ಬ್ರಾ ಧರಿಸಲು ಇಷ್ಟಪಡದ ಅನೇಕ ಮಹಿಳೆಯರಿದ್ದಾರೆ. ಬ್ರಾ ಧರಿಸುವುದರಿಂದ ಅನೇಕ ಮಹಿಳೆಯರು ಉಸಿರುಗಟ್ಟಿದ ಅನುಭವವಾಗುತ್ತದೆ. ಬ್ರಾ ಧರಿಸೋದು ಅಂದ್ರೆ ತುಂಬಾ ಇರಿಟೇಟಿಂಗ್ ಕೆಲಸ ಎಂದು ಹೇಳೋ ಮಹಿಳೆಯರು ಸಹ ಇದ್ದಾರೆ. ವಿವಿಧ ಆರೋಗ್ಯ ತಜ್ಞರು ಬ್ರಾಗಳ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಕೆಲವು ಸಂಶೋಧನೆಗಳ ಪ್ರಕಾರ ಬ್ರಾ ಧರಿಸೋದು ತುಂಬಾನೆ ಒಳ್ಳೆಯದಂತೆ. ಇದರ ಬಗ್ಗೆ ಆರೋಗ್ಯ ತಜ್ಞರು ಏನು ಹೇಳುತ್ತಾರೆಂದು ತಿಳಿಯೋಣ.
ಮೊದಲು ಸ್ತನದ ಬಗ್ಗೆ ತಿಳಿದುಕೊಳ್ಳೋದು ಮುಖ್ಯ
ಬ್ರಾಗಳ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವ ಮೊದಲು, ನಿಮ್ಮ ಸ್ತನದ ಬಗ್ಗೆ ತಿಳಿದುಕೊಳ್ಳೋದು ತುಂಬಾನೆ ಮುಖ್ಯ. ಸ್ತನಗಳು ಗ್ಲೆಂಡುಲಾರ್ ಅಂಗಾಂಶ ಮತ್ತು ಕೊಬ್ಬಿನಿಂದ ಮಾಡಲ್ಪಟ್ಟಿವೆ. ಸ್ತನವನ್ನು ದೃಢವಾಗಿಡಲು ಕೂಪರ್ ಲಿಗಮೆಂಟ್ ಎಂಬ ಅಸ್ಥಿರಜ್ಜು ಸಹಾಯ ಮಾಡುತ್ತೆ. ಸ್ತನದ ಆಕಾರವು ಗ್ಲೆಂಡುಲಾರ್ ಅಂಗಾಂಶ ಮತ್ತು ಕೊಬ್ಬನ್ನು ಅವಲಂಬಿಸಿರುತ್ತದೆ.
Image Credit: Pixabay
ಬ್ರಾ ಧರಿಸುವುದು ಅಥವಾ ಧರಿಸದಿರುವುದು ಪ್ರತಿಯೊಬ್ಬ ಮಹಿಳೆಯ ವೈಯಕ್ತಿಕ ಆಯ್ಕೆಯಾಗಿದೆ. ನೀವು ಬ್ರಾ ಧರಿಸದಿದ್ದರೆ, ಅದು ನಿಮ್ಮ ಸ್ತನವನ್ನು ಹಾನಿಗೊಳಿಸುತ್ತಿದೆ ಅಥವಾ ಬ್ರಾ ಧರಿಸದಿದ್ದರೆ ಕೆಲವು ರೋಗ ಬರುವ ಸಾಧ್ಯತೆ ಇದೆ ಎಂದು ನೀವು ಭಯಪಡಬೇಕಾಗಿಲ್ಲ. ಆದರೆ ಕೆಲವು ನಿರ್ದಿಷ್ಟ ಸಮಯಗಳಲ್ಲಿ, ನೀವು ಬ್ರಾ ಧರಿಸದಿದ್ದಾಗ, ಸ್ತನಗಳ ಮೇಲೆ ಪರಿಣಾಮ ಬೀರಬಹುದು. ಬನ್ನಿ ಬ್ರಾ ಧರಿಸೋದ್ರಿಂದ ಉಂಟಾಗುವ ಅನುಕೂಲ ಮತ್ತು ಅನಾನುಕೂಲತೆಗಳನ್ನು ತಿಳಿಯಿರಿ.
