ಪತಿಗೂ ಹೇಳಿರದ ಈ ವಿಷಯಗಳನ್ನ gynecologists ಹತ್ರ ಮುಚ್ಚಿಡ್ಲೇಬೇಡಿ !!

First Published Oct 19, 2022, 1:19 PM IST

ಮಹಿಳೆಯರಿಗೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಎಲ್ಲವನ್ನೂ ಅವರು ಎಲ್ಲರ ಬಳಿ ಶೇರ್ ಮಾಡಿಕೊಳ್ಳೋದಿಲ್ಲ. ಇದರಿಂದ ತಮ್ಮ ಮರ್ಯಾದೆ ಹೋಗುತ್ತೆ ಎಂದು ಅವರು ಅಂದುಕೊಳ್ಳುತ್ತಾರೆ. ಆದರೆ ಈ ಲೇಖನದಲ್ಲಿ, ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ರಹಸ್ಯಗಳ ಬಗ್ಗೆ ತಿಳಿದುಕೊಳ್ಳೋಣ, ಅವುಗಳನ್ನು ಅವರು ಸ್ತ್ರೀರೋಗ ತಜ್ಞರಿಂದ ಎಂದಿಗೂ ಮರೆಮಾಚಬಾರದು. ಇವುಗಳ ಬಗ್ಗೆ ಸ್ತ್ರೀ ರೋಗ ತಜ್ಞರ ಬಳಿ ಹೇಳಿದ್ರೆ ನಿಮಗೇನೆ ಒಳಿತು.
 

1. ಲೈಂಗಿಕ ಕ್ರಿಯೆಯಲ್ಲಿ ತೊಡಗುವಾಗ ನೋವು ಅಥವಾ ರಕ್ತಸ್ರಾವ(Bleeding)
ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್ ಪ್ರಕಾರ, ಮಹಿಳೆಯರು ಸಂಭೋಗಿಸಲು ಸಾಧ್ಯವಾಗದಿದ್ದರೆ ಮತ್ತು ಸಂಭೋಗದ ಸಮಯದಲ್ಲಿ ಅವರು ನೋವು ಅಥವಾ ರಕ್ತಸ್ರಾವವನ್ನು ಹೊಂದಿದ್ದರೆ, ಅವರು ಇದನ್ನು ತಮ್ಮ ಸ್ತ್ರೀರೋಗ ತಜ್ಞರಿಗೆ ಹೇಳಬೇಕು. 

ಏಕೆಂದರೆ, ಮಹಿಳೆಯರ ಈ ಸಮಸ್ಯೆಯು ಯೋನಿ ಶುಷ್ಕತೆಯ ಕಾರಣವಾಗಿರಬಹುದು. ಮಹಿಳೆಯರಲ್ಲಿ ಈಸ್ಟ್ರೋಜೆನ್(Estrogen) ಹಾರ್ಮೋನ್ ಕೊರತೆ, ದೀರ್ಘಕಾಲೀನ ಜನನ ನಿಯಂತ್ರಣ ಬಳಕೆ ಮತ್ತು ಋತುಬಂಧವು ಯೋನಿಯಲ್ಲಿ ಶುಷ್ಕತೆಗೆ ಕಾರಣವಾಗಬಹುದು. ಹಾಗಾಗಿ ಸರಿಯಾದ ಸಮಯದಲ್ಲಿ ಗಯ್ನಾಕೊಲೊಜಿಸ್ಟ್ ಹತ್ರ ತೋರಿಸಿ ನಿಮ್ಮ ಸಮಸ್ಯೆ ಸರಿಪಡಿಸಿಕೊಂಡ್ರೆ ಹ್ಯಾಪಿ ಸೆಕ್ಸ್ ಲೈಫ್ ನಿಮ್ಮದಾಗುತ್ತೆ.  

