ಸೆಕ್ಸ್‌ನಲ್ಲಿ ಅತೃಪ್ತಿ: ಇದು ನಾಚಿಕೆ ಪಡೋ ವಿಷಯವಲ್ಲ... ಸಮಸ್ಯೆ ಕೂಡಲೇ ಪರಿಹರಿಸಿ

First Published Oct 20, 2020, 5:05 PM IST

ಲೈಂಗಿಕತೆಯು ದಾಂಪತ್ಯ ಜೀವನದಲ್ಲಿ ಅತ್ಯಂತ ಆನಂದದಾಯಕ ಮತ್ತು ರೋಮಾಂಚಕಾರಿ ಕ್ರಿಯೆಯಾಗಿದೆ. ಉತ್ತಮ ಲೈಂಗಿಕ ಅನುಭವವನ್ನು ಪಡೆಯುವ ಸಂದರ್ಭದಲ್ಲಿ ಯಾವುದೇ ಅಸ್ವಸ್ಥತೆ ಬರಬಾರದು. ತಿಳುವಳಿಕೆ, ಮಾನಸಿಕ ಸ್ಥಿರತೆ ಮತ್ತು ಇಬ್ಬರು ವ್ಯಕ್ತಿಗಳ ನಡುವಿನ ಸಹಕಾರವು ಸಂತೋಷದ ಸಂಬಂಧಕ್ಕೆ ಆಧಾರವಾಗಿದೆ. ಆದಾಗ್ಯೂ, ಅನೇಕರು ಲೈಂಗಿಕತೆಯ ಮೇಲೆ ನಿರಾಸಕ್ತಿಯನ್ನು ಎದುರಿಸುತ್ತಾರೆ ಮತ್ತು ಅದು ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವನ್ನು ಕುಗ್ಗಿಸುತ್ತದೆ. 
 

ಇತ್ತೀಚೆಗೆ ಜನರಲ್ಲಿ ಅದರಲ್ಲೂ ಹೆಣ್ಣು ಮಕ್ಕಳಲ್ಲಿ ಹೆಚ್ಚುತ್ತಿರುವ ಸೆಕ್ಷುಯಲ್ ಡಿಸ್ಫಂಕ್ಷನ್ ಪತಿ-ಪತ್ನಿ ಸಂಬಂಧಕ್ಕೆ ಅಪಾಯವನ್ನುಂಟುಮಾಡುತ್ತಿದೆ . ಸಂಬಂಧವನ್ನು ಉಳಿಸಿಕೊಳ್ಳಲು ಭಾವನಾತ್ಮಕ ಸಂಪರ್ಕವು ಅಗತ್ಯವೆಂದು ಪರಿಗಣಿಸಲಾಗಿದ್ದರೂ, ದೈಹಿಕ ನಿಕಟತೆಯು ಅಷ್ಟೇ ಮುಖ್ಯವಾಗಿದೆ. ದಂಪತಿಗಳ ನಡುವಿನ ಮಾತನಾಡದ ಲೈಂಗಿಕ ಸಮಸ್ಯೆಗಳಿಂದಾಗಿ ಹೆಚ್ಚಿನ ಸಂಬಂಧಗಳು ಮುರಿದು ಬೀಳುತ್ತವೆ ಎಂದು ಅಧ್ಯಯನಗಳು ತಿಳಿಸಿದೆ.
undefined
"ಸೆಕ್ಷುಯಲ್ ಡಿಸ್ಫಂಕ್ಷನ್" ಎಂದರೇನು?ವೈದ್ಯಕೀಯ ಪರಿಭಾಷೆಯಲ್ಲಿ, ಲೈಂಗಿಕ ಬಯಕೆಯ ಕೊರತೆ, ಸಂಭೋಗದ ಸಮಯದಲ್ಲಿ ನೋವು ಮುಂತಾದ ಲೈಂಗಿಕ ಸಮಸ್ಯೆಗಳನ್ನು "ಸೆಕ್ಷುಯಲ್ ಡಿಸ್ಫಂಕ್ಷನ್" ಎನ್ನುತ್ತಾರೆ. ಲೈಂಗಿಕ ಪ್ರತಿಕ್ರಿಯೆಯ ಯಾವುದೇ ಹಂತದಲ್ಲಿ ಈ ಸಮಸ್ಯೆಗಳು ಸಂಭವಿಸಬಹುದು, ಅಂದರೆ ಲೈಂಗಿಕವಾಗಿ ಪ್ರಚೋದಿಸಿದಾಗ ವ್ಯಕ್ತಿಯು ಎದುರಿಸುವ ಭಾವನಾತ್ಮಕ ಮತ್ತು ದೈಹಿಕ ಬದಲಾವಣೆಗಳ ಮೇಲೆ ಇದು ನಿಂತಿದೆ. ಇದು ದಂಪತಿಗಳು ಲೈಂಗಿಕ ಚಟುವಟಿಕೆಯಿಂದ ಹೆಚ್ಚಿನ ತೃಪ್ತಿಯನ್ನು ಅನುಭವಿಸುವುದನ್ನು ನಿರ್ಬಂಧಿಸುತ್ತದೆ. ಯಾವುದೇ ಮಹಿಳೆ ತಮ್ಮ ಜೀವನದ ಯಾವುದೇ ವಯಸ್ಸಿನ್ನಲ್ಲೂ ಈ ಸಮಸ್ಯೆ ಎದುರಿಸಬಹುದು.
