ಕರ್ನಾಟಕದ ಅತಿದೊಡ್ಡ ಲೈಂಗಿಕ ಹಗರಣಗಳು; ರೇಣುಕಾಚಾರ್ಯ, ಮೇಟಿ, ಜಾರಕಿಹೊಳಿ ಸಾಲಿಗೆ ಪ್ರಜ್ವಲ್ ರೇವಣ್ಣ ಸೇರ್ಪಡೆ?

First Published | May 2, 2024, 7:48 PM IST

ಬೆಂಗಳೂರು (ಮೇ 02): ಕರ್ನಾಟಕ ರಾಜ್ಯದಲ್ಲಿ 2000ನೇ ಇಸವಿಯಿಂದ ಈವರೆಗೆ ರಾಜಕೀಯ ನಾಯಕರ 7 ಅತಿದೊಡ್ಡ ಲೈಂಗಿಕ ಹಗರಣಗಳು ನಡೆದಿವೆ. ಅದರಲ್ಲಿ 2007ರಿಂದ ಶಾಸಕ ರೇಣುಕಾಚಾರ್ಯ ಅವರಿಂದ ಆರಂಭವಾದ ಲೈಂಗಿಕ ಹಗರಣದ ಪ್ರಕರಣಗಳ ಸಂಖ್ಯೆ ಬೆಳೆಯುತ್ತಲೇ ಹೋಗುತ್ತಿವೆ. ಅದರಲ್ಲಿಯೂ ಒಬ್ಬರಿಗಿಂತ ಮತ್ತೊಬ್ಬರದ್ದು ದೊಡ್ಡ ದೊಡ್ಡ ಹಗರಣಗಳೇ ಬಯಲಿಗೆ ಬರುತ್ತಿವೆ. ಈ ಲೈಂಗಿಕ ಹಗರಣಳು ನಡೆದಿದ್ದು ಹೇಗೆ, ಹಗರಣದ ತೀರ್ಪುಗಳು ಏನಾಗಿದೆ ಸಂಪೂರ್ಣ ವಿವರ ಇಲ್ಲಿದೆ ನೋಡಿ...

2007ರಲ್ಲಿ ಶಾಸಕ ರೇಣುಕಾಚಾರ್ಯ ಲೈಂಗಿಕ ಹಗರಣ:
ದಾವಣಗೆರೆ ಜಿಲ್ಲೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಅವರ ಲೈಂಗಿಕ ಹಗರಣವೊಂದು ಅಂದಿನ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೆಚ್ಚಿ ಬೀಳಿಸಿತ್ತು. ಆಸ್ಪತ್ರೆಯ ನರ್ಸ್ ಜಯಲಕ್ಷ್ಮಿ ಎನ್ನುವವರು ಸಚಿವರಾಗಿದ್ದ ರೇಣುಕಾಚಾರ್ಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಜೊತೆಗೆ, ಇದಕ್ಕೆ ಸಾಕ್ಷಿಯಾಗಿ ಚುಂಬಿಸುತ್ತಿರುವ ಫೋಟೋಗಳನ್ನು ಬಿಡುಗಡೆ ಮಾಡಿದ್ದರು. ಸಚಿವರು ತಮ್ಮನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಲೈಂಗಿಕ ಕಿರುಕುಳ ನೀಡಿದ್ದು, ಫೊಟೋ ವೈರಲ್ ಬಳಿಕೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಆದರೆ, 3 ವರ್ಷಗಳ ನಂತರ ಸ್ವತಃ ನರ್ಸ್ ಜಯಲಕ್ಷ್ಮಿ ಪ್ರಕರಣವನ್ನು ವಾಪಸ್ ಪಡೆದರು.

