ಪೆನ್ಷನ್ ಬರೋ ಏಜಲ್ಲಿ ಯಾಕೆ ಟೆನ್ಷನ್? ಬಾಲ್ಯ ವಿವಾಹದಂತೆ ವೃದ್ಧರ ಮದ್ವೆ ಬ್ಯಾನ್ ಮಾಡಿ ಎಂದ ಯುವಕರು!

By Suvarna News  |  First Published May 1, 2024, 3:28 PM IST

ಈಗಿನ ಜನರೇಷನ್ ಬದಲಾಗಿದೆ. ಮದುವೆ ಬೇಡ ಎನ್ನುವವರು ಒಂದಿಷ್ಟು ಮಂದಿಯಾದ್ರೆ ಯುವಕರನ್ನು ಬಿಟ್ಟು ವೃದ್ಧರನ್ನು ಮದುವೆ ಆಗ್ತಿರೋದು ಇನ್ನೊಂದಿಷ್ಟು ಮಂದಿ. ಇನ್ಸ್ಟಾಗ್ರಾಮ್ ನಲ್ಲಿ ಈಗ ಅಂತಹದ್ದೇ ಇನ್ನೊಂದು ಮದುವೆ ಸದ್ದು ಮಾಡಿದೆ.
 


ಮದುವೆಯೊಂದು ಪವಿತ್ರ ಬಂಧನ. ಹುಡುಗ – ಹುಡುಗಿ ಮಾತ್ರವಲ್ಲ ಎರಡು ಕುಟುಂಬಗಳು ಒಂದಾಗುವ ಸಂಬಂಧವಿದು. ಈಗಿನ ದಿನಗಳಲ್ಲಿ ಮದುವೆ ಅನ್ನೋದು ಸವಾಲು. ಇಂಜಿನಿಯರಿಂಗ್, ಡಾಕ್ಟರ್ ಸೇರಿ ದೊಡ್ಡ ಹುದ್ದೆಯಲ್ಲಿರುವ ಹುಡುಗರಿಗೂ ವಧು ಸಿಗ್ತಿಲ್ಲ. ಹಾಗಂತ ಮದುವೆ ಆಗುವ ಹುಡುಗಿಯರಿಲ್ಲ ಎಂದೇನಲ್ಲ. ಆದ್ರೆ ಯುವಕರನ್ನು ಹುಡುಗಿಯರು ಮದುವೆ ಆಗಲು ಮನಸ್ಸು ಮಾಡ್ತಿಲ್ಲ ಅಂದ್ರೆ ನಿಮಗೆ ಅತಿಶಯೋಕ್ತಿ ಅನ್ನಿಸಬಹುದು. ವಾಸ್ತವದಲ್ಲಿ ಇದು ಸತ್ಯ. ಈಗೀಗ ಯುವಕರ ಮದುವೆಗಿಂತ ವೃದ್ಧರ ಮದುವೆ ನೋಡಲು ಹೆಚ್ಚು ಸಿಗ್ತಿದೆ. ಮದುವೆಗೆ ವಯಸ್ಸಿಲ್ಲ. ಸಂಗಾತಿ ಬಯಸುವ ಯಾರು ಬೇಕಾದ್ರೂ ಮದುವೆ ಆಗ್ಬಹುದು ಅಂತ ನೀವು ಹೇಳ್ಬಹುದು. ಇದ್ರಲ್ಲಿ ತಪ್ಪೇನಿಲ್ಲ. ಆದ್ರೆ ಮದುವೆಗೆ ಒಂದು ವಯಸ್ಸಿನ ಮಿತಿ ಇದ್ರೆ ಚೆಂದ ಅಂತ ನೆಟ್ಟಿಗರು ಹೇಳ್ತಿದ್ದಾರೆ. ತಂದೆಗಿಂತ ಒಂದು ಪಟ್ಟು ಹೆಚ್ಚು ವಯಸ್ಸಾಗಿರುವ, ಈಗ್ಲೋ ಆಗ್ಲೋ ಎನ್ನುವ ವೃದ್ಧರನ್ನು ಯಂಗ್ ಹುಡುಗಿಯರು ಮದುವೆ ಆಗ್ತಿದ್ದಾರೆ. ಇದ್ರ ಹಿಂದೆ ಪ್ರೀತಿ ಇದ್ಯಾ ಇಲ್ಲ ಆಸ್ತಿ ಇದ್ಯಾ ಎಂಬ ಪ್ರಶ್ನೆಯನ್ನೂ ನೆಟ್ಟಿಗರು ಕೇಳ್ತಿದ್ದಾರೆ.

ಸಾಮಾಜಿಕ ಜಾಲತಾಣ (Social Network) ದಲ್ಲಿ ಆಗಾಗ ಒಂದಿಷ್ಟು ಆಸಕ್ತಿಕರ ವಿಡಿಯೋ (Video), ಫೋಟೋಗಳು ವೈರಲ್ ಆಗ್ತಿರುತ್ತವೆ. ಈಗ ಅಂತಹದ್ದೇ ಒಂದು ವಿಡಿಯೋ ಸುದ್ದಿ ಮಾಡಿದೆ. ಆ ವಿಡಿಯೋದಲ್ಲಿ ಯುವತಿಯೊಬ್ಬಳು, ಹಿರಿ ಜೀವದ ಕೈ ಹಿಡಿದಿರೋದನ್ನು ನೀವು ನೋಡ್ಬಹುದು. ಇದು ಎಲ್ಲಿ ನಡೆದ ಮದುವೆ, ಮದುವೆ ಆದವರು ಯಾರು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಇನ್ಸ್ಟಾಗ್ರಾಮ್ (Instagram) ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. 

