RTPCR  ಟೆಸ್ಟ್ ನಲ್ಲಿ ಪಾಸಿಟಿವ್ ಬಂದ್ರೆ ತಕ್ಷಣ ಏನ್ ಮಾಡಬೇಕು? ಸರಳ ಸೂತ್ರ

By Suvarna NewsFirst Published Apr 27, 2021, 12:09 AM IST
Highlights

RTPCR ಟೆಸ್ಟಿನಲ್ಲಿ ಪಾಸಿಟಿವ್ ಬಂದ ಕೂಡಲೇ ಗಾಬರಿ ಆಗಬೇಕಿಲ್ಲ/ ಪಾಸಿಟಿವ್ ಬಂದ ತಕ್ಷಣ ಮನೆಯಲ್ಲಿ ಐಸೋಲೇಟ್‌ ಆಗಬೇಕು/ ಸ್ಯಾಚುರೇಷನ್ ಲೆವೆಲ್ ನೋಡಿಕೊಳ್ಳಬೇಕು/ ಅದನ್ನು ಇಂಪ್ರೂವ್ ಮಾಡಿಕೊಳ್ಳಲು ಮನೆಯಲ್ಲೇ ಕೆಲವು ವಿಧಾನಗಳಿವೆ/ ಆರು ನಿಮಿಷಗಳ ಕಾಲ ವಾಕ್ ಟೆಸ್ಟ್  ಮಾಡಬೇಕು.

ಬೆಂಗಳೂರು (ಏ. 26):  ಕೋವಿಡ್‌ನ ಸೌಮ್ಯ ಗುಣಲಕ್ಷಣ ಹೊಂದಿದವರು ಮನೆಯಲ್ಲೇ ಇದ್ದು 6 ನಿಮಿಷಗಳ ಕಾಲ ನಡಿಗೆ ಮಾಡಿ ಪಲ್ಸ್‌ ಆಕ್ಸಿಮೀಟರ್‌ ಮೂಲಕ ತಮ್ಮ ಆಮ್ಲಜನಕದ ಮಟ್ಟಪರಿಶೀಲನೆ ನಡೆಸಬೇಕು. ಈ ಸಂದರ್ಭದಲ್ಲಿ ಆಮ್ಲಜನಕದ ಮಟ್ಟಕುಸಿದಿಲ್ಲ ಎಂದಾದರೆ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಬೆಂಗಳೂರು ಮೆಡಿಕಲ್‌ ಕಾಲೇಜಿನ ಮೆಡಿಸಿನ್‌ ವಿಭಾಗದ ಮುಖ್ಯಸ್ಥ ಡಾ. ಕೆ. ರವಿ ತಿಳಿಸಿದ್ದಾರೆ.

ವಿಧಾನ ಸೌಧದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರ ಜೊತೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಅವರು ಈ ಸಲಹೆ ನೀಡಿದ್ದಾರೆ. ಮನೆಯ ಕೊಠಡಿಯಲ್ಲೇ ಈ ವ್ಯಾಯಾಮ ಮಾಡಬಹುದು. ಒಂದು ವೇಳೆ ವಯಸ್ಸಾಗಿದ್ದು 6 ನಿಮಿಷ ನಡೆಯಲು ಸಾಧ್ಯವಿಲ್ಲ ಎಂದಾದರೆ 3 ನಿಮಿಷ ನಡಿಗೆ ಮಾಡಿ ಬಳಿಕ ಆಮ್ಲಜನಕದ ಮಟ್ಟಪರಿಶೀಲಿಸಬೇಕು. ಈ ಪರೀಕ್ಷೆಯನ್ನು ಹೋಮ್‌ ಐಸೋಲೇಷನ್‌ನಲ್ಲಿರುವಷ್ಟುದಿನ ಪ್ರತಿ ದಿನ ಮಾಡಬೇಕು’ ಎಂದು ಡಾ. ರವಿ ಸಲಹೆ ನೀಡಿದ್ದಾರೆ.

