ಮಗು ಹಾಲು ಕುಡಿಯಲ್ವಾ? ಹಾಗಿದ್ರೆ ಈ ಟ್ರಿಕ್ಸ್ ಟ್ರೈ ಮಾಡಿ

First Published Oct 18, 2022, 4:51 PM IST

ಮಕ್ಕಳು ಯಾವತ್ತೂ ಇಷ್ಟಪಟ್ಟು ಏನೂ ತಿನ್ನೋದೇ ಇಲ್ಲ. ಅವರಿಗೆ ತಿನ್ನಿಸಲು ತುಂಬಾನೆ ಕಷ್ಟಪಡಬೇಕಾಗುತ್ತೆ. ಅಷ್ಟೇ ಅಲ್ಲ, ಪೌಷ್ಟಿಕಾಂಶಗಳಿಂದ ತುಂಬಿದ ಹಾಲು ಕುಡಿಸಲು ಸಹ ಕಷ್ಟ ಪಡಬೇಕಾಗುತ್ತೆ. ಸಾಮಾನ್ಯವಾಗಿ ನಾವು ಮಕ್ಕಳಿಗೆ ಹಾಕು ಕುಡಿಸುವಾಗ ಅವರು ತುಂಬಾ ಇಷ್ಟಪಡುವ ಫ್ಲೇವರ್ ಗಳನ್ನು ಸೇರಿಸಬಹುದು. ಉದಾಹರಣೆಗೆ, ಚಾಕೊಲೇಟ್, ಸ್ಟ್ರಾಬೆರಿ, ವೆನಿಲ್ಲಾ, ಬಟರ್ಸ್ಕಾಚ್, ಗುಲಾಬಿ ಮುಂತಾದ ರುಚಿಗಳನ್ನು ಸೇರಿಸಬಹುದು. ಹಾಲನ್ನು ಆರೋಗ್ಯಕರವಾಗಿಸುವ ಜೊತೆಗೆ, ರುಚಿಕರವಾಗಿರುತ್ತದೆ. ಇದರಿಂದ ಮಕ್ಕಳು ಇಷ್ಟಪಟ್ಟು ಹಾಲು ಕುಡಿಯುತ್ತಾರೆ.

ಮಕ್ಕಳ ಅತ್ಯುತ್ತಮ ಬೆಳವಣಿಗೆಗಾಗಿ, ನೀವು ಅವರ ಆಹಾರದಲ್ಲಿ ಹೆಚ್ಚು ಹೆಚ್ಚು ಪೌಷ್ಟಿಕಾಂಶ-ಸಮೃದ್ಧ ಆಹಾರಗಳನ್ನು ಸೇರಿಸುವುದು ಬಹಳ ಮುಖ್ಯ. ಮಕ್ಕಳ ಅಭಿವೃದ್ಧಿ ಹೊಂದುತ್ತಿರುವ ದೇಹಕ್ಕೆ ಹಾಲಿನ ಸೇವನೆ ಅಗತ್ಯವೆಂದು ಪರಿಗಣಿಸಲಾಗಿದೆ. ಮಕ್ಕಳ ಮೂಳೆಗಳು ಮತ್ತು ಹಲ್ಲುಗಳ ಬೆಳವಣಿಗೆಗೆ ಹಾಲು ಅತ್ಯಗತ್ಯ ಆಹಾರವಾಗಿದೆ, ಅದರ ಕೊರತೆಯು ಅವರ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
 

