
ಗದಗ(ಮೇ.02): ಮೋದಿ 10 ವರ್ಷದ ಅವಧಿಯಲ್ಲಿ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ. ಮೋದಿ ಅವರ ತಾಯಿ ತೀರಿಹೋದಾಗಲೂ ಅಂತ್ಯ ಸಂಸ್ಕಾರ ಮುಗಿಸಿ ಕಾಯಕ ಮಾಡಿದ್ರು. ಮೋದಿಯವರ ನೇತೃತ್ವದಲ್ಲಿ 400 ಸೀಟ್ ಗೆಲ್ಲುತ್ತೇವೆ. ರಾಜ್ಯದಲ್ಲಿ 28 ಸೀಟ್ ಗೆಲ್ಲುವ ಮೂಲಕ ಜಯ ಸಾಧಿಸುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು(ಗುರುವಾರ) ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮಾಜಿ ಸಿಎಂ ಯಡಿಯೂರಪ್ಪ ಪ್ರಚಾರ ಮಾಡಿದ್ದಾರೆ.
ಕಿಸಾನ್ ಸನ್ಮಾನ್ ಯೋಜನೆ ಯಾಕೆ ನಿಲ್ಲಿಸಿದ್ದೀರಿ. ಪಾಪರ್ ಆಗಿದ್ದೀರಿ ಹೀಗಾಗಿ ಯೋಜನೆ ನಿಲ್ಲಿಸಿದ್ದೀರಿ. 28 ಸೀಟ್ ಗೆಲ್ಲಿಸಿಕೊಡುತ್ತೇನೆ ಅಂತಾ ಕೇಂದ್ರ ನಾಯಕರಿಗೆ ಹೇಳಿದ್ದೇನೆ. ಭಾಗ್ಯ ಲಕ್ಷ್ಮೀ ಯೋಜನೆ, ಕಿಸಾನ್ ಸನ್ಮಾನ್, ನೀರಾವರಿ ಯೋಜನೆ ನಿಲ್ಲಿಸಿದ್ದೀರಿ. ಚುನಾವಣೆ ನಂತ್ರ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬರಗಾಲ ಬರಲಿದೆ. ಸಿದ್ದರಾಮಯ್ಯ ಸರ್ಕಾರ ಪರಿಹಾರ ಕೊಡುತ್ತಿಲ್ಲ. ರೈತರ ಸಾಲ ಸಂಪೂರ್ಣ ಮನ್ನಾ ಮಾಡಿ. ಸಾಲ ಮನ್ನಾ ಮಾಡಲಿದ್ರೆ ಸರ್ಕಾರ ವಿರುದ್ಧ ಹೋರಾಟ ಮಾಡ್ತೇನೆ. 82ರ ಹರೆಯದಲ್ಲೂ ಹೋರಾಟ ಮಾಡೋದಕ್ಕೆ ಗಟ್ಟಿಯಾಗಿದ್ದೇನೆ. ಅಭಿವೃದ್ಧಿ ಯೋಜನೆ ಯಾಕೆ ನಿಂತಿದೆ. ಸರ್ಕಾರದ ವೈಫಲ್ಯಗಳನ್ನ ಮನೆ ಮನೆಗೆ ಮುಟ್ಟಿಸಬೇಕಿದೆ ಎಂದು ಕಿಡಿ ಕಾರಿದ್ದಾರೆ.
ನರೇಂದ್ರ ಮೋದಿಯೇ ಪ್ರಧಾನಿಯಾಗ್ಬೇಕು ಅಂತಾ ಪಾಕಿಸ್ತಾನವೂ ಹೇಳ್ತಿದೆ. ಜೆಡಿಎಸ್ ಕಾರ್ಯಕರ್ತರ ಬೇದಭಾವ ಮರೆತು ಕೆಲಸ ಮಾಡ್ಬೇಕು. ಚುನಾವಣೆ ನಂತ್ರವೂ ಜೆಡಿಎಸ್ ಜೊತೆಗೆ ದೋಸ್ತಿ ಮುಂದುವರೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಬಲಿಸಬೇಕು. ಬೊಮ್ಮಾಯಿ ಅವರಿಗೆ ಎರಡು ಲಕ್ಷ ಲೀಡ್ ಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.