2. ಲೈಂಗಿಕ ಇತಿಹಾಸ(Sex histroy)
ಸಾಮಾನ್ಯವಾಗಿ ಮಹಿಳೆಯರು ತಮ್ಮ ಪತಿಯ ಮುಂದೆಯೂ ತಮ್ಮ ಲೈಂಗಿಕ ಇತಿಹಾಸದ ಬಗ್ಗೆ ಮಾತನಾಡಲು ನಾಚಿಕೆಪಡುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಆದರೆ ಈ ನಾಚಿಕೆಯನ್ನು ಸ್ತ್ರೀರೋಗತಜ್ಞರು ಮುಂದೆ ಬಿಡಬೇಕು. ಏಕೆಂದರೆ, ಲೈಂಗಿಕವಾಗಿ ಹರಡುವ ರೋಗಗಳು ಮತ್ತು ಯೋನಿ ಸೋಂಕುಗಳ ಅಪಾಯ ತಿಳಿಯಲು ಈ ಮಾಹಿತಿ ಅಗತ್ಯವಾಗಿದೆ. ಚಿಕ್ಕ ವಯಸ್ಸಿನಲ್ಲಿ ದೈಹಿಕ ಸಂಬಂಧಗಳು ಮಹಿಳೆಯರಲ್ಲಿ ಹೆಚ್ ಐ ವಿ  ಸೋಂಕು ಮತ್ತು ಗರ್ಭಕಂಠದ ಡಿಸ್ಪ್ಲಾಸಿಯಾಗೆ ಕಾರಣವಾಗಬಹುದು.

3. ಶಾರೀರಿಕ ಸಂಬಂಧ ಹೊಂದಬೇಕೆಂದು ಅನಿಸೋದಿಲ್ಲ
ಕಾಮಾಸಕ್ತಿಯು ಪುರುಷರಿಗಿಂತ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಡಿಮೆ. ಈ ಕಾರಣದಿಂದಾಗಿ ಅವರಲ್ಲಿ ಶಾರೀರಿಕ ಸಂಬಂಧಗಳನ್ನು ಹೊಂದುವ ಬಯಕೆ ಕಡಿಮೆಯಾಗುತ್ತೆ  ಆದರೆ, ಒಬ್ಬ ಮಹಿಳೆಗೆ ತನ್ನ ಸಂಗಾತಿಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ಯಾವುದೇ ರೀತಿಯಲ್ಲೂ ಅನಿಸದಿದ್ದರೆ, ಅದು ಮಹಿಳೆಯಲ್ಲಿ ಕಡಿಮೆ ಕಾಮಾಸಕ್ತಿಯ ಲಕ್ಷಣವಾಗಿರಬಹುದು. ಈ ಬಗ್ಗೆ ನೀವು ನಿಮ್ಮ ಸ್ತ್ರೀರೋಗ ತಜ್ಞರಿಗೆ(Gynecologist) ಹೇಳಬೇಕು. ಇದರ ಹಿಂದೆ ಇತರ ಆರೋಗ್ಯ ಸಮಸ್ಯೆಗಳು ಇರಬಹುದು.

4. ಯೂರಿನ್(Urine) ಅಥವಾ ಫೀಕೇಲ್ ಸೋರಿಕೆ
ಮಹಿಳೆಗೆ ಮೂತ್ರ ಅಥವಾ ಫೀಕೇಲ್ ಸೋರಿಕೆಯ ಸಮಸ್ಯೆಯಿದ್ದರೆ, ಈ ಸಮಸ್ಯೆಯನ್ನು ಸ್ತ್ರೀರೋಗ ತಜ್ಞರಿಂದ ಮರೆಮಾಚಬಾರದು. ಇದರ ಹಿಂದಿನ ಕಾರಣಗಳನ್ನು ಕಂಡುಹಿಡಿಯುವ ಮೂಲಕ, ವೈದ್ಯರು ಅಗತ್ಯ ಚಿಕಿತ್ಸೆಯನ್ನು ಪ್ರಾರಂಭಿಸಬಹುದು. ಈ ಸಮಸ್ಯೆಗೆ ಚಿಕಿತ್ಸೆ ನೀಡಲು ಅನೇಕ ಬಾರಿ ಮಹಿಳೆಯರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತೆ. ಹೆರಿಗೆಯ ನಂತರ ಮಹಿಳೆಯರು ಸಾಮಾನ್ಯವಾಗಿ ಈ ಸಮಸ್ಯೆಯನ್ನು ಹೊಂದುತ್ತಾರೆ .