ಬಿಗಿ ಕ್ರಮದಿಂದ ಮುಂಬೈನಲ್ಲಿ ಮತ್ತಷ್ಟು ಕೊರೋನಾ ಕೇಸ್ ಇಳಿಕೆ

ವ್ಯಾಯಾಮ ಮಾಡಿದ ಬಳಿಕ ಆಮ್ಲಜನಕದ ಮಟ್ಟಶೇ. 4 ರಿಂದ ಶೇ.5 ರಷ್ಟುಕುಸಿತವಾಗಿದ್ದರೆ ಆಗ ವೈದ್ಯರನ್ನು ಕಾಣಬೇಕು. ಒಂದು ವೇಳೆ ಆಮ್ಲಜನಕದ ಮಟ್ಟ91, 92 ಇದ್ದರೂ ಆಮ್ಲಜನಕ ಬೇಕೆ ಬೇಕು ಎಂಬ ಮನೋಭಾವಕ್ಕೆ ಸಿಲುಕಿಕೊಳ್ಳಬೇಡಿ. ಸೌಮ್ಯ ಲಕ್ಷಣಗಳಿದ್ದವರಲ್ಲಿ ಮೈಕೈ ನೋವಿದ್ದರೆ, ಜ್ವರ ಇದ್ದರೆ ದಿನಕ್ಕೆ 3-4 ಪ್ಯಾರಸಿಟಮಾಲ್‌ ಗುಳಿಗೆ, ಡಾಕಿಸೈಕಲ್‌ ಎಂಬ ಮಾತ್ರೆ ಬೆಳಗ್ಗೆ ಮತ್ತು ರಾತ್ರಿ ಒಂದೊಂದು ಸೇವನೆ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡಬೇಕು, ಚೆನ್ನಾಗಿ ಬಿಸಿ ನೀರು ಕುಡಿಯಬೇಕು, ಸ್ಟೀಮ್‌ ತೆಗೆದುಕೊಳ್ಳಬೇಕು, ಬಿಸಿ ನೀರಿಗೆ ಉಪ್ಪು ಹಾಕಿ ಬಾಯಿ ಮುಕ್ಕಳಿಸಬೇಕು ಎಂಬ ಮಾರ್ಗದರ್ಶಿ ಸೂತ್ರ ಪಾಲಿಸಬೇಕಿದೆ.

ಉಸಿರಾಟದ ತೊಂದರೆಯಾದರೆ, ಆಮ್ಲಜನಕದ ಮಟ್ಟಕಡಿಮೆ ಆದರೆ ಎದೆಯ ಕೆಳಗೆ ದಿಂಬು ಹಾಕಿಕೊಂಡು ಹೊಟ್ಟೆಯ ಮೇಲೆ ಮಲಗಿಕೊಂಡರೆ ಶೇ.8 ರಿಂದ ಶೇ.10ರವರೆಗೆ ಆಮ್ಲಜನಕದ ಮಟ್ಟಏರಿದ ವೈಜ್ಞಾನಿಕ ಉದಾಹರಣೆ ಇದೆ. ದಿನಕ್ಕೆ 16 ರಿಂದ 18 ಗಂಟೆ ಈ ರೀತಿ ಮಲಗಿದ್ದು ಆಮ್ಲಜನಕ ಮಟ್ಟಏರದೇ ಹೋದರೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಎಂದು ರವಿ ತಿಳಿಸಿದ್ದಾರೆ.

"

ರೆಮೆಡಿಸಿವರ್ ಅವಶ್ಯಕತೆ ಎಲ್ಲರಿಗೂ ಇರಲ್ಲ  ಇದರ ಬಗ್ಗೆ ಆತಂಕ ಇಟ್ಟುಕೊಳ್ಳಬೇಕಿಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡಿಕೊಳ್ಳುವ ಆಹಾರ, ಒತ್ತಡ ಕಡಿಮೆ ಮಾಡಿಕೊಳ್ಳುವುದರಿಂದ ದೂರ ಇರಬಹುದು ಎಂದು ತಿಳಿಸಿದ್ದಾರೆ. 

ಕರ್ನಾಟಕದಲ್ಲಿ ಜನತಾ ಕರ್ಫ್ಯೂ: ಏನೆಲ್ಲಾ ಸಿಗುತ್ತೆ?

ಇವಿಷ್ಟು ನಿಮ್ಮ ಗಮನಕ್ಕೆ
 

click me!