ಕುತ್ತಿಗೆ ನೋವು
ಸಂಶೋಧನೆಯೊಂದರ ಪ್ರಕಾರ ನಿಮ್ಮ ಸ್ತನದ ಗಾತ್ರವು ಹೆಚ್ಚಿದ್ದು, ಬ್ರಾ ಧರಿಸದಿದ್ದರೆ ನೀವು ಕುತ್ತಿಗೆ ನೋವನ್ನು (neck pain) ಎದುರಿಸಬೇಕಾಗುತ್ತದೆ ಎಂದು ತಿಳಿದು ಬಂದಿದೆ. ದಿ ಜರ್ನಲ್ ಆಫ್ ಆರ್ಥೋಪೆಡಿಕ್ಸ್ ನಲ್ಲಿ ಪ್ರಕಟವಾದ ಅಧ್ಯಯನವು ಸ್ತನದ ಗಾತ್ರ ಮತ್ತು ಭುಜ ಅಥವಾ ಕುತ್ತಿಗೆ ನೋವಿನ ನಡುವಿನ ಸಂಬಂಧವನ್ನು ತಿಳಿಸಿದೆ.
ಸ್ತನದ ಗಾತ್ರವು ಹೆಚ್ಚಾದಾಗ, ಟ್ರೆಪೀಜಿಯಸ್ ಸ್ನಾಯುಗಳು ಹಿಗ್ಗುತ್ತವೆ, ಇದು ಕುತ್ತಿಗೆಯ ಹಿಂಭಾಗದಿಂದ ಭುಜಗಳವರೆಗೆ ನೋವನ್ನು ಉಂಟುಮಾಡುತ್ತದೆ ಎಂದು ಅಧ್ಯಯನವು ಕಂಡುಕೊಂಡಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಸ್ತನವನ್ನು ಬೆಂಬಲಿಸಲು (breast support) ಮತ್ತು ಕುತ್ತಿಗೆ ನೋವನ್ನು ತಪ್ಪಿಸಲು ಸರಿಯಾದ ಗಾತ್ರದ ಬ್ರಾ ಧರಿಸುವುದು ಬಹಳ ಮುಖ್ಯ.
ತಪ್ಪು ಗಾತ್ರದ ಬ್ರಾ
ಅನೇಕ ಮಹಿಳೆಯರು ಬ್ರಾ ಧರಿಸಲು ಇಷ್ಟಪಡೋದಿಲ್ಲ, ಇದರಿಂದ ಅನ್ ಕಂಫರ್ಟೇಬಲ್ ಆಗುತ್ತೆ ಎಂದು ಅವರು ಹೇಳುತ್ತಾರೆ. ಇದಕ್ಕೆ ಒಂದು ಕಾರಣವೆಂದರೆ ಸರಿಯಾದ ಗಾತ್ರ ಮತ್ತು ಫ್ಯಾಬ್ರಿಕ್ ಬ್ರಾ ಧರಿಸದಿರುವುದು. ತಪ್ಪಾದ ಬ್ರಾ ಧರಿಸುವುದರಿಂದ ಸ್ತನದಲ್ಲಿ ನೋವು ಉಂಟಾಗಬಹುದು.
ತಪ್ಪು ಗಾತ್ರದ ಬ್ರಾ ಧರಿಸುವುದರಿಂದ ನಿಮಗೆ ಅನಾನುಕೂಲವಾಗಬಹುದು ಮತ್ತು ಸ್ತನ ನೋವು, ಗಾಳಿಯ ಕೊರತೆಯಂತಹ ಸಮಸ್ಯೆ ಎದುರಿಸಬಹುದು ಮತ್ತು ಇದು ನಿಮ್ಮ ಭಂಗಿಯ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಸ್ತನ ಸ್ನಾಯುಗಳಲ್ಲಿ ಸಮಸ್ಯೆ ಉಂಟಾಗುತ್ತೆ.
