ಸ್ವಾಭಿಮಾನದ ಹೆಸ್ರಲ್ಲಿ ನಾಯಕಿಯದ್ದು ಇದ್ರಲ್ಲೂ ಓವರ್​ ಆ್ಯಕ್ಟಿಂಗಾ? ಇದೇನು ಡೈರೆಕ್ಟರೇ... ಫ್ಯಾನ್ಸ್​ ಅಸಮಾಧಾನ

By Suvarna News  |  First Published May 6, 2024, 3:18 PM IST

 ಸ್ವಾಭಿಮಾನದ ಹೆಸರಿನಲ್ಲಿ ಸೀರಿಯಲ್​  ನಾಯಕಿಯರನ್ನು ಓವರ್​ ಆಗಿ ತೋರಿಸುವುದು ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ ಸೀರಿಯಲ್​ ಫ್ಯಾನ್ಸ್​ 
 


ಒಂದು ಕಡೆ ಅಮೃತಧಾರೆಯ ಭೂಮಿಕಾ, ಇನ್ನೊಂದು ಕಡೆ ಸೀತಾರಾಮದ ಸೀತಾ. ಇಬ್ಬರೂ ಸ್ವಾಭಿಮಾನಿ ಹೆಣ್ಣುಗಳು. ಆದರೆ ಮೊದ ಮೊದಲಿಗೆ ಇವರ ಸ್ವಾಭಿಮಾನದ ಬಗ್ಗೆ ಭೇಷ್​ ಭೇಷ್​ ಎನ್ನುತ್ತಿದ್ದವರು ಇದೀಗ ಯಾಕೋ ಧಾರಾವಾಹಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಡೈರೆಕ್ಟರ್​ ಯಾಕೋ ಸ್ವಲ್ಪ ಎಲ್ಲಾ ಕಡೆ ಓವರ್​ ಆ್ಯಕ್ಟಿಂಗ್​ ಮಾಡಿಸುತ್ತಿದ್ದಾರೆ ಎಂದಿದ್ದಾರೆ. ಅಷ್ಟಕ್ಕೂ ಹೆಣ್ಣಿಗೆ ಸ್ವಾಭಿಮಾನ ಇರಬೇಕು, ಇದು ತುಂಬಾ ಒಳ್ಳೆಯದು. ಆದರೆ ಕೆಲವೊಂದು ವಿಷಯದಲ್ಲಿ, ನಾಯಕಿಯರನ್ನು ಅತಿ ದೊಡ್ಡದಾಗಿ ಬಿಂಬಿಸಲು ಓವರ್​ ಆ್ಯಕ್ಟಿಂಗ್​ ಮಾಡಿಸುತ್ತಿರುವುದು ಯಾಕೆ ಎನ್ನುವ ಬಗ್ಗೆ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಅಮೃತಧಾರೆಯಲ್ಲಿ ಭೂಮಿಕಾ ಕೋಟ್ಯಧಿಪತಿಯ ಪತ್ನಿ. ಆದರೆ ಒಂದು ಪೈಸೆಯನ್ನೂ ಪತಿಯಿಂದ ತೆಗೆದುಕೊಳ್ಳಲು ಬಯಸದವಳು ಆಕೆ. ಮಿಡ್ಲ್​ಕ್ಲಾಸ್​ ಫ್ಯಾಮಿಲಿಯಿಂದ ಬಂದ ಅವಳಿಗೆ ತಾನೇ ಸ್ವಂತ ದುಡಿಮೆ ಮಾಡಬೇಕು ಎಂದುಕೊಳ್ಳುವವಳು. ಚಿಟಿಕೆ ಹೊಡೆಯುವಷ್ಟರಲ್ಲಿ ಕೋಟಿ ಕೋಟಿ ರೂಪಾಯಿ ತಂದು ಕೊಡಬಲ್ಲ ಗಂಡನಿದ್ದರೂ ಕೆಲವೇ ಲಕ್ಷ ರೂಪಾಯಿಗಳನ್ನೂ ಪತಿಯ ಕೈಯಲ್ಲಿ ಕೇಳದ ಭೂಮಿಕಾ, ತನ್ನ ಒಡವೆಗಳನ್ನೇ ಅಡವಿಟ್ಟು ತವರು ಮನೆಗೆ ಸಹಾಯ ಮಾಡಿದ್ದಾಳೆ, ಅದೂ ಐದು ಲಕ್ಷ ರೂಪಾಯಿಗಾಗಿ. ಅಂಥ ಸ್ವಾಭಿಮಾನಿ ಆಕೆ. ಕೆಲಸಕ್ಕೆ ಹೋದ ಜಾಗದಲ್ಲಿ, ದೊಡ್ಡ ಪೋಸ್ಟ್​ ಸಿಕ್ಕಿತು ಎಂದು, ಇದಕ್ಕೆ ಪತಿಯೇ ಕಾರಣವೆಂದುಕೊಂಡು ಗರಂ ಆದವಳು ಆಕೆ, ಯಾವುದರಲ್ಲಿಯೂ ಪತಿಯ ಇನ್​ಫ್ಲುಯೆನ್ಸ್​, ದುಡ್ಡು ಅವಳು ಬಯಸುವವಳಲ್ಲ.

