ಹಾಲುಗಲ್ಲದ ಹಸುಳೆ ಹಾಲಿನ ಪುಡಿಗೆ ವೈನ್ ಸೇರಿಸಿದ ಅಜ್ಜಿ, ಕೋಮಾಗೆ ಜಾರಿದ ಕಂದಮ್ಮ!

By Vinutha Perla  |  First Published May 4, 2024, 4:00 PM IST

ಹಾಲುಗಲ್ಲದ ಹಸುಳೆಗೆ ಅಜ್ಜಿ ವೈನ್ ಬೆರೆಸಿದ ಹಾಲಿನ ಪುಡಿ ನೀಡಿದ್ದು, ಇದರಿಂದ ನಾಲ್ಕು ತಿಂಗಳ ಮಗು ಕೋಮಾಗೆ ಜಾರಿರುವ ಘಟನೆ ನಡೆದಿದೆ. ಬಾಟಲಿಯ ವಾಸನೆಯ ನಂತರ, ಅಜ್ಜಿಗೆ ತಪ್ಪಿನ ಅರಿವಾಗಿದ್ದು, ತಕ್ಷಣ ತನ್ನ ಮೊಮ್ಮಗನನ್ನು ಹತ್ತಿರದ ಪೆರಿನೊ ಆಸ್ಪತ್ರೆಗೆ ದಾಖಲಿಸಿದ್ದಾಳೆ.


ಹಾಲುಗಲ್ಲದ ಹಸುಳೆಗೆ ಅಜ್ಜಿ ವೈನ್ ಬೆರೆಸಿದ ಹಾಲಿನ ಪುಡಿ ನೀಡಿದ್ದು, ಇದರಿಂದ ನಾಲ್ಕು ತಿಂಗಳ ಮಗು ಕೋಮಾಗೆ ಜಾರಿರುವ ಘಟನೆ ನಡೆದಿದೆ. ಮಗುವಿನ ಅಜ್ಜಿಯು ಹಾಲು ತಯಾರಿಸುವಾಗ ವೈನ್ ಬಾಟಲಿಯನ್ನು ಮಗುವಿನ ಗಾಢ ಬಣ್ಣದ ಗಾಜಿನ ನೀರಿನ ಬಾಟಲಿಯೆಂದು ಭಾವಿಸಿ ಈ ದ್ರವವನ್ನು ಬೆರೆಸಿದ್ದಾರೆ ಎಂದು ಶಂಕಿಸಲಾಗಿದೆ. ದಕ್ಷಿಣ ಇಟಾಲಿಯನ್ ನಗರದ ಬ್ರಿಂಡಿಸಿಯ ಫ್ರಾಂಕಾವಿಲ್ಲಾ ಫೊಂಟಾನಾದಿಂದ ಮಹಿಳೆ, ಮಧ್ಯಾಹ್ನ ಮಗುವಿಗೆ ಈ ಹಾಲಿನ ಬಾಟಲಿಯನ್ನು ನೀಡಿದ್ದಾಳೆ. ಮಗು ಮೊದಲು ಹಾಲನ್ನು ಕುಡಿಯಲು ನಿರಾಕರಿಸಿತು. ನಂತರ ಅದಕ್ಕೆ ಬಲವಂತವಾಗಿ ಹಾಲು ಕುಡಿಸಿದ ಕಾರಣ ಕೋಮಾಗೆ ಜಾರಿದೆ.

ಬಾಟಲಿಯ ವಾಸನೆಯ ನಂತರ, ಅಜ್ಜಿಗೆ ತಪ್ಪಿನ ಅರಿವಾಗಿದ್ದು, ತಕ್ಷಣ ತನ್ನ ಮೊಮ್ಮಗನನ್ನು ಹತ್ತಿರದ ಪೆರಿನೊ ಆಸ್ಪತ್ರೆಗೆ ಕರೆದೊಯ್ದಳು. ಅಲ್ಲಿ ಮಗುವಿಗೆ ತುರ್ತು ಚಿಕಿತ್ಸೆ ನೀಡಲಾಯಿತು. ಮಗುವಿನ ಹೊಟ್ಟೆಯನ್ನು ಪಂಪ್‌ ಮಾಡಿ ವೈನ್ ಅಂಶ ಹೊರತೆಗೆಯಲಾಗಿತು. ಸದ್ಯ ಮಗು ತೀವ್ರ ನಿಗಾ ಘಟಕದಲ್ಲಿದೆ ಎಂದು ತಿಳಿದುಬಂದಿದೆ.

