮಗು 32 ಹಲ್ಲಿನೊಂದಿಗೆ ಜನಿಸಿದ್ದಾಳೆ. ಈ ಕುರಿತ ವಿಡಿಯೋವನ್ನು ಮಗುವಿನ ತಾಯಿ ಹಂಚಿಕೊಂಡಿದ್ದಾರೆ.
 


ಟೆಕ್ಸಾಸ್(ಜು.20) ಮಗು ಹುಟ್ಟುವಾಗ ಹಲ್ಲು ಇರುವುದಿಲ್ಲ. 6 ರಿಂದ 12 ತಿಂಗಳಲ್ಲಿ ಮಕ್ಕಳಿಗೆ ಹಲ್ಲು ಬರಲು ಆರಂಭಿಸುತ್ತದೆ. ಇನ್ನು ಬುದ್ಧಿವಂತಿಕೆಯ ಹಲ್ಲು ಸೇರಿದಂತೆ 32 ಹಲ್ಲು ಬರಲು ಸರಿಸುಮಾರು 21 ವರ್ಷವಾಗಬೇಕು. ಒಂದೆರಡು ವರ್ಷ ಹೆಚ್ಚು ಕಡಿಮೆ ಆದರೂ ಅಚ್ಚರಿ ಇಲ್ಲ. ಆದರೆ ಇಲ್ಲೊಂದು ಮಗು ಹುಟ್ಟುವಾಗಲೇ 32 ಹಲ್ಲಿನೊಂದಿಗೆ ಜನಿಸಿದೆ. ಇದು ಅಚ್ಚರಿಯಾದರೂ ಸತ್ಯ. ಅಮೆರಿಕದ ಟೆಕ್ಸಾಸ್‌ನ ಮಹಿಳೆ ತನ್ನ ಮಗುವಿನ ವಿಡಿಯೋ ಹಂಚಿಕೊಂಡು ಅಚ್ಚರಿ ಮಾಹಿತಿ ಬಹಿರಂಗಪಡಿಸಿದ್ದಾರೆ.

ಈ ಹೆಣ್ಣು ಮಗು ಹುಟ್ಟುವಾಗಲೇ ಸಂಪೂರ್ಣ 32 ಹಲ್ಲನ್ನು ಹೊಂದಿದೆ. ಅದೂ ಕೂಡ ಅಚ್ಚುಕಟ್ಟಾದ ಹಲ್ಲು.ಪುಟಾಣಿ ಮಗುವಿನ ಮುಖದಲ್ಲಿ ಹಲ್ಲುಗಳನ್ನು ನೋಡುವುದೇ ಚೆಂದ. ಅದರಲ್ಲೂ 32 ಹಲ್ಲು ಎಂದರೆ ಅಚ್ಚರಿ ಜೊತೆಗೆ ಆತಂಕವಾಗದೇ ಇರದು. ಹೌದು, ಇದು ಅಚ್ಚರಿಯಲ್ಲ. ಅಪರೂಪದ ಕಾಯಿಲೆ. ಈ ಕುರಿತು ಜಾಗೃತಿ ಮೂಡಿಸಲು ಈ ಮಗುವಿನ ತಾಯಿ ವಿಡಿಯೋ ಹಂಚಿಕೊಂಡಿದ್ದಾರೆ.

Latest Videos

undefined

25 ಬೆರಳುಗಳಿರುವ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ!

ನಿಕಾ ದಿವಾ ಅನ್ನೋ ಇನ್‌ಸ್ಟಾ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇಷ್ಟೇ ಅಲ್ಲ ಈ ಕಾಯಿಲೆ ಕುರಿತು ಮಾಹಿತಿ ನೀಡಲಾಗಿದೆ. ಹುಟ್ಟುವಾಗಲೇ 32 ಹಲ್ಲುಗಳೊಂದಿಗೆ ಮಗು ಜನಿಸಿದೆ. ಈ ಕಾಯಿಲೆಯಿಂದ ಮಗುವಿಗೆ ಗಂಭೀರ ಸಮಸ್ಯೆಗಳಿಲ್ಲ. ಆದರೆ ಚಿಕ್ಕವಯಸಿನಲ್ಲೇ ಎರಡನೇ ಬಾರಿಗೆ ಹುಟ್ಟುವ ಹಲ್ಲುಗಳು ಉದುರಿ ಹೋಗುವ ಸಾಧ್ಯತೆ ಇದೆ. ಇದನ್ನು ಹೊರತುಪಡಿಸಿದರೆ ಮಗುವಿನ ಹೆಚ್ಚಿನ ಸಮಸ್ಯೆಗಳಿಲ್ಲ. ಇತ್ತ ಪುಟ್ಟ ಮಗುವಿಗೆ ಹಾಲುಣಿಸುವಾಗ ತಾಯಿಗೆ ಸಮಸ್ಯೆಗಾವು ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Nika Diwa (@nika.diwa)

 

ಹುಟ್ಟುವಾಗಲೇ ಈ ರೀತಿ ಹಲ್ಲಿನೊಂದಿಗೆ ಹುಟ್ಟುವ ಮಕ್ಕಳ ಸಮಸ್ಯೆಗೆ ನ್ಯಾಟಲ್ ಟೀಥ್ ಡಿಸೀಸ್ ಎಂದು ಕರೆಯುತ್ತಾರೆ. ಇಷ್ಟು ದಿನ ಈ ನ್ಯಾಟಲ್ ಟೀಥ್ ಸಮಸ್ಯೆಯಲ್ಲಿ ಹುಟ್ಟುವ ಮಗ ಮುಂಭಾಗದ ನಾಲ್ಕು ಹಲ್ಲು, ದವಡೆ ಬಾಗದಲ್ಲಿ ನಾಲ್ಕರಿಂದ 6 ಹಲ್ಲು ಹೀಗೆ, ಅಲ್ಲೊಂದು ಇಲ್ಲೊಂದು ಹಲ್ಲಿನಲ್ಲಿ ಮಗು ಹುಟ್ಟಿದ ಉದಾಹರಣೆಗಳಿವೆ. ಆದರೆ ವಯಸ್ಕರಂತೆ 32 ಹಲ್ಲುಗಳನ್ನು ಪಡೆದು ಹುಟ್ಟಿದ ಉದಾಹರಣೆಗಳಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಮಕ್ಕಳ ಮೇಲೆ ದಾಳಿ ನಡೆಸಿ ಮಗು ಹೊತ್ಯೊಯ್ದ ಕೋತಿ, ಕಂದನ ಉಳಿಸಲು ಪೋಷಕರ ಹೋರಾಟ ವಿಡಿಯೋ!

ಸದ್ಯ ಮಗುವಿನ ಆರೋಗ್ಯ ಉತ್ತಮವಾಗಿದೆ. ಆದರೆ ಪೋಷಕರ ಆತಂಕ ಮಾತ್ರ ಹೆಚ್ಚಾಗಿದೆ. ಗರ್ಭಾವಸ್ಥೆಯಲ್ಲಿ ಕೆಲ ಹಾರ್ಮೋನ್ ಸಮಸ್ಯೆಗಳು, ಹಾರ್ಮೋನ್ ಉತ್ಪಾದನೆಯಲ್ಲಿ ಆಗುವ ವ್ಯತ್ಯಾಸಗಳಿಂದ ಈ ರೀತಿ ಆಗುವ ಸಾಧ್ಯತೆ ಇದೆ.ಹೀಗಾಗಿ ಗರ್ಭಾವಸ್ಥೆಯಲ್ಲಿ ವೈದ್ಯರ ಸೂಚನೆ, ಮಾರ್ಗದರ್ಶನವನ್ನು ಚಾಚುತಪ್ಪದೆ ಪಾಲನೆ ಮಾಡಬೇಕು. ಪ್ರೊಟಿನ್ ಪ್ರಮಾಣಗಳು ಸರಿಯಾದ ಪ್ರಮಾಣದಲ್ಲಿರಬೇಕು. ಉತ್ತಮ ಎಂದು ಪೋಷಾಕಾಂಶಗಳ ಆಹಾರವನ್ನು ವಿಪರೀತ ಸೇವಿಸುವುದು ಉತ್ತಮವಲ್ಲ. ಸಮತೋಲನ ಕಾಪಾಡಿಕೊಳ್ಳಬೇಕು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
 

click me!