Tap to resize

Latest Videos

ಬೆಡ್​ರೂಮ್​ ಕಮಿಟ್​ಮೆಂಟ್​ ಇಲ್ಲದಿದ್ರೆ ಟಾಪ್​ ನಾಯಕಿಯಾಗೋದು ಕಷ್ಟ! ರಮ್ಯಾ ಕೃಷ್ಣನ್​ ಹೇಳಿಕೆ ವೈರಲ್​...

ಇತ್ತ ಸೀತಾರಾಮ ಸೀರಿಯಲ್​ ಸೀತೆಯದ್ದು ಅದೇ ಕಥೆ. ಇಲ್ಲಿ ಕೂಡ ಕೋಟ್ಯಧಿಪತಿಯ ಪ್ರಿಯತಮೆ, ಭಾವಿ ಪತ್ನಿಯಾಗುವವಳು ಸೀತೆ. ಆದರೆ ಸಕತ್​ ಸ್ವಾಭಿಮಾನಿ ಹೆಣ್ಣು. ರಾಮ್​ ಮಾಮೂಲಿ ಕೆಲಸಗಾರ ಎಂದು ಪ್ರೀತಿಸಿದ್ದ ಆಕೆಗೆ, ರಾಮ್​ ಕೋಟ್ಯಧಿಪತಿ ಎಂದು ತಿಳಿದ ಮೇಲೆ ಅವನಿಂದ ದೂರವಾಗಿದ್ದಳು. ತಾನು ಶ್ರೀಮಂತ ಎನ್ನುವ ಸತ್ಯವನ್ನು ಆತ ಹೇಳಲಿಲ್ಲ ಎನ್ನುವ ಸಿಟ್ಟಿನಿಂದ ಅವನಿಂದ ದೂರ ಹೋಗಿದ್ದಳು. ಅಂತೂ ಇಂತೂ ರಾಮ್​ ಸೀತಾಳ ಪ್ರೀತಿ ಗಳಿಸಿದ್ದಾನೆ. ಇದೀಗ ಸೀತಾಳ ಮನೆ ಮಾರಾಟಕ್ಕೆ ಬಂದ ಸಂದರ್ಭದಲ್ಲಿ ರಾಮ್​ನೇ ಅದನ್ನು ಖರೀದಿ ಮಾಡಿ ಸೀತಾಳಿಗೆ ಉಳಿಯಲು ಕೊಟ್ಟಿದ್ದಾನೆ.

ಇದಕ್ಕಾಗಿ ರಾಮ್​ಗೆ ತಿಂಗಳು ತಿಂಗಳು ದುಡ್ಡು ಕೊಡುತ್ತಿದ್ದಾಳೆ ಸೀತಾ. ಇದೆಲ್ಲಾ ಯಾಕೆ ಎಂದು ರಾಮ್​ ಕೇಳಿದಾಗ, ನಿಮಗೆ ಮೊದಲೇ ಹೇಳಿದ್ದೆ. ಇದು ನೀವು ಖರೀದಿಸಿರುವ ಮನೆ. ನಾನುಪುಕ್ಕಟೆ ತೆಗೆದುಕೊಳ್ಳುವುದಿಲ್ಲ ಎಂದು ಅದಕ್ಕಾಗಿಯೇ ದುಡ್ಡು ಸಂದಾಯ ಮಾಡುತ್ತಿದ್ದೇನೆ ಎನ್ನುತ್ತಾಳೆ. ಇದನ್ನು ಕೇಳಿ ರಾಮ್​ಗೆ ಬೇಸರವಾಗುತ್ತದೆ. ಆದರೆ ಇಲ್ಲಿ ಕೂಡ ಸೀತಾಳನ್ನು ಭಾರಿ ಸ್ವಾಭಿಮಾನಿ ಎಂದು ತೋರಿಸಲಾಗುತ್ತಿದೆ. ಇವೆರಡು ಸೀರಿಯಲ್​ನ್ನು ಕಂಪೇರ್​  ಮಾಡಿರುವ ನೆಟ್ಟಿಗರು ಸ್ವಾಭಿಮಾನಿ ಎಂದು ತೋರಿಸುವುದು ಸರಿ, ಆದರೆ ಯಾಕೋ ಓವರ್​ ಆ್ಯಕ್ಟಿಂಗ್​ ಆಗಿದೆ ಅನ್ನಿಸ್ತಿದೆ ಎನ್ನುತ್ತಿದ್ದಾರೆ. 

ರೇಪ್​ ಮಾಡಿಸಿಕೊಳ್ಳಲು ಹುಡುಗಿಯರ ಕ್ಯೂ: ಫಿಲ್ಮ್​ ಇಂಡಸ್ಟ್ರಿಯ ಭಯಾನಕ ರೂಪ ಎಕ್ಸ್​ಪೋಸ್​ ಮಾಡಿದ ರಾಖಿ!

click me!