Latest Videos

undefined

ಬಾಟಲ್‌ಗೆ 5 ಲಕ್ಷಕ್ಕೆ ಸೇಲ್ ಆಗುವ ಭಾರತದ ಒಂದೇ ಒಂದು ಅತ್ಯಂತ ದುಬಾರಿ ವಿಸ್ಕಿ ಬ್ರಾಂಡ್ ಇದು

ಸ್ಥಳೀಯ ಮಾಧ್ಯಮಗಳ ಪ್ರಕಾರ, ಮಗುವಿನ ಸ್ಥಿತಿ ಸ್ಥಿರವಾಗಿದೆ ಮತ್ತು ಸುಧಾರಿಸುತ್ತಿದೆ ಮತ್ತು ಪ್ರಸ್ತುತ ಅವನ ಜೀವಕ್ಕೆ ಯಾವುದೇ ಬೆದರಿಕೆ ಇಲ್ಲ. ಪ್ರಾಸಿಕ್ಯೂಟರ್‌ಗಳು ಮತ್ತು ಸ್ಥಳೀಯ ಅಧಿಕಾರಿಗಳು ಪ್ರಕರಣದ ಬಗ್ಗೆ ತಿಳಿದಿದ್ದಾರೆ ಮತ್ತು ಕ್ರಿಮಿನಲ್ ಆರೋಪಗಳನ್ನು ಹೊರಿಸಬೇಕೆ ಎಂದು ನಿರ್ಧರಿಸಲು ಮಗುವಿನ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಕಳೆದ ವರ್ಷ, ಚಿಕ್ಕ ಹುಡುಗಿಗೆ ವೈನ್ ನೀಡುತ್ತಿರುವ ವೀಡಿಯೊವನ್ನು ರೆಕಾರ್ಡ್ ಮಾಡಿದ ನಂತರ ಇಬ್ಬರು ಮಹಿಳೆಯರು ಜೈಲು ಪಾಲಾಗಿದ್ದರು. ಕೇವಲ 18 ತಿಂಗಳ ವಯಸ್ಸಿನ ಮಗುವಿನ ಬಾಯಿಗೆ ಮಹಿಳೆ ಗಾಜಿನ ಬಾಟಲಿಯಲ್ಲಿ ವೀಡಿಯೋ ನೀಡುತ್ತಿರುವ ವೈರಲ್ ಆಗಿತ್ತು. ಎಡಿನ್‌ಬರ್ಗ್‌ನ ಹೊರವಲಯದಲ್ಲಿರುವ ಮಿಡ್ಲೋಥಿಯನ್‌ನಲ್ಲಿ ಘಟನೆ ನಡೆದಿತ್ತು.

ಬಿಸಿಲ ಬೇಗೆ: ಕರ್ನಾಟಕದಲ್ಲಿ 11 ದಿನದಲ್ಲಿ 17 ಲಕ್ಷ ಲೀ. ಬಿಯರ್‌ ಮಾರಾಟ, ದಾಖಲೆ

ಶೆರಿಫ್ ಅಲಿಸ್ಟೈರ್ ನೋಬಲ್ ಮಗುವಿಗೆ ಆಲ್ಕೋಹಾಲ್ ತಿನ್ನಿಸಿರುವುದು ಕಂಡುಬಂದರೂ, ಮಹಿಳೆ ಕಡಿಮೆ ಆರೋಪವನ್ನು ಒಪ್ಪಿಕೊಂಡಿರಲ್ಲಿಲ್ಲ. ಆ ನಂತರ ಸಾಕ್ಷಿಗಳನ್ನು ಒದಗಿಸಿದ ಬಳಿಕ ಮಗುವಿನ ತಾಯಿ ಶೆರಿಫ್‌, ಮಗುವಿಗೆ ಕುಡಿಯಲು ನೀಡಿದ್ದು ಅಲ್ಕೋಹಾಲ್ ಎಂದು ಒಪ್ಪಿಕೊಂಡಿದ್ದರು.

click me!