undefined
ಅನೇಕರು ಇದನ್ನು ಚರ್ಚಿಸಲು ಮುಜುಗರದ ಮತ್ತು ಖಾಸಗಿ ವಿಷಯವೆಂದು ಪರಿಗಣಿಸುತ್ತಾರೆ ಮತ್ತು ಆದ್ದರಿಂದ, ಈ ರೀತಿಯ ಸಮಸ್ಯೆಗಳು ಗಮನಕ್ಕೆ ಬರುವುದಿಲ್ಲ. ಸರಿಸುಮಾರು 43% ಮಹಿಳೆಯರು "ಸೆಕ್ಷುಯಲ್ ಡಿಸ್ಫಂಕ್ಷನ್" ಸಮಸ್ಯೆ ಎದುರಿಸುತ್ತಾರೆ ಮತ್ತು 31% ಪುರುಷರಲ್ಲಿ ಕೆಲವು ಮಟ್ಟದ ತೊಂದರೆಗಳು ಮಾತ್ರ ವರದಿಯಾಗಿದೆ.
undefined
"ಸೆಕ್ಷುಯಲ್ ಡಿಸ್ಫಂಕ್ಷನ್"ಗೆ ಕಾರಣವೇನು?ದೇಹದ ಹಾರ್ಮೋನುಗಳು ದಾರಿ ತಪ್ಪಿದಾಗ ಅಂದರೆ ನೀವು ಗರ್ಭಧರಿಸಿದಾಗ ಅಥವಾ ಋತುಬಂಧದ ಸಮಯದಲ್ಲಿ ಇಂತಹ ಸಮಸ್ಯೆಗಳು ಹೆಚ್ಚಾಗಿ ಉದ್ಭವಿಸುತ್ತವೆ. ಇದು ಮಾನಸಿಕ ಅಥವಾ ದೈಹಿಕ ಸಮಸ್ಯೆಗಳಿಂದಾಗಿರಬಹುದು.
undefined
ದೈಹಿಕ ಕಾರಣಗಳುಕ್ಯಾನ್ಸರ್, ಮಧುಮೇಹ, ಮೂತ್ರಪಿಂಡ ವೈಫಲ್ಯ, ಅಥವಾ ಹೃದಯ ಸಂಬಂಧಿತ ಯಾವುದೇ ಪ್ರಮುಖ ಕಾಯಿಲೆಗಳು ಸಹ ಸೆಕ್ಷುಯಲ್ ಡಿಸ್ಫಂಕ್ಷನ್ ಗೆ ಕಾರಣವಾಗಬಹುದು. ಕೆಲವು ಖಿನ್ನತೆ-ಶಮನಕಾರಿಗಳು, ರಕ್ತದೊತ್ತಡದ ಔಷಧಿಗಳು, ಆಂಟಿಹಿಸ್ಟಮೈನ್ ಗಳು ಮತ್ತು ಕೀಮೋಥೆರಪಿ ಔಷಧಿಗಳು ನಿಮ್ಮ ಲೈಂಗಿಕ ಬಯಕೆಯನ್ನು ಅನುಭವಿಸುವ ನಿಮ್ಮ ದೇಹದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಈ ಔಷಧಿಗಳನ್ನು ತೆಗೆದುಕೊಳ್ಳುವಾಗ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
undefined
ಹಾರ್ಮೋನುಗಳ ಕಾರಣಗಳುಋತುಬಂಧದ ಸಮಯದಲ್ಲಿ, ಮಹಿಳೆಯರ ದೇಹ ಕಡಿಮೆ ಈಸ್ಟ್ರೊಜೆನ್ ಮಟ್ಟವನ್ನು ಬಿಡುಗಡೆ ಮಾಡುತ್ತವೆ, ಅದು ಜನನಾಂಗದ ಅಂಗಾಂಶಗಳನ್ನು ಬದಲಾಯಿಸಬಹುದು ಮತ್ತು ಲೈಂಗಿಕ ಪ್ರತಿಕ್ರಿಯೆಯನ್ನು ಬದಲಾಯಿಸಬಹುದು. ನೀವು ಲೈಂಗಿಕವಾಗಿ ಸಕ್ರಿಯವಾಗಿಲ್ಲದಿದ್ದರೆ ಯೋನಿ ಒಳಪದರವು ತೆಳ್ಳಗಾಗಬಹುದು. ಇದು ನೋವಿನ ಸಂಭೋಗಕ್ಕೆ ಕಾರಣವಾಗಬಹುದು, ಇದನ್ನು ಡಿಸ್ಪರೇನಿಯಾ ಎಂದೂ ಕರೆಯುತ್ತಾರೆ. ಜನನದ ಸಮಯದಲ್ಲಿ ಅಥವಾ ಸ್ತನ್ಯಪಾನ ಮಾಡುವಾಗ ಹಾರ್ಮೋನುಗಳ ಮಟ್ಟ ಕಡಿಮೆ ಆಗಬಹುದು ಹೀಗಾಗಿ, ಲೈಂಗಿಕ ಬಯಕೆ ಕಡಿಮೆ ಇರುತ್ತದೆ.