ಭುಜದಲ್ಲಿ ಗಾಯದ ಕಲೆಗಳು
ಸ್ತನದ ಗಾತ್ರವು ಹೆಚ್ಚಿದ್ದರೆ, ಆಗ ಸ್ತನದ ತೂಕವು ನಿಮ್ಮ ಭುಜಗಳ ಮೇಲೆ ಬ್ರಾ ಪಟ್ಟಿಗಳ (bra strap) ಗುರುತುಗಳನ್ನು ಸೃಷ್ಟಿಸಬಹುದು. ಈ ಗುರುತುಗಳಿಂದಾಗಿ, ನೀವು ಭುಜದ ನೋವನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಬ್ರಾವನ್ನು ಸ್ವಲ್ಪ ಸಮಯದವರೆಗೆ ತೆಗೆದುಹಾಕುವುದರಿಂದ ಬೆನ್ನು ಮತ್ತು ಸ್ತನದಲ್ಲಿ ಸರಿಯಾಗಿ ರಕ್ತ ಪರಿಚಲನೆಗೆ ಅನುವು ಮಾಡಿಕೊಡುತ್ತದೆ, ಇದು ನಿಮ್ಮ ಚರ್ಮದಲ್ಲಿನ ಕಿರಿಕಿರಿಯನ್ನು ಸಹ ಕಡಿಮೆ ಮಾಡುತ್ತದೆ.
innerwear using tips for women
ಸ್ತನಗಳು ಬಾಗುವ ಸಾಧ್ಯತೆ ಹೆಚ್ಚು
ಬ್ರಾ ಧರಿಸುವುದು ಸ್ತನಗಳಿಗೆ ಸಪೋರ್ಟ್ ಮಾಡುತ್ತದೆ. ಉತ್ತಮ ಬ್ರಾ ನಿಮ್ಮ ಸ್ತನಗಳನ್ನು ಬೆಂಬಲಿಸುತ್ತದೆ ಮತ್ತು ಅವುಗಳನ್ನು ಬಾಗದಂತೆ ಅಥವಾ ನೇಲುವುದನ್ನು ತಡೆಯುತ್ತದೆ. ಅನ್ನಲ್ಸ್ ಆಫ್ ಪ್ಲಾಸ್ಟಿಕ್ ಸರ್ಜರಿಯಲ್ಲಿ (plastic surgery) ನಡೆಸಲಾದ ಒಂದು ಅಧ್ಯಯನವು ವಯಸ್ಸು, ಹೆಚ್ಚಿನ ಬಿಎಂಐ, ಗರ್ಭಧಾರಣೆ ಮತ್ತು ಧೂಮಪಾನವು ಸ್ತನಗಳು ಬಾಗಲು ಕಾರಣವಾಗುತ್ತದೆ ಎಂದು ಸೂಚಿಸಿದೆ.
ಸ್ತನ ಕ್ಯಾನ್ಸರ್
ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಇಂಟರ್ನೆಟ್ ನಲ್ಲಿ ಅನೇಕ ವದಂತಿಗಳಿಂದಾಗಿ, ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ (breast cancer) ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಏಕೆಂದರೆ ಇದು ದುಗ್ಧರಸ ಹರಿವಿಗೆ ಅಡ್ಡಿಪಡಿಸುತ್ತದೆ. ಆದರೆ ಇದು ಸುಳ್ಳು. 2015 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚುವುದಿಲ್ಲ ಎಂದು ತಿಳಿಸಿದೆ.
ವ್ಯಾಯಾಮದ ಸಮಯದಲ್ಲಿ ಬ್ರಾ
ನೀವು ವ್ಯಾಯಾಮ ಮಾಡಿದರೆ ಅಥವಾ ರನ್ನಿಂಗ್ (running) ಮಾಡೋದಾದರೆ ಬ್ರಾ ಧರಿಸುವುದು ಮುಖ್ಯ. ವ್ಯಾಯಾಮ ಮಾಡುವಾಗ ಮತ್ತು ಓಡುವಾಗ ಬ್ರಾ ನಿಮ್ಮ ಸ್ತನವನ್ನು ರಕ್ಷಿಸುತ್ತದೆ. ವ್ಯಾಯಾಮ ಮಾಡುವಾಗ, ಬ್ರೆಸ್ಟ್ ಲಿಗಾಮೆಂಟ್ಸ್ ಹಿಗ್ಗಿಸಲಾಗುತ್ತದೆ ಮತ್ತು ದೀರ್ಘಕಾಲದವರೆಗೆ ಬ್ರಾ ಇಲ್ಲದೆ ವ್ಯಾಯಾಮ ಮಾಡುವುದರಿಂದ ಸ್ತನದ ಆಕಾರವನ್ನು ಸಹ ಹಾಳುಮಾಡುತ್ತದೆ.