ಹಿಂಗಾದ್ರೆ ಬ್ರಾ ಬದಲಾಯಿಸಬೇಕೆಂದರ್ಥ, ಇಲ್ಲವಾದರೆ ಆಪತ್ತು ಖಂಡಿತಾ!

First Published Jan 10, 2021, 1:54 PM IST

ಮಹಿಳೆಯರಿಗೆ ಅಂದ ಚಂದವಾಗಿ ಕಾಣಿಸಲು ಬ್ರಾ ಧರಿಸುವುದು ಮುಖ್ಯ. ಆದರೆ ಅದು ಸರಿಯಾದ ಫಿಟ್ಟಿಂಗ್‌ ಇರದೆ ಇದ್ದರೆ, ಸಮಸ್ಯೆ ಉಂಟಾಗುತ್ತದೆ. ಯಾಕೆಂದರೆ ಬ್ರಾ ಸೈಜ್‌ ಅಥವಾ ಬಟ್ಟೆ ಸರಿಯಾಗಿ ಇರದೇ ಇದ್ದರೆ, ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದು ಖಂಡಿತಾ. ಹೌದು ಇದು ಅಂದವನ್ನು ಹೆಚ್ಚಿಸುವುದೇನೋ ನಿಜ. ಆದರೆ ಸರಿಯಾಗಿರುವ ಬ್ರಾ ಧರಿಸದೇ ಇದ್ದರೆ ತೊಂದರೆ ಹಲವು... 

ಏನಾಗುತ್ತದೆ?ಸಂಶೋಧನೆಯ ಅನುಸಾರ 70 ತಿಂದ 80 ಶೇಕಡಾ ಮಹಿಳೆಯರು ತಪ್ಪಾದ ಸೈಜ್‌ನ ಬ್ರಾ ಧರಿಸುತ್ತಾರೆ. ಅಲ್ಲದೆ ಅವರು ಎಕ್ಸರ್‌ಸೈಜ್‌ ಮಾಡುವಾಗ ಸ್ಪೋರ್ಟ್ಸ್‌ ಬ್ರಾ ಧರಿಸೋದಿಲ್ಲ. ಇದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಕಾಡುತ್ತವೆ.
undefined
ಈ ಅಧ್ಯಯನದಲ್ಲಿ ತಿಳಿದುಬಂದ ಅಂಶ ಏನೆಂದರೆ ತಪ್ಪಾದ ಸೈಜ್‌ನ ಬ್ರಾ ಧರಿಸುವ ಮಹಿಳೆಯರಲ್ಲಿ ಸೊಂಟ ಮತ್ತು ಎದೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸುತ್ತವೆ. ಅಲ್ಲದೆ ಇದರಿಂದ ಬ್ರೆಸ್ಟ್‌ ಕ್ಯಾನ್ಸರ್‌, ಹಾರ್ಟ್‌ಬರ್ನ್‌, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
undefined
ಬ್ರಾ ಧರಿಸಿದಾಗ ಈ ರೀತಿಯ ಸಮಸ್ಯೆಗಳು ಕಾಣಿಸತೊಡಗಿದರೆ, ಅದನ್ನು ಬದಲಾಯಿಸಲು ಸೂಕ್ತ ಸಮಯ ಎಂಬುದನ್ನು ತಿಳಿಯಲೇಬೇಕು.
undefined
ಬ್ರಾ ಧರಿಸಿದ ನಂತರ ಅದರ ಸ್ಟ್ರಾಪ್‌ನಿಂದಾಗಿ ಭುಜಗಳಲ್ಲಿ ಆಗಾಗ ತುರಿಕೆ ಅಥವಾ ನವೆ ಕಾಣಿಸಿಕೊಂಡರೆ, ಅದು ತುಂಬಾ ಟೈಟ್‌ ಇದೆ ಎಂದು ಅರ್ಥ. ಇಲ್ಲವಾದರೆ ಅಲರ್ಜಿಯಿಂದಾಗಿ ತುರಿಕೆ ಉಂಟಾಗಿದೆ. ಆಗಬ್ರಾ ಬದಲಾಯಿಸಬೇಕು.
undefined
ದೇಹದ ಆಕಾರಕ್ಕೆ ಸರಿಯಾದ ಸೈಜ್‌ನ ಬ್ರಾ ಧರಿಸಬೇಕು. ಇಲ್ಲವಾದರೆ ಅದು ಸ್ತನಗಳಿಗೆ ಹೆಚ್ಚು ಒತ್ತಡವನ್ನು ನೀಡುತ್ತದೆ. ಇದರಿಂದ ತಲೆಯ ಭಾಗಕ್ಕೆ ರಕ್ತ ಸಂಚಲನದಲ್ಲಿ ಕೊರತೆಯುಂಟಾಗಿ ಮುಂದೆ ಕುತ್ತಿಗೆ ನೋವು, ತಲೆನೋವು ಉಂಟಾಗಬಹುದು.
undefined
ತುಂಬಾ ಟೈಟ್‌ ಬ್ರಾ ಧರಿಸುವುದರಿಂದ ಉಸಿರಾಟದ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆದುದರಿಂದಸೈಜ್‌ಗೆ ಸರಿಯಾದ ಬ್ರಾ ಆಯ್ಕೆ ಮಾಡುವುದು ಉತ್ತಮ.
undefined
ಅದೇ ರೀತಿ ಹೆಚ್ಚು ಲೂಸ್‌ ಆಗಿರುವ ಬ್ರಾ ಧರಿಸುವುದು ಸರಿಯಲ್ಲ. ಯಾಕೆಂದರೆ ಇದರಿಂದ ಸ್ತನಗಳು ಜೋತು ಬೀಳುವುದು ಮಾತ್ರವಲ್ಲದೇ, ಸೌಂದರ್ಯಕ್ಕೂ ಕುಂದು ತರುತ್ತದೆ.
undefined
click me!