ವೈಟ್ ಡಿಸ್ಚಾರ್ಜ್ ಸಮಸ್ಯೆ ಇದೆಯೇ? ಯೋಚನೆ ಬಿಡಿ ಈ ಮನೆಮದ್ದು ಟ್ರೈ ಮಾಡಿ
ವೈಟ್ ಡಿಸ್ ಚಾರ್ಜ್, ಬಿಳಿ ಸೆರಗು ಅಥವಾ ಲ್ಯುಕೋರೊಹಿಯಾ ಮಹಿಳೆಯರಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಸ್ವಲ್ಪ ಬಿಳಿ ವಿಸರ್ಜನೆ ಒಂದು ಸಮಸ್ಯೆಯಲ್ಲ ಆದರೆ ಅದು ಹೆಚ್ಚಾದರೆ ಕಾಳಜಿಯ ವಿಷಯವಾಗಿದೆ. ವಿಸರ್ಜನೆ ತುಂಬಾ ಇದ್ದರೆ, ನೀವು ವೈದ್ಯರನ್ನು ಸಂಪರ್ಕಿಸಬೇಕು, ಆದರೆ ಸೌಮ್ಯ ವಿಸರ್ಜನೆಯ ಸಮಸ್ಯೆಯನ್ನು ಪರಿಹರಿಸುವ ಕೆಲವು ಮನೆಮದ್ದುಗಳು ಇಲ್ಲಿವೆ.
ಮೆಂತ್ಯಯನ್ನು ನೀರಿನಲ್ಲಿ ಬೇಯಿಸಿ ಸೇವಿಸಿದರೆ ಬಿಳಿ ವಿಸರ್ಜನೆಯ ಸಮಸ್ಯೆಯನ್ನು ಪರಿಹರಿಸಬಹುದು. ನೀವು ಅರ್ಧ ಲೀಟರ್ ನೀರಿನಲ್ಲಿ ಮೆಂತ್ಯ ಬೀಜ ಹಾಕಿ ನೀರನ್ನು ಅರ್ಧದಷ್ಟು ಆಗುವರೆಗೆ ಕುದಿಸಿ, ನಂತರ ಈ ನೀರು ತಣ್ಣಗಾದಾಗ ಕುಡಿಯಿರಿ.
ಬೆಂಡೆಕಾಯಿ ಬಿಳಿ ವಿಸರ್ಜನೆಯ ಸಮಸ್ಯೆಗೆ ಮತ್ತೊಂದು ಉತ್ತಮ ಪರಿಹಾರ. ನೀವು ಸ್ವಲ್ಪ ಬೆಂಡೆಕಾಯಿಯನ್ನು ನೀರಿನಲ್ಲಿ ಕುದಿಸಿ ನಂತರ ಮಿಕ್ಸರ್ ನಲ್ಲಿ ರುಬ್ಬಿ ಸೇವಿಸಬಹುದು. ಕೆಲವು ಹೆಂಗಸರು ಬೆಂಡೆಕಾಯಿಯನ್ನು ಮೊಸರಿನೊಂದಿಗೆ ನೆನೆಸಿ ನಂತರ ಸೇವಿಸುತ್ತಾರೆ.
ಕೆಲವು ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಬಿಳಿ ಸೆರಗಿಗೆ ಚಿಕಿತ್ಸೆ ನೀಡಲು ಇದು ಸುಲಭವಾದ ಮತ್ತು ಸುರಕ್ಷಿತವಾದ ಮನೆಮದ್ದುಗಳಲ್ಲಿ ಒಂದು.
ಅಮ್ಲಾ ಎಂದು ಕರೆಯಲ್ಪಡುವ ಭಾರತೀಯ ನೆಲ್ಲಿಕಾಯಿ ಭಾರತೀಯ ಸೂಪರ್ ಫುಡ್. ವಿಟಮಿನ್ ಸಿ ಮತ್ತು ಇತರ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಮ್ಲಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ.