2009ರಲ್ಲಿ ಸಚಿವ ಹರತಾಳು ಹಾಲಪ್ಪ ಲೈಂಗಿಕ ಹಗರಣ:
ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ 2009ರ ಅವಧಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದ ಹರತಾಳು ಹಾಲಪ್ಪ ಅವರು ತಮ್ಮ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು. ಈ ಆರೋಪದಿಂದಾಗಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಆದರೆ, ನ್ಯಾಯಾಲಯದ ಪ್ರಕಾರ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಕಾರಣ 2017ರಲ್ಲಿ ಸಚಿವ ಹರತಾಳು ಹಾಲಪ್ಪ ಅವರನ್ನು ಅತ್ಯಾಚಾರ ಪ್ರಕರಣದಿಂದ ಖುಲಾಸೆಗೊಳಿಸಲಾಯಿತು. ಇದೇ ಅವಧಿಯಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಅವರು ಸೆಕ್ಸ್ ಟೇಪ್ ಸೋರಿಕೆ ವಿಚಾರದಲ್ಲಿ ರಾಜೀನಾಮೆ ನೀಡಿದ್ದರು.

Tap to resize

2012ರಲ್ಲಿ ವಿಧಾನಸಭಾ ಕಲಾಪದ ವೇಳೆ ಅಶ್ಲೀಲ ವಿಡಿಯೋ ವೀಕ್ಷಣೆ
ಇನ್ನು 2012ರಲ್ಲಿ ಕರ್ನಾಟಕದಲ್ಲಿ ವಿಧಾನಸಭಾ ಕಲಾಪ ನಡೆಯುತ್ತಿರುವ ವೇಳೆಯೇ ಶಾಸಕರಾದ ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್ ಮತ್ತು ಕೃಷ್ಣ ಪಾಲೇಮಾರ್ ಅವರು ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ್ದಾರೆ ಎಂಬ ಆರೋಪದ ವ್ಯಕ್ತವಾಯಿತು. ಇದು ಸುದ್ದು ಮಾಧ್ಯಮಗಳಲ್ಲಿ ಶಾಸಕರು ಅಶ್ಲೀಲ ವಿಡಿಯೋ ನೋಡುತ್ತಿದ್ದಾರೆಂಬ ವಿಚಾರ ಬಿತ್ತರಗೊಂಡ ನಂತರ ದೊಡ್ಡ ಹಗರಣವಾಗಿ ಮಾರ್ಪಾಡಾಯಿತು. ಈ ಬಗ್ಗೆ ರಾಜ್ಯ ಗೃಹ ಇಲಾಖೆಯ ತನಿಖೆ ನಡೆಸಿ ಅಂತಿಮವಾಗಿ ಸಲ್ಲಿಸಿ, ಲಕ್ಷ್ಮಣ ಸವದಿ ಅವರಿಗೆ ಕ್ಲೀನ್ ಚಿಟ್ ನೀಡಲಾಯಿತು.
 

2016 ಅಬಕಾರಿ ಸಚಿವ ಎಚ್‌.ವೈ. ಮೇಟಿ ಅತ್ಯಾಚಾರ ಕೇಸ್
2016ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅಬಕಾರಿ ಸಚಿವರಾಗಿದ್ದ ಹೆಚ್.ವೈ.ಮೇಟಿ ಅವರ ಮೇಲೆ ಅತ್ಯಾಚಾರ ಕೇಸ್ ದಾಖಲಾಗಿತ್ತು. ಸರ್ಕಾರಿ ನೌಕರಿ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಯು ಕೆಲಸದ ಸ್ಥಳದ ವರ್ಗಾವಣೆ ಬಯಸಿ ಮನವಿ ಮಾಡಿದ್ದರು. ಇದನ್ನು ದುರುಪಯೋಗ ಮಾಡಿಕೊಂಡು ಮೇಟಿ ಅವರು ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿರು. ಈ ಹಿನ್ನೆಲೆಯಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇನ್ನು ಸಿಚ ಮೇಟಿ ಅವರು ಲೈಂಗಿಕ ಕ್ರಿಯೆಯ ವಿಡಿಯೋದಲ್ಲಿರುವ ಮಹಿಳೆ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣವನ್ನು ರಾಜ್ಯ ಸಿಐಡಿಗೆ ವರ್ಗಾಯಿಸಲಾಗಿತ್ತು. ಆದರೆ, ದೂರು ದಾಖಲಾದ 5 ತಿಂಗಳ ನಂತರ ಸ್ವತಃ ಮಹಿಳೆಯೇ ಆರೋಪವನ್ನು ಹಿಂತೆಗೆದುಕೊಂಡಳು.

