ಪೂರ್ಣಿ ಅನಾಥೆಯಲ್ಲ ಎಂದು ತಿಳಿದ ಬೆನ್ನಲ್ಲೇ ಈಕೆಯ ನಿಜವಾದ ಅಮ್ಮನೂ ಸಿಕ್ಕೇ ಬಿಟ್ಟಿದ್ದಾಳೆ ಎನ್ನುವುದು ನೆಟ್ಟಿಗರ ಅಭಿಮತ. ಹಾಗಿದ್ರೆ ಅವಳ್ಯಾರು?
ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ಎರಡು ಸೊಸೆಯಂದಿರದ್ದು ಎರಡು ರೀತಿಯ ಸ್ವಭಾವ. ಒಬ್ಬಳು ತುಂಬಾ ಒಳ್ಳೆಯವಳು, ಇನ್ನೊಬ್ಬಳು ಅಗತ್ಯಕ್ಕಿಂತ ಹೆಚ್ಚು ಕೆಟ್ಟವಳು. ಪೂರ್ಣಿ ಮತ್ತು ದೀಪಿಕಾ ಎಂಬ ಈ ಇಬ್ಬರು ಸೊಸೆಯಂದಿರ ವಿಭಿನ್ನ ಸ್ವಭಾವ ನಿಜ ಜೀವನದಲ್ಲಿರುವ ಕೆಲವು ಹೆಣ್ಣುಮಕ್ಕಳ ನಿಜ ಸ್ವಭಾವ ಎಂದೂ ಆಗಾಗ್ಗೆ ನೆಟ್ಟಿಗರು ಹೇಳುವುದುಂಟು. ಆದರೆ ಇಲ್ಲಿ ದೀಪಿಕಾಗೆ ಪೂರ್ಣಿ ಕಂಡರೆ ಇನ್ನಿಲ್ಲದ ಕೋಪ. ಅದಕ್ಕೆ ಕಾರಣ ಪೂರ್ಣಿ ಅನಾಥೆ ಎನ್ನುವುದು ಅಷ್ಟೇ. ಅಷ್ಟು ಬಿಟ್ಟರೆ ಮತ್ತೇನೂ ಇಲ್ಲ. ಅಷ್ಟಕ್ಕೂ ಸೀರಿಯಲ್ನಲ್ಲಿ ಪೂರ್ಣಿ ಅನಾಥೆ ಎಂದೇ ಇಲ್ಲಿಯವರೆಗೆ ತೋರಿಸುತ್ತಾ ಬರಲಾಗಿದೆ. ಅವಳು ತನ್ನನ್ನು ತಾನು ಅನಾಥೆ ಎಂದುಕೊಂಡಿದ್ದಾಳೆ. ಅನಾಥಾಶ್ರಾಮದಲ್ಲಿಯೇ ಬೆಳೆದಿರುವ ಪೂರ್ಣಿಗೆ ತನ್ನ ಹುಟ್ಟಿನ ಬಗ್ಗೆಯೂ ಗೊತ್ತಿಲ್ಲ. ಅದರ ಬಗ್ಗೆ ಆಕೆ ಹೆಚ್ಚಿಗೆ ತಲೆಕೆಡಿಸಿಕೊಂಡೂ ಇಲ್ಲ. ಮಾಧವನ ಮನೆಯಲ್ಲಿ ಎಲ್ಲರೂ ಆಕೆಯನ್ನು ಅನಾಥೆ ಎಂದುಕೊಂಡಿದ್ದಾರೆ. ಮಾಧವನ ಮಗ ಅವಿಯ ಮಡದಿಯಾಗಿ ಬಂದಿದ್ದಾಳೆ. ಅವಿ ಕೂಡ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ, ತುಂಬಾ ಪ್ರೀತಿ ಮಾಡುತ್ತಿದ್ದಾನೆ. ಇನ್ನು ತುಳಸಿಗೋ ಆ ಮನೆಯಲ್ಲಿ ಮಾಧವ್ನನ್ನು ಬಿಟ್ಟರೆ ತುಂಬಾ ಪ್ರೀತಿ, ಅಕ್ಕರೆಯಿಂದ ನೋಡಿಕೊಳ್ಳುವವಳು ಇದೇ ಪೂರ್ಣಿ. ಈಕೆಗೂ ತುಳಸಿಯೇ ಅಮ್ಮ. ಆದರೆ ಈಕೆ ಅನಾಥಾಶ್ರಮದಿಂದ ಬಂದವಳು ಎನ್ನುವ ಕಾರಣಕ್ಕೆ ದೀಪಿಕಾ ಆಗ್ಗಾಗ್ಗೆ ಚುಚ್ಚುವುದು ಉಂಟು.
