ಮುಟ್ಟಿನ ನೈರ್ಮಲ್ಯ ದಿನ, ಮೇ 28 ಏಕೆ?
ಜರ್ಮನ್ ಲಾಭರಹಿತ ಸಂಸ್ಥೆ (Non profit Organization) ಮತ್ತು ಮುಟ್ಟಿನ ನೈರ್ಮಲ್ಯ ದಿನದ ಸಂಸ್ಥಾಪಕ ವಾಶ್ ಯುನೈಟೆಡ್ ಪ್ರಕಾರ, ಸಾಮಾನ್ಯವಾಗಿ ಹೆಣ್ಣುಮಕ್ಕಳಲ್ಲಿ ಋತುಚಕ್ರವು (Peropds) ಸರಾಸರಿ 28 ದಿನಗಳ ಅಂತರದಲ್ಲಿ ಕಾಣಿಸಿಕೊಳ್ಳುತ್ತದೆ. ಇನ್ನು ಸರಾಸರಿಯಾಗಿ, ಮಹಿಳೆಯರು ಮತ್ತು ಹುಡುಗಿಯರು ತಿಂಗಳಿಗೆ 5 ದಿನಗಳ ವರೆಗೆ ಮುಟ್ಟಾಗಿರುತ್ತರೆ. ಆದ್ದರಿಂದ, ಈ ದಿನವನ್ನು ಗುರುತಿಸಲು 28-5 ಅಥವಾ ಮೇ 28 ಅನ್ನು ಆಯ್ಕೆ ಮಾಡಲಾಗಿದೆ.