ಜುಲೈ 2019 ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಹರಿಬಿಟ್ಟ ಸೆಕ್ಸ್‌ಟೇಪ್:
ಮಹದೇವಪುರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರು 2019ರಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ದೈಹಿಕ ಸಂಬಂಧ ಹೊಂದಿದ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾದ ಸೆಕ್ಸ್ ಟೇಪ್ ರಾಜ್ಯ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿತ್ತು. ಕ್ಲಿಪ್‌ನ ಸತ್ಯಾಸತ್ಯತೆಯನ್ನು ನಿರಾಕರಿಸಿದ ಲಿಂಬಾವಳಿ ಕಣ್ಣೀರು ಸುರಿಸಿ ಇದರಲ್ಲಿರುವುದು ತಾವಲ್ಲ ಎಂದು ಹೇಳಿಕೊಂಡರು. ಜೊತೆಗೆ, ಸೆಕ್ಸ್‌ ಟೇಪ್‌ಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸುವಂತೆ ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು. ಇದಾದ 5 ತಿಂಗಳ ನಂತರ, ವಿಧಿ ವಿಜ್ಞಾನ ಪ್ರಯೋಗಾಲಯವು ಇದು ಟೇಪ್ ನಕಲಿ ಎಂದು ದೃಢಪಡಿಸಿತು.

2019ರಲ್ಲಿ ಸಚಿವ ರಮೇಶ್ ಜಾರಕಿಹೊಳಿಯಿಂದ ಯುವತಿ ಮೇಲೆ ಅತ್ಯಾಚಾರ:
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರು ಕೆಪಿಟಿಸಿಎಲ್‌ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜೊತೆಗೆ, ಇದಕ್ಕೆ ಸಂಬಂಧಪಟ್ಟಂತೆ ಸಿಡಿಯಲ್ಲಿ ಸೆರೆ ಹಿಡಿಯಲಾದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆರೋಪದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರು. ಇನ್ನು ಒಟ್ಟು 3 ಎಫ್‌ಐರ್ ಕೇಸ್ ದಾಖಲಾಗಿದ್ದು, 2 ಪ್ರಕರಣ ಇತ್ಯರ್ಥವಾಗಿದ್ದು ಅದರಲ್ಲಿ ನಿರ್ದೋಷಿ ಆಗಿದ್ದಾರೆ.  ಇನ್ನೂ ಒಂಂದು ಪ್ರಕರಣ ತನಿಖಾ ಹಂತದಲ್ಲಿದೆ.

Prajwal Revanna HD Revanna

2024 ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ಹಾಗೂ ತಂದೆ ಹೆಚ್.ಡಿ. ರೇವಣ್ಣ ದೌರ್ಜನ್ಯ ಕೇಸ್:
ಈಗ ರಾಜ್ಯಾದ್ಯಂತ ಕಳೆದ 10 ದಿನಗಳಿಂದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಸುಮಾರು 2,800ಕ್ಕೂ ಅಧಿಕ ವಿಡಿಯೋಗಳು ಇರುವ ಪೆನ್‌ಡ್ರೈವ್ ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಂಚಿಕೆಯಾಗಿವೆ. ಇದರಲ್ಲಿ 16ರಿಂದ 50 ವರ್ಷದವರೆಗಿನ ಬಾಲಕಿಯರು ಹಾಗೂ ಮಹಿಳೆಯರನ್ನು ಲೈಂಗಿಕವಾಗಿ ಬಳಿಸಿಕೊಂಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋ ಹೊರಬಂದ ನಂತರ ಮಹಿಳೆಯೊಬ್ಬರು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ್ದಾರೆ. ಈಗ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರದಿಂದ ಎಸ್‌ಐಟಿ ತನಿಖೆಗೆ ವಹಿಸಲಾಗಿದೆ.

Latest Videos

click me!