ಶ್ರೀಮಂತ ಹುಡುಗನ ಹಂಬಲಿಸೋ ಈ ದಿನಗಳಲ್ಲಿ ನಿಜಕ್ಕೂ ಇಂಥ ಸ್ವಾಭಿಮಾನಿಗಳು ಕಾಣಸಿಗ್ತಾರಾ?

Published : May 01, 2024, 05:48 PM IST
ಶ್ರೀಮಂತ ಹುಡುಗನ ಹಂಬಲಿಸೋ ಈ ದಿನಗಳಲ್ಲಿ  ನಿಜಕ್ಕೂ ಇಂಥ ಸ್ವಾಭಿಮಾನಿಗಳು ಕಾಣಸಿಗ್ತಾರಾ?

ಸಾರಾಂಶ

ತವರು ಮನೆಗೆ ನೆರವಾಗಲು ಗಂಡನ ಹಣ ಬೇಡದ ಭೂಮಿಕಾ, ಕೆಲಸಕ್ಕೆ ಹೋಗುವ ಆಸೆ ವ್ಯಕ್ತಪಡಿಸಿದ್ದಾರೆ. ಇದನ್ನು ನೋಡಿದ ವೀಕ್ಷಕರು ಏನನ್ನುತ್ತಿದ್ದಾರೆ?   

ಅಣ್ಣ ಜೀವ ಕೆಲಸ ಕಳೆದುಕೊಂಡಿದ್ದನ್ನು ತಿಳಿದ ಭೂಮಿಕಾ, ಆತನಿಗಾಗಿ ತನ್ನೆಲ್ಲಾ ಒಡವೆಗಳನ್ನು ಒತ್ತೆಯಿಟ್ಟು ಐದು ಲಕ್ಷ ರೂಪಾಯಿ ಕೊಟ್ಟು ನೆರವಾಗಿದ್ದಾಳೆ. ನೂರಾರು ಕೋಟಿ ರೂಪಾಯಿಗಳ ಒಡೆಯನಾಗಿರುವ ಗಂಡನಿಗೆ ಐದು ಲಕ್ಷ ಎಂದರೆ ಹತ್ತಾರು ರೂಪಾಯಿಗಳ ಸಮಾನ. ಆದರೆ ಈ ಸ್ವಾಭಿಮಾನಿ ಪತ್ನಿ ತನ್ನ ಒಡವೆಯನ್ನೇ ಅಡುವು ಇಟ್ಟಿದ್ದಾಳೆ. ಅದನ್ನು ಬಿಡಿಸಿಕೊಂಡು ಬರಲು ಈಗ ಕೆಲಸಕ್ಕೆ ಹೋಗಲು ತಯಾರಾಗಿದ್ದಾಳೆ. ತವರು ಮನೆಗೆ ನೆರವಾಗುವ ಉದ್ದೇಶದಿಂದ ಆಕೆ ಹೀಗೆ ಮಾಡುತ್ತಿದ್ದಾಳೆ. ಏಕೆಂದರೆ ದುಡಿಯುವ ಮಗ ಕೆಲಸ ಕಳೆದುಕೊಂಡಿರುವ ವಿಷಯ ಯಾರಿಗೂ ತಿಳಿದಿಲ್ಲ. ಅಚಾನಕ್​ ಆಗಿ ಈ ವಿಷಯ ಭೂಮಿಕಾಗೆ ಗೊತ್ತಾಗಿ ದುಡ್ಡನ್ನು ಹೊಂದಿಸಿ ಕೊಟ್ಟಿದ್ದಾಳೆ. ಇದೀಗ ಒಂದೆಡೆ ಅಡವಿಟ್ಟ ಬಂಗಾರವನ್ನು ಬಿಡಿಸಿಕೊಂಡು ಬರುವುದು ಒಂದೆಡೆಯಾದರೆ, ತವರಿಗೆ ಹಣದ ನೆರವು ನೀಡುವುದು ಇನ್ನೊಂದೆಡೆ. ಪತಿಯಿಂದ ಹಣದ ನೆರವು ಕೇಳಲು ಆಕೆಗೆ ಸ್ವಾಭಿಮಾನ ಅಡ್ಡಿ ಬರುತ್ತದೆ.