ಆದರೆ ಕೆಲವು ಮಕ್ಕಳು ಹಾಲನ್ನು ಇಷ್ಟಪಡುವುದೇ ಇಲ್ಲ ಮತ್ತು ಹಾಲನ್ನು ನೋಡಿದ ತಕ್ಷಣ ಅವರು ನೆಪಗಳನ್ನು ಹೇಳಲು ಪ್ರಾರಂಭಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ,  ಮಗುವಿಗೆ ಹಾಲು ಹೇಗಪ್ಪಾ ಕುಡಿಸೋದು ಅನ್ನೋ ಟೆನ್ಶನ್ ತಾಯಂದಿರಿಗೆ ತಲೆ ಕೆಡಿಸುತ್ತೆ. ನಿಮಗೂ ಹಾಗೆ ಅನಿಸಿದ್ದರೆ, ಇಲ್ಲಿ ಕೆಲವೊಂದು ಟಿಪ್ಸ್ ಗಳನ್ನು ನೀಡಲಾಗಿದೆ. ಅವುಗಳ ಸಹಾಯದಿಂದ ರುಚಿಕರವಾದ ರೀತಿಯಲ್ಲಿ ಹಾಲನ್ನು (how to make milk tasty) ಮಕ್ಕಳಿಗೆ ನೀಡಬಹುದು.

ಹಾಲನ್ನು ರುಚಿಕರವಾಗಿ ಮಾಡೋದು ಹೇಗೆ?

ಫ್ಲೇವರ್ ಸೇರಿಸಿ (add flavour)
ಮಕ್ಕಳು ತುಂಬಾ ಇಷ್ಟಪಡುವ ಫ್ಲೇವರ್ ನ್ನು ಮಕ್ಕಳ ಹಾಲಿಗೆ ಸೇರಿಸಿ. ಉದಾಹರಣೆಗೆ, ನೀವು ಮಕ್ಕಳ ಹಾಲಿಗೆ ಚಾಕೊಲೇಟ್, ಸ್ಟ್ರಾಬೆರಿ, ವೆನಿಲ್ಲಾ, ಬಟರ್ಸ್ಕಾಚ್, ಗುಲಾಬಿ ಮುಂತಾದ ರುಚಿಗಳನ್ನು ಸೇರಿಸಬಹುದು. ಇದು ಹಾಲನ್ನು ಆರೋಗ್ಯಕರ ಮತ್ತು ರುಚಿಕರವಾಗಿಸುತ್ತದೆ. ಮಕ್ಕಳು ಇದನ್ನು ಇಷ್ಟಪಟ್ಟು ಕುಡಿಯುತ್ತಾರೆ. 

ಸೀರಿಯಲ್ ಅಥವಾ ಹಣ್ಣಿನೊಂದಿಗೆ ಹಾಲು ನೀಡಿ
ನೀವು ಕಾರ್ನ್ ಫ್ಲೇಕ್ಸ್,ಡ್ರೈ ಫ್ರುಟ್ಸ್ ಅಥವಾ ಅವರ ನೆಚ್ಚಿನ ಹಣ್ಣುಗಳನ್ನು ಹಾಲಿನಲ್ಲಿ ಹಾಕಿ ಮಕ್ಕಳಿಗೆ ನೀಡಬಹುದು. ಇದು ಅವರ ಉಪಾಹಾರಕ್ಕೆ ಉತ್ತಮ ಆಯ್ಕೆಯಾಗಬಹುದು. ಇದು ಹಾಲಿನ ರುಚಿಯನ್ನು ಹೆಚ್ಚಿಸುವುದರ ಜೊತೆಗೆ, ಅದನ್ನು ನೋಡಿಯೇ ಮಕ್ಕಳು ಬೇಗನೆ ಹಾಲು ಕುಡಿದು ಮುಗಿಸುತ್ತಾರೆ.

