ಡೆಂಘಿ ಮೇಲೆ ನಿಗಾ ಇಡಲು ಬಂತು ಮೊಬೈಲ್‌ ಆ್ಯಪ್‌ ! ಹೇಗೆ ಕೆಲಸ ಮಾಡುತ್ತೆ ಗೊತ್ತಾ?

By Kannadaprabha News  |  First Published Sep 9, 2023, 8:19 AM IST

ರಾಜ್ಯ ಆರೋಗ್ಯ ಇಲಾಖೆ, ಬಿಬಿಎಂಪಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಆರ್ಚ್‌ ಪಾರ್ಕ್ ಸಹಭಾಗಿತ್ವದಲ್ಲಿ ಡೆಂಘಿ ಮತ್ತಿತರ ರೋಗಗಳ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ನೆರವಾಗುವ ರೋಗ ಕಣ್ಗಾ ವಲು ಡ್ಯಾಶ್‌ಬೋರ್ಡ್‌ ಹಾಗೂ PRISM-Hಮೊಬೈಲ್‌ ಅಪ್ಲಿಕೇಶನ್‌ಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಐಐಎಸ್ಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶುಕ್ರವಾರ ಚಾಲನೆ ನೀಡಿದ್ದಾರೆ.


ಬೆಂಗಳೂರು (ಸೆ.9) :  ರಾಜ್ಯ ಆರೋಗ್ಯ ಇಲಾಖೆ, ಬಿಬಿಎಂಪಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಆರ್ಚ್‌ ಪಾರ್ಕ್ ಸಹಭಾಗಿತ್ವದಲ್ಲಿ ಡೆಂಘಿ ಮತ್ತಿತರ ರೋಗಗಳ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ನೆರವಾಗುವ ರೋಗ ಕಣ್ಗಾ ವಲು ಡ್ಯಾಶ್‌ಬೋರ್ಡ್‌ ಹಾಗೂ PRISM-H ಮೊಬೈಲ್‌ ಅಪ್ಲಿಕೇಶನ್‌ಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಐಐಎಸ್ಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶುಕ್ರವಾರ ಚಾಲನೆ ನೀಡಿದ್ದಾರೆ.

ಹವಾಮಾನ ಬದಲಾವಣೆ ಮತ್ತಿತರ ಕಾರಣಗಳಿಗೆ ಕಾಯಿಲೆಗಳು ಉಲ್ಬಣವಾಗುವ ಬಗ್ಗೆ ವಸ್ತುಸ್ಥಿತಿ, ಮುನ್ನೆಚ್ಚರಿಕೆ ಸೂಚನೆ ನೀಡುವ ಸಲುವಾಗಿ ಡ್ಯಾಶ್‌ಬೋರ್ಡ್‌ ನೆರವಾಗಲಿದೆ. ಕೆಲವು ಋುತುಗಳಲ್ಲಿ ಮಾತ್ರ ಡೆಂಘಿಯಂ ತಹ ಸಾಂಕ್ರಾಮಿಕ ಕಾಯಿಲೆಗಳು ಉಲ್ಬಣವಾಗುತ್ತವೆ. ಈ ಕುರಿತು ಮುನ್ನೆಚ್ಚರಿಕೆ ನೀಡಲು ಹಾಗೂ ರೋಗದ ಪ್ರಭಾವವನ್ನು ಅಧ್ಯಯನ ಮಾಡಲು ಅಧಿಕಾರಿಗಳಿಗೆ ಈ ಡ್ಯಾಶ್‌ಬೋರ್ಡ್‌ ನೆರವಾಗಲಿದೆ. ಡ್ಯಾಶ್‌ಬೋರ್ಡ್‌ ಹಾಗೂ ಆ್ಯಪ್‌ ಆರೋಗ್ಯ ಇಲಾಖೆ ಸಿಬ್ಬಂದಿಗೆ ಮಾತ್ರ ಸೀಮಿತವಾಗಿದ್ದು, ಸಾರ್ವಜನಿಕರಿಗೆ ಬಳಕೆಗೆ ಮುಕ್ತವಾಗಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos

undefined

ಮಳೆಯ ಕಣ್ಣಾಮುಚ್ಚಾಲೆಯಿಂದ ರೋಗಗಳಿಗೆ ಆಹ್ವಾನ: ಉಡುಪಿಯಲ್ಲಿ ಮಲೇರಿಯಾ, ಡೆಂಘೀ ಭೀತಿ !

 