ಪೂರ್ಣಿ ಯಾವ ಅನಾಥಾಶ್ರಮದಲ್ಲಿ ಬೆಳೆದದ್ದು ಎಂದು ತಿಳಿದುಕೊಂಡ ತುಳಸಿ, ಪೂರ್ಣಿ ಮತ್ತು ಅವಿಯನ್ನು ಕರೆದುಕೊಂಡು ಆಶ್ರಮಕ್ಕೆ ಹೋಗಿರುತ್ತಾಳೆ. ಅಲ್ಲಿ ಆಶ್ರಮದವರು ಇಬ್ಬರಿಗೂ ಉಡುಗೊರೆ ಕೊಟ್ಟು ಸತ್ಕರಿಸುತ್ತಾರೆ. ಈ ಸಂದರ್ಭದಲ್ಲಿ ತುಳಸಿ ಪೂರ್ಣಿಯ ಹಿನ್ನೆಲೆ ಏನು, ಯಾರು ಸೇರಿಸಿದ್ದು ಎಂದು ಸಹಜವಾಗಿ ಆಶ್ರಮದವರನ್ನು ಕೇಳುತ್ತಾಳೆ. ಅಷ್ಟರಲ್ಲಿಯೇ ಮಧ್ಯೆ ಪ್ರವೇಶಿಸುವ ಮಾಧವ್, ಪೂರ್ಣಿ ಹುಟ್ಟಿನ ಕುರಿತು ಇವರಿಗೆ ಹೇಗೆ ಗೊತ್ತಿರುತ್ತದೆ ಎಂದು ಮಾತನ್ನು ಅಲ್ಲಿಯೇ ನಿಲ್ಲಿಸಿ ಏನೂ ಹೇಳಬೇಡಿ ಎಂದು ಸನ್ನೆ ಮಾಡುತ್ತಾನೆ. ಅಷ್ಟರಲ್ಲಿ ತುಳಸಿ ಮಾಧವ್ನನ್ನು ನೋಡಿರುತ್ತಾಳೆ. ಇದರ ರಹಸ್ಯ ಏನು ಎಂದು ತಿಳಿಯಲು ಬಯಸಿದ ಅವಳು ಮಾಧವ್ಗೆ ಇದರ ಬಗ್ಗೆ ಕೇಳುತ್ತಾಳೆ.
ಎಸ್ಎಸ್ಎಲ್ಸಿ ಮಾಡಿದ್ರೂ ಬೇಸಿಕ್ ಇಂಗ್ಲಿಷ್ ಬರಲ್ವಾ? ಟ್ರೋಲ್ ಆಗ್ತಿರೋ ಭಾಗ್ಯಲಕ್ಷ್ಮಿ!
ಆಗ ಮಾಧವ್, ಯಾರೋ ಒಬ್ಬರು ಶ್ರೀಮಂತರು ಶಿಶುವನ್ನು ತಂದು ಅನಾಥಾಶ್ರಮದ ಬಾಗಿಲ ಬಳಿ ಬಿಟ್ಟು ಹೋಗಿದ್ದರು. ಬಹುಶಃ ಇದು ಮದುವೆಗೂ ಮುನ್ನ ಹುಟ್ಟಿದ್ದ ಮಗು ಇದ್ದಿರಬಹುದು. ಆದ್ದರಿಂದ ಪೂರ್ಣಿ ಅನಾಥೆಯಲ್ಲ, ಶ್ರೀಮಂತರ ಮನೆಯ ಮಗಳು ಎಂದು ಮಾಧವ್ ಹೇಳಿದ್ದ . ಇದನ್ನುಕೇಳಿ ತುಳಸಿ, ನೀವ್ಯಾರೂ ಅವರ್ಯಾರು ಎಂದು ಹುಡುಕುವ ಪ್ರಯತ್ನ ಮಾಡಲಿಲ್ಲವೇ ಎಂದಾಗ ಮಾಧವ್, ಅವರಿಗೇ ಬೇಡವಾದ ಮಗು ಎಂದ ಮೇಲೆ ಹುಡುಕಿ ಮತ್ತೆ ಪೂರ್ಣಿಗೆ ತೊಂದರೆ ಕೊಡುವುದು ಏಕೆ ಎಂದು ಯಾರೂ ಹುಡುಕಲಿಲ್ಲ ಎನ್ನುತ್ತಾನೆ.