ಸ್ಮೂಥಿಗಳನ್ನು ಮಾಡಿ
ಯಾರಿಗೆ ಸ್ಮೂಥಿ  (smoothies) ಇಷ್ಟ ಇಲ್ಲ ಹೇಳಿ. ಮಕ್ಕಳು ಹಾಲು ಕುಡಿಯದಿದ್ದರೆ ಯೋಚನೆ ಮಾಡಬೇಡಿ. ಹಾಲನ್ನು ಸ್ಮೂಥಿಯಾಗಿ ಬದಲಾಯಿಸಿ. ನೀವು ಮಕ್ಕಳಿಗೆ ಅವರ ನೆಚ್ಚಿನ ಹಣ್ಣುಗಳಿಂದ ಸ್ಮೂಥಿಗಳನ್ನು ತಯಾರಿಸಿ ನೀಡಬಹುದು. ಬಯಸಿದರೆ, ಹಾಲಿನ ಬದಲು ಮೊಸರನ್ನು ಬಳಸಿ ಮತ್ತು ಅದನ್ನು ಮಕ್ಕಳಿಗೆ ನೀಡಿ.

ಮಿಲ್ಕ್ ಐಸ್ ಕ್ರೀಮ್ (milk icecream)
ಬರೀ ಹಾಲನ್ನು ನೀಡೀದ್ರೆ ಅವರು ಇಷ್ಟಪಡೋದಿಲ್ಲ ಎಂದಾದರೆ ನೀವು ಅವರಿಗೆ ಐಸ್ ಕ್ರೀಮ್ ರೀತಿ ಇದನ್ನು ಸರ್ವ್ ಮಾಡಬಹುದು. ಹೌದು ನೀವು ಹಾಲಿಗೆ ಸ್ವಲ್ಪ ಫ್ಲೇವರ್ ಸೇರಿಸಿ ಮತ್ತು ಅದನ್ನು ವಿವಿಧ ಶೇವ್ ಐಸ್ ಕ್ರೀಮ್ ಬಾರ್ ಗಳಲ್ಲಿ ಫ್ರೀಜ್ ಮಾಡಿ. ಮಕ್ಕಳು ಅದನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ.
 

ಬಿಸಿ ಬದಲು ತಂಪು ಹಾಲು
ಮಗುವು ಬಿಸಿ ಹಾಲನ್ನು ಕುಡಿಯದಿದ್ದರೆ, ನೀವು ಅವನಿಗೆ ಕೋಲ್ಡ್ ಹಾಲನ್ನು (cold milk) ನೀಡಬೇಕು. ಅವರು ತಂಪಾದ ಹಾಲನ್ನು ಹೆಚ್ಚು ಇಷ್ಟಪಡಬಹುದು. ಹೆಚ್ಚು ತಂಪು ಬೇಡ. ಹಾಲನ್ನು ಸ್ವಲ್ಪ ಕೋಲ್ಡ್ ಮಾಡಿ, ಅದಕ್ಕೆ ಸ್ವಲ್ಪ ಸಿಹಿ ಸೇರಿಸಿ ನೀಡಿದ್ರೆ ಮಕ್ಕಳು ಖಂಡಿತವಾಗಿಯೂ ಅದನ್ನು ಇಷ್ಟಪಟ್ಟು ತಿನ್ನುತ್ತಾರೆ.

ಐಸ್ ಕ್ರೀಮ್ ಮಿಲ್ಕ್ ಶೇಕ್
ನೀವು ಮಗುವಿಗೆ ತಣ್ಣನೆಯ ಹಾಲನ್ನು ನೀಡುತ್ತಿದ್ದರೆ, ಅದಕ್ಕೆ ಮಗುವಿನ ಆಯ್ಕೆಯ ಒಂದು ಟೀಚಮಚ ಐಸ್ ಕ್ರೀಮ್ ಅನ್ನು ಸೇರಿಸಿ ಮತ್ತು ಅದನ್ನು ಮಿಶ್ರಣ ಮಾಡಿ. ಮಗು ಅದನ್ನು ಇಷ್ಟಪಡುತ್ತದೆ. ಐಸ್ ಕ್ರೀಮ್ ಮಿಲ್ಕ್ ಶೇಕ್ ಅಂದ್ರೆ ಮಕ್ಕಳು ಬಾಯಿ ಚಪ್ಪರಿಸಿಕೊಂಡು ಹಾಲು ಖಾಲಿ ಮಾಡ್ತಾರೆ. 

click me!