ಗರ್ಭಾವಸ್ಥೆಯಲ್ಲಿ ಅಸ್ತಮಾ ಪ್ರಾಣಕ್ಕೆ ಕುತ್ತಾಗಬಹುದೇ ?

Published : Oct 15, 2022, 05:04 PM ISTUpdated : Oct 15, 2022, 05:18 PM IST

ಅಸ್ತಮಾ ಒಂದು ಶ್ವಾಸಕೋಶದ ಕಾಯಿಲೆಯಾಗಿದ್ದು, ಇದರಲ್ಲಿ ರೋಗಿಯು ಉಸಿರಾಡಲು ಸಾಕಷ್ಟು ಕಷ್ಟಪಡುತ್ತಾನೆ.  ಈ ರೋಗದಲ್ಲಿ, ಮಾನವನ ಶ್ವಾಸಕೋಶಕ್ಕೆ ಸಂಬಂಧಿಸಿದ ಶ್ವಾಸನಾಳವು ಕುಗ್ಗುತ್ತೆ, ಇದು ಉಸಿರಾಟದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತೆ. ಅಸ್ತಮಾ ಪಾರ್ಶ್ವವಾಯುವಿದ್ದಾಗ ಜನರು ಸರಿಯಾಗಿ ಉಸಿರಾಡಲು ಸಾಧ್ಯವಾಗೋದಿಲ್ಲ, ಹೀಗಾದಾಗ ಅವರು ಇನ್ಹೇಲರ್ ತೆಗೆದುಕೊಳ್ಳಬೇಕಾಗುತ್ತೆ. ಅಸ್ತಮಾಕ್ಕೆ ಅನೇಕ ಕಾರಣಗಳಿರಬಹುದು. ಕೆಲವೊಮ್ಮೆ ಇದು ಆನುವಂಶಿಕ ಕಾರಣಗಳಿಂದ ಉಂಟಾಗುತ್ತೆ, ಕೆಲವೊಮ್ಮೆ ಇದು ಮಾಲಿನ್ಯ ಮತ್ತು ಅಲರ್ಜಿಗಳಿಂದ ಕೂಡಿರುತ್ತೆ.

PREV
19
ಗರ್ಭಾವಸ್ಥೆಯಲ್ಲಿ ಅಸ್ತಮಾ ಪ್ರಾಣಕ್ಕೆ ಕುತ್ತಾಗಬಹುದೇ ?

ಕಳೆದ ಕೆಲವು ವರ್ಷಗಳಲ್ಲಿ ಅಸ್ತಮಾ(Asthma) ರೋಗಿಗಳ ಸಂಖ್ಯೆ ತುಂಬಾನೆ ಹೆಚ್ಚಾಗಿದೆ. ಈ ರೋಗವು ಯಾವುದೇ ವಯಸ್ಸಿನ ಜನರಿಗೆ ಸಂಭವಿಸಬಹುದು ಮತ್ತು ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ, ಪ್ರಸ್ತುತ ವಿಶ್ವದಾದ್ಯಂತ ಸುಮಾರು 20 ಮಿಲಿಯನ್ ಜನರು ಅಸ್ತಮಾದಿಂದ ಬಳಲುತ್ತಿದ್ದಾರೆ. ಅದರಲ್ಲೂ ಮಹಿಳೆಯರಿಗೆ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. 

29

ಗರ್ಭಿಣಿಯರು(Pregnant) ಸಹ ಅಸ್ತಮಾದ ಹೆಚ್ಚಿನ ಅಪಾಯದಲ್ಲಿದ್ದಾರೆ. ಅಸ್ತಮಾವು ಗರ್ಭಧಾರಣೆಯ ಮೇಲೆ ಶೇಕಡಾ 4 ರಿಂದ 8ರಷ್ಟು ಪರಿಣಾಮ ಬೀರುತ್ತೆ. ನೀವು ಗರ್ಭಿಣಿ ಮಹಿಳೆಯಾಗಿದ್ದರೆ ಮತ್ತು ಅಸ್ತಮಾದಿಂದ ಬಳಲುತ್ತಿದ್ದರೆ ಆಗ ನೀವು ವಿಶೇಷ ಕಾಳಜಿ ವಹಿಸಬೇಕು. ಈ ಸಮಯದಲ್ಲಿ ಯಾವ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ತಿಳಿಯೋಣ.

