4 ದಿಕ್ಕಿನ ಯುದ್ಧ..ಸಿದ್ದು ಟಾರ್ಗೆಟ್‌ಗೆ ಬೀಳುತ್ತಾ ಬೇಟೆ..? ಉತ್ತರದ 4 ರಣಭೂಮಿಗಳ ಮೇಲೆ ದಕ್ಷಿಣಾಪಥೇಶ್ವರನ ಕಣ್ಣು.!

May 2, 2024, 6:09 PM IST

ಉತ್ತರದಲ್ಲಿ ದಕ್ಷಿಣಾ ಪಥೇಶ್ವರನ ಸಿದ್ದಾಶ್ವಮೇಧ. ಇದು ಲೋಕಸಭಾ ಅಖಾಡದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ(Siddaramaiah) ಅಶ್ವಮೇಧ. ಬಾದಾಮಿಯ ವೈರಿಯನ್ನು ಬಳ್ಳಾರಿಯಲ್ಲಿ(Ballari) ಸೋಲಿಸಲು ಸಿದ್ಧವಾಗಿದೆ ಸಿದ್ದತಂತ್ರ. 14ರಲ್ಲಿ 4 ರಣಭೂಮಿಗಳೇ ಸಿದ್ದರಾಮಯ್ಯನವರ ಟಾರ್ಗೆಟ್. 14 ವರ್ಷಗಳ ಹಿಂದೆ. ಆ ದಿನ ವಿಧಾನಸಭೆ ನಡುಗಿ ಹೋಗಿತ್ತು. ತಾಕತ್ತಿದ್ರೆ ಬಳ್ಳಾರಿ ಬಾ, ನೋಡ್ಕೋತೀವಿ ಅಂತ ವಿಧಾನಸಭೆಯಲ್ಲೇ ಸವಾಲ್ ಹಾಕಿದ್ರು ಗಣಿಧಣಿ ಜನಾರ್ಧನ ರೆಡ್ಡಿ. ತೋಳು ತಟ್ಟಿ ಸವಾಲು ಸ್ವೀಕರಿಸಿದ್ದ ಸಿದ್ದರಾಮಯ್ಯ, ಬೆಂಗಳೂರಿಂದ ಬಳ್ಳಾರಿಗೆ ಪಾದಯಾತ್ರೆ ಹೊರಟೇ ಬಿಟ್ಟಿದ್ರು. ಅವತ್ತು ರೆಡ್ಡಿಗಳು ಕಟ್ಟಿದ್ದ ರಿಪಬ್ಲಿಕ್ ಆಫ್ ಬಳ್ಳಾರಿ ಕೋಟೆಯನ್ನು ಕುಟ್ಟಿ ಕೆಡವಿದ್ದು ಸಿದ್ದರಾಮಯ್ಯನವರ ಇದೇ ಪಾದಯಾತ್ರೆ. ಅಲ್ಲಿಂದ ಬಳ್ಳಾರಿ ರಾಜಕಾರಣದ ದಿಕ್ಕೇ ಬದಲಾಗಿ ಹೋಯ್ತು. ಬಿಜೆಪಿ ಭದ್ರಕೋಟೆಯಾಗಿದ್ದ ಬಳ್ಳಾರಿಯಲ್ಲೀಗ ಕಾಂಗ್ರೆಸ್(Congress) ಬಾವುಟ ಹಾರಾಡ್ತಾ ಇದೆ. ಆ ಐತಿಹಾಸಿಕ ಬಳ್ಳಾರಿ ಪಾದಯಾತ್ರೆಯನ್ನು ಲೋಕಸಭಾ ರಣರಂಗದಲ್ಲಿ(Lok Sabha elections 2024) ಸಿದ್ದರಾಮಯ್ಯನವರು ಮತ್ತೆ ನೆನಪು ಮಾಡಿಕೊಂಡಿದ್ದಾರೆ. ಇದು ದಕ್ಷಿಣಾಪಥೇಶ್ವರ ಸಿದ್ದರಾಮಯ್ಯನವರ ಉತ್ತರ ದಂಡಯಾತ್ರೆಯ ಇಂಟ್ರೆಸ್ಟಿಂಗ್ ಸ್ಟೋರಿ. ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕರ್ನಾಟಕದ 14 ಅಖಾಡಗಳಲ್ಲಿ ಯುದ್ಧ ಮುಗಿದ್ದದ್ದಾಯ್ತು. ಈಗ ಉತ್ತರ ಕರ್ನಾಟಕದ 14 ಕ್ಷೇತ್ರಗಳ ಸರದಿ. ಈ 14 ಲೋಕಸಭಾ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯನವರು ಆ ನಾಲ್ಕು ರಣಭೂಮಿಗಳ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲಿ ಸಿದ್ದಾಶ್ವಮೇಧದ ಕುದುರೆ ಆಗ್ಲೇ ರಣಘೋಷವನ್ನೂ ಮೊಳಗಿಸಿ ಬಿಟ್ಟಿದೆ. ಯಾವ ಕಾರಣಕ್ಕೂ ಆ ನಾಲ್ಕು ಕ್ಷೇತ್ರಗಳಲ್ಲಿ ಸೋಲಲೇಬಾರದು ಅಂತ ಪಣ ತೊಟ್ಟು ನಿಂತಿರೋ ಸಿದ್ದರಾಮಯ್ಯ, ತಮ್ಮ ಆಟವನ್ನು ಶುರು ಮಾಡಿಬಿಟ್ಟಿದ್ದಾರೆ. 

ಇದನ್ನೂ ವೀಕ್ಷಿಸಿ:  ಗಡಿನಾಡು ಬೆಳಗಾವಿಯಲ್ಲಿ ಲೋಕ ಕದನ ಗೆಲ್ಲೋರ್ಯಾರು? ಯುವ ನಾಯಕ v/s ಮಾಜಿ ಸಿಎಂ ನಡುವೆ ಬಿಗ್ ಫೈಟ್ !