ನಿಜಕ್ಕೂ ಇಂಥ ಸ್ವಾಭಿಮಾನಿ ಹೆಣ್ಣುಗಳು ಕಾಣಸಿಗುತ್ತಾರೆಯೆ ಎನ್ನುವುದು ಬಹುತೇಕ ಮಂದಿಯ ಪ್ರಶ್ನೆಯಾಗಿದೆ. ಇಂದಿನ ಯಾವುದೇ ಹೆಣ್ಣುಮಕ್ಕಳನ್ನು ಕೇಳಿದರೂ ತಾವು ಮದುವೆಯಾಗುವ ಗಂಡು ಆಗರ್ಭ ಶ್ರೀಮಂತನಾಗಿರಬೇಕು, ವೆಲ್​ ಸೆಟ್ಲ್ಡ್ ಆಗಿರಬೇಕು. ಹಾಗಿರಬೇಕು, ಹೀಗಿರಬೇಕು ಎಂದು ದುಡ್ಡಿನಲ್ಲಿಯೇ ಅಳೆಯುವುದು ಸರ್ವೇ ಸಾಮಾನ್ಯ. ಆತ ಗುಣವಂತನಾಗಿದ್ದರೆ ಸಾಕು, ನಮ್ಮ ಸಂಸಾರಕ್ಕೆ ಅಗತ್ಯವಾಗಿರುವ ಹಣವನ್ನು ನಾನಾದರೂ ದುಡಿಯಬಲ್ಲೆ ಎಂದು ಹೇಳುವ ಹೆಣ್ಣುಗಳು ಬೆರಳೆಣಿಕೆಯಷ್ಟೂ ಸಿಗುವುದು ದುರ್ಲಭವೇ ಸರಿ. ಇಂಥ ಹೊತ್ತಿನಲ್ಲಿ ನಿಜಕ್ಕೂ ಭೂಮಿಕಾಳಂಥ ಸ್ವಾಭಿಮಾನಿ ಹೆಣ್ಣುಗಳು ಕಾಣ ಸಿಗುತ್ತಾರೆಯೇ ಎನ್ನುವುದು ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ.

ಮುದ್ದೆ ತಿನ್ನೋದು ಅಂದ್ರೆ ಸುಮ್ನೇನಾ? ಎಲ್ಲರಿಗೂ ಬರಲ್ಲ ಬಿಡಿ! ಪುಟ್ಟಕ್ಕ ಹೇಳಿಕೊಡ್ತಾಳೆ ನೋಡಿ...

 ಹಿಂದೊಮ್ಮೆ ಪತ್ನಿಗೆ ಆರ್ಥಿಕ ಕಷ್ಟ ಬರಬಾರದು ಎನ್ನುವ ಉದ್ದೇಶದಿಂದ ಗೌತಮ್ ಹತ್ತುಕೋಟಿ ರೂಪಾಯಿ ಆಕೆಯ ಅಕೌಂಟ್​ಗೆ ಟ್ರಾನ್ಸ್​ಫರ್​ ಮಾಡಿದ್ದ. ಇದರಿಂದ ಎಷ್ಟೋ ರಾತ್ರಿ ಭಯದಿಂದಲೇ ಕಾಲ ಕಳೆದಿದ್ದಳು ಭೂಮಿಕಾ. ಕೊನೆಗೂ ಆ ಹಣವನ್ನು ಗಂಡನಿಗೇ ವಾಪಸ್​ ಕೊಟ್ಟಿದ್ದಳು. ಈಗಲೂ ಅಷ್ಟೇ. ಗಂಡ ಆಗರ್ಭ ಶ್ರೀಮಂತ ಎನ್ನುವ ಕಾರಣಕ್ಕೆ ಸಿರಿವಂತಿಕೆ ಮದ ಆಕೆಗೆ ಏರಲಿಲ್ಲ. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಕೊಡೆ ಹಿಡಿಸಿಕೊಂಡ ಎನ್ನುವ ಮಾತು ಕೇಳಿಬರುತ್ತದೆ. ಅಂಥ ಕೆಲವರನ್ನು ದಿನನಿತ್ಯದ ಜೀವನದಲ್ಲಿ ನೋಡುತ್ತಲೇ ಇರುತ್ತೇವೆ. ಸ್ವಲ್ಪ ಹಣ ಕೈ ಸೇರಿದರೂ ಅವರ ನಡವಳಿಕೆ ಬೇರೆಯದ್ದೇ ಆಗಿಹೋಗಿರುತ್ತದೆ. ಇನ್ನು ಕೆಲವರದ್ದು ಸಾಲ ಮಾಡಿಯಾದರೂ ತುಪ್ಪ ತಿನ್ನುವ ಜಾಯಮಾನ. ಒಟ್ಟಿನಲ್ಲಿ ಬೇರೆಯವರ ದೃಷ್ಟಿಯಲ್ಲಿ ದೊಡ್ಡಸ್ತಿಕೆ ಕಾಣಿಸಿಬೇಕು ಎನ್ನುವುದೊಂದೇ ಗುರಿ.