39

ಗರ್ಭಧಾರಣೆಯ ಮೇಲೆ ಯಾವ ಪರಿಣಾಮ ಬೀರಬಹುದು?
ಅಸ್ತಮಾ ರಕ್ತದಲ್ಲಿನ ಆಮ್ಲಜನಕದ(Oxygen) ಪ್ರಮಾಣವನ್ನು ಕಡಿಮೆ ಮಾಡುತ್ತೆ, ಅದರ ಅತಿದೊಡ್ಡ ಪರಿಣಾಮವು ಗರ್ಭದಲ್ಲಿರುವ ಮಗುವಿನ ಮೇಲೆ ಆಗಬಹುದು.ಅಸ್ತಮಾದಿಂದಾಗಿ ಉಂಟಾಗುವ ಆಮ್ಲಜನಕದ ಕೊರತೆಯಿಂದಾಗಿ, ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು.

49

ಅಸ್ತಮಾದಿಂದ ಗರ್ಭಧಾರಣೆಗೆ ಯಾವೆಲ್ಲಾ ತೊಂದರೆಯಾಗುತ್ತೆ ನೋಡೋಣ 
ಹೆರಿಗೆ ನೋವು ಹೆಚ್ಚಾಗುವ ಸಾಧ್ಯತೆ
ಅಸ್ತಮಾವು ಅಧಿಕ ರಕ್ತದೊತ್ತಡಕ್ಕೆ(High BP) ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತೆ.
ಜನನದ ಸಮಯದಲ್ಲಿ ತೂಕ ನಷ್ಟ.
ಗರ್ಭದೊಳಗಿರುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ.

59

ಗರ್ಭಧಾರಣೆಯು ಅಸ್ತಮಾವನ್ನು ಇನ್ನಷ್ಟು ಹದಗೆಡಿಸಬಹುದೇ ?
ಅಸ್ತಮಾ ಮತ್ತು ಗರ್ಭಧಾರಣೆ ಎರಡೂ ಪರಸ್ಪರರ ಮೇಲೆ ಪರಿಣಾಮ ಬೀರುತ್ತವೆ. ಅಮೇರಿಕನ್ ಕಾಲೇಜ್ ಆಫ್ ಅಲರ್ಜಿ, ಅಸ್ತಮಾ ಮತ್ತು ಇಮ್ಯುನಾಲಜಿ ಪ್ರಕಾರ ಅಸ್ತಮಾದಿಂದ ತೊಂದರೆಗೀಡಾದ ಗರ್ಭಧಾರಣೆಯಲ್ಲಿ ಮೂರನೇ ಒಂದು ಭಾಗದಷ್ಟು ಗರ್ಭಧಾರಣೆಯಲ್ಲಿ(Pregnancy) ಅಸ್ತಮಾ ಸುಧಾರಿಸುತ್ತೆ. ಕೆಲವು ಪ್ರಕರಣಗಳಲ್ಲಿ ಗರ್ಭಾವಸ್ಥೆಯಲ್ಲಿ ಅಸ್ತಮಾ ಜಾಸ್ತಿಯಾಗಬಹುದು. ಆದರೆ , ಗರ್ಭಾವಸ್ಥೆಯಲ್ಲಿ ಅಸ್ತಮಾ ಹೇಗೆ ಒಬ್ಬರಿಂದ ಒಬ್ಬರಿಗೆ ಹೇಗೆ ಬದಲಾಗುತ್ತೆ ಎಂಬುದು ಸ್ಪಷ್ಟವಾಗಿಲ್ಲ. ಗರ್ಭಧಾರಣೆಯ ಸಮಯದಲ್ಲಿ ಅಸ್ತಮಾ ಉಲ್ಬಣಗೊಂಡರೆ, ಆತಂಕಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ.

