Chikkamagalur Murder News: ಮಿಸ್ಸಿಂಗ್ ಆದವಳು ಹೆಣವಾಗಿ ಸಿಕ್ಕಿದ್ಲು..! ಕೊಟ್ಟ ದುಡ್ಡು ವಾಪಸ್ ಕೇಳಿದ್ದೇ ತಪ್ಪಾಗಿಹೊಯ್ತಾ ?

Chikkamagalur Murder News: ಮಿಸ್ಸಿಂಗ್ ಆದವಳು ಹೆಣವಾಗಿ ಸಿಕ್ಕಿದ್ಲು..! ಕೊಟ್ಟ ದುಡ್ಡು ವಾಪಸ್ ಕೇಳಿದ್ದೇ ತಪ್ಪಾಗಿಹೊಯ್ತಾ ?

Published : May 02, 2024, 04:32 PM IST

ಅವಳನ್ನ ಕೊಂದವನು ತೀರ್ಥಯಾತ್ರೆಗೆ ಹೋಗಿದ್ದ..!
ದುಡ್ಡು ಕೊಡ್ತೀನಿ ಅಂದವನನ್ನ ನಂಬಿ ಹೋಗಿದ್ಲು..!
ಅವಳ ಹೆಣ ಹಾಕಿ ಸೀದಾ ನಂಜನಗೂಡಿಗೆ ಹೋಗಿದ್ದ..!


ಅವಳು 45 ವರ್ಷದ ಮಹಿಳೆ. ಗಂಡ ಮಕ್ಕಳೊಂದಿಗೆ ನೆಮ್ಮದಿಯಾಗಿ ಜೀವನ ಮಾಡ್ತಿದ್ಲು. ಗಂಡ ಹೆಂಡತಿ ಇಬ್ಬರೂ ದುಡಿಯುತ್ತಿದ್ರು. ಆದ್ರೆ ಆವತ್ತು ಕೆಲಸಕ್ಕೆ ಅಂತ ಹೋದ ಹೆಂಡತಿ(Wife) ಮಿಸ್ಸಿಂಗ್. ಎಲ್ಲಿ ಹುಡುಕಿದ್ರೂ ಸಿಗದಿದ್ದಾಗ ಗಂಡ ಪೊಲೀಸ್ ಕಂಪ್ಲೆಂಟ್ ಕೊಟ್ಟ. ಆದ್ರೆ ಕೆಲವೇ ಗಂಟೆಗಳಲ್ಲಿ ಅವಳ ಮೃತದೇಹ (Murder) ಸಿಕ್ಕಿತ್ತು. ಹಂತಕ ಅವಳನ್ನ ಕೊಂದು ಪೆಟ್ರೋಲ್ ಹಾಕಿ ಸುಟ್ಟುಬಿಟ್ಟಿದ್ದ. ಇನ್ನೂ ಇದೇ ಕೇಸ್‌ನ ತನಿಖೆ ನಡೆಸಿದ್ದ ಪೊಲೀಸರು ಹಂತಕನನ್ನ ಸೆರೆ ಹಿಡಿದಿದ್ದೇ ರೋಚಕ. ಪೊಲೀಸರು(Police) ಸಂಗೀತಾಳ ಸೀರೆ ತುಂಡು ಹಿಡಿದುಕೊಂಡೇ ಈ ಕೇಸ್‌ ತನಿಖೆ ಆರಂಭಿಸಿದ್ರು. ಅಷ್ಟೇ ಅಲ್ಲ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಭರತನೇ ಅವಳನ್ನ ಮುಗಿಸಿದ್ದಾನೆ ಅನ್ನೋದನ್ನ ಪತ್ತೆ ಹಚ್ಚಿದ್ರು. ಆದ್ರೆ ಆತನನ್ನ ಅರೆಸ್ಟ್ ಮಾಡೋದಕ್ಕೆ ಬರೊಬ್ಬರಿ 10 ದಿನಗಳೇ ಬೇಕಾಗಿತ್ತು. 5 ವರ್ಷಗಳ ಹಿಂದೆ ಸಂಗೀತಾ ಮತ್ತು ಭರತ್ ಪರಿಚಯವಾಗಿದ್ರು. ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ದೇಹ ಸಂಬಂಧ ಕೂಡ ಬೆಳೆದುಬಿಟ್ಟಿತ್ತು. ಇನ್ನೂ ಪ್ರೀಯಕರನ(Lover) ಕಷ್ಟಕ್ಕೆ ಅಂತ 2 ವರ್ಷದ ಹಿಂದೆ ಸಂಗೀತ ಭರತ್‌ಗೆ 2 ಲಕ್ಷ ಹಣ ಮತ್ತು ಒಂದಷ್ಟು ಒಡವೆ ಕೊಟ್ಟಿದ್ಲು. ಆದ್ರೆ ಇತ್ತಿಚೆಗೆ ಸಂಗೀತಾ ಅದನ್ನ ವಾಪಸ್ ಕೇಳಿದ್ಲು. ಆದ್ರೆ ಭರತ್ ಮಾತ್ರ ಅವಳ ಹಣ ವಾಪಸ್ ಕೊಡುವ ಮನಸ್ಸು ಮಾಡಲಿಲ್ಲ. ಅವಳ ಟಾರ್ಚರ್ ಜಾಸ್ತಿಯಾಯ್ತು. ಇನ್ನೂ ಸುಮ್ಮನಿದ್ರೆ ಆಗೋದಿಲ್ಲ ಅಂತ ಆವತ್ತು ಅವಳನ್ನೇ ಮುಗಿಸಲು ನಿರ್ಧರಿಸಿಬಿಟ್ಟ. ಕೆಲಸಕ್ಕೆ ಹೋಗ್ತಿದ್ದವಳನ್ನ ದುಡ್ಡು ಕೊಡ್ತೀನಿ ಅಂತ ಹೇಳಿ ಗುಡ್ಡಕ್ಕೆ ಕರೆತಂದು ಅವಳ ಕಥೆಯನ್ನ ಮುಗಿಸಿಬಿಟ್ಟ. ನಂತರ ತೀರ್ಥ ಕ್ಷೇತ್ರಗಳಿಗೆ ಹೋಗಿ ತಲೆ ಬೋಳಿಸಿಕೊಂಡ. ಆದ್ರೆ ಮಾಡಿದ ಪಾಪ ಅವನನ್ನ ಪೊಲೀಸರಿಗೆ ತಗ್ಲಾಕಿಕೊಳ್ಳುವಂತೆ ಮಾಡಿತ್ತು.

ಇದನ್ನೂ ವೀಕ್ಷಿಸಿ:  Prajwal Revanna: ಪ್ರಜ್ವಲ್‌ ಮೊಬೈಲ್‌ನಿಂದ ವಿಡಿಯೋ ಲೀಕ್ ಆಗಿದ್ದೇ ರೋಚಕ ! ಮಾಜಿ ಕಾರು ಚಾಲಕನಿಗೆ ಸಿಕ್ಕಿದ್ದು ಹೇಗೆ ?

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
Read more