Tap to resize

Latest Videos

ಅಮೃತಧಾರೆ: ಮೌಲ್ಯಗಳೇ ಉಸಿರಾದ ಮಿಡಲ್ ಕ್ಲಾಸ್ ಅಪೇಕ್ಷಾ ದಾರಿ ತಪ್ತಿದ್ದಾಳಾ?

Traumatizedthoughtss ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇವರ ಫೋಟೋ ಇರುವ ವಿಡಿಯೋ ಹಂಚಿಕೊಳ್ಳಲಾಗಿದೆ. ಇದಕ್ಕೆ ಗ್ರ್ಯಾಂಡ್ ಮಾಸ್ಟರ್ ಎಂದು ಶೀರ್ಷಿಕೆ ಹಾಕಲಾಗಿದೆ. ಮದುವೆಯ ಕೆಲ ಫೋಟೋಗಳು ಇದ್ರಲ್ಲಿವೆ. ಒಂದೆರಡು ಫೋಟೋದಲ್ಲಿ ಹುಡುಗಿ ನಗ್ತಿದ್ದಾಳೆ. ಆದ್ರೆ ವರನ ಮುಖದಲ್ಲಿ ನಗು ಕಾಣ್ತಿಲ್ಲ. ಇದಕ್ಕೆ ಮೊದಲು ಈ ವಿಡಿಯೋವನ್ನು PADHAN_GUJJAR_7300 ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಪವಿತ್ರ ಪಾಪಿ ಎಂಬ ಟ್ಯಾಗ್ ಲೈನ್ ಜೊತೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು.

ಇನ್ಸ್ಟಾದ ಈ ಅಪರೂಪದ ಮದುವೆ ಈಗ ವೈರಲ್ ಆಗಿದೆ. ನಲವತ್ತಾರು ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ಲೈಕ್ ಮಾಡಿದ್ದಾರೆ. ಲಕ್ಷಾಂತರ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದು, ನೂರಾರು ಮಂದಿ ಕಮೆಂಟ್ ಮಾಡಿದ್ದಾರೆ.

ವೃದ್ಧನ ಮದುವೆ ನೋಡಿದ ಜನರ ಕಣ್ಣು ಕೆಂಪಾಗಿದೆ. ಬಾಲ್ಯ ವಿವಾಹವನ್ನು ನಿಷೇಧಿಸಿದಂತೆ ವೃದ್ಧರ ಮದುವೆಯನ್ನು ನಿಷೇಧಿಸಬೇಕು ಎಂದು ಅನೇಕರು ಬೇಡಿಕೆ ಮುಂದಿಟ್ಟಿದ್ದಾರೆ. ಇನ್ನೊಬ್ಬರು ಈ ವರನನ್ನು ಶುಗರ್ ಪತಿ ಎಂದು ಕಮೆಂಟ್ ಮಾಡಿದ್ದಾರೆ. ವರ ಸರ್ಕಾರಿ ಕೆಲಸದಲ್ಲಿರಬೇಕು ಇಲ್ಲ ಡಾಕ್ಟರ್ ಆಗಿರಬೇಕು. ಆಸ್ತಿ ಹೆಚ್ಚಿರುವ ಕಾರಣ ಆಕೆ ಮದುವೆ ಆಗಿದ್ದಾಳೆ ಎನ್ನುವ ಕಮೆಂಟನ್ನು ಅನೇಕರು ಮಾಡಿದ್ದಾರೆ. ಈಗ ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ತಮಗಿಂದ ಒಂದು, ಎರಡು ಪಟ್ಟು ವಯಸ್ಸು ಹೆಚ್ಚಿರುವ ಉರುಷರನ್ನು ಮದುವೆ ಆಗುವ ಪ್ರವೃತ್ತಿ ಹೆಚ್ಚಾಗಿದೆ. 

ಸೀತಾಳ ವಿರುದ್ಧವೇ ರೊಚ್ಚಿಗೆದ್ದ ಅಭಿಮಾನಿಗಳು: ರಾಮ್​ ಇವಳನ್ನು ಬಿಟ್ಟುಬಿಡು ಪ್ಲೀಸ್​ ಅಂತಿರೋದ್ಯಾಕೆ?

ಕೆಲ ದಿನಗಳ ಹಿಂದೆ ಎಪ್ಪತ್ತು ವರ್ಷದ ವ್ಯಕ್ತಿಯೊಬ್ಬ ಇಪ್ಪತ್ತು ವರ್ಷದ ಹುಡುಗಿ ಜೊತೆ ಮದುವೆ ಆದ ವಿಡಿಯೋ ವೈರಲ್ ಆಗಿತ್ತು. ಮದುವೆ ಮಂಟಪದಲ್ಲಿ ವಧು – ವರರು ಮಾಲೆ ಬದಲಿಸಿಕೊಳ್ತಿದ್ದ ವಿಡಿಯೋ ಹಾಕಿದ್ದ ಬಳಕೆದಾರು, ಇದು ಯಾವಾಗ ಮುಗಿಯುತ್ತೆ ಎಂದು ಶೀರ್ಷಿಕೆ ಹಾಕಿದ್ದರು. ಸಾಮಾಜಿಕ ಜಾಲತಾಣದಲ್ಲಿ ವೃದ್ಧ ಟ್ರೋಲ್ ಆಗಿದ್ದರು. ಪೆನ್ಷನ್  ಬರೋ ಸಮಯದಲ್ಲಿ ಟೆನ್ಷನ್ ಏಕೆ ತೆಗೆದುಕೊಳ್ತೀರಿ ಎಂದು ನೆಟ್ಟಿಗರು ಅಜ್ಜನಿಗೆ ಕೇಳಿದ್ದರು. 

click me!