ಇಂಥ ಪರಿಸ್ಥಿತಿಯಲ್ಲಿ ಭೂಮಿಕಾ ಕೆಲವರಿಗೆ ಆದರ್ಶವಾಗಿ ಕಂಡರೆ, ಇನ್ನು ಕೆಲವರು ಇವಳದ್ದು ಅತಿಯಾಯಿತು ಎನ್ನುತ್ತಾರೆ. ಇದೀಗ ತಾನು ಕೆಲಸಕ್ಕೆ ಹೋಗಲಾ ಎಂದು ಪತಿಗೆ ಭೂಮಿಕಾ ಕೇಳಿದ್ದಾಳೆ. ಹಿಂದೆ ಮಾಡುತ್ತಿದ್ದ ಕೆಲಸಕ್ಕೆ ಜಾಯಿನ್​ ಆಗುತ್ತೇನೆ, ತನಗೆ ಮನೆಯಲ್ಲಿ ಬೇಸರ ಎಂಬ ಕಾರಣ ಕೊಟ್ಟಿದ್ದಾಳೆ. ಎಂದಿಗೂ ಪತಿ ಅವಳು ಹೇಳಿದ್ದಕ್ಕೆ ಇಲ್ಲ ಎನ್ನುವವನಲ್ಲ. ಇಷ್ಟ ಇದ್ದರೆ ಹೋಗಿ ಎಂದಿದ್ದಾನೆ. ಭೂಮಿ ಮತ್ತೆ ಕೆಲಸಕ್ಕೆ ಹೊರಟಿದ್ದಾಳೆ.  ಆದರೆ ಅತ್ತೆ ಶಕುಂತಲಾಗೆ ಡೌಟ್​ ಶುರುವಾಗಿದೆ. ಈಗ ಈಕೆ ಕೆಲಸಕ್ಕೆ ಹೋಗುವ ತುರ್ತು ಏನಿತ್ತು ಎನ್ನುವುದು ಅವಳ ಪ್ರಶ್ನೆ. ಅವಳಿಗೂ ಗೊತ್ತು, ಭೂಮಿಕಾ ಸ್ವಾಭಿಮಾನಿ ಎನ್ನುವುದು. ಸೀರಿಯಲ್​ನಲ್ಲಿ ಮುಂದೇನಾಗುತ್ತೋ ಗೊತ್ತಿಲ್ಲ, ಒಟ್ಟಿನಲ್ಲಿ ಭೂಮಿಕಾಳಂಥ ಹೆಣ್ಣು ನಿಜ ಜೀವನದಲ್ಲಿ ಎಷ್ಟು ಜನ ಇದ್ದಾರೆ ಎನ್ನುವ ಚರ್ಚೆ ಸೋಷಿಯಲ್​ ಮೀಡಿಯಾದಲ್ಲಿ ಶುರುವಾಗಿದೆ. 
 

ಮನೆ ಕೆಲಸದವಳಾದ ಶಾರ್ವರಿ: ಮಹೇಶಾ... ಮತ್ತೊಮ್ಮೆ ಹಾಸಿಗೆ ಹಿಡಿಯಲು ರೆಡಿಯಾಗು ಎಂದ ನೆಟ್ಟಿಗರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!