undefined
ಮಾನಸಿಕ ಕಾರಣಗಳುಆತಂಕ ಅಥವಾ ಖಿನ್ನತೆ ಸೆಕ್ಷುಯಲ್ ಡಿಸ್ಫಂಕ್ಷನ್ ಗೆ ಒಂದು ಪ್ರಮುಖ ಕಾರಣವೆಂದು ಪರಿಣಿಸಲಾಗುತ್ತದೆ, ಏಕೆಂದರೆ ಇದು ತೀವ್ರ ಒತ್ತಡ ಅಥವಾ ಲೈಂಗಿಕ ಕಿರುಕುಳವನ್ನು ಒಳಗೊಂಡಿರಬಹುದು. ಗರ್ಭಿಣಿಯರು ಹೆಚ್ಚಾಗಿ ಹೆರಿಗೆಯ ಬಗ್ಗೆ ಒತ್ತು ನೀಡುತ್ತಾರೆ ಮತ್ತು ಅವರ ದೈಹಿಕ ಬದಲಾವಣೆಗಳು ಸಹ ಇದೇ ರೀತಿಯ ಪರಿಣಾಮಗಳಿಗೆ ಕಾರಣವಾಗುತ್ತವೆ.
undefined
ವೈದ್ಯರನ್ನು ಯಾವಾಗ ನೋಡಬೇಕು?ನೀವು ಮತ್ತು ನಿಮ್ಮ ಸಂಗಾತಿ ಲೈಂಗಿಕ ಸಮಸ್ಯೆಗಳ ಬಗ್ಗೆ ಜಗಳವಾಡುತಿದ್ದೀರಿ ಎಂದು ನಿಮಗನಿಸಿದಾಗ, ನೀವು ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಕೆಲವರಿಗೆ ಇದು ದೊಡ್ಡ ಸಮಸ್ಯೆಯಾಗಿಲ್ಲದಿರಬಹುದು, ಆದರೆ ಇನ್ನೂ ಕೆಲವರಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ.
undefined
ವೈದ್ಯಕೀಯ ಚಿಕಿತ್ಸೆಯಲ್ಲಿ ಈಸ್ಟ್ರೊಜೆನ್ ಥೆರಪಿ, ಆಸ್ಪೆಮಿಫೆನ್,ಆಂಡ್ರೊಜೆನ್ ಥೆರಪಿ ಮತ್ತು ಇನ್ನಷ್ಟು ಚಿಕಿತ್ಸೆಗಳಿವೆ. ಇವು ಹಾರ್ಮೋನುಗಳ ಪ್ರೇರಿತ ಚಿಕಿತ್ಸೆಗಳಾಗಿವೆ, ಅದು ಯೋನಿ ಟೋನ್ ಅನ್ನು ಸುಧಾರಿಸುತ್ತದೆ, ಮತ್ತು ಯೋನಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ, ನಯಗೊಳಿಸುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ.
undefined
ಸಂವಹನ, ಆರೋಗ್ಯಕರ ಜೀವನಶೈಲಿಯ ಅಭ್ಯಾಸಗಳು(ಯೋಗ, ಎಕ್ಸರ್ಸೈಜ್ ಇತ್ಯಾದಿ) ಪರಿಹಾರಗಳು ಸೆಕ್ಷುಯಲ್ ಡಿಸ್ಫಂಕ್ಷನ್ಯನ್ನು ಎದುರಿಸುತ್ತಿರುವ ಮಹಿಳೆಯರಿಗೆ ಇತರ ಆಯ್ಕೆಗಳಾಗಿವೆ. ನಿಮ್ಮ ಖಾಸಗಿ ಸಮಸ್ಯೆಗಳ ಬಗ್ಗೆ ಮಾತನಾಡಲು ನಿಮಗೆ ಮುಜುಗರವಾಗಬಹುದು ಆದರೆ ಸತ್ಯವನ್ನು ಹೇಳಿ, ಇದು ನಾಚಿಕೆಪಡಬೇಕಾದ ವಿಷಯವಲ್ಲ.
undefined
click me!