ಕೆಲಸ ಕಳೆದುಕೊಂಡಿದ್ದ 'ಹಾಟ್' ನರ್ಸ್‌ಗೆ ಸಿಕ್ತು ಮಾಡೆಲಿಂಗ್ ಅವಕಾಶ!

First Published May 22, 2020, 6:36 PM IST

ವಿಶ್ವದಲ್ಲಿ ನಡೆಯುವ ಕೆಲ ಘಟನೆಗಳನ್ನು ಯಾರೂ ಊಹಿಸಿರುವುದಿಲ್ಲ. ಕೆಲವರು ಇದನ್ನು ಅದೃಷ್ಟ ಎನ್ನುತ್ತಾರೆ. ಇದಕ್ಕೆ ತಕ್ಕ ಉದಾಹರಣೆಯಂತಿದೆ ರಷ್ಯಾದ ನರ್ಸ್‌ ಕತೆ. ಈ ನರ್ಸ್ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ತಡ ಆಕೆಯ ಅದೃಷ್ಟವೇ ಬದಲಾಗಿದೆ. ಈ ನರ್ಸ್‌ ಒಂದು ಟ್ರಾನ್ಸಪರೆಂಟ್ PPE ಕಿಟ್ ಧರಿಸಿ ಪುರುಷ ರೋಗಿಗಳಿದ್ದ ವಾರ್ಡ್‌ಗೆ ತೆರಳಿದ್ದರು. ಅಲ್ಲಿ ಕೊರೋನಾ ಪೀಡಿತರಿಗೆ ಚಿಕಿತ್ಸೆ ನಿಡುತ್ತಿದ್ದರು. ಆ ನರ್ಸ್‌ ಹಾಕಿಕೊಂಡಿದ್ದ ಗೌನ್ ಅದೆಷ್ಟು ಪಾರದರ್ಶಕವಾಗಿತ್ತೆಂದರೆ, ಆಕೆ ಧರಿಸಿದ್ದ ಒಳವಸ್ತ್ರಗಳು ಕೂಡಾ ಕಾಣುತ್ತಿದ್ದವು. ಹೀಗಿರುವಾಗ ಅಲ್ಲಿದ್ದ ರೋಗಿಗಳು ಈ ನರ್ಸ್‌ ಫೋಟೋ ಕ್ಲಿಕ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದಾದ ಬಳಿಕ ಆಸ್ಪತ್ರೆ ಆಡಳಿತ ಮಂಡಳಿ ಅವರನ್ನು ಕೆಲಸದಿಂದ ಅಮಾನತ್ತುಗೊಳಿಸಿತ್ತು. ಆದರೆ ಈ ವೇಳೆ ಹಲವಾರು ಮಂದಿ ನರ್ಸ್ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಆದರೀಗ ಕೆಲಸ ಕಳೆದುಕೊಂಡ ನರ್ಸ್‌ ಅದೃಷ್ಟವೇ ಬದಲಾಗಿದೆ. ಆದರೀಗ ಆಕೆಗೆ ಮಾಡೆಲಿಂಗ್ ಆಫರ್ ಸಿಕ್ಕಿದೆ.

ಸೋಶಿಯಲ್ ಮಿಡಿಯಾದಲ್ಲಿ ಯಾವ ನರ್ಸ್‌ ಫೋಟೋ ವೈರಲ್ ಆಗಿತ್ತೋ ಆಕೆ ಯಾರೆಂಬುವುದನ್ನು ಸದ್ಯ ಗುರುತಿಸಲಾಗದೆ. ಈಕೆ 23 ವರ್ಷದ ನಾದಿಯಾ. ಇವರನ್ನು ಪುರುಷರ ವಾರ್ಡ್‌ನಲ್ಲಿ ಪಾರದರ್ಶಕ ಪಿಪಿಇ ಕಿಟ್ ಧರಿಸಿ ಎಂಟ್ರಿ ಕೊಟ್ಟಿದ್ದನ್ನು ನೋಡಿದ್ದೇವೆ.
undefined
ನಾದಿಯಾ ಗೌನ್ ಬಹಳ ಟ್ರಾನ್ಪರೆಂಟ್ ಆಗಿತ್ತು. ಅದರೊಳಗಿಂದ ಆಕೆ ಧರಿಸಿದ್ದ ಒಳ ಉಡುಪುಗಳೂ ಕಾಣುತ್ತಿದ್ದವು. ಹೀಗಿರುವಾಗ ಅವರು ಚಿಕಿತ್ಸೆ ನೀಡುತ್ತಿದ್ದ ರೋಗಿಗಳು ಕೂಡಾ ಆಕೆಯನ್ನು ದುರುಗುಟ್ಟಿ ನೋಡುತ್ತಿರುವುದು ಈ ಫೋಟೋಗಳಲ್ಲಿ ಕಂಡು ಬಂದಿತ್ತು.
undefined
ಈ ಫೋಟೋಗಳು ವೈರಲ್ ಅದ ಬಳಿಕ ತುಲಾ ರೀಜನಲ್ ಕ್ಲಿನಿಕಲ್ ಆಸ್ಪತ್ರೆಯ ಆಡಳಿತ ಮಂಡಳಿ ನಾದಿಯಾರನ್ನು ಶಿಸ್ತು ಉಲ್ಲಂಘಿಸಿದ ಆರೋಪದಡಿ ಕೆಲಸದಿಂದ ತೆಗೆದು ಹಾಕಿತ್ತು. ಇದಾಧ ಬಳಿಕ ಅನೇಕ ಮಂದಿ ನಾದಿಯಾ ಬೆಂಬಲಕ್ಕೆ ನಿಂತಿದ್ದರು. ಅವರೆಲ್ಲರೂ ಈ ಆಸ್ಪತ್ರೆಯಲ್ಲಿ ಒಳ್ಳೆಯ ಗುಣಮಟ್ಟದ ಪಿಪಿಇ ಕಿಟ್ ಇಲ್ಲವೆಂದಿದ್ದರು. ಅಲ್ಲದೇ ಈ ಗೌನ್‌ಗಳು ಕೊರೋನಾದಿಂದ ಕಾಪಾಡಿಕೊಳ್ಳಲು ಸೂಕ್ತವಲ್ಲ ಎಂದಿದ್ದವು.
undefined
ಈ ಫೋಟೋ ವೈರಲ್ ಆದ ಬಳಿಕ ಖುದ್ದು ನಾದಿಯಾ ಕೂಡಾ ಈ ಗೌನ್ ಇಷ್ಟು ಪಾರದರ್ಶಕವಾಗಿದೆ ಎಂಬುವುದು ನನಗೂ ತಿಳಿದಿರಲಿಲ್ಲ ಎಂದಿದ್ದರು. ಆದರೀಗ ಅವರನ್ನು ಕೆಲಸದಿಂದ ತೆಗೆದು ಹಾಕಿದ ಬಳಿಕ ಅವರನ್ನು ಲಾಂಜರಿ ಬ್ರಾಂಡ್ ಪರ ಮಾಡಲಿಂಗ್ ಆಫರ್ ಸಿಕ್ಕಿದೆ.
undefined
ಮಿಸ್ ಎಕ್ಸ್‌ ಲಾಂಜರಿ ಬ್ರಾಂಡ್ ಮುಖ್ಯಸ್ಥೆ ಅನಸ್ತಾಸಿಯಾ ಯಕುಶವ್ ಈ ಸಂಬಂಧ ಮಾತನಾಡಿದ್ದು, ನಾದಿಯಾ ನಮ್ಮ ಬ್ರಾಂಡ್‌ಗೆ ಮಾಡಲಿಂಗ್ ಮಾಡಬೇಕೆಂಬುವುದು ನನ್ನಾಸೆ ಎಂದಿದ್ದಾರೆ.
undefined
ಕಂಪನಿ ಅನೇಕ ಹೊಸ ಡಿಸೈನ್ ಮಾಡಿದೆ. ಹೀಗಿರುವಾಗ ಇವುಗಳ ಓಪನಿಂಗ್ ನಾದಿಯಾ ಮಾಡಿದರೆ ಒಳ್ಳೆಯದಿತ್ತು ಎಂದಿದ್ದಾರೆ.
undefined
ನಾದಿಯಾ ರೈಸನ್ ಸ್ಟೇಟ್ ಮೆಡಿಕಲ್ ವಿಶ್ವವಿದ್ಯಾನಿಲಯದಿಂದ ಶಿಕ್ಷಣ ಪೂರೈಸಿದ್ದಾರೆ. ಅವರು ಕೊರೋನಾ ಸಂಕಟದ ನಡುವೆ ಸೂಕ್ತ ಗೌನ್ ಇಲ್ಲದೇ ರೋಗಿಗಳಿಗೆ ಚಿಕಿತ್ಸೆ ನಿಡುತ್ತಿದ್ದರು.
undefined
ಆದರೆ ನಾದಿಯಾ ಈ ಮಾಡೆಲಿಂಗ್ ಆಫರ್ ಸ್ವೀಕರಿಸಿದ್ದಾರಾ ಎಂಬುವುದು ಈವರೆಗೂ ಸ್ಪಷ್ಟವಾಗಿಲ್ಲ. ಆದರೆ ಈ ಸಂಬಂಧ ಆಸ್ಪತ್ರೆ ಆಡಳಿತ ಮಂಡಳಿ ಆಕೆ ಬಳಿ ಸ್ಪಷ್ಟನೆ ಕೇಳಿದಾಗ ಗೌನ್ ಇಷ್ಟು ಪಾರದರ್ಶಕವಾಗಿದೆ ಎಂದು ತಿಳಿದಿರಲಿಲ್ಲ ಎಂದಿದ್ದಾರೆ. ಸದ್ಯ ನಾದಿಯಾ ಫೋಟೋ ಸೆರೆ ಹಿಡಿದ ರೋಗಿಯ ತನಿಖೆಯೂ ನಡೆಯುತ್ತಿದೆ.
undefined
click me!