ಆ್ಯಪ್‌ಗೆ ಚಾಲನೆ ನೀಡಿ ಮಾತನಾಡಿದ ಸಚಿವ ದಿನೇಶ್‌ ಗುಂಡೂರಾವ್‌, ತಂತ್ರಜ್ಞಾನ ಉಪಯೋಗಿಸಿಕೊಂಡು ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವುದು ನಮ್ಮ ಉದ್ದೇಶ. ಬಿಬಿಎಂಪಿ, ಆರೋಗ್ಯ ಇಲಾಖೆ ಹಾಗೂ ಐಐಎಸ್ಸಿಯ ರೊಬೊಟಿಕ್ಸ್‌ ಟೆಕ್ನಾಲಜಿ ಪಾರ್ಕ್ನ (ಆರ್ಚ್‌ ಪಾರ್ಕ್) ಸಹಯೋಗದಲ್ಲಿ ಇವುಗಳನ್ನು ಅಭಿವೃದ್ಧಿಪಡಿಸಲಾಗಿದೆ. ರೋಗಗಳ ಮುನ್ಸೂಚನೆಯ ವಿಶ್ಲೇಷಣೆಯನ್ನು ಡ್ಯಾಶ್‌ಬೋರ್ಡ್‌ ಹಾಗೂ ಆ್ಯಪ್‌ ಒದಗಿಸ ಲಿದೆ. ಇದರಿಂದ ರೋಗ ನಿಯಂತ್ರಣ ಚಟುವಟಿಕೆ ಕೈಗೊಳ್ಳಲು ನೀತಿ ನಿರೂಪಕರು ಹಾಗೂ ಸಾರ್ವಜನಿಕ ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ನೆರವಾಗಲಿದೆ. ಆ್ಯಪ್‌ ಬಿಬಿಎಂಪಿಗೆ ಸೀಮಿತವಾದರೆ ಡ್ಯಾಶ್‌ಬೋರ್ಡ್‌ ರಾಜ್ಯಾದ್ಯಂತ ಎಲ್ಲಾ ಆರೋಗ್ಯ ಅಧಿಕಾರಿಗಳಿಗೂ ನೆರವಾಗಲಿದೆ ಎಂದು ಮಾಹಿತಿ ನೀಡಿದರು.

ಡ್ಯಾಶ್‌ಬೋರ್ಡ್‌ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಏಕಾಏಕಿ ಹೆಚ್ಚಾಗುವ ಪ್ರಕರಣಗಳ ಬಗ್ಗೆ ನಕ್ಷೆ ಸಹಿತ ಮಾಹಿತಿ ಒದಗಿಸಲಿದೆ. ನಾಲ್ಕು ವಾರಗಳ ಮುನ್ಸೂಚನೆಯ ನಕ್ಷೆಯನ್ನು ರಾಜ್ಯ ಮತ್ತು ಜಿಲ್ಲಾಧಿ ಕಾರಿಗಳಿಗೆ ಲಭ್ಯವಾಗುವಂತೆ ಮಾಡಲಿದೆ. ತಳಮಟ್ಟದ ಸಮೀಕ್ಷೆಗಳು, ನೈಜ ಸಮಯದ ದತ್ತಾಂಶ ಸಂಗ್ರಹಣೆ, ಪರಿಶೀಲನೆ, ಆಶಾ ಕಾರ್ಯಕರ್ತೆಯರು ಮನೆ-ಮನೆ ಭೇಟಿ ನೀಡಿ ಸಂಗ್ರಹಿಸುವ ಮಾಹಿತಿ ವಿಶ್ಲೇಷಣೆಗೆ ಇದು ನೆರವಾಗಲಿದೆ. ಇದೇ ಮಾಹಿತಿ ಆಧಾರದ ಮೇಲೆ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ನೀಡಲಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್‌, ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.ಕೆ.ವಿ. ್ರಲೋಕಚಂದ್ರ ಸೇರಿದಂತೆ ಹಲವರು ಹಾಜರಿದ್ದರು.

ಮೊಬೈಲ್‌ ಆ್ಯಪ್‌ನ ಕೆಲಸವೇನು?

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮೀಕ್ಷೆ-ಸಂಬಂಧಿತ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ದಾಖಲಿಸಲು ನೆರವಾಗಲಿದೆ. ಉದಾ: ಆಶಾ ಕಾರ್ಯಕರ್ತೆಯರು (ಜ್ವರ ಸಮೀಕ್ಷೆ, ಲಾರ್ವಾ ಸಮೀಕ್ಷೆ, ಮನೆ-ಮನೆ ಆರೋಗ್ಯ ಸಮೀಕ್ಷೆ) ಇತ್ಯಾದಿ ಮಾಡಿದಾಗ ಅವುಗಳ ದತ್ತಾಂಶ ದಾಖಲಿಸಲು ನೆರವಾಗಲಿದೆ. ಸೊಳ್ಳೆ ನಿಯಂತ್ರಣ ಚಟುವಟಿಕೆ ಪರಿಶೀಲನೆ ಮತ್ತು ಪರಿಶೀಲನೆಗಾಗಿ ವೈದ್ಯಕೀಯ ಅಧಿಕಾರಿಗಳನ್ನು ನಿಯೋಜಿಸುವುದು, ತರಬೇತಿ ಮತ್ತಿತರ ಚಟುವ ಟಿಕೆಗೆ ಅನುಕೂಲವಾಗಲಿದೆ.

Dengue cases: ಬೆಂಗ್ಳೂರಲ್ಲಿ ಡೆಂಘೀ ಹಾವಳಿ; ದಕ್ಷಿಣ ಕನ್ನಡಕ್ಕೂ ಆತಂಕ!

ಕ್ಯಾಪ್ಷನ್‌: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದ ಕಾರ‍್ಯಕ್ರಮದಲ್ಲಿ ರೋಗ ಕಣ್ಗಾವಲು ಡ್ಯಾಶ್‌ಬೋರ್ಡ್‌, ಮೊಬೈಲ್‌ ಆ್ಯಪ್‌ಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಚಾಲನೆ ನೀಡಿದರು.

click me!