5. ಖಾಸಗಿ ಭಾಗದ ಸುತ್ತಲೂ ದದ್ದು(Rashes) ಅಥವಾ ಯಾವುದೇ ಉಬ್ಬು
ಮಹಿಳೆಯ ಗುಪ್ತಾಂಗದ (ಯೋನಿ) ಸುತ್ತಲೂ ದದ್ದು ಅಥವಾ ಅಸಹಜ ಉಬ್ಬುಗಳಿದ್ದರೆ, ಮಹಿಳೆಯ ಉತ್ತಮ ಆರೋಗ್ಯಕ್ಕಾಗಿ ಅದರ ಬಗ್ಗೆ ಸ್ತ್ರೀರೋಗ ತಜ್ಞರಿಗೆ ತಿಳಿಸೋದು ಅಗತ್ಯ. ಏಕೆಂದರೆ, ಇದು ಎಸ್ಟಿಡಿಗಳು, ಹರ್ಪಿಸ್, ಜನನಾಂಗದ ಮೊಡವೆ, ಇತ್ಯಾದಿಗಳ ಲಕ್ಷಣಗಳಾಗಿರಬಹುದು. ಸಮಯಕ್ಕೆ ಸರಿಯಾಗಿ ಅದನ್ನು ಪರೀಕ್ಷಿಸುವ ಮೂಲಕ, ವೈದ್ಯರು ಅಗತ್ಯ ಚಿಕಿತ್ಸೆಯನ್ನು ಪ್ರಾರಂಭಿಸಬಹುದು.

6. ಖಾಸಗಿ ಭಾಗದಿಂದ ಹೊರಬರುವ ವಿಚಿತ್ರ ವಾಸನೆ(Smell) ಅಥವಾ ಬಿಳಿ ಸೆರಗು
ವಜೈನಾದ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮಾತನಾಡೋದು ಕೆಲವು ಮಹಿಳೆಯರಿಗೆ ಹಿಂಜರಿಕೆಯ ವಿಷಯವಾಗಬಹುದು. ಆದರೆ, ವೈದ್ಯರಿಗೆ ಹೇಳಲು ಸಂಕೋಚಪಡುವ ಅಗತ್ಯವಿಲ್ಲ. ಏಕೆಂದರೆ, ಅದರ ಹಿಂದೆ ಯೋನಿಯಲ್ಲಿ ಬ್ಯಾಕ್ಟೀರಿಯಾ ಅಥವಾ ಇತರ ಸೋಂಕುಗಳು ಇರಬಹುದು. ಇದಕ್ಕೆ ಸಾಧ್ಯವಾದಷ್ಟು ಬೇಗ ಚಿಕಿತ್ಸೆ ನೀಡಬೇಕು.
 

7. ಋತುಚಕ್ರದ ಸಮಯದಲ್ಲಿ ಸಾಕಷ್ಟು ನೋವು (Period pain)ಅನುಭವಿಸೋದು
ಋತುಚಕ್ರದ ಸಮಯದಲ್ಲಿ, ಹೆಚ್ಚಿನ ಮಹಿಳೆಯರು ನೋವು, ಸೆಳೆತದಂತಹ ಪಿಎಂಎಸ್ ರೋಗಲಕ್ಷಣಗಳನ್ನು ಎದುರಿಸಬೇಕಾಗುತ್ತೆ. ಆದರೆ ನಿಮ್ಮ ರೋಗಲಕ್ಷಣಗಳು ತೀವ್ರವಾಗಿದ್ದರೆ ಅಥವಾ ಮುಟ್ಟಿನ ನೋವು ಅಸಹನೀಯವಾಗಿದ್ದರೆ, ಅದರ ಬಗ್ಗೆ ಸ್ತ್ರೀರೋಗ ತಜ್ಞರೊಂದಿಗೆ ಮಾತನಾಡಿ. ಏಕೆಂದರೆ ಇದು ಎಂಡೋಮೆಟ್ರಿಯಾಸಿಸ್ ಮತ್ತು ಗರ್ಭಾಶಯದ ಫೈಬ್ರಾಯ್ಡ್ ಗಳ ಲಕ್ಷಣವಾಗಿರಬಹುದು. ಇದು ಭವಿಷ್ಯದಲ್ಲಿ ಗಂಭೀರ ಕಾಯಿಲೆಯಾಗಬಹುದು.

click me!