ಆದರೆ ಇದೀಗ ಪೂರ್ಣಿಯ ನಿಜವಾದ ಅಮ್ಮ ಯಾರೆಂದು ತಿಳಿಯುವ ಕಾಲ ಬಂದೇ ಬಿಟ್ಟಿದೆ. ಈ ಮೊದಲೇ ನೆಟ್ಟಿಗರು ಈಕೆ ವಿಲನ್ ದೀಪಿಕಾಳ ಅಕ್ಕನೇ ಇದ್ದಿರಬಹುದು. ಆಕೆಯ ಅಪ್ಪನಿಗೆ ಪೂರ್ಣಿ ಅಕ್ರಮವಾಗಿ ಹುಟ್ಟಿರುವ ಮಗು ಇದ್ದಿರಬಹುದು, ಇಲ್ಲವೇ ಮದುವೆಗೂ ಮುನ್ನ ದೀಪಿಕಾ ಅಮ್ಮನಿಗೆ ಇದು ಹುಟ್ಟಿದ್ದಿರಬಹುದು. ಖಂಡಿತವಾಗಿಯೂ ಪೂರ್ಣಿ ಇದೇ ಶ್ರೀಮಂತರ ಮನೆಯ ಮಗಳು ಎನ್ನುತ್ತಿದ್ದಾರೆ. ಇನ್ನು ಕೆಲವರು, ಪೂರ್ಣಿ, ದೀಪಿಕಾ ಅಪ್ಪನಿಗೆ ಹುಟ್ಟಿದ ಮಗು, ಆ ಮೇಲೆ ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕೆ ದೀಪಿಕಾಳನ್ನು ಅನಾಥಾಶ್ರಮದಿಂದ ತಂದಿರಬಹುದು ಎಂದೂ ಹೇಳುತ್ತಿದ್ದಾರೆ. ಇದೀಗ ದೇವಸ್ಥಾನದಲ್ಲಿ ದೀಪಿಕಾ ಅಮ್ಮ ಪೂರ್ಣಿಗೆ ಸಿಕ್ಕಿದ್ದಾಳೆ. ಅವಳಿಗೆ ಮಗಳು ದೀಪಿಕಾ ಸ್ವಭಾವ ಗೊತ್ತಿದ್ದರಿಂದ, ಮಗಳು ನಿನಗೆ ಕಷ್ಟಕೊಡುತ್ತಾಳಾ ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ಪೂರ್ಣಿ ಇರಲಿ ಬಿಡಿ, ನಾನು ಅವಳನ್ನು ಪ್ರೀತಿಸುತ್ತೇನೆ ಎಂದಿದ್ದಾಳೆ. ಆಗ ದೀಪಿಕಾ ಅಮ್ಮ, ನನಗೂ ನಿನ್ನಂಥ ಒಳ್ಳೆಯ ಮಗಳು ಇದ್ದರೆ ಎಷ್ಟು ಚೆನ್ನಾಗಿತ್ತು ಎಂದು ತಬ್ಬಿಕೊಂಡಿದ್ದಾಳೆ. ಈ ದೃಶ್ಯ ನೋಡಿದರೆ ಎಂಥವರಿಗೂ ಇವಳೇ ನಿಜವಾದ ಅಮ್ಮ ಇದ್ದಿರಬಹುದು ಎಂದು ಊಹಿಸಿಯಾರು. ಸದ್ಯ ತಾವು ಅಂದುಕೊಂಡಂತೆ ಇವಳೇ ಪೂರ್ಣಿ ಅಮ್ಮ ಎನ್ನುತ್ತಿದ್ದಾರೆ ಸೀರಿಯಲ್ ಅಭಿಮಾನಿಗಳು.
ರಾಹುಲ್ ಗಾಂಧಿ ವಿಡಿಯೋ ವೈರಲ್: ಥೂ ನಾಚಿಕೆ ಆಗ್ಬೇಕು, ದೇಶ ಬಿಟ್ಟು ಹೋಗಿ ಎಂದ ನಟಿ ಮೇಘಾ!