ನೀವು ಅದನ್ನು ಯಾವುದೇ ರೂಪದಲ್ಲಿ ಬೇಕಾದರೂ ಉಪಯೋಗಿಸಬಹುದು. ನೆಲ್ಲಿಕಾಯಿ, ನೆಲ್ಲಿಕಾಯಿ ಪುಡಿ, ಮುರಬ್ಬಾ ಅಥವಾ ಮನೆಯಲ್ಲಿ ತಯಾರಿಸಿದ ಮಿಠಾಯಿಗಳು. ಆಮ್ಲಾವನ್ನು ನಿಯಮಿತವಾಗಿ ಸೇವಿಸುವುದರಿಂದ ಬಿಳಿ ವಿಸರ್ಜನೆಯ ಸಮಸ್ಯೆಯೂ ನಿವಾರಣೆಯಾಗುತ್ತದೆ
ತುಳಸಿ ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಔಷಧೀಯ ಪ್ರಯೋಜನಗಳಿಗಾಗಿ ಯುಗಯುಗದಿಂದ ಬಳಸುತ್ತಿದ್ದಾರೆ. ನೀವು ಸ್ವಲ್ಪ ತುಳಸಿಯನ್ನು ನೀರಿನಲ್ಲಿ ಹಾಕಿ ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ, ಸೇವಿಸಿ ಸಮಸ್ಯೆಯನ್ನು ನಿರ್ಮೂಲನೆ ಮಾಡಲು ಪ್ರತಿದಿನ ಎರಡು ಬಾರಿ ಈ ಪಾನೀಯ ಸೇವಿಸಿ. ನೀವು ಹಾಲಿನೊಂದಿಗೆ ತುಳಸಿಯನ್ನು ಸಹ ಸೇವಿಸಬಹುದು.
ಬಿಳಿ ವಿಸರ್ಜನೆಯ ಸಮಸ್ಯೆಯನ್ನು ನಿರ್ಮೂಲನೆ ಮಾಡಲು ನೀವು ನಿಯಮಿತವಾಗಿ ಅಕ್ಕಿ ಪಿಷ್ಟವನ್ನು (ಅಕ್ಕಿ ಕುದಿಸಿದ ನೀರು) ಕುಡಿಯಬಹುದು. ನೀವು ನಿರಂತರವಾಗಿ ಬಿಳಿ ವಿಸರ್ಜನೆಯ ಸಮಸ್ಯೆಯಿಂದ ಬಳಲುತ್ತಿರುವಾಗ ಅಕ್ಕಿಯಿಂದ ಬರುವ ಪಿಷ್ಟವು ಹೆಚ್ಚು ಯೋಗ್ಯವಾಗಿರುತ್ತದೆ.
ತುರಿಕೆಯೊಂದಿಗೆ ಯೋನಿ ಡಿಸ್ಚಾರ್ಜ್ ಹೊಂದಿದ್ದರೆ, ನೀವು ಕೆಲವು ಪೇರಳೆ ಅಥವಾ ಸೀಬೆ ಎಲೆಗಳನ್ನು ನೀರಿನಲ್ಲಿ ಕುದಿಸಬಹುದು ಮತ್ತು ಅದು ತಣ್ಣಗಾದ ನಂತರ ಅದನ್ನು ಸೇವಿಸಿ. ಇದನ್ನು ದಿನಕ್ಕೆ ಎರಡು ಬಾರಿ ಕುಡಿಯಿರಿ.
ಕಡಿಮೆ ಡಿಸ್ ಚಾರ್ಜ್ ಆಗುತ್ತಿದ್ದರೆ ವೈದ್ಯರ ಬಳಿ ಹೋಗುವ ಬದಲು ನೀವು ಇವುಗಳನ್ನು ಮನೆಯಲ್ಲಿಯೇ ಟ್ರೈ ಮಾಡಬಹುದು. ಒಂದು ವೇಳೆ ವೈಟ್ ಡಿಸ್ಚಾರ್ಜ್ ಹೆಚ್ಚಾಗುತ್ತಿದ್ದರೆ ಕೂಡಲೇ ವೈದ್ಯರನ್ನು ಕಾಣಲು ಮರೆಯಬೇಡಿ.