69

ಗರ್ಭಾವಸ್ಥೆಯಲ್ಲಿ ಅಸ್ತಮಾಕ್ಕೆ ಕಾರಣಗಳು
ಗರ್ಭಾವಸ್ಥೆಯಲ್ಲಿ, ಈಸ್ಟ್ರೋಜೆನ್(Estrogen) ಮತ್ತು ಪ್ರೊಜೆಸ್ಟರಾನ್ ಹಾರ್ಮೋನ್ ಮಹಿಳೆಯರ ದೇಹದಲ್ಲಿ ಹೆಚ್ಚಾಗಿ ತಯಾರಾಗುತ್ತೆ. ಈಸ್ಟ್ರೋಜೆನ್ ಹಾರ್ಮೋನ್ ಸೈನಸ್ ಮತ್ತು ಮುಚ್ಚಿದ ಮೂಗಿನಂತಹ ಸಮಸ್ಯೆಗಳಿಗೆ ಕಾರಣವಾಗುತ್ತೆ. ಹಾಗೇ, ಪ್ರೊಜೆಸ್ಟರಾನ್ ಹಾರ್ಮೋನ್ ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಹಾಗಾಗಿ ಈ ಎರಡರ ಅತಿಯಾದ ಉತ್ಪಾದನೆಯಿಂದಾಗಿ, ಮಹಿಳೆಯರು ಉಸಿರಾಟದ ತೊಂದರೆ ಅನುಭವಿಸಬಹುದು ಮತ್ತು ಗರ್ಭಾವಸ್ಥೆಯಲ್ಲಿ ಅಸ್ತಮಾದ ಸಮಸ್ಯೆ ಎದುರಿಸಬೇಕಾಗಬಹುದು.

79

ಗರ್ಭಾವಸ್ಥೆಯಲ್ಲಿ ಅಸ್ತಮಾದ ಲಕ್ಷಣಗಳು
ಗರ್ಭಾವಸ್ಥೆಯಲ್ಲಿ ಅಸ್ತಮಾ ಇದ್ದಾಗ ಮಹಿಳೆಯರು ಈ ಕೆಳಗಿನ ರೋಗಲಕ್ಷಣಗಳನ್ನು ತೋರಿಸಬಹುದು
ಉಸಿರಾಟದ ತೊಂದರೆ
ಎದೆ ನೋವಿನ ಅನುಭವ 
ಎದೆಯ ಬಿಗಿತದ ಸಮಸ್ಯೆ
ಹೆಚ್ಚು ದಣಿವು
ತಲೆನೋವು(Head ache)
ಆಗಾಗ್ಗೆ ಶೀತ ಕೆಮ್ಮು ಕಾಣಿಸಿಕೊಳ್ಳುವುದು

89

ಗರ್ಭಾವಸ್ಥೆಯಲ್ಲಿ ಅಸ್ತಮಾ ತಡೆಗಟ್ಟುವಿಕೆ
ಗರ್ಭಾವಸ್ಥೆಯಲ್ಲಿ, ಪ್ರತಿಯೊಬ್ಬ ಮಹಿಳೆಯೂ ತನ್ನ ಆರೋಗ್ಯದ(Health) ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.  ಅಸ್ತಮಾದ ಬಗ್ಗೆ ಹೇಳೋದಾದ್ರೆ, ತಾಯಿ ಮತ್ತು ಮಗು ಇಬ್ಬರೂ ಸಂಪೂರ್ಣವಾಗಿ ಆರೋಗ್ಯವಾಗಿರಲು ವಿಶೇಷ ಗಮನ ನೀಡಬೇಕಾಗುತ್ತೆ.

99

ಗರ್ಭಾವಸ್ಥೆಯಲ್ಲಿ ಧೂಳಿನ ಸಂಪರ್ಕ ತಪ್ಪಿಸಿ.
ಸಮತೋಲಿತ ಮತ್ತು ಪೌಷ್ಟಿಕ ಆಹಾರ ಸೇವಿಸಿ.
ಈಗಾಗಲೇ ಉಸಿರಾಟದ ಸಮಸ್ಯೆ (Breathing problem)ಹೊಂದಿದ್ದರೆ ಕಾಲಕಾಲಕ್ಕೆ ಟೆಸ್ಟ್ ಮಾಡಿಸಿಕೊಳ್ಳಿ
ತುಂಬಾ ವೇಗವಾಗಿ ನಡೆಯೋದನ್ನು ತಪ್ಪಿಸಿ.
ಕಠಿಣ ಪರಿಶ್ರಮದಿಂದ ದೂರವಿರಿ. 
ನಿಯಮಿತವಾಗಿ ವ್ಯಾಯಾಮ ಮಾಡಿ. 
ಪ್ರಾಣಾಯಾಮದಿಂದ ಉಸಿರಾಟದ ತೊಂದರೆಯನ್ನು ನಿವಾರಿಸಬಹುದು. 

Read more Photos on
click me!

Recommended Stories