
ನ್ಯೂಯಾರ್ಕ್: ಆರೋಗ್ಯ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ ಕಂಪನಿಯಾದ ಜಾನ್ಸನ್ ಆ್ಯಂಡ್ ಜಾನ್ಸನ್, ತನ್ನ ಬೇಬಿ ಪೌಡರ್ ವಿರುದ್ಧ ದಾಖಲಾಗಿದ್ದ ಕ್ಯಾನ್ಸರ್ ಕೇಸು ಇತ್ಯರ್ಥಕ್ಕೆ 55000 ಕೋಟಿ ರು. ಪರಿಹಾರದ ಆಫರ್ ಮುಂದಿಟ್ಟಿದೆ.
ಬೇಬಿ ಪೌಡರ್ ಬಳಕೆಯಿಂದ ಅಂಡಾಶಯ ಕ್ಯಾನ್ಸರ್ ಸಂಭವಿಸಿರುವ ಕುರಿತು ಅಮೆರಿಕದಾದ್ಯಂತ ದಾಖಲಾದ ಕೇಸುಗಳ ವಿಚಾರಣೆ ವೇಳೆ, ಈ ಪರಿಹಾರದ ಮೊತ್ತ ನೀಡಿ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ಸಿದ್ಧ ಎಂದು ಕಂಪನಿ ಕೋರ್ಟ್‌ಗೆ ಮಾಹಿತಿ ನೀಡಿದೆ. ಜೊತೆಗೆ ಪರಿಹಾರದ ಮೊತ್ತವನ್ನು ಮುಂದಿನ 25 ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ ನೀಡುವುದಾಗಿ ಹೇಳಿದೆ.
ಹೊಟ್ಟೆಗೆ ಹಿಟ್ಟು ತಿನ್ನೋದು ಬಿಟ್ಟು, ಜಾನ್ಸನ್ಸ್ ಬೇಬಿ ಪೌಡರ್ ತಿನ್ನೋದಕ್ಕೆ 8 ಲಕ್ಷ ಖರ್ಚು ಮಾಡೋ ಮಹಿಳೆಯರು!
ನ್ಯಾಯಾಲಯದಲ್ಲಿ ಸಂಸ್ಥೆಯ ಮೇಲೆ ಅಂಡಾಶಯ ಕ್ಯಾನ್ಸರ್ ಸಂಬಂಧಿ ಪ್ರಕರಣ ದಾಖಲಿಸಿದವರ ಪೈಕಿ ಶೇ.75ರಷ್ಟು ದೂರುದಾರರು ಪರಿಹಾರ ಪಡೆಯಲು ಒಪ್ಪಿಕೊಂಡಲ್ಲಿ ಮಾತ್ರ ನ್ಯಾಯಾಲಯ ಈ ವ್ಯಾಜ್ಯಗಳನ್ನು ಕೈಬಿಟ್ಟು ತಮ್ಮ (ದೂರುದಾರರು ಹಾಗೂ ಪ್ರತಿವಾದಿಗಳು) ನಡುವೆಯೇ ಬಗೆಹರಿಸಿಕೊಳ್ಳಲು ಅವಕಾಶ ನೀಡಲಿದೆ. ಈ ಕುರಿತಾಗಿ ದೂರುದಾರರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಸಂಸ್ಥೆಯ ವಕೀಲರಾದ ಎರಿಕ್ ಹಾಸ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