ಕಿಮ್ಸ್ ಆಸ್ಪತ್ರೆಯಲ್ಲಿ ವಿಭಿನ್ನ ರಕ್ತದ ಗುಂಪಿನ ಕಿಡ್ನಿ ಕಸಿ ಪ್ರಯೋಗ ಯಶಸ್ವಿ

By Kannadaprabha News  |  First Published Mar 18, 2023, 12:03 PM IST

ತಾಯಿಗಿಂತ ದೊಡ್ಡ ದೇವರಿಲ್ಲ. ತಾಯಿ ತನ್ನ ಮಕ್ಕಳಿಗಾಗಿ ಎಂಥಾ ತ್ಯಾಗ ಮಾಡಲು ಸಹ ಸಿದ್ಧ. ಅದು ಅಕ್ಷರಹಃ ನಿಜವೆಂಬುದು ಸಾಬೀತಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ತಾಯಿಯೇ ತನ್ನ ಕಿಡ್ನಿ ನೀಡಿ ಮಗನನ್ನು ಉಳಿಸಿಕೊಂಡಿದ್ದಾಳೆ


ಹುಬ್ಬಳ್ಳಿ: ಇಲ್ಲಿನ ಕಿಮ್ಸ್‌ ಆಸ್ಪತ್ರೆಯಲ್ಲಿ ಹೊಂದಾಣಿಕೆಯಾದ ರಕ್ತದ ಗುಂಪಿನ ಕಿಡ್ನಿ ಕಸಿ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಈ ರೀತಿಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಕಿಮ್ಸ್‌ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಥಾನಿ ಹೇಳಿದರು. ತಾಯಿಯೇ ತನ್ನ ಕಿಡ್ನಿ ನೀಡಿ ಮಗನನ್ನು ಉಳಿಸಿಕೊಂಡಿದ್ದಾಳೆ. ಇಬ್ಬರೂ ಇದೀಗ ಆರೋಗ್ಯವಾಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಬೇರೆ ರಾಜ್ಯ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹೊಂದಾಣಿಕೆಯಾಗದ ರಕ್ತದ ಗುಂಪಿನ ಕಿಡ್ನಿ ಕಸಿ ಮಾಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಮೊದಲ ಬಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಈ ತರಹದ ಕಿಡ್ನಿ ಕಸಿಯ ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳಲಾಗಿತ್ತು. ಅದು ಸಂಪೂರ್ಣವಾಗಿ ಯಶಸ್ವಿಯಾಗಿದೆ. ನಿರಂತರ 3 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಈಗ ರೋಗಿ ಆರೋಗ್ಯವಾಗಿದ್ದು, ಶಸ್ತ್ರ ಚಿಕಿತ್ಸೆಯಾದ 42 ಗಂಟೆಗಳಲ್ಲಿ ಸಾಮಾನ್ಯ ಜನರಂತೆ ಜೀವನ ನಡೆಸುತ್ತಿದ್ದಾರೆ. ಇಂದಿನ ವೈದ್ಯಕೀಯ ಬೆಳವಣಿಗೆಯಿಂದಾಗಿ ಈ ಶಸ್ತ್ರ ಚಿಕಿತ್ಸೆ ನಡೆಸಲು ಸಾಧ್ಯವಾಯಿತು. .2.70 ಲಕ್ಷ ವೆಚ್ಚದಲ್ಲಿ ಈ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ. ಸಾಮಾನ್ಯವಾಗಿ ಈ ಚಿಕಿತ್ಸೆಗೆ .3.90 ಲಕ್ಷ ಖರ್ಚಾಗುವುದು ಎಂದರು.

Latest Videos

undefined

World Kidney Day : ಯಾರಿಗೆ ಕಿಡ್ನಿ ಕಸಿ ಮಾಡುವ ಅಗತ್ಯವಿರುತ್ತೆ?

ಮೂತ್ರಪಿಂಡ ವಿಭಾಗದ ಮುಖ್ಯಸ್ಥ ಡಾ.ವೆಂಕಟೇಶ ಮೊಗೆರ, ಡಾ.ಮಲಗೌಡ ಪಾಟೀಲ, ಡಾ.ವಿವೇಕ ಗಾಣಿಗೇರ, ಮೂತ್ರ ಶಾಸ್ತ್ರ ವಿಭಾಗದ ಮುಖ್ಯಸ್ಥ ರವಿರಾಜ ರಾಯ್ಕರ, ಡಾ.ಜೈದೀಪ್‌ ರಟಕಲ್‌, ಡಾ.ಮಂಜು ಪ್ರಸಾದ ಜಿ.ಬಿ., ಡಾ.ಸಂಪತ್ತಕುಮಾರ ಎನ್‌.ಜಿ., ಡಾ. ಚೇತನ್‌ ಹೊಸಕಟ್ಟಿ, ಅರಿವಳಿಕೆ ವಿಭಾಗದ ಡಾ. ಮಾಧುರಿ ಕುರಡಿ, ಡಾ. ಶೀತಲ್‌ ಹಿರೇಗೌಡರ, ಡಾ. ರೂಪ, ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪುರುಷೋತ್ತಮ ರೆಡ್ಡಿ ಮತ್ತು ಶಿವಾನಂದ ಹೊನಕೇರಿ ಅವರನ್ನೊಳಗೊಂಡ ತಂಡ ಈ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ ಎಂದರು.

ತಾಯಿಯಿಂದ ಮಗನಿಗೆ ಕಿಡ್ನಿ: ಮೂತ್ರಪಿಂಡ ವಿಭಾಗದ ಮುಖ್ಯಸ್ಥ ಡಾ. ವೆಂಕಟೇಶ ಮೊಗೆರ ಮಾತನಾಡಿ, ಶಸ್ತ್ರ ಚಿಕಿತ್ಸೆ ಪೂರ್ವದಲ್ಲಿ ರೋಗಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಯಿತು. ರೋಗಿ ಅಭಿಷೇಕ್‌ ಬೋಗಾರ್‌ ಅವರಿಗೆ ಅವರ ತಾಯಿ ಪದ್ಮಾವತಿ ಅವರು ಕಿಡ್ನಿ ನೀಡಿದ್ದಾರೆ. ಅಭಿಷೇಕ್‌ ಅವರ ರಕ್ತದ ಗುಂಪು ಎ ಪಾಸಿಟಿವ್‌ ಆಗಿತ್ತು, ಪದ್ಮಾವತಿ ಅವರು ಬಿ ಪಾಸಿಟಿವ್‌ ರಕ್ತದ ಗುಂಪು ಹೊಂದಿದ್ದರು. ಹೀಗಾಗಿ, ಶಸ್ತ್ರಚಿಕಿತ್ಸೆಯು ತಂಡಕ್ಕೆ ಸವಾಲಾಗಿ ಪರಿಣಮಿಸಿತ್ತು ಎಂದು ತಿಳಿಸಿದರು. ಕಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ, ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪುರುಷೋತ್ತಮ ರೆಡ್ಡಿ, ಡಾ.ಚೇತನ ಹೊಸಕಟ್ಟಿ, ಶಿವಾನಂದ ಹೊನಕೇರಿ ಸೇರಿದಂತೆ ವೈದ್ಯರು, ಪ್ರಾಧ್ಯಾಪಕರು, ಸಿಬ್ಬಂದಿ ಪತ್ರಿಕಾಗೋಷ್ಠಿಯಲ್ಲಿದ್ದರು.

Bengaluru: ಕಿಡ್ನಿ ಬೇಕೆಂದ್ರೆ ನಾಲ್ಕು ವರ್ಷ ಕಾಯ್ಬೇಕು! ಚಿಂತಾನಕವಾಗಿದೆ ರೋಗಿಗಳ ಸ್ಥಿತಿ

ಮೊಮ್ಮಗನಿಗೆ ಕಿಡ್ನಿ ನೀಡಿ ಇಳಿವಯಸ್ಸಿನಲ್ಲೂ ಮಾದರಿಯಾದ ಅಜ್ಜಿ
ತಾನು ಬಿದ್ದು ಹೋಗುವ ಮರ. ಆದರೆ ನನ್ನ ಮೊಮ್ಮಗ ಇನ್ನೂ ಬಾಳಿ ಬದುಕಬೇಕು ಎಂದು 73 ವರ್ಷದ ಅಜ್ಜಿಯೊಬ್ಬಳು ತನ್ನ 21 ವರ್ಷದ ಮೊಮ್ಮಗನಿಗೆ ಕಿಡ್ನಿ ದಾನ ಮಾಡಿದ ಅಪರೂಪ ಘಟನೆ ವಿಜಯಪುರದಲ್ಲಿ ನಡೆದಿದೆ. ಇಲ್ಲಿನ ಯಶೋದಾ ಆಸ್ಪತ್ರೆಯಲ್ಲಿ ಈ ಕಿಡ್ನಿ ಟ್ರಾನ್ಸಪ್ಲೆಂಟ್ ಮಾಡಲಾಗಿದೆ. ಇದು ವಿಜಯಪುರ ಜಿಲ್ಲೆಯಲ್ಲಿ ನಡೆದ ಮೊದಲ ಯಶಸ್ವಿ ಮೂತ್ರ ಪಿಂಡ ಕಸಿ  ಎನ್ನುವುದು ಮತ್ತೊಂದು ಹೆಮ್ಮೆಗೆ ಕಾರಣವಾಗಿದೆ. 

ಅಂಗಾಂಗ ದಾನದ ಅರಿವು ಕಡಿಮೆ ಇರುವ ವಿಜಯಪುರ ಜಿಲ್ಲೆಯಲ್ಲಿ ಅಜ್ಜಿ (Grandmother)ಯೊಬ್ಬರು ತನ್ನ ಮೊಮ್ಮಗನಿಗೆ (Grandson) ಕಿಡ್ನಿ ನೀಡಿರುವುದು ಅಪರೂಪದಲ್ಲಿ ಒಂದು ಅಪರೂಪವಾಗಿದೆ. ಬೆಳಗಾವಿ ಜಿಲ್ಲೆಯ ಹಾರೋಗರಿ ಯುವಕ ಸಚಿನ್‌ ಕಳೆದ 18 ವರ್ಷಗಳಿಂದ ಕಿಡ್ನಿ ಸಮಸ್ಯೆ ಯಿಂದ ಬಳಲುತ್ತಿದ್ದನು. ಇತ್ತೀಚಿಗೆ ಕೆಲ ವರ್ಷಗಳ ಹಿಂದೆ ಕಿಡ್ನಿ ವೈಫಲ್ಯವಾಗಿತ್ತು. ಈ ಕಾರಣಕ್ಕೆ ವಾರದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಡಯಾಲಿಸಿಸ್ ಮಾಡಿಕೊಳ್ಳುತ್ತಿದ್ದರು.‌ ಈತನ ತಂದೆ ತಾಯಿ ಅನಾರೋಗ್ಯ ಪೀಡಿತವಾದ ಕಾರಣ ಅವರ ಒಂದು ಕಿಡ್ನಿ ಪಡೆದು ಯುವಕನಿಗೆ ವರ್ಗಾಯಿಸಲು ಆಗುತ್ತಿರಲಿಲ್ಲ. ಯುವಕ ಸಚಿನ್ ದಯನೀಯ ಸ್ಥಿತಿ‌ ಕಂಡ ಅವರ ಮನೆಯ ಹಿರಿಯ ಜೀವಿ ಅವರ ಅಜ್ಜಿ ಉದ್ದವ್ವ ಸ್ವ ಇಚ್ಚೆಯಿಂದ ಕಿಡ್ನಿ ನೀಡಲು ಮುಂದಾಗಿದ್